ಒಟ್ಟು 4 ಕಡೆಗಳಲ್ಲಿ , 1 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹೂವ ಕೊಡೆ ದೇವಿ ಹೂವ ಕೊಡೆಯಾವಾಗಲೂ ನಿಮ್ಮ ಸಿರಿಮುಡಿಯೊಳಗಿರ್ಪ ಪ ವರಮಹಾಲಕ್ಷ್ಮಿ ನಿಮ್ಮ ಸಿರಿಮುಡಿಯನೆ ಕಟ್ಟಿಪರಿ ಪರಿ ಧೂಪ ಧೂಮಗಳನಿಕ್ಕಿಪರಿಮಳಿಸುವ ಸಂಪಿಗೆಯ ಪೂಸರವ ಸಿಂ-ಗರಿಸಿರಲಾಮಾಳಿಕೆಯೊಳು ಸಂಪಿಗೆ ಹೂವ 1 ಮರುಗ ಮಲ್ಲಿಗೆ ಜಾಜಿ ಸುರಗಿ ಸೇವಂತಿಗೆಸರಸಿಜ ಮೊದಲಾದ ಕುಸುಮದಿಂದಪರಿಮಳಿಸುವ ನಿಮ್ಮ ಸಿರಿಮುಡಿಯೊಳಗಿರ್ಪಅರಳಿದ ಮಲ್ಲಿಗೆ ಹೂವ ಕಂಡೆ ಹೂವ 2 ವ್ಯೋಮಗಂಗೆಯೊಳಿಂದ ಹೇಮಕಾಮರಸವಕಾಮಿನಿಯರು ಕೊಯ್‍ತಂದದನುಶ್ರೀ ಮಹಾದೇವಿ ನಿಮ್ಮ ತುರುಬಿಗೆ ಮುಡಿಸಿರ-ಲಾ ಮಹಾಕುಸುಮ ಮಾಲಿಕೆಯೊಳು ತಾವರೆ ಹೂವ 3 ಮುತ್ತಿನ ಲಹರಿಯ ರತ್ನದ ರಾಗಟೆಯಸುತ್ತ ಮುತ್ತಲೂ ರಾರಾಜಿಸುವಪುತ್ಥಳಿಯ ಚಿನ್ನದಂತೆ ಘಮಘಮಿಸುವಉತ್ತಮವಾದ ಸುವರ್ಣದ ಕೇದಗೆ ಹೂವ 4 ಜಾತಿ ರತ್ನದ ನಡುವೆ ಜ್ಯೋತಿಯ ತೆರನಂತೆನೂತನವೆನಿಸಿ ಪ್ರಜ್ವಲಿಸುತಿಹಶಾತಕುಂಭದ ಚೌರಿಯ ಮೇಲೆ ಮುಡಿಸಿದಜಾತಿಮಲ್ಲಿಗೆ ಸಂಪಿಗೆ ಸೇವಂತಿಗೆ ಹೂವ 5 ಇಂದೀವರದಳನಯನೆ ಶುಭಪ್ರದೆಇಂದು ನಿಭಾನನೆ ಹೂವ ಕೊಡೆಮಂದಗಮನೆ ನಿಮ್ಮ ತುರುಬಿನೊಳೊಪ್ಪುವಮಂದಾರದ ಮೋಹನ ಮಾಲಿಕೆಯೆಂಬ ಹೂವ 6 ಚಂದ್ರಗಾವಿಯ ಸೀರೆ ಚೆಲುವ ಮುತ್ತಿನಸರದಿಂದಲೆಸೆವ ದೇವಿಹೂವ ಕೊಡೆಮುಂದಲೆ ಮುತ್ತಿನ ಸರದ ಮೇಲೊಪ್ಪುವಬಂಧುರಪೂಗಪುನ್ನಾಗ ಪಾರಿಜಾತದ ಹೂವ 7 ದೇವಿ ನಿಮ್ಮನು ಪೂಜೆಗೈದು ಮೆಚ್ಚಿಸಬಲ್ಲನಾವನೀ ಧರೆಯೊಳುಹೂವ ಕೊಡೆಪಾವನಾತ್ಮಕಿಯ ಪರಾಕ ಮಾಡದೆ ವರ-ವೀವ ಸಮಯವಿದು ಹೂವ ಕೊಡೆ ಹೂವ 8 ಮುತ್ತೈದೆತನವನು ನಿತ್ಯ ಸೌಭಾಗ್ಯವಉತ್ತಮ ಧನಕನಕಾಂಬರವಪುತ್ರ ಸಂತಾನವ ಕೊಡುವೆನೆನುತ ಕರ-ವೆತ್ತಿ ಅಭಯವಿತ್ತು ಹೂವ ಕೊಡೆ ಹೂವ 9 ಎಂದೆಂದೂ ಈ ಮನೆಗೆ ಕುಂದದ ಭಾಗ್ಯವಚಂದವಾಗಿಹ ಛತ್ರಚಾಮರವಚಂದ್ರ ಸೂರ್ಯರ ಪೋಲ್ವ ನಂದನರನುದಯ-ದಿಂದಲಿ ಕೊಟ್ಟು ರಕ್ಷಿಪನೆಂದು ಸೂಡಿದ ಹೂವ10 ವರದಾನದಿಯ ತೀರವಾಸ ಶ್ರೀ ಕೆಳದಿಯಪುರವರಾಧೀಶ ರಾಮೇಶ್ವರನಪರಮ ಪಟ್ಟದ ರಾಣಿ ಪಾರ್ವತಿ ನಿಮ್ಮಯಸಿರಿಮುಡಿಯೊಳಗಿರ್ಪ ಹೂವ ಕೊಡೆ ಹೂವ 11
--------------
ಕೆಳದಿ ವೆಂಕಣ್ಣ ಕವಿ
ಗಿರಿರಾಜತನೂಜಾತೆವೇದ ವಿಖ್ಯಾತೆಪರಮಂಗಳದಾತೆ ಪದ್ಮಜಮುಖಿ ಸುರಗಣ ಪರಿಪೂಜಿತೆಶಂಕರಪ್ರೀತೆಧುರದಿ ಮಧುಕೈಟಭರ ವಧಿಸಿ ವಿ-ಸ್ತರದ ಜಲದೊಳು ಸ್ಥಿರಮೆನಲು ಭಾ-ಸುರ ಧರಿತ್ರಿಯ ನಿಲಿಸಿ ಸರ್ವಾಮರರಪೊರೆದಮರೇಂದ್ರಸನ್ನುತೆಲೋಕೈಕಮಾತೆ 1 ನಾರದಗಾನಲೋಲೆಶ್ರೀಚಕ್ರಸಂಚಾರಿಣಿ ಶುಭಲೀಲೆದಿವ್ಯಮೌಕ್ತಿಕಹಾರೆ ಕುಂಕುಮನಿಟಿಲೆಮುಕುರಕಪೋಲೆಧೀರಸುರಪತಿಮುಖ್ಯಸುರಪರಿವಾರ ಜಯವೆಂದಾರುತಿರೆ ಜುಝೂರ (?) ಮಹಿಷಾಸುರನ ಮರ್ಧಿನಿಮೂರು ಲೋಕವ ಪೊರೆವ ಮಂಗಲೆಕಸ್ತೂರಿಫಾಲೆ 2 ಎಸಳುಗಂಗಳ ನೀರೆಪರಾತ್ಪರೆಮಿಸುಪ ಕಂಕಣಹಾರೆಬಂದುಗೆಯ ಹೂವಿನಂತೆಸೆವಸುಶೋಣಾಧರೆಬಿಸಜಬಾಣನ ಪೊಸಮಸೆಯ ಕೂರಸಿಯೆನಲು ಮಿಸುಮಿಸುಪ ಕಂಗಡೆಎಸವ ಪೊಸವೆಳಗಿಂದ ದೆಸೆಗಳವಿಸರವನು ಪಸರಿಸುವ ಶ್ರೀಕರೇಮೋಹನಾಕಾರೇ3 ಸುಲಲಿತ ಮಧುರವಾಣಿಮೋಹನಕರಜಲರುಹ ಸದೃಶಪಾಣಿಮಂಗಲಸೂತ್ರೋ-ಜ್ವಲೆ ಹರಿ ನೀಲವೇಣಿಸಿಂಹವಾಹಿನಿನಳನಳಿಪ ನಳಿತೋಳ ಥಳ ಥಳಥಳಿಸುವಳಿಕುಂತಳದದರಸಮಗಳದತಿಲಸುಮನಾಸಿಕದಅರಗಿಳಿನುಡಿಯರುದ್ರಾಣಿ ಗುಣಮಣಿಪರಮಕಲ್ಯಾಣಿ4 ಸರಸಿಜದಳನಯನೆಸಾಮಜಯಾನೆ ಸರಸಮಂಗಲಸದನೆಶಂಕರಿಪೂರ್ಣೆಶರದಿಂದುನಿಭವದನೆಕೋಕಿಲಗಾನೆಪರಮಪಾವನತರ ಸು-ವರದಾನದಿಯ ತೀರದಿ ಮೆರವ ಕೆಳದಿಯಪುರದ ರಾಮೇಶ್ವರನ ವಲ್ಲಭೆಯೆನಿಸಿ ಭ-ಕ್ತರ ಪೊರೆವ ಪಾರ್ವತಿಕಲಹಂಸಗಮನೆ ಪರಮರುದ್ರಾಣಿ5
--------------
ಕೆಳದಿ ವೆಂಕಣ್ಣ ಕವಿ
ದೇವ ದೇವತೆಗಳ ಸ್ತುತಿ ಆವ ಕಾರ್ಯಕೂ ಮುಂಚಿನ ಪೂಜೆ ನಿಮ್ಮತಾಯಿ ತಂದೆಯು ಕಲಿಸಿದ ಪೂಜೆ ಪ ಜಾತಕರ್ಮಕೆ ನಾಮಕರಣಕೆ ಚೌಲಕೆಸಾತಿಶಯಾಕ್ಷರ ಪ್ರಾರಂಭಕೆನೂತನ ವಿದ್ಯಾರಂಭಕೆ ಮುಂಜಿಗೆಯಾತಕೂ ಶ್ರೀ ಗಣಪತಿ ಜಯ ಜಯವೆಂದೂ 1 ಮದುವೆಗೆ ಋತುಶಾಂತಿಗೆ ಸೀಮಂತಕೆಮುದದಿಂದ ಜನನವ ಬರೆವುದಕೆಸದಮಲ ಯಜ್ಞಾರಂಭಕೆ ಸಮರಕೆಮೊದಲೇ ಶ್ರೀ ವಿಘ್ನೇಶ್ವರ ಜಯ ಜಯವೆಂದೂ2 ಪರ ಉಪಕಾರಕೆಜ್ಞಾನಮಾರ್ಗಕೆ ಗಾನಕೆ ಗೀತೆಗೆನಾನಾವಿಧ ಸುವ್ರತ ತೀರ್ಥಯಾತ್ರೆಗೆನೀನೆ ಗತಿ ಗಣಪತಿ ಜಯ ಜಯವೆಂದೂ 3 ಕೆರೆ ಕಾಲುವೆ ಕೂಪಗಳ ವಿಸ್ತಾರಕೆಸುರಗೃಹ ರಥ ಉತ್ಸವ ಪೂಜೆಗೆಸರಸ ಸರೋವರಗಳ ನಿರ್ಮಾಣಕೆಸಿರಿ ಗಣಪತಿ ಪಾವನಮೂರ್ತಿ ಜಯವೆಂದೂ 4 ಹರ ನಿಮ್ಮ ಪೂಜಿಸಿ ಪುರಮೂರ ಜಯಿಸಿದಗರುಡಗೆ ಅಮೃತವು ಸಿದ್ಧಿಸಿತುವರರಾಮಚಂದ್ರ ನಿಮ್ಮಡಿಯ ಪೂಜಿಸಿ ದಶಶಿರನ ಗೆಲಿದನೆನೆ ಗಣಪತಿ ಜಯವೆಂದೂ 5 ದ್ವಾಪರಯುಗದಲಿ ಧರ್ಮರಾಯನು ನಿಮ್ಮನೇ ಪೂಜಿಸಿ ಕೌರವರ ಗೆಲಿದಾಭೂಪರ ಜೈಸಿ ತುರಗವ ತಂದ ಸಾಂಬನುಶ್ರೀಪತಿನುತ ಗಣಪತಿ ಜಯ ಜಯವೆಂದೂ6 ವರದಾನದಿಯ ತೀರವಾಸ ಶ್ರೀ ಕೆಳದಿಯಪುರವರಾಧೀಶ ರಾಮೇಶ್ವರನಪರಮಮೋಹದ ಪುತ್ರ ಪಾವನತರಗಾತ್ರವರದ ಶ್ರೀ ಗಣಪತಿ ಜಯ ಜಯ ಜಯವೆಂದೂ 7
--------------
ಕೆಳದಿ ವೆಂಕಣ್ಣ ಕವಿ
ಶ್ರೀ ಕಲ್ಯಾಣಿ ಸುಗುಣಮಣಿ ಗಿರಿಜೆ ಪ-ರಾಕೆ ಬಾಗಿಲ ತೆಗೆಯೆಸಾಕು ನೀನಾರು ನಿನ್ನಯ ನಾಮವನು ಪ-ರಾಕು ಮಾಡದೆ ಪೇಳಯ್ಯ 1 ಕಾಮಿನಿಯರೊಳು ಕಟ್ಟಾಣಿ ಪಾರ್ವತಿ ಕೇಳೆಕೌಮಾರಿ ಕಾಣೆ ಜಾಣೆಕೌಮಾರಿಯಾದರೊಳ್ಳಿತು ನಡೆ ಋಷಿಗಳಸ್ತೋಮದ ವನಕಾಗಿ 2 ಕಾಳ ಪನ್ನಗವೇಣಿ ಕಲಕೀರವಾಣಿಕೇಳೆ ಶೂಲಿ ಕಾಣೆಲೆ ಕೋಮಲೆಶೂಲಿ ನೀನಾದರೊಳ್ಳಿತು ನಡೆ ವೈದ್ಯರಜಾಲವಿದ್ದೆಡೆಗಾಗಿ3 ನೀಲಕುಂತಳೆ ನಿಗಮಾಗಮನುತೆ ಕೇಳೆನೀಲಕಂಠನು ಕಾಣೆನೀಲಕಂಠನು ನೀನಾದರೆ ತರುಗಳ ಮೇಲೆಕುಳ್ಳಿರು ಪೋಗಯ್ಯ4 ಸೋನೆ ಕೋಕಿಲಗಾನೆಸ್ಥಾಣು ನಾನೆಲೆ ಜಾಣೆನೀನಾದರೊಳ್ಳಿತು ನಡೆ ವಿಪಿನಸ್ಥಾಣದೊಳಿರು ಪೋಗಯ್ಯ5 ಎಸಳುಗಂಗಳ ಬಾಲೆ ಎಸವ ಮೋಹನಮಾಲೆಪಶುಪತಿ ಕಾಣೆ ಕೋಮಲೆಪಶುಪತಿಯಾದರೊಳ್ಳಿತು ನಡೆಗೋಗಳವಿಸರವ ಕಾವುದಕೆ 6 ಜಾತಿನಾಯಕಿ ಕೇಳೆ ನೂತನವೇತಕೆಭೂತೇಶ ಕಾಣೆ ಜಾಣೆಭೂತೇಶನಾದರೊಳ್ಳಿತು ನಡೆ ಭೂತವ್ರಾತದ ವನಕಾಗಿ7 ಮಿಂಚಿನ ಗೊಂಚಲ ಮುಂಚಿ ಪಳಂಚುವಚಂಚಲನೇತ್ರಯುಗೆಅಂಚಿತಮಾದ ವಿಪಂಚಿಯ ಸ್ವರವ ಪಳಂಚುವಿಂಚರದಬಲೆ 8 ಕರಗಿಸಿ ಕರುವಿಟ್ಟೆರದ ಚಿನ್ನದ ಬೊಂಬೆಸುರುಚಿಕರ ಸುನಿತಂಬೆಪರಿಪೂರ್ಣ ಶರದಿಂದುವದನೆ ಕುಂದರದನೆವರಸುಗುಣಾವಲಂಬೆ 9 ಕುಂಕುಮರೇಖಾಲಂಕೃತೆ ಪರತರೆಪಂಕಜಸಮಪಾಣಿಶಂಕರಿ ಪಾಪಭಯಂಕರಿ ಸರ್ವವಶಂಕರಿ ಶುಭವಾಣಿ10 ಚಂಡಮುಂಡಾಸುರಖಂಡನ ಪಂಡಿತೆಮಂಡಲತ್ರಯನಿಲಯೆಮಂಡಿತ ನವರತ್ನಖಚಿತ ಮಹೋಜ್ವಲಕುಂಡಲೆ ಮಣಿವಲಯೆ 11 ವರದಾನದಿಯ ತೀರವಾಸ ಶ್ರೀ ಕೆಳದಿಯಪುರದ ರಾಮೇಶ ಕಾಣೆಪುರದ ರಾಮೇಶನಾದರೆ ನೆರೆಬಾಯೆಂದುಕರೆದಳು ಗಿರಿಜಾತೆ12 ಗಿರಿಜಾ ಶಂಕರರ ಸಂವಾದದ ಪದಗಳಬರೆದೋದಿ ಕೇಳ್ದರಿಗೆಪರಮ ಸೌಭಾಗ್ಯ ಸಂತಾನಗಳನು ಕೊಟ್ಟುಪೊರೆವನು ರಾಮೇಶ13
--------------
ಕೆಳದಿ ವೆಂಕಣ್ಣ ಕವಿ