ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಾಮಾ ರಕ್ಷಿಸೋ ಎನ್ನ ಪ್ರೇಮಾ ಸಂಪೂರ್ಣಕಾಮಾ ಪ ಸ್ವಾಮಿ ಜಗನ್ನಾಥ ಸರ್ವಾಂತರ್ಯಾಮಿ ರಾಮಿಯ ರಮಣ ಶ್ರೀ ರಘುಕುಲಭೂಷಣ ಅ.ಪ ಅಂಗಜ ಜನಕಯ್ಯ ಮೋಹನಾಂಗ ಜಗದಂತರಂಗ ಶೃಂಗಾರ ಪರಿಮಳ ಭೂಷಿತಾಂಗಾ ಒಪ್ಪಿರುವೊ ರಂಗಾ ಗಂಗೆಯ ಜನಕ ತುರಂಗನೇರಿದಾ ಮಂಗಳ ಮಹಿಮ ಕುರಂಗಲೋಚನಾ ಅಂಗನೆಯರೆಡಬಲ ಸಂಗಡದಲಿ ಮೋಹಂಗಳ ಮಾಡುತ ಶೃಂಗಾರದಲಿ ರಂಗ ಮಂಟಪ ಮಧ್ಯರಂಗಲಿರುವ ರಾಮಂಗಾರ --- ಹೆನ್ನರಂಗನಾಯಕ 1 ಚಂದದಿಂದಾದಿ ವೇಣು -----ನಂದದಿ ಮೋದ ಮಂದಾರಧರ ಮಾಧವನಾದ ಗೋವಿಂದ ನಿ ನೋಡಾ ಸಿಂಧು ಶಯನ ಮುನಿ ವಂದಿತ ಚರಣಾರವಿಂದ ಭಜಿಸುವ ಕಂದನ ತೋರದಯ ದಿಂದ ಪಾಲಿಸುವ ತಂದೆಯು ನೀನೆ ಎಂದು ತಿಳಿದು ಈ ಪಾದ ಹೊಂದಿ ಭಜಿಸುವೆನು 2 ಚಂಡಶಾಸನ ಬಿರುದಿನಾ ದೇವಾದಿದೇವ ಮಂಡಲಾಧಿಪ ಮಹಾನುಭಾವ ಭಕ್ತರ ಕಾಯುವ ಪುಂಡರೀಕ ವರದಂಡ-----ಕುಂಡಲಿಶಯನ ಕೋ ದಂಡಧರ ಬಲೋದ್ದಂಡ ವಾನರದಂಡನೆ ಕೂಡಿಸಿ ಪುಂಡ ರಕ್ಕಸರ ಹಿಂಡನೆ ಹಿಡಿದು ಮಂಡಿಗಳನು ಬಿಡದೆ ಚಂಡಿಸಿದಂಥಾ ಗಂಡರಗಂಡ `ಶ್ರೀ ಹೆನ್ನೆವಿಠ್ಠಲಾ ' 3
--------------
ಹೆನ್ನೆರಂಗದಾಸರು
ವರದೇಂದ್ರ ಮುನಿಪ ದಿಕ್ಷತಿಗಳಂತೆ ಪರಮ ಸಂಭ್ರಮದಿ ರಾಜಿಸುವ ನೋಳ್ಪರಿಗೆ ಪ ಸುರರಾಜನಂತೆ ಭೂಸುರಗಡಣ ಮಧ್ಯದಲಿ ಮೆರೆವ ದುರ್ವಿಷಯಕೆ ಪಾವಕಾ ನಿರುತ ಸದ್ಧರ್ಮ ಶಿಕ್ಷಿಸುವಲ್ಲಿ ವರದಂಡ ಧರನಂತೆ ಇರುವ ದಿಗ್ವಜಿಯಿಸುವ 1 ಜ್ಞಾನಾದಿ ಗುಣದಿ ರತ್ನಾಕರನೆನಿಸಿ ಕುಮತ ಪಾನೀಯಧರಗಳಿಗೆ ಪವಮಾನನೆನಿಪ ದೀನಜನರಿಗೆ ಧನದ ವೈರಾಗ್ಯ ತಪದಲಿ ಕೃಶಾನು ಕೇತನ ತೆರದಲೊಪ್ಪುವನಜಸ್ರ 2 ಸೂರಿಕುಲವರಿಯ ವಸುಧೀಂದ್ರರಾಯ ಕರಸ ರೋರುಹದಿ ಜನಿಸಿ ಪರಮೋತ್ಸಹದಲಿ ಶ್ರೀರಾಮ ವ್ಯಾಸ ಜಗನ್ನಾಥ ವಿಠಲನ ಚರ ಣಾರವಿಂದರ್ಚನೆಯ ಪಡೆದು ಸಂತೋಷಿಸುವ3
--------------
ಜಗನ್ನಾಥದಾಸರು