ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉದೋ ಉದೋ ಉದೋ ಉದೋ ಉದೋ ಯನ್ನಲು ಉದ ಮುದೋ ಪ ತಮ್ಮನು ಪೊಗಳಿ ಪಾಲೆನೆ ಅಮ್ಮೊಮ್ಮಾ | ಮೊಮ್ಮನ ಪಡೆದಿಹ ಜಗದಯ್ಯಾ | ಸುಮ್ಮನ ಹೊಂದಿಹ ಬಾಲಕ ನಿಮ್ಮಾ | ಝಮ್ಮನೆ ಸ್ಮರಣೆಗೆ ಬಾನಮ್ಮಾ 1 ಛಂದ ವಿವೇಕದ ಚೌಡಕಿ ಹಿಡಿದು | ಒಂದೇ ನಿಷ್ಠೆಯ ತಂತಿಯ ಬಿಗಿದು | ಸುಂದರ ಭಕ್ತಿಯ ರಂಗಕ ಬಂದು | ಗೊಂದಳ ಹಾಕುವೆ ನಾನಿಂದು 2 ನಾಮಾವಳಿ ಕವಡೆಯ ಸರಥರಿಸಿ | ಪ್ರೇಮದ ಬಂಡಾರವ ಸುರಿಸಿ | ಆಮಹಾಜ್ಞಾನದ ಹೊತ್ತ ಪ್ರಜ್ವಲಿಸಿ | ನಾಮಗೆಜ್ಜಿಲಿ ಕುಣಿವೆನು ಘಲಿಸಿ 3 ಆವನಿಯ ಸುಜನರ ಮೊರೆಯನು ಕೇಳಿ | ಪರಿ ತಾಳಿ | ಭವ ಮಹಿಷಾಸುರ ನಸುವನು ಹೋಳಿ | ಜವದಲಿ ಮಾಡಿದೆ ತುನುಶೀಳಿ 4 ಮುನಿ ಮಾನಸ ತುಳಜಾಪೂರ ಗೇಹಿ | ಖೂನದೊರಿಸೀ ನಿಜ ಸೋಹೀ | ಏನೇ ನರಿಯದವನೆಂದರಿತು ಕಾಯೀ | ಘನಗುರು ಮಹಿಪತಿ ವರದಾಯಿ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕಾಮಿನೀಮಣಿ ರಾಮಭಾಮಿನಿ ಪ ಸೋಮಬಿಂಬ ವದನೆಯೆ ಸೀತೆಯೆ ಅ.ಪ. ಪಾವಮಾನಿ ಮನೋವಾರಿಜಾಶ್ರಿತೆ ದೇವತಾವಳೀ ದೇವಸನ್ನುತೆ ದೇವಬೃಂದ ವಂದಿತೆ ಸನ್ನುತೆ 1 ಭಕ್ತವತ್ಸಲೆಯೆ ಶಕ್ತಿರೂಪೆಯೆ ಮಾರ್ಗವಿಶದೆಯೆ ಮಾತೆಯೆ 2 ವರಧೇನುಪುರಿ ಪರಮೇಶ್ವರಿ ವರದಾಯಿನಿ ವರಲೋಕಪಾಲೆ ಕರುಣಾಕರೆ ವರರಾಮ ಜಾಯೆ ಪರಿಪಾಲಿತಾಶ್ರಿತೆ ಸುರನುತೆ 3
--------------
ಬೇಟೆರಾಯ ದೀಕ್ಷಿತರು
ಜಯ ಜಯ ಸ್ವರಸತಿ ಜಯವರ ಪೂರಣಮತಿ ತ್ರಯಲೋಕ್ಯದಲಿ ಖ್ಯಾತಿ ಜಯ ಸುಕೀರ್ತಿ ಧ್ರುವ ವಿದ್ಯಾವರದಾಯಿನಿ ಸಿದ್ಧಿಗೆ ಶಿಖಾಮಣಿ ಬುದ್ಧಿ ಪ್ರಕಾಶಿನಿ ಸದ್ಭೂಷಿಣಿ 1 ಕರಕಮಲದಲಿ ವೀಣೆ ಸುರಸ ಅಮೃತವಾಣಿ ವರವಿದ್ಯದಲಿ ದಾನಿ ಸುಪ್ರವೀಣೆ 2 ಪ್ರಸನ್ನವದನಿ ವಿಶ್ವದಲಿ ನೀ ಪೂರ್ಣೆ ಹಂಸವಾಹಿನಿ ಪೂರ್ಣಿ ಸ್ವಸಿದ್ಧಿಣಿ 3 ಸದಾ ಸದ್ಗುರುಸ್ತುತಿ ಒದುಗುವ್ಹಾಂಗ ಸ್ಫೂರ್ತಿ ಇದೇ ಮಹಿಪತಿ ಕುರ್ತಿ ಬೋಧಿಸುವ ಮತಿ4
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಂಜೀವನೌಷಧ ಸುಲಭದಿ ದೊರೆತಮ್ಯಾ- ಲಂಜುವದ್ಯಾಕಿನ್ನು ಕುಂಜರ ವರದಾಯಿ ಕುಬ್ಜೆಗೊಲಿದ ನಮ್ಮ ಕಂಜನಾಭನ ಪಾದಕಂಜರ ನೆನವೆಂಬ ಪ. ಕಲಾನಿಯಮವಿಲ್ಲ ಕುಡಿದರೆ ಖೈಂಯಲ್ಲ ನಾಲಿಗೆ ತುದಿಯೊಳಗಿರುವುದೆಲ್ಲಾ ಸಾಲಾಗಿ ನಿಲುವುದು ಸರಿಯಾದ ವ್ರಯದಿಂದ ಪಾಲಗಡಲನಾಥ ಪಾಲಿಸಿ ಕುಡಿಸುವ 1 ವ್ಯತ್ಯಾಸದಿಂದಲಪಥ್ಯವಾಗದು ಭ್ರಮೆ ಪಿತ್ತಶಾಂತಿಯನೀವುದು ತುತ್ತು ತುತ್ತಿಗೆ ನಮ್ಮ ಸತ್ಯವರನ ಪೆಸ- ರೆತ್ತಲು ಭವರೋಗ ಕತ್ತರಿಸುವ ದಿವ್ಯ 2 ಅಡವಿಯೊಳಗೆ ಪೋಗಿ ಕಡಿದು ತರುವುದಲ್ಲ ಅಡಿಗೆಗಿಕ್ಕುವ ಪಾಕ ಮಾಳ್ಪುದಲ್ಲ ಕುಡಿದು ನೋಡಿದರತಿ ಕಡುಮಧುರವು ನಮ್ಮ ಒಡೆಯ ವೆಂಕಟರಾಜನಡಿಗಳ ನೆನೆವೆಂಬ 3
--------------
ತುಪಾಕಿ ವೆಂಕಟರಮಣಾಚಾರ್ಯ