ಒಟ್ಟು 5 ಕಡೆಗಳಲ್ಲಿ , 1 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

212ತುಂಗೆ ಮಂಗಳತರಂಗೆ-ಹರಿಸರ್ವಾಂಗೇ |ಜಯಜಯ ಜಯತು ತುಂಗೆ ಪಆದಿಯಲೊಬ್ಬ ದೈತ್ಯ ಮೇದಿನಿಯಕದ್ದೊಯ್ದ |ಸಾಧಿಸಿ ರಸಾತಳದಲ್ಲಿರಿಸೆ ||ಭೇದಿಸಿದವನ ನಾಸಿಕದಲ್ಲಿ ಪುಟ್ಟಿದೆ |ಆದಿವರಾಹನ ದಾಡೆಯಲಿ ಬಂದೆ ದೇವಿ 1ಜಲವೆಲ್ಲ ಹರಿಮಯ, ಶಿಲೆಯೆಲ್ಲ ಶಿವಮಯ |ಮಳಲುಮಿಟ್ಟೆಗಳೆಲ್ಲ ಮುನಿಮಯವು ||ಬೆಳೆದ ದರ್ಭೆಗಳು ಸಾಕ್ಷಾತು ಬ್ರಹ್ಮಮಯ |ನಳಿನನಾಳವು ಸರ್ವ ವಿಷ್ಣುಮಯ 2ಇದೆ ವೃಂಧಾವನ, ಇದೆಕ್ಷೀರಾಂಬುಧಿ|ಇದೆ ವೈಕುಂಠಕೆ ಸರಿಮಿಗಿಲೆನಿಸಿದೆ ||ಇದೆ ಬದರಿಕಾಶ್ರಮ, ಇದೆ ವಾರಣಾಸಿಗೆ,ಅಧಿಕವೆಂದೆನಿಸಿದೆ ದೇವಿ ತುಂಗೆ 3ಧರೆಗೆ ದಕ್ಷಿಣವಾರಣಾಸಿಯೆಂದೆನಿಸಿದೆ |ಪರಮಪವಿತ್ರ ಪಾವನ ಚರಿತ್ರೆಯು ನಿನ್ನ ||ಸ್ಮರಣೆಮಾತ್ರದಿ ಕೋಟಿ ಜನ್ಮದಘವನಳಿವ |ಪರಮಸಾಯುಜ್ಯದ ಫಲವೀವ ದೇವಿ4ಪರಮಭಕ್ತ ಪ್ರಹ್ಲಾದಗೊಲಿದು ಬಂದ |ಪರಮನರಸಿಂಹಕ್ಚೇತ್ರವೆಂದೆನಿಸಿ ಮೆರೆದೆ ||ಧರೆಯೊಳಧಿಕವಾದ ಕೂಡಲಿ ಪುರದಲಿ |ವರದಪುರಂದರವಿಠಲನಿರಲು ಬಂದೆ5
--------------
ಪುರಂದರದಾಸರು
ಆಚಾರವಿಲ್ಲದ ನಾಲಿಗೆನೀಚಬುದ್ದಿಯ ಬಿಡು ನಾಲಿಗೆವಿಚಾರವಿಲ್ಲದೆ ಪರರ ದೂಷಿಪುದಕ್ಕೆಚಾಚಿಕೊಡಿರುವಂತ ನಾಲಿಗೆಪ್ರಾರ್ಥಕಾಲದೊಳೆದ್ದು ನಾಲಿಗೆಸಿರಿಪತಿ ಎನ್ನ ಬಾರದೆ ನಾಲಿಗೆಪತಿತ ಪಾವನನಮ್ಮ ರತಿಪತಿ ಜನಕನಸತತವು ನುಡಿಕಂಡ್ಯ ನಾಲಿಗೆ| 1 |ಚಾಡಿ ಹೇಳಲಿ ಬೇಡ ನಾಲಿಗೆ ನಿನ್ನಬೇಡಿಕೊಂಬುವೆನು ನಾಲಿಗೆರೂಢಿಗೊಡೆಯ ಶ್ರೀರಾಮನ ನಾಮವಪಾಡುತಲಿರು ಕಂಡ್ಯ ನಾಲಿಗೆ| 2 |ಹರಿಯ ಸ್ಮರಣಿ ಮಾಡೊ ನಾಲಿಗೆನರಹರಿಯ ಭಜಿಸು ಕಂಡ್ಯ ನಾಲಿಗೆವರದಪುರಂದರವಿಠಲರಾಯನಚರಣಕಮಲವ ನೆನೆ ನಾಲಿಗೆ| 3 |
--------------
ಪುರಂದರದಾಸರು
ಎಂತಹುದೊ ನಿನ್ನ ಭಕುತಿ ? |ಸಂತತ ನಿನ್ನ ದಾಸರ ಸಂಗವಿರದೆನಗೆ ಪ.ವೃಣವನಾಶಿಪ ಕುರುಡು ನೊಣ ಮೊಸರ ಕಂಡಂತೆ |ಧನಿಕರ ಮನೆಗೆ ಕ್ಷಣಕ್ಷಣಕ್ಕೆ ಪೋಗಿ ||ತನುಬಾಗಿ ತುಟಿಯೊಣಗಿ ಅಣಕನುಡಿ ಕೇಳ್ವ - ಕೃ - |ಪಣ ಮನಕೆ ಎಂತಹದು ನಿನ್ನಯ ಭಕುತಿ 1ಅಡಿಯಾಡಿ ಮುಖಬಾಡಿ ನುಡಿಯಡಗಿ ಬಡವನೆಂದು |ಒಡಲ ತೋರಿಸಿದೆನೊ ಕಡುದೈನ್ಯದಿ ||ಒಡೆಯ ನೀನಹುದೆಂದು ಮಡದಿ - ಮಕ್ಕಳಿಗೆ ಹೆಸ - |ರಿಡುವ ಅವರಡಿಗೆ ಎರಗುವನ ಮನಕೆ 2ಹೋಗಿಬಾರೈ ಎಂದು ಅತಿಗಳೆದರು ತಲೆ - |ಬಾಗಿ ನಿಂತು ಅಲ್ಲಿ ಮೌನವಾಗಿ ||ಓಗರತೆ ಮನೆಮನೆ ತಪ್ಪದೆ ತಿರುಗುವ |ಜೋಗಿಯ ಕೈಯಕೋಡಗದಂಥ ಮನಕೆ 3ಅವನ ತೋರಿ ಬೆಟಿಕಿರಿಯ ಬಾಲವ ಬೀಸಿ |ಕುನ್ನಿ ಸುಳಿದಾಡಿ ಕಾಲ್ಗೆರಗುವ ತರದಿ ||ಹೆಣ್ಣಿನಾಶೆಗೆ ಬಾಯಬಿಡುವ ಸ್ತ್ರೈಣನಪರಿ - |ಘನ್ನವಯ್ಯ ಘನ್ನವಯ್ಯ ಬನ್ನಬಡುವ ಕುನ್ನಿಮನಕೆ 4ವಟುವಾಗಿ ಬಲಿಯ ದಾನವನು ಬೇಡಹೋದ |ಕಟು ಕಷ್ಟಗಳನೆಲ್ಲ ನೀನೆ ಬಲ್ಲೆ ||ವಟಪತ್ರಶಾಯಿ ಶ್ರೀಫಣಿ ವರದಪುರಂದರ - |ವಿಠಲ ನಿನ್ನ ದಾಸರ ಸಂಗಸುಖವಿರದೆ 5
--------------
ಪುರಂದರದಾಸರು
ಪಾಲಿಸೆಮ್ಮ ಮುದ್ದು ಶಾರದೆ-ಎನ್ನ-ನಾಲಗೆಯಲಿ ನಿಲ್ಲಬಾರದೆ ಪಲೋಲಲೋಚನೆ ತಾಯೆ | ನಿರುತ ನಂಬಿದೆ ನಿನ್ನ ಅ.ಪಅಕ್ಷರಕ್ಷರ ವಿವೇಕವ-ನಿಮ್ಮ ಕುಕ್ಷಿಯೊಳೀರೇಳು ಲೋಕವ |ಸಾಕ್ಷಾದ್ರೂಪದಿಂದ ಒಳಿದು ರಕ್ಷಿಸು ತಾಯೆ 1ಶೃಂಗಾರಪುರ ನೆಲೆವಾಸಿನಿ-ದೇವಿ-ಸಂಗೀತ ಗಾನ ವಿಲಾಸಿನಿ |ಭೃಂಗಕುಂತಳೆ ತಾಯೆ-ಭಳಿರೇ ಬ್ರಹ್ಮನ ರಾಣಿ 2ಸರ್ವಾಲಂಕಾರಮಯ ಮೂರುತಿ-ನಿನ್ನಚರಣವ ಸ್ತುತಿಸುವೆ ಕೀರುತಿ |ವರದಪುರಂದರವಿಠಲನ ಸ್ತುತಿಸುತ3
--------------
ಪುರಂದರದಾಸರು
ಶರಣು ಶರಣು ನಿನಗೆಂಬೆನೊ ವಿಠಲಎರವುಮಾಡದೆಯೆನ್ನ ಕಾಯೊ ವಿಠಲಪಅರಸಿ ರುಕ್ಮಿಣಿಗೆ ನೀನೇನೆಂದೆಯೊ ವಿಠಲಸರಸಿಜಸಂಭವಸನ್ನುತವಿಠಲ ||ಬಿರುದಿನ ಶಂಖವ ಪಿಡಿದೆಯೊ ವಿಠಲಅರಿತು ಇಟ್ಟಿಗೆಯ ಮೇಲೆ ನಿಂತೆಯೊ ವಿಠಲ 1ಶಶಿಮುಖಿಗೋಪಿಯರ ರಾಜನೆ ವಿಠಲಕುಶಲದಿ ಗಜುಗವನಾಡಿದೆ ವಿಠಲ ||ದಶರಥನಂದನ ರಾಮನೆ ವಿಠಲಕುಸುಮಬಾಣನಯ್ಯ ಕಾಯೊ ನೀ ವಿಠಲ2ಕಂಡೆ ಗೋಪುರದ ವೆಂಕಟನೆ ವಿಠಲಅಂಡಜಾಧಿಪ ವಾಹನನೆ ವಿಠಲ ||ಪಂಡರಿಕ್ಷೇತ್ರದ ಪಾಲನೆ ವಿಠಲಪುಂಡರೀಕವರದಪುರಂದರವಿಠಲ3
--------------
ಪುರಂದರದಾಸರು