ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪರರ ಮನೆಗೆ ಪೋಗಿ ತಿರುಗುವೆ ಯಾತಕೆ ಸುರತರುವಿರುವದ ಅರಿಯದೆ ಮನುಜ ಪ. ವರದಿಹ ಸುರಮುನಿ ಗುರುವರ ನಾರದ ಪೊರೆವ ಹರಿ ಎಂದ ಪುರಂದರದಾಸರ ಅ.ಪ. ವರ ದಿವಕರನೇಳದ ಮುನ್ನ ಸ್ಮರಿಸುತ ಹರಿಯ ನೀನೇಳೆಂದು ಕರುಣಸಾಗರ ಹರಿಚರಣಕೆ ನಿನ್ನಯ ಹರಣವ ಬಾಗುತೆ ಪೊರೆವ ನಿನ್ನ ಜೀವವೆಂದರುಹಿದ ಮರೆತು ನೀನನುದಿನ 1 ಅಂಗನೆ ದ್ರೌಪದಿ ಗಂಗ ಸ್ನಾನಕೆ ಪೋಗೆ ರಂಗನ ಚರಣವ ಸ್ಮರಿಸುವಂಥ ಶುಕರು ಹೆಂಗಳೆಯನು ಮಾನಂಗಳ್ವಸ್ತ್ರವ ಬೇಡೆ ಮಂಗಳೆ ಕೈಯಿಂದ ರಂಗನ ಕೊಡಿಸಿರೆಂದು ಮರೆತುನೀನನುದಿನ2 ತೋರಿದ ಜಗಕೆ ಕೃಷ್ಣನೆಂಬೋ ನಾರಿ ಸೊಲ್ಲ ಕೇಳಿ ಭೋರೆಂಬೊ ಸಭೆಗೆ ತಾ ಕೋರಿದಕ್ಷಯ ಶೀರೆ ಶ್ರೀ ಶ್ರೀನಿವಾಸನು ಮರೆತು ನೀನನುದಿನ3
--------------
ಸರಸ್ವತಿ ಬಾಯಿ
ವನಮಾಲಾಧರ ಕೃಷ್ಣ ವನರುಹಲೋಚನ ತನ್ವನೀತೆ ಶ್ರೀ ತುಳಸಿಯ ಪ. ಅಚ್ಚುತ ಧರಿಸಿಹ ಅಚ್ಚ ಶ್ರೀ ತುಳಸಿಯ ಇಚ್ಛಿಸಿದಾ ಮುನಿ ಇಚ್ಛೆ ಪೂರೈಸಿದ ಸಚ್ಚಿದಾನಂದ ಮೂರುತಿ 1 ದಾನವಾಂತಕನ ದಾನವ ಕೊಡುತಲಾ ಮಾನುನಿ ಚಿಂತಿಸೆ ಕಾಮಿನಿ ರುಕ್ಮಿಣಿ ಶ್ರೀನಿಧಿಗೆ ಸಮವೆಂದಾಮುನಿಗೆ ತೂಗಾ ನಂದದೊಳಗಿತ್ತ ಮಾನುನಿ ತುಳಸಿಯ 2 ಪರಿಪರಿ ಭಾಗ್ಯಕೆ ಸರಿಮಿಗಿಲಾದ ಪರಿಮಳ ತುಳಸಿಯ ಸುರಮುನಿ ಧರಿಸುತ ಸ್ಮರಿಸುತ ಹರಿಯನು ವರದ ಶ್ರೀ ಶ್ರೀನಿವಾಸ ಪೊರೆವನೆಂದ್ವರದಿಹ 3
--------------
ಸರಸ್ವತಿ ಬಾಯಿ