ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಂಗ ನಿನ್ನಯ ಮುಖ ತೋರಯ್ಯ ಪ ಅರ್ಧರಾತ್ರಿಯಲ್ಲವತರಿಸಿದ್ಯೊ ಹೋಗಿ ಮುದ್ದು ಗೋಪಿಯ ಸುತನೆನಿಸಿದ್ಯೊ ಭದ್ರದೇವಿಯರ ನೀ ಕಳಿಸಿದ್ಯೊ ಬಂ ದಿದ್ದ ಪೂತಣಿಯ ಸಂಹರಿಸಿದ್ಯೊ 1 ವತ್ಸಕಾಯುತಲ್ಹೋಗಿ ವನದೊಳು ಬಂದ ಕಿಚ್ಚು ನುಂಗಿದೆ ನಿನ್ವದನದೊಳು ಸ್ವಚ್ಛಮಾಡಿದಿ ಕಾಳಿಜಲಗಳು ತೋರೆ ಕುಕ್ಷಿಯೊಳಗೆ ತ್ರಿಜಗಂಗಳು 2 ದೇವಕ್ಕಿದೇವಿ ಯಶೋದಾನೆ ವಸು ದೇವ ನಂದ ಬಲರಾಮಗೆ ಎದುರು ಬಾರೋ ಭೂದೇವಿರಮಣನೆ ಭೀಮೇಶ ಕೃಷ್ಣನೆÀ ಶ್ಯಾಮವರಣನೆ3
--------------
ಹರಪನಹಳ್ಳಿಭೀಮವ್ವ
ಪಾರ್ಥಸಖನ ನೀ ಪ್ರಾರ್ಥನೆ ಮಾಡಿಕೃ - ತಾರ್ಥನಾಗೋ ಮನುಜಾ ಪ ಸಾರ್ಥಕವಾಗದ ವಾರ್ತೆಯ ಕೇಳಲು ಆರ್ತಿಯು ಒಪ್ಪುದೊ ನಿಜಾ ಅ.ಪ ಏಕಾಂತದಿ ಶ್ರೀಕಾಂತನ ಭಜಿಸಲು ಲೋಕಾಂತರ ಸುಖಪ್ರಾಪ್ತಿ ಭೂಕಾಂತನ ಭಜಿಸಲು ಮಾಕಾಂತನು ಒಲಿಯನು ಲೋಕಾಂತರ ನಿರಯಾಪ್ತಿ 1 ಶಿರಿರಮಣನ ಪದಯುಗಳವ ಭಜಿಸಲು ದೊರೆವೋದೀಗ ಮೋಕ್ಷ ನರಜನ ಗುಣಗಳ ವರಣನೆ ಮಾಡಲು ನಿರಯ ದುಃಖ ಪತ್ಯಕ್ಷ 2 ವೀತ ದೋಷ ನಿರ್ಭೀತ ಗುರುಜಗ ನ್ನಾಥ ವಿಠಲರೇಯ ಮಾತು ಕೇಳೆ ನಿಜ ಮಾತೆಯ ತೆರದಲಿ ದೂತನು ಪಿಡಿವನು ಕೈಯ್ಯಾ 3
--------------
ಗುರುಜಗನ್ನಾಥದಾಸರು