ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೊಂದೆ ನಾನಾವಿಧದಲೀ ಬಂದ ಜನ್ಮಾವಧಿಯಲಿ ತಂದೆ ತಾಯಿ ಬಂಧು ಬಳಗ ಎಲ್ಲರೂ ನೀನೇ ಪ ಮಂದರಧರನೇ ಬೇಲೂರ ಚೆನ್ನಿಗರಾಯ ಹಿಂದಿಟ್ಟುಕೊ ಮುರಹರ ಸ್ವಾಮೀ ಅ.ಪ ಕುಕ್ಷಿಯೊಳೀರೇಳು ಲೋಕವನು ತಾಳ್ದನೇ ಪಕ್ಷಿವಾಹನಮೂರ್ತಿ ಮತ್ಸ್ಯಾವತಾರನೇ ಅಕ್ಷಯಾಗೆಂದು ದ್ರೌಪದಿಯ ಅಭಿಮಾನವನು ರಕ್ಷಿಸಿದ ಕೃಷ್ಣ ನೀನೆ ಸ್ವಾಮಿ 1 ಚಿಕ್ಕಂದು ಮೊದಲು ನಿನ್ನನು ನೆನೆವ ಬಾಲಕನಾ ಕಕ್ಕಸದ ಬಾಧೆಯಲಿ ಮೂದಲಿಪ ಹಿರಣ್ಯಕನಾ ಸೊಕ್ಕುಗಳ ಮುರಿದವನ ಕರುಳ ಮಾಲೆಯನಿಟ್ಟ ¨Àಕ್ತವತ್ಸಲನು ನೀನೇ ಸ್ವಾಮಿ 2 ಕರಿಕಂಠ ಹರನು ದಾನವನ ತಪಸಿಗೆ ಮೆಚ್ಚಿ ಅರಿತು ಅರಿಯದ ತೆರದಿ ಉರಿಹಸ್ತವನು ಕೊಡಲು ತರುಣಿ ರೂಪಿಲಿ ಪರಿಹರಿಸಿ ಭಸ್ಮಾಸುರನಾ [ಉರಿಸಿ]ಗೆಲಿದ ದೇವರದೇವಾ ಸ್ವಾಮಿ3 ಅಂದು ಮರೆಹೊಕ್ಕ ವಿಭೀಷಣಗೆ ರಾಜ್ಯವನು ಸಂದೇಹವಿಲ್ಲದಂದದಲಿ ಪಾಲಿಸಿ ನರನಾ ಮುಂದೆ ಸಾರಥಿಯಾಗಿ ರಥವ ನಡಸಿದ ಗೋ ವಿಂದ ಸಲಹಯ್ಯ ಯೆನ್ನನೂ [ಸ್ವಾಮಿ] 4 ದೇಶದೇಶದೊಳತ್ಯಧಿಕ ಕಾಶಿಗಿಂ ಮಿಗಿಲು ಭೂಸ್ವರ್ಗವೆನಿಪ ವೇಲಾಪುರವಾಸಾ ಕೇಶವ ಶ್ರೀವೈಕುಂಠ ಚೆನ್ನಿಗರಾಯಾ ಶೇಷಶಯನನೇ ಕರುಣಿಸೈ ಸ್ವಾಮೀ 5
--------------
ಬೇಲೂರು ವೈಕುಂಠದಾಸರು
ಪಾವನಪಾದವ ಭಜಿಸೆಲೊ ಮನುಜ ನೀ ಪ ದೇವರದೇವಾ ನಿನ್ನ ಸೇವೆಯೊಳಿರಿಸೆಂದು ಅ.ಪ ಶ್ರುತಿಪಥವನುಗೂಡಿ ಸುಖದು:ಖ ದೂರಮಾಡಿ ಮತಿಗೆ ಮಂಗಳವೂ ಸದ್ಗತಿಗೆ ಕಾರಣಮಾದ 1 ಧರೆಯೊಳು ರಾಜಿಪ ಗುರುವೆ ಗಿರೀಶನೆಂದು ಧರಣಿ ತುಲಸೀರಾಮ ಗುರುವೆ ತಾನಾದ 2
--------------
ಚನ್ನಪಟ್ಟಣದ ಅಹೋಬಲದಾಸರು
ಶ್ರೀಕಾಮಕೋಟಿ ಲಾವಣ್ಯಮೋಹನ ರೂಪಿನ ಶ್ರೀಕಾಂತ ಮಂಗಳ ಮೂರುತಿ ವರದೇವಾ ಪ ಶ್ರೀಮಣಿಮೌಳಿ ಮಸ್ತಕದ ಕಸ್ತುರಿಯ ಲ ಲಾಮವೆಸೆವ ವರ ಫಣಿಯಾ ಭ್ರೂಮಧ್ಯದೊಳೆಳೆವರೆಯಂತೊಪ್ಪುವ ನಾಮದ ಪಿರಿನೊಸಲಾ1 ತಾಮರಸಾಯತನೇತ್ರದಾನತಸು ಕ್ಷೇಮಾಂಕುರದ ನೋಟದ ಚಾಮೀಕರ ಕುಟ್ಮಲ ನಾಸಿಕದಭಿ ರಾಮ ಸುಮೌಕ್ತಿಕದಾ2 ಮಾ ಮನೋಹರ ಚುಬುಕಾಗ್ರದ ನವಪಲ್ಲ ವಾ ಮಿಳಿತಾಧರದ ಸೋಮವದನದೆಳನಗೆಯೂ ಪೊಳೆವಟ್ಟ ಕೌಮುದಿಯಾ ಸೊಗಸಿನಾ 3 ರಾಮಣೀಯಕವದನ ಮಕರಕುಂಡಲದ ಸು ರಾಮಯದ ಕದಪಿನ ಕಾಮನೀಯ ಕಂಬುಕಂಠದ ಸಿರಿತುಳ ಸೀ ಮಂದಾರಮಾಲೆಯ 4 ಜೀಮೂತ ಸವಿಯನೆ ರಂಜಿಪ ಸು ಶ್ಯಾಮಲ ರುಚಿರಾಂಗದ ಕಮಲ ಕಂಬು ನಿ ಸ್ಸೀಮ ಚಕ್ರಾಯುಧಂಗಳಾ 5 ಶ್ರೀಮೆರೆವುರದ ಶ್ರೀವತ್ಸಕೌಸ್ತುಭ ದಿ ವ್ಯಾಮೋದ ಗಂಧ ಲೇಪದ ಸೌಮಾನಜಂ ತಾಳ್ದುಪವೀತದ ಮಣಿ ಸ್ತೋಮಾಭರಣಂಗಳಾ 6 ಸಾಮಾಜಿಕರ ಸನ್ನಿಭ ರಂಜನದು ದ್ದಾಮ ಸುಬಾಹುಗಳಾ ನೇಮಿತಾಂಗದ ತೋಳಬಂದಿ ಕಂಕಣಮುಂ ಗೈಮುರಾರಿ ಮುದ್ರೆಯಾ 7 ಐಮೊಗದಹಿಯ ತೆರದ ಕರಕಮಲದ ಸೈಮಿರುಪಂಗುಲಿಗಳಾ ರೋಮಾವಳಿಯ ಪೊಳೆವ ಪೊಡೆವಲರ ಪಿ ತಾಮಹಮುದಿತ ನಾಭಿಯಾ 8 ಹೇಮಾಂಬರದಸಿಮಧ್ಯದ ಕಾಂಚೀ ಧಾಮದ ಕಟಿತಟದ ಪ್ರೇಮಿತ ಊರುಗಳ ಸಜಾನುಗಳ ಮುದದಿಂ ತಾಳ್ದ ವಾಮಜಂಫೆಯ ತೊಡರಿನ ಪೊಂಗೆಜ್ಜೆಗಳ9 ಭೂಮಿ ಪಾವನ ಗಂಗೆಯುದಿಸಿದುಂಗುಟದ ಯ ಶೋ ಮಹಿಮೆಯ ಚೆಲ್ವಿನಾ ಪ್ರೇಮದೊಳಾನತರಂ ಸಲಹುವ ಸುರಪುರ ಮ - ಹಾಮಾತೆ ಲಕ್ಷ್ಮೀಪತಿ ಪಾದಪದ್ಮದ 10
--------------
ಕವಿ ಲಕ್ಷ್ಮೀಶ
ಶ್ರೀನಿವಾಸದೇವರು ಬಾರಯ್ಯ ವೇಂಕಟ ಮನ್ಮನಕೆ ತ್ವರಿತದಿ ನಿಜನಾರೀಸಹಿತದಿ ಈ ಸಮಯಕೆ ಶರಣೆಂಬೆನು ಪದಯುಗಕೆ ಪ ಸಾರಿದ ನಿಜಶÀರಣನ ಈ ಭವಭÀವ ಘೋರಭಯವ ಪರಿಹÀರಿಸುವುದಕ್ಕೆಅ.ಪ ವ್ಯಕ್ತಾವ್ಯಕ್ತ ತ್ರಿಜಗದ್ವ್ಯಾಪ್ತಾ ದೋಷ ನಿರ್ಲಿಪ್ತಾ ಮುಕ್ತಾ ಮುಕ್ತ ಜೀವರ ಗಣದಾಪ್ತಾ ನೀ ಸರ್ವತ್ರದಿ ವ್ಯಾಪ್ತ ಭಕ್ತನ ಹೃದಯದಿ ವ್ಯಕ್ತನಾಗಿ ನಿಜ ಮುಕ್ತಿಪಥವ ತೋರೊ ಭಕ್ತಿಯನಿತ್ತು 1 ಕವಿಜನಗೇಯಾ ಆನಂದದಾಯಕ ನಿರ್ಜಿತಮಾಯಾ ಕಾಯಯ್ಯಾ ಜೀಯಾ ಆನತಜನಸನ್ಮಾನದ ಮನ್ಮನ ವನಜದಿ ನೀ ಸನ್ನಿಹಿತಾಗುವುದಕೆ 2 ಸೋಮಾಸುರನಾಮಕ ದೈತ್ಯನ ಕೊಂದೂ ವೇದವ ತಂದೂ ಕೂರ್ಮ ಕಿಟ ನರಹರಿ ರೂಪದಿ ನಿಂದೂ ವಾಮನನೆಂದೂ ರಾಮ ಭಾರ್ಗವ ಯದುಕುಲಸಾಗರ - ಸೋಮ ಬೌದ್ಧ ಕಲ್ಕಿ ಪ್ರೇಮದಿ ಮನಕೆ 3 ನಿಗಮಗೋಚರ ನಿತ್ಯಾನಂದಾ ಬಗೆಬಗೆ ಜನ್ಮವನೈದಿದೆ ಮುಕುಂದಾ ಮುಗಿವೆನೊ ಕರದಿಂದಾ ಅಗಣಿತ ಗುಣನಿಧಿ ಸುಗಮದಿ ಭವದ ಬಗೆಯನು ತಿಳಿಸೊ ನಗೆ ಮೊಗದಿ ಬಾ 4 ವಿಧಿಶಂಭುವಂದಿತ ಪದಯುಗಕಮಲಾ ನಿತ್ಯ ನಿರ್ಮಲಾ ಆಧಿಭೂತಾಧ್ಯಾತ್ಮಿಕತಾಪದ ಶಮಲಾ ನೀ ಮಾಡೆನ್ನನು ವಿಮಲಾ ಸದಯ ಸುಧಾಕರ ಹೃದಯದಿ ತವಪದ ಪದುಮ ಭಜಿಪೆ ನೀ ಮುದದಲಿ ಮನಕೆ5 ಸಾಸಿರನಾಮ ನತಜನಪ್ರೇಮಾ ಪೊರೆಯೋ ಶ್ರೀ ರಾಮಾ ಆಶೀ ಪೂರ್ತಿಸಿ ಮಾಡೆನ್ನಲಿ ಪ್ರೇಮಾ ಸುರಸಾರ್ವಭೌಮಾ ವಾಸಮಾಡಿ ಅಭಿಲಾಷೆಯ ಪೂರ್ತಿಸೊ ವಾಸುದೇವ ವಾರಾಸಿಜರಮಣಾ 6 ಶರಣಾಗತಜನಪರಿಪಾಲಾ ಕರುಣಾಲವಾಲಾ ಕರುಣಿಸೆನ್ನನು ಹೇ ಶಿರಿಲೋಲಾ ನಮಿತಜನಸುgಸಾಲ ಅಜ ಭವ ಸುರ ನಿಕರಾರ್ಚಿತಪದ ಸರಸಿಜಯುತ ನೀ ಸುರವರದೇವಾ 7 ಪನ್ನಗಗಿರಿ ನಿಜಕೃತವಾಸಾ ಪೊರೆ ಎನ್ನನು ಶ್ರೀಶಾ ಬಿನ್ನಪ ಮಾಳ್ಪೆನು ಹೇ ಶ್ರೀನಿವಾಸಾ ಕೊಡು ಎನಗೆ ಲೇಸಾ ಎನ್ನ ಸಲಹೋದಕೆ ಅನ್ಯರ ಕಾಣೆನೊ ಮನ್ನಿಸು ನೀನಾಪನ್ನಜನಸುಖದಾ 8 ಲಕ್ಷ್ಮೀನಾಯಕ ವರಪಕ್ಷಿಗಮನಾ ಅಕ್ಷಯ ಫಲವನ್ನ ರಕ್ಷಿಸಿ ಕಾಯ್ವದೋ ನೀ ಎನ್ನಾ ಲಕ್ಷ್ಮಣನಣ್ಣಾ ಕ - ಟಾಕ್ಷದಿ ಎನ್ನ ವೀಕ್ಷಿಸು ಕ್ಷಣ ಕ್ಷಣ..... 9 ಧರ್ಮಾರ್ಥಕಾಮಮೋಕ್ಷವ ನಾನೊಲ್ಲೇ ಕರ್ಮದ ಸುಳಿಯಲ್ಲೇ ಮರ್ಮವ ತಿಳಿಯದೆ ಬೀಳುವೆ ನಾನಲ್ಲೇ ನಿರ್ಮಿಸದಿರು ಎನ್ನಲ್ಲೇ ಕರ್ಮಭವದ ಮಹÀ ಮರ್ಮವ ತಿಳಿಸೀ ದುರ್ಮನ ಬಿಡಿಸೆಲೊ ಬೊಮ್ಮನ ತಾತಾ 10 ದಿಟ್ಟ ಗುರು ಜಗನ್ನಾಥವಿಠಲ ನಾನನಾಥಾ ಥಟ್ಟಾನೆ ನೀ ಎನ್ನನು ಕಾಯೋ ಶ್ರೀನಾಥಾ ಇಷ್ಟೇ ಎನಮನದರ್ಥ ಸೃಷ್ಟಿಯೊಳಗೆ ಬಹು ಭ್ರಷ್ಟರಸ್ತುತಿಸಿ ನಿ - ಕೃಷ್ಟನಾದೇನೋ ಶ್ರೇಷ್ಠ ಮೂರುತೀ 11
--------------
ಗುರುಜಗನ್ನಾಥದಾಸರು