ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತ್ರಿಜಗ ಪಾಲಿಸುವನೆ ಎಲ್ಲ ಸುಖವನಿತ್ತು ಉದಧಿ ಆಲಯ ಶರಣ್ಯ ವಿಟ್ಠಲ ಪ ಹೃದಯಕಮಲ ಮಧ್ಯದಲಿ ಮುದದಿ ಖಗವನೇರಿ ಚರಿಪ ಯದುಕುಲಾಬ್ಧಿ ಜಾತ ಚಂದ್ರ ವಿಧಿಶಿವಾದಿ ಉಡುಗಣಾರ್ಚಿತ 1 ದಿಟ್ಟಭಕ್ತ ಕೊಟ್ಟ ಇಟ್ಟಗೀ ಮೆಟ್ಟಿನಿಂತಿ ಸಿಟ್ಟು ಇಲ್ಲದೆ ಹೊಟ್ಟೆ ಮನೆಯ ಮಾಡಿಕೊಟ್ಟಿ ಕೆಟ್ಟಮಾತು ನುಡಿದ ಚೈದ್ಯಗೆ 2 ಕರಗಳನ್ನೆ ಕಟಿಯಲಿಟ್ಟು ಶರಣುಬಂದ ಭಕ್ತಗೆ ಭವ ಪರಿಮಿತಿಯ ತೋರಿ ನಿರುತ ಪೊರೆಯುವಂಥ ಕರುಣನಿಧಿಯೇ 3 ಪುಂಡರೀಕ ವರದನೆಂದು ಹಿಂಡುಭಕ್ತರು ಪೊಗಳುತಿಹರೊ ಪುಂಡರೀಕ ತೋರಿಸಿನ್ನು 4 ಶ್ರೀ ನರಹರಿಯೆ ನಿನ್ನ ಗಾನ ಮಾಡಲೆಷ್ಟು ಸಾಮ ಗಾನಕೆ ನಿಲುಕದ ಮಹಿಮ ಜ್ಞಾನ ಭಕ್ತಿ ಇತ್ತು ಬೇಗ 5
--------------
ಪ್ರದ್ಯುಮ್ನತೀರ್ಥರು
ದೊರೆಯೆಂದು ನಂಬಿದೆ ನಿನ್ನ ಪ ಇರುವೇ ಮೊದಲು ವಿಧಿ ಪರಿಯಂತವು ಪ್ರಾಣಿ ಹೊರಗೊಳಗೆ ವ್ಯಾಪಿಸಿರ್ಪ ಅ.ಪ ಯಾರು ಬಲ್ಲರೋ ನಿನ್ನಾ ಪಾರ ಮಹಿಮೆಯನ್ನ ಶ್ರೀನಾರಾಯಣ ಸುಪ್ರಸನ್ನಾ 1 ದಾಸರನೆಲ್ಲಾ ಪೋಷಿಸಬಲ್ಲಾ ಈಶನೀನಲ್ಲದಿನ್ನಿಲ್ಲಾ 2 ಕರಿವರದನೆಂದು ಮರೆ ಹೊಕ್ಕೆÀ್ಕನಿಂದು | ಶ್ರೀ ಗುರುರಾಮವಿಠಲ ಬಂದು 3
--------------
ಗುರುರಾಮವಿಠಲ
ಲಾಲಿ ಗೋವಿಂದ ಲಾಲಿ ಕೌಸಲ್ಯಬಾಲ ಶ್ರೀರಾಮ ಲಾಲಿ ಪ ಲಾಲಿ ಮುನಿವಂದ್ಯ ಲಾಲಿ ಜಾನಕಿ-ರಮಣ ಶ್ರೀರಾಮ ಲಾಲಿ ಅ.ಪ. ಕನಕರತ್ನಗÀಳಲ್ಲಿ ಕಾಲ್ಗಳನೆ ಹೂಡಿನಾಲ್ಕು ವೇದಗಳನ್ನು ಸರಪಣಿಯ ಮಾಡಿಅನೇಕ ಭೂಮಂಡಲವ ಹಗೆಯನು ಮಾಡಿಶ್ರೀಕಾಂತನುಯ್ಯಾಲೆಯನು ವಿರಚಿಸಿದರು1 ಆಶ್ಚರ್ಯಜನಕವಾಗಿ ನಿರ್ಮಿಸಿದಪಚ್ಚೆಯ ತೊಟ್ಟಿಲಲ್ಲಿಅಚ್ಚುತಾನಂತನಿರಲು ತೂಗಿದರುಮತ್ಸ್ಯಾವತಾರ ಹರಿಯ 2 ಧರ್ಮಸ್ಥಾಪಕನು ಎಂದು ನಿರವಧಿಕನಿರ್ಮಲ ಚರಿತ್ರನೆಂದುಮರ್ಮ ಕರ್ಮಗಳ ಪಾಡಿ ತೂಗಿದರುಕೂರ್ಮಾವತಾರ ಹರಿಯ 3 ಸರಸಿಜಾಕ್ಷಿಯರೆಲ್ಲರು ಜನವಶೀಕರ ದಿವ್ಯರೂಪನೆಂದುಪರಮ ಹರುಷದಲಿ ಪಾಡಿ ತೂಗಿದರುವರಹಾವತಾರ ಹರಿಯ4 ಕರಿಕುಂಭಗಳ ಪೋಲುವ ಕುಚದಲ್ಲಿಹಾರ ಪದಕವು ಹೊಳೆಯಲುವರ ವರ್ಣಿನಿಯರು ಪಾಡಿ ತೂಗಿದರುನರಸಿಂಹಾವತಾರ ಹರಿಯ 5 ಭಾನುಮಣಿಯರೆಲ್ಲರು ಯದುವಂಶಸೋಮನಿವನೆಂದು ಪೊಗಳಿನೇಮದಿಂದಲಿ ಪಾಡಿ ತೂಗಿದರುವಾಮನಾವತಾರ ಹರಿಯ6 ಸಾಮಜವರದನೆಂದು ಅತುಳ ಭೃಗು ರಾಮಾವತಾರವೆಂದುಶ್ರೀಮದಾನಂದ ಹರಿಯ ತೂಗಿದರುಪ್ರೇಮಾತಿರೇಕದಿಂದ7 ಕಾಮನಿಗೆ ಕಾಮನೆಂದು ಸುರಸಾರ್ವಭೌಮ ಗುಣಧಾಮನೆಂದುವಾಮನೇತ್ರೆಯರು ಪಾಡಿ ತೂಗಿದರುರಾಮಾವತಾರ ಹರಿಯ8 ಸೃಷ್ಟಿಯ ಕರ್ತ ನೆಂದು ಜಗದೊಳಗೆಶಿಷ್ಟ ಸಂತುಷ್ಟನೆಂದುದೃಷ್ಟಾಂತರಹಿತನೆಂದು ತೂಗಿದರುಕೃಷ್ಣಾವತಾರ ಹರಿಯ 9 ವೃದ್ಧನಾರಿಯರೆಲ್ಲರು ಜಗದೊಳಗೆ ಪ್ರಸಿದ್ಧನಿವನೆಂದು ಪೊಗಳಿಬದ್ಧಾನುರಾಗದಿಂದ ತೂಗಿದರು ಬೌದ್ಧಾವತಾರ ಹರಿಯ 10 ಥಳಥಳಾತ್ಕಾರದಿಂದ ರಂಜಿಸುವಮಲಯಜಲೇಪದಿಂದಜಲಗಂಧಿಯರು ಪಾಡಿ ತೂಗಿದರುಕಲ್ಕ್ಯಾವತಾರ ಹರಿಯ 11 ಕನಕಮಯ ಖಚಿತವಾದ ತಲ್ಪದಲಿವನಜಭವ ಜನಕನಿರಲುವನಜನಾಭನ್ನ ಪಾಡಿ ತೂಗಿದರುವನಿತಾಮಣಿಯರೆಲ್ಲರು 12 ಪದ್ಮರಾಗವ ಪೋಲುವ ಹರಿಪಾದಪದ್ಮವನು ತಮ್ಮ ಹೃದಯಪದ್ಮದಲಿ ನಿಲಿಸಿ ಪಾಡಿ ತೂಗಿದರುಪದ್ಮಿನೀ ಭಾಮಿನಿಯರು 13 ಹಸ್ತಭೂಷಣ ಮೆರೆಯಲು ದಿವ್ಯತರಹಸ್ತಲಾಘವಗಳಿಂದಹಸ್ತಗಳ ಪಿಡಿದುಕೊಂಡು ತೂಗಿದರುಹಸ್ತಿನೀ ಭಾಮಿನಿಯರು14 ಮತ್ತಗಜಗಾಮಿನಿಯರು ದಿವ್ಯತರಚಿತ್ರವಸ್ತ್ರಗಳನುಟ್ಟುಚಿತ್ತಸಂತೋಷದಿಂದ ತೂಗಿದರುಚಿತ್ತಿನೀ ಭಾಮಿನಿಯರು 15 ಕಂಕಣಧ್ವನಿಗಳಿಂದ ರಂಜಿಸುವಕಿಂಕಿಣೀಸ್ವರಗಳಿಂದಪಂಕಜಾಕ್ಷಿಯರು ಪಾಡಿ ತೂಗಿದರುಶಂಕಿನೀ ಭಾಮಿನಿಯರು 16 ಚೊಕ್ಕ ಕಸ್ತೂರಿ ಪಂಕದಿಂ ರಂಜಿಸುವಮಕರಿಕಾಪತ್ರ ಬರೆದುಲಿಕುಚಸ್ತನಿಯರು ಪಾಡಿ ತೂಗಿದರುಅಕಳಂಕಚರಿತ ಹರಿಯ17 ಆನಂದಸÀದನದೊಳಗೆ ಗೋಪಿಯರುಆ ನಂದಸುತನ ಕಂಡುಆನಂದ ಭರಿತರಾಗಿ ತೂಗಿದರುಆನಂದ ಭೈರವಿಯಿಂದ 19 ದೇವಾಧಿದೇವನೆಂದು ಈ ಶಿಶುವುಭಾವನಾತೀತನೆಂದುದೇವಗಂಧರ್ವರ್ಪಾಡಿ ತೂಗಿದರುದೇವ ಗಾಂಧಾರದಿಂದ 20 ನೀಲ ಕರುಣಾಲವಾಲ ಶ್ರೀಕೃಷ್ಣ ಜೋ ಜೋಲೀಲಾವತಾರ ಜೋ ಜೋ ಪರಮಾತ್ಮಬಾಲಗೋಪಾಲ ಜೋ ಜೋ 21 ಇಂದುಧರಮಿತ್ರ ಜೋ ಜೋ ಶ್ರೀಕೃಷ್ಣಇಂದು ರವಿ ನೇತ್ರ ಜೋ ಜೋಇಂದುಕುಲ ಪುತ್ರ ಜೋ ಜೋ ಪರಮಾತ್ಮಇಂದಿರಾರಮಣ ಜೋ ಜೋ 22 ತುಂಗ ಭವಭಂಗ ಜೋ ಜೋ ಪರಮಾತ್ಮರಂಗ ಕೃಪಾಂಗ ಜೋ ಜೋಮಂಗಳಾಪಾಂಗ ಜೋ ಜೋ ಮೋಹನಾಂಗರಂಗವಿಠಲನೆ ಜೋ ಜೋ 23
--------------
ಶ್ರೀಪಾದರಾಜರು