ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶಂಭೋಶಿವಹರ ತ್ರಿಯಂಬಕ ಶ್ರೀಜಗ - ದಂಬಾರಮಣ ಪರಿಪಾಲಯಾ ಪ ಅಜಿನಾಂಬರಧರ ಭಜಿಪರಾರ್ತಿಹರ ತ್ರಿಜಗಪಾವನ ಗಂಗಾಧರ1 ನಂದಿವಾಹನ ಸುರವೃಂದ ಸುಪೂಜಿತ ಇಂದ್ರ ವಂದಿತ ಗರಕಂಧರ 2 ರುಂಡಮಾಲಧರ ಶÀುಂಡಾಲಮದಹರ ಚಂಡವಿಕ್ರಮ ಉಗ್ರೇಶ್ವರ 3 ದಕ್ಷಾಧ್ವರ ಹರದುಷ್ಟಶಿಕ್ಷಕ ವಿರೂ - ಪಾಕ್ಷನೆ ವೈರಾಗ್ಯನಿಧೆ 4 ವಾಮದೇವನೆ ಭಕ್ತಾಕಾಮಿತ ಫಲದನೆ ಕಾಮಸಂಹರ ಕರುಣಾಕರ 5 ಮೃತ್ಯುಂಜಯನೆ ಯನ್ನಪಮೃಹಾರಕಹರಿ ಭಕ್ತಾಗ್ರೇಸರ ಶಿವಶಂಕರ 6 ರಾಮನಾಮಲೋಲ ತಾಮಸಖಳಕಾಲ ಧಿಮಂತಜನ ಪರಿಪಾಲಕ 7 ಗಿರಿಜಾರಮಣ ನಿನ್ನ ಗುರುವೆಂದು ಮೊರೆಹೊಕ್ಕೆ ಹರಿಭಕ್ತಿಯಲ್ಲಿ ಮನನಿಲ್ಲಿಸೋ 8 ನಂಬಿದೆ ನಿನ್ನ ಪಾದಾಂಬುಜ ಯುಗಳ ಹೇ ರಂಭಜನಕ ಪೊರಿಯನ್ನನು9 ರಜತಾಚಲನಿವಾಸ ರಜನಿಚರ ವಿನಾಶ ಅಜನಸುತನೆ ದಿಗಂಬರ 10 ಸರ್ವಶ್ರೀ ವರದೇಶವಿಠಲನ ಸಖ ಮು - ಪ್ಪುರಹರ ಶ್ರೀ ಮಹಾದೇವ 11
--------------
ವರದೇಶವಿಠಲ
ಶ್ರೀ ಪ್ರಾಣೇಶ ದಾಸರಾಯರ ಸ್ತೋತ್ರ ಸಾನುರಾಗದಲಿ ಸ್ಮರಿಸುವರ ಭಕುತಿಯನ್ನು ಕೊಡುತಿಹರು ಪ ವರಕಾಶ್ಯೊಪಸದ್ಗೋತ್ರದಿ ಲಿಂಗಸು - ಗುರು ಕರಣಿಕರಲಿ ಸಂಜನಿಸಿ ತಿರುಕಾರ್ಯರ ಪರತನುಭವಯೋಗೀಂ - ದ್ರರು ಯಂಬ ಸುನಾಮದಿ ಕರಿಸಿ 1 ಕೆಲವುಕಾಲ ಲೌಕಿಕವನುಸರಿಸುತ ಲಲನೆ ತರಳರಿಂದೊಡಗೂಡಿ ಬಲು ವಿನಯದಿ ಸಾಧುಗಳರ್ಚಿಸಿ ನಿ - ರ್ಮಲ ವೈರಾಗ್ಯ ಮನದಿ ಕೂಡಿ2 ಮೂಜಗದೊಳು ಪ್ರಖ್ಯಾತರೆನಿಸಿದ ಶ್ರೀ ಜಗನ್ನಾಥಾರ್ಯರ ಪಾದಾಂ - ಭೋಜ ಭಜಿಸಿ ಪ್ರಾಣೇಶಾಂಕಿತವನು ತಾಜವದಿಂದವರಲಿಪಡೆದ 3 ಶ್ರೀಶಪಾದಯುಗ್ಮಗಳಲಿ ಸದ್ರತಿ ದಾಸಜನಗಳಲಿ ಸದ್ಭಕುತಿ ಹೇಸಿಭವದ ಸುಖದಾಸೆ ಜರಿದು ಸಂ - ತೋಷದಿ ಧರಿಸಿಹ ಸುವಿರಕುತಿ 4 ನೇಮದಿ ಯಮನಿಯಮವ ವಹಿಸಿ ತಾ ಮುದದಲಿ ನಲಿಯುತ ಕೀರ್ತಿಸುತಿಹ ಶ್ರೀ ಮನೋಹರನ ಸುಗುಣರಾಶಿ 5 ಪರಿಪರಿ ಹರಿಕಥೆವರ ಪ್ರಮೇಯಗಳ ಸರ್ವಜ್ಞ್ಞರ ಉಕ್ತ್ಯನುಸರಿಸಿ ವಿರಚಿಸಿ ಹರಿಮಂದಿರದ ಸುಪಥ ಪಾ - ಮರರಿಗೆ ಸೌಕರ್ಯವಗೈಸಿ 6 ವರದೆಂದ್ರರ ಪದಸರಸಿಜ ಸೇವಿಸಿ ಹರುಷದಲವರ ಕರುಣ ಪಡೆದ ವರವೃಂದಾವನ ಸಂಸ್ಥಾಪಿಸಿ ಪರಿಪರಿಯಿಂದಲಿಯಾರಾಧಿಸಿದ7 ಜ್ಞಾನದಿಲಯವನು ಚಿಂತಿಸುತಾ ಚಿತ್ರ ಬಾನುಸಪ್ತಮಿ ಯಾಶ್ವಿಜಶುದ್ಧ ಜಾನಕಿ ಪತಿಪದ ಧೇನಿಸಿಹರಿಪುರ ಕೀನರ ದೇಹ ಜರಿದು ಸಾರ್ದ 8 ಪರಮಭಾಗವತರೆನಿಸುವರಿವರನ ವರ ತನದ ಸುಮಾಲಿಕೆ ಸತತ ಸ್ಮರಿಸುವ ಭಕುತರ ಪುರುಷಾರ್ಥಗಳನು ವರದೇಶವಿಠಲನ ಕೊಡುವ ತ್ವರಿತ 9
--------------
ವರದೇಶವಿಠಲ
ಶ್ರೀ ರಘುಕಾಂತ ತೀರ್ಥರ ಸ್ತೋತ್ರ ಪದಕಂಜಸಾರಿಭಜಿಪ ಭಕ್ತರ ದೂರವೋಡಿಸುವ ಶಕ್ತ ವಿರಕ್ತ ಪ ದಿನಕರ ಕುಲಜಾತ ವನಜಾರಾಧ್ಯಸು - ಮನಸವ್ರಾತ ಸನ್ನುತ ಇನಕೋಟಿಪ್ರಭೆಗಾತ್ರ ಮನಸಿಜ ಪಿತಸ - ನ್ಮುನಿಗಣನುತ ರಾಮಚಂದ್ರ ಪಾದಭೃಂಗ 1 ಯತಿಕುಲ ರತುನ ಭಕುತಸುರತರುವೆ ಸ - ದ್ಗತಿ ದಾತಾ ಜಿತಮದನ ಪತಿತಪಾವನ ಮುನಿ ಯತಿ ರಘುದಾಂತತೀ ಪಾದ ಪಂಕೇಜ 2 ಕಾಮಿತಫಲದ ನಿಸ್ಸೀಮ ಮಹಿಮ ಭಕ್ತ ಪ್ರೇಮ ಪಾವನ ಚರಿತ ಸಾಮಜವರದ ಶ್ರೀ ವರದೇಶವಿಠಲನ ಪ್ರೇಮ ಪಾತ್ರ ಮಹಾ ಮಹಿಮ ನಿಷ್ಕಾಮ3
--------------
ವರದೇಶವಿಠಲ