ಒಟ್ಟು 4 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುರಾಜ | ನಮಿಪರ ಸುರಭೋಜ ಗುರುರಾಜ ಪ. ವರತಂದೆ ಮುದ್ದುಮೋಹನರೆಂದೆನಿಸುತ ಮೆರೆಯುತ ಜಗದೊಳು ಪೊರೆಯುವ ಕರುಣಿ 1 ಅಜ್ಞತೆ ತೊಲಗಿಸಿ ಸುಜ್ಞತೆ ಕೊಡುತಲಿ ವಿಘ್ನವ ತರಿಯುವ ಪ್ರಾಜ್ಞ ಮೂರುತಿಯೆ 2 ಸರಸಿಜಾಕ್ಷನ ಪದ ಹರುಷದಿ ಭಜಿಸುವ ಪರಮಪ್ರಿಯರು ಎಂದು ಬಿರುದು ಪೊತ್ತಿಹರೆ 3 ನಾಗಶಯನನಿಗೆ ಭೋಗವಪಡಿಸುವ ಆಗಮಜ್ಞರೆ ನಿಮಗೆ ಬಾಗುವೆ ಸತತ 4 ಸಾಸಿರ ಫಣೆಯಿಂದ ಸೂಸುವ ಕಾಂತಿಯೊಳ್ ವಾಸವ ವಿನುತ 5 ದೇವತಾಂಶದ ಗುರು ಪವಮಾನಿಗೆ ಪ್ರಿಯ ಭಾವಿಸಿ ಭಜಿಪರ ಕಾವ ಕರುಣಾಳು 6 ಶಾಂತಚಿತ್ತದಿ ಬಹು ಸಂತೋಷಪಡುತಲಿ ಅಂತರಂಗದಿ ಹರಿಯ ಚಿಂತಿಸುತಿರುವ 7 ಉದ್ಭವಿಸಿ ಜಗದಿ ಅಧ್ಭುತ ಮಹಿಮೆಯ ಒಬ್ಬೊಬ್ಬರಿಗೆ ತೋರಿ ಹಬ್ಬಿಪೆ ಹರುಷ 8 ಸೃಷ್ಟೀಶ ಗೋಪಾಲಕೃಷ್ಣವಿಠ್ಠಲನನು ದೃಷ್ಟಿಗೆ ತೋರಿಸಿ ಕಷ್ಟ ಬಿಡಿಸಿರಿ 9
--------------
ಅಂಬಾಬಾಯಿ
ತೆರಳಿ ಪೋದರು ದಿವ್ಯ ನರಹರಿಯ ಪುರಕೆ ಶ್ರೀ ವರತಂದೆ ಮುದ್ದುಮೋಹನರೂ ಪ. ಕರಿಗಿರಿ ಕ್ಷೇತ್ರದಲಿ ತೊರದು ಭೌತಿಕ ದೇಹ ಪರಮ ಉಲ್ಲಾಸದಿಂದಾ ನಂದಾ ಅ. ಪರಿಪರೀ ಪೂಜಿಸಿದ ಪರಮ ಭಕ್ತರಿಗೆ ತಾವ್ ತೆರಳುವೋಪರಿ ತಿಳಿಸದೇ ಪರಮ ಕರುಣಾಳು ಹೆಂಗರುಳಿನಾ ಖಣಿ ಎಂಬ ತೆರವೆಲ್ಲರಿಗೆ ಮರೆಸದೇ ಪರಮಸುಜ್ಞಾನಿಯಾದಂಥ ಶಿಷ್ಯರಾ ಕರೆಸಿ ಅಗಲಿಸಿಕೊಳ್ಳದೇ ಪರಮ ಸಾಧ್ವೀಪತ್ನಿ ವರ ಪುತ್ರರಿರುತಿರಲು ಕಿರಿಶಿಷ್ಯನೊಬ್ಬನೆದುರೊಳ್ | ಜವದೊಳ್ 1 ಎಂಭತ್ತು ಮೇಲೆರಡು ವತ್ಸರವು ಧರಣಿಯೊಳು ಸಂಭ್ರಮದಿ ಧೃಡ ಕಾಯದೀ ತುಂಬಿ ತತ್ವಾಮೃತವು ಸುಜನರಾ ಹೃದಯದಲಿ ಕುಂಭಿಣಿಯೋಳ್ ದಾಸತ್ವದೀ ನಂಬಿಕೆಗಳಿತ್ತು ಸುಜ್ಞಾನಿಗಳಿಗಂಕಿತವು ಅಂಬುಜಾಕ್ಷನ ನಾಮದೀ ಒಂಭತ್ತು ವರ್ಷದಿಂ ಬೆಂಬಿಡದೆ ಕಾಯ್ದೆನ್ನ ಕುಂಭಿನಿಯ ತೊರೆದು ಈಗಾ | ಬೇಗಾ 2 ಶಾಲಿಶಕ ಸಾಹಸ್ರ ಅಷ್ಟ ಶತ ಅರವತ್ತು ಮೇಲೆರಡು ವಿಕ್ರಮದಲೀ ಕಾಲ ಮಧ್ಯಾಹ್ನ ಚೈತ್ರದ ಶುದ್ಧ ಶ್ರೀ ರಾಮ ನವಮಿ ಭೌಮವಾಸರದಲಿ ಆಲಿಸುತ ದಿವ್ಯ ಮಂತ್ರ ಶ್ರವಣ ಕೀರ್ತನವ ಶೀಲ ಶ್ರೀ ಗೋಪಾಲಕೃಷ್ಣವಿಠಲನ ಪುರಕೆ ಆಯಾಸಗೊಳದೆ ಮುದದೀ ತ್ವರದೀ 3
--------------
ಅಂಬಾಬಾಯಿ
ಪರಮ ಕರುಣಾಳುಗಳು ಈ ಗುರುಗಳು ಶ್ರೀ ವರತಂದೆ ಮುದ್ದುಮೋಹನವಿಠಲಾಖ್ಯರು ಪ. ಶಾಂತರು ದಾಂತರು ಸಂತೋಷ ಸುಖಿಗಳು ಅಂತರಂಗದಿ ಹರಿಯ ಧ್ಯಾನಿಸುವರು ಕಂತುಜನಕನ ಧ್ಯಾನ ಸತ್ಪಾಂಥರಿಗೆ ಬೀರುತಲಿ ಎಂತೆಂತೊ ಸುಜನರಿಂ ಸ್ತುತಿಸಿಕೊಳುತಿಹರು 1 ನಿರಪೇಕ್ಷೆಯಿಂದಲಿ ಪರರಿಗುಪಕಾರವನು ತೆರವಿಲ್ಲದೆಲೆ ಸತತ ಮಾಡುತಿಹರು ಅರಿಯೆನಿವರಾ ಮಹಿಮೆ ಪರದೇಶಿ ನಾನಿನ್ನು ಕರುಣೆಯಿಂದೆನಗೆ ಹರಿ ಅಂಕಿತವನಿತ್ತರು 2 ಸುಪ್ರೀತರಾಗಿನ್ನು ಈ ಶರೀರದ ಒಳಗೆ ಶ್ರೀಪತೀ ತೈಜಸನ ವ್ಯಾಪಾರದಿ ಶ್ರೀ ಪರಮ ಗುರುಗಳೆಂದ್ಹರಿಯ ನಿರ್ಮಾಲ್ಯವನು ಕೃಪಾತಿಶಯದಿ ಕೊಡಿಸಿ ಎನ್ನನುದ್ಧರಿಸಿದರು3 ಎಲ್ಲರೂ ದÉೀವಾಂಶರೆನ್ನುವುದು ಕೇಳುತಲಿ ನಿಲ್ಲದೇ ಮನಸು ಬಹು ತಲ್ಲಣಿಸುತಿರಲು ಪಲ್ಲವಿಸಿ ಎನ್ನ ಮನ ಮಂದಿರದಿ ಅನುಗಾಲ ಪುಲ್ಲಾಕ್ಷನನು ತೋರಿ ಉಲ್ಲಾಸಕೊಡುತಿಹರು 4 ಶ್ರೇಷ್ಠಗುರುಗಳು ಇವರು ಸೃಷ್ಟಿಯೊಳಗೆನಗಿನ್ನು ಎಷ್ಟು ಯೋಚಿಸೆ ಮನವು ಮಹಿಮೆಯರಿಯೆ ವೃಷ್ಟಿವಂಶಜ ರುಕ್ಮಿಣೀರಮಣ ಗೋಪಾಲ- ಕೃಷ್ಣವಿಠಲನ ಬಹು ದಿಟ್ಟಾಗಿ ತೋರುವರು 5
--------------
ಅಂಬಾಬಾಯಿ
ರಾಘವೇಂದ್ರಾ - ಸದ್ಗುಣಸಾಂದ್ರಾ ಪರಾಘವೇಂದ್ರಾ ಅನು - ರಾಗದಿ ಭಕ್ತರರೋಗವ ಕಳೆದು ಸು - ಭೋಗವ ಸಲಿಸೋ ಅ.ಪಧೀಮಂತರಿಗತಿ - ಕಾಮಿತವೀವೊಶ್ರೀಮಂತನೆ ಎನ - ಕಾಮಿತ ಸಲಿಸೋ 1ಆಪದ್ಬಾಂಧವ - ಕೋಪವ ಮಾಡದೆನೀ ಪಾಲಿಸೋ ಎನ್ನ - ಪಾಪವ ನೋಡದೆ 2ಅನ್ಯನಲ್ಲವೊ - ನಿನ್ನ ಸುಭಕ್ತನುಮನ್ನಿಸಿ ದಯದಿ ನೀ - ಎನ್ನನು ಕಾಯೋ 3ಜನ್ಯನ ಜನಕನು - ಮನ್ನಿಸದಿರಲುಅನ್ಯರು ಕಾಯ್ವರನನ್ಯಪಾಲಕನೇ 4ಈಶನು ನೀನೈ - ದಾಸನು ಎನ್ನನು -ದಾಶಿನ ಮಾಡದೆ - ಪೋಷಿಸಿ ಪೊರೆಯೈ 5ಎಂದಿಗೆ ನಿನ್ನನು - ಪೊಂದುವೆ ಗುರುವರತಂದೆಯೆ ತೋರಿಸೋ - ಮುಂದಿನ ಗತಿಯಾ 6ಪೋತನು ನಾನೈ - ಮಾತನು ಲಾಲಿಸೊನೀತ ಗುರುಜಗನ್ನಾಥ ವಿಠಲ ಪ್ರಿಯ 7
--------------
ಗುರುಜಗನ್ನಾಥದಾಸರು