ಒಟ್ಟು 14 ಕಡೆಗಳಲ್ಲಿ , 12 ದಾಸರು , 14 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೇವಕೀಕುವರ ನವಘನಸುಂದರ ಭಾವಜ ಜನಕ ಮಾದೇವ ಕೃಪಾಕರ ಪಾವನ ಸುಕುಮಾರ ಹರೇ ಹರೇ ಪ ನಿರುಪಮ ಚರಿತ ವರಗುಣ ಭರಿತೇ ಮರಕತಮಣಿ ಮಾಲಾಹಾರ ಸಂಶೋಭಿತೇ ಸುರಗಂಗಾಸುತ ರಾಜಿತಮೌನಿಯುತೇ ವೈರಿಕುಲ ಭಂಜನ ಪಾಂಡವ ಮಿತ್ರೇ1 ಶ್ರೀವನಮಾಲಾಧರ ಮುರಳೀಕರ ದೇವಸುಧಾಕರ ಶ್ರೀ ಮಾಂಗಿರಿವರ ಭಾವಕಜನಪರಿವಾರ ಶುಭಂಕರೇ ರೇವತೀರಮಣಾ ನಂದಕರೇ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಕರುಣಿಸು ಕಾರುಣ್ಯನಿಧಿಯೇ ನಿನ್ನ ಚರಣವ ನಂಬಿದೆ ಶ್ರೀಪತಿಯೇ ಪ. ಕರುಣಿಸು ವರಗುಣಾಭರಣಸೇವಕ ಭಯ ಹರಣನೆ ಸುವಂದ್ಯಚರಣನೆ ರಘುವರ ಅ.ಪ. ಸುರರು ನಿನ್ನ ಚರಣವೇಗತಿಯೆಂದಿಹರು ಸರಸಿಜೊದ್ಬವೆ ನಿನ್ನ ಉರದಲ್ಲಿ ನೆಲೆಸಿರೆ ಪರಮಮಂಗಳಮೂರ್ತಿ ಪೊರೆಯೆನ್ನ ಕೈಪಿಡಿದೆತ್ತಿ 1 ಅಂಗಜಜನಕನೆ ನಿನ್ನ ಪಾದಂಗಳ ನಂಬಿರುವೆನ್ನಾ ಕಂಗಳಿಗಾನಂದ ಪೊಂಗುವಂದದಿ ಶ್ರೀ ರಂಗನೆ ದಯಾಪಾಂಗನೆ ಮೈದೋರು 2 ವರಶೇಷಗಿರಿವಾಸ ನಿನ್ನ ನಿಜ ಶರಣರ ದಾಸ್ಯದೊಳಿರಿಸೆನ್ನ ಕರವೆತ್ತಿ ಮುಗಿವೆನು ಭರಿಸೆನ್ನ ದೊರೆ ನೀನು ದುರಿತ ಕೋಟಿಗಳನ್ನು ಪರಿಹರಿಸೆಂಬೆನು 3
--------------
ನಂಜನಗೂಡು ತಿರುಮಲಾಂಬಾ
ನೀ ಸುಮಂಲಿ ವರಗುಣಶೀಲೆ ನೀ ಸುಮಂಗಲಿ ಪ ಸತತ ಮಾತಾ ಪಿತರ ವಚನ ಹಿತದಿ ನೀನು ಆಲಿಸುತ | ಪತಿಯು ಪರದೈವವೆಂದು ನೇಮದಿ ತಿಳಿದು ನೀ ಮಾಡುವುದು ವ್ರತ 1 ನಿರುತ ಗೋವು ಭೂಸುರರ ಸೇವಾ ಹರುಷದಲಿ ಶ್ರೀ ಗೌರಿ ಪೂಜಾ ತರುಣಿ ಗೈದು ಜಗದಿ ನೀನು ಪಾದ ಸುಕುಮಾರ ಪಿತನಪಾದ ಭಜಿಸೆ 2 ಕೋಮಲಾಂಗಿ ಸೋಮವದನೆ ಆ ಮಹಾತ್ಮ ಶೀಲೆ ರಾಧಾ ಭಾಮೆ ತಾರಾಸೀತೆಯಂತೆ ಶಿರಿಶಾಮಸುಂದರ ದಯ ಪಡೆಯೆ ನೀ 3
--------------
ಶಾಮಸುಂದರ ವಿಠಲ
ಪಾಹಿಮಾಂ ಪರಮೇಶ ಪಾಹಿಪನ್ನಗಭೂಷ ಪಾಹಿಕೈಲಾಸವಾಸ ಪ ಸ್ವಾಮಿ ಗಿರಿಜಾನಾಥ ಸಮರ ವಿಜಯ ತ್ರಿಣೇತ್ರ ಸುಜನ ವಿನುತ ಕಾಮಿತಾರ್ಥ ಪ್ರದಾತ ಕ್ಷೇಮತರ ಸುಚರಿತ್ರ ಸಾಮಗಜ ವದನ ತಾತರಾಮೇಶ ಕೇಶಪುನೀತ ಪ್ರಖ್ಯಾತ 1 ಕಾಲ ಭಾಳಾಕ್ಷಭಯ ಸಂಹಾರ ಜನಸಾರ ಶೂಲಧರ ಕರುಣಾಕರ ಶೀಲವರಗುಣ ಸುಂದರ ಹರಪಾಶ ಭಯವಶಂಕರ ಓಂಕಾರ 2 ಬಲಸಾಕಾರತ ವಿಶಾಲ ಏಕಮಯ ತ್ರಿಗುಣದಿಂದ ಖಿಲಲೋಕ ವಿಸೂತ್ರ ಜಾಲ ಸಾಕೆನ್ನ ಭವದಳಲ ಶೋಕವನು ನೀಕೇಳದೇಕೆ ಈ ಚೇಷ್ಟೆಬಹಳ ಕಾಲ ಮೂಕಾಂಬಿಕಾಂಬಲೋಲ3 ನಾಗವಾಹನ ನಮಿತನೆ ಯೋಗಮಾಯಾತೀತನೆ ಸಾಗರಾಂಬರದೊಡೆಯನೆ ಭಾಗವತ ಭಾಗಚಂದಿರಧರನೆ ಹರನೆ 4 ಧರಣಿಯೊಳಗೆ ವಿಶೇಷತರ ಗೌಜದೊಳುವಾಸ ವರಋಷಿ ಸ್ಥಾಪನೇಶ ಸರಸಕೀರ್ತಿ ವಿಲಾಸ ಸ್ಮರಹರ ಸುರಾಧ್ಯಕ್ಷ ದುರಳ ದಾನವ ವಿನಾಶ ದುರಿತಹರ ನಿರ್ದೋಶ ಧರಣಿ ಸುರಜನರಕ್ಷ ಕರಿಚರ್ಮಧರಮಹೇಶ ಉರಗರಾಜ ವಿಭೂಷವರ ಗುರು ವಿರೂಪಾಕ್ಷ ಪುರಮಥನ ಗೌತಮೇಶ 5
--------------
ಕವಿ ಪರಮದೇವದಾಸರು
ಪೊರೆಯದಿರುವರೇ _ ಶ್ರೀ ರಮಣಾ ಪ ದುರಿತಗಜಕೆ ನೀ ಪಂಚಾನನಾ ಅ.ಪ. ಸಿರಿಯ ಮದದಿ ನಾನರಿಯದೆ ಪೋದರೆ ಗರುಡಗಮನ ನೀ ಮರೆತುಬಿಡುವರೇ ಕರುಣಶರಧಿ ಸರಿ ಬಿರುದು ಪೊಳ್ಳಾಗದೇ ಚರಣಪಿಡಿವೆ ಪೊರೆ ಮರುತನೊಡೆಯ ಹರಿ1 ಪಾತಕಿ ಎಂಬುವ ನೀತಿಯನುಡಿದೊಡೆ ಪೂತರಮಾಡುವ ಖ್ಯಾತಿಯ ಬಿಡುವೆಯ ನಾಥನೆ ನಂಬಿದೆ ಕಾತರ ಪಡುತಿಹೆ ಪ್ರೀತಿಲಿ ಕಾಣಿಸು ಆರ್ತಿವಿದೂರ 2 ನಡಿಯುವ ಚರಣವು ಎಡುವುದು ಸಹಜವೆ ಮೃಡ ಭೃಗು ಭೀಷ್ಮರು ದುಡುಕಲಿಲ್ಲೆ ದೊರೆ ಮಿಡಕಿ ನಡುಗುತಿಹೆ ನಡೆವುದು ಜಗಬಿಡೆ ಕಡಲಶಯನ ಪಿಡಿ ಬಿಡದೆ ಕೊಡುತ ರತಿ 3 ಸಿರಿವಿಧಿ ಶಿವನುತ ಸ್ವರತ ಸ್ವತಂತ್ರನೆ ಶರಣರ ಪೊರೆಯುವ ವರಗುಣ ಭೂಷಣ ಅರಿಯೆನುಪಾಯವ ಶರಣುಶರಣೈಯ ಪರಮಪುರುಷ ಭಗಸರಸದಿ ನಲಿನಲಿ 4 ಸಾಕುವ ಬಿಂಬನೆ ನೂಕಿದೆ ಯಾತಕೆ ಹಾಕುತ ಮಂಕನು ಏಕಾಯತನ ನಾಕರೊಡೆಯ ಭವನೂಕುತ ಬೇಗನೆ ಸ್ವೀಕರಿಸೆನ್ನನು ಶ್ರೀ ಕೃಷ್ಣವಿಠಲಾ 5
--------------
ಕೃಷ್ಣವಿಠಲದಾಸರು
ಬಾಳೊ ಸುಖದಿ ಬಾಲನೆ ವರಗುಣ ಶೀಲನೆ ಪ ಬಾಳೊ ಸುಖದಿ ಬಹುಕಾಲಶ್ರೀವೇಣು ಗೋ- ಪಾಲನ ದಯದಿ ಸುಶೀಲ ಸತಿಯಳ ಕೂಡಿ 1 ಪಾದ ತೋಯಜ ಸ್ಮರಿಸುತ ಕಾಯದಾರೋಗ್ಯದೀರ್ಘಾಯುತ್ವವ ಪಡೆದು 2 ಕೃದ್ಧನಾಗದೆ ಜ್ಞಾನ ವೃದ್ಧರಸೇವಿಸಿ ಮಧ್ವಮತದ ತತ್ವ ಶ್ರದ್ಧದಿ ಕೇಳುತ 3 ತಂದೆ ತಾಯಿಗಳಲ್ಲಿ ಇಂದಿರೆರಮಣನೆ ನಿಂದು ಪಾಲಿಪನೆಂದು ವಂದನೆ ಪಾಡುತ 4 ಭಕ್ತಿಯಿಂದತಿಥಿಗಳ ನಿತ್ಯದಿ ಸೇವಿಸುತ ಪುತ್ರ ಪೌತ್ರಾದಿ ಸಂಪತ್ತಿಯ ಪಡೆದು 5 ಭೂಸುರರೊಡಗೂಡಿ ತೋಷದಿಕೃತ ಹರಿ ವಾಸರ ವೃತ ಫಲ ಶ್ರೀಶನಿಗರ್ಪಿಸುತ 6 ಧಾರುಣಿಯೊಳು ಕೃಷ್ಣಾತೀರ ಕಾರ್ಪರನಿಲಯ ನಾರಸಿಂಹನ ಪದ ವಾರಿಜ ಸೇವಿಸುತ 7
--------------
ಕಾರ್ಪರ ನರಹರಿದಾಸರು
ಭವತಿ ಭಿಕ್ಷಾಂ ದೇಹಿ ಪರಬ್ರಹ್ಮಭವದೂರ ಮಾಂಪಾಹಿಭುವನ ಪಾವನ ಪರಮಾನಂದ ವರಗುಣಾಸುವಿಮಲ ಶಾಂತಿ ಸದ್ಭಕ್ತಿ ಜೀವನ್ಮುಕ್ತಿ ಪ ನಿತ್ಯ ನಿರ್ಮಲ ಜ್ಞಾನ ವಿಚಾರ ಪ್ರ-ವೃತ್ತಿ ವಿವೇಕದಾನಸತ್ಯ ಸದ್ವಿನಿಯ ಸಶ್ರವಣ ಮಾನಸಯೋಗಚಿತ್ತ ನಿಧಿಧ್ಯಾಸ ಜಪತಪವ್ರತ ಪೂಜಾ 1 ದೋಷರಹಿತ ಭಾಷ ದುರಿತಗುಣನಾಶ ಪರಮ ಸಂತೋಷಕ್ಲೇಶ ವಿದೂರ ವಿಶೇಷ ವಿರಾಗವಿಶ್ವಾಸ ವಿಹಿತ ಸದ್ಧರ್ಮ ವಿಚಾರ 2 ಪಾವನ ಪರಿಪೂರ್ಣ ಹೃದಯ ಸದಾದೇವ ನಾಮಸ್ಮರಣಭಾವ ಭರಿತ ಧ್ಯಾನ ಧಾರಣಯೋಗ ಸ-ದ್ಭಾವ ಬ್ರಹ್ಮ ಆದಿಕೇಶವ ದಾಸತೆ 3
--------------
ಕನಕದಾಸ
ರಾಯ ಬಾರೋ ತಾಯಿ ಬಾ ಎನ್ನ ಕಾಯಲು ತ್ವರ ಬಾರೋ ನೀ ಗುರು ಪ ದಿನದಿನಕೆ ಮನಸಿನ ತಾಪವು ಘನವಾಗುವುದನ್ನು ಬಿಡಿಸಲು ಬಾರದು 1 ಅರಸನಾಗಿ ನೀ ಧರೆಯನಾಳಿದಿ ಭರತ ಭೂಮಿಯಲಿ ಅವತರಿಸಿದಿ ಮತಿ-2 ವರಗುಣಮಣಿಯೇ ಕರುಣದ ಖಣಿಯೇ ಶರನಾದವನನ್ನು ಬಿಡಿಸೋ ಬಾ ಗುರು 3 ಬಾಲ್ಹೀಕನೇ ಬಾ ಪ್ರಲ್ಹಾದನೇ ಬಾ ತಲ್ಲಣಿಸುವೆ ಯತಿ ಆಗಿ ಬಂದ ಗುರು 4 ಸುಮ್ಮನಿರುವೆ ಮತ್ತೊಮ್ಮೆ ಮರಗುವೆ ಒಮ್ಮನಸಿÀಲ್ಲವೋ ಸನ್ಮುಖನಾಗೈ 5
--------------
ಹನುಮೇಶವಿಠಲ
ವರದೇಂದ್ರ ವರದೇಂದ್ರ ವರದಾಯಕ ಗುರು | ವರಗುಣಸಾಂದ್ರ ಪ ಪಾವನ ಚರಿತ ವೃಂದಾವನ ಮಂದಿರ ಕೋವಿದ ಜನ ಸುಸೇವಿತ ಸದಯ1 ಕಾಲಾಷಾಯಾಂಬರ | ಭೂಷಿತ ಎನ್ನಯ ದೋಷಗಳೆಣಿಸದೆ ಪೋಷಿಸು ಸತತ 2 ಕಠಿಣ ಭವಾಂಬುಧಿ ಘಟಜ ಕುಟಿಲಮತ ವಿಟಿಪಿ ಕುಠಾರಿ ಉತ್ಕಟ ಸನ್ಮಹಿಮ 3 ನತ ಸುರಕ್ಷಿತಿರುಹ | ಜಿತ ರತಿಪತಿ ಶರ ಮತಿವರ ದಶಮತಿ ದುರಿತವಾರಿಧಿ ವಿಭು 4 ಹೇಮೋದರ ವಿತ ಶಾಮಸುಂದರನ ಪ್ರೇಮಪಾತ್ರ ಪುಣ್ಯಧಾಮ ಮಹಾತ್ಮ 5
--------------
ಶಾಮಸುಂದರ ವಿಠಲ
ವಾರಣವದನ ತ್ರೈಲೋಕ್ಯಸುಮೋಹನ ವಾರಣವದನ ಪ. ವಾರಿಜಾಕ್ಷ ವರಗುಣಾಕರ ವಾರಿಜಾಕ್ಷಿ ವರದಾಯಕ ಸನ್ನುತ ನಾರದಾದಿ ಮುನಿವಂದಿತ ಪದಯುಗ ಅ.ಪ. ಸುಂದರಾಂಗ ಸುಕಲಾನ್ವಿತ ನಿಭಚರಣ ಕಟಿಶೋಭಿತ ವ್ಯಾಳಸ- ಬಂಧನಾಬ್ಧಿ ಶತಕೋಟಿಸದೃಶ ಕಿರಣ ಚಂದನಾಂಗಾರ್ಚಿತ ಸುಮನೋಹರ ಮಂದಹಾಸ ಮಹಿಮಾಂಬುಧಿಚಂದಿರ 1 ಕಂಬುಗ್ರೀವ ಕಮನೀಯ ಕರಾಂಬುರುಹ ಪಾಶಾಂಕುಶಧರ ವರ ಶಂಬರಾರಿಜಿತುತನಯ ಮಧುರಗೇಹ ಜಂಭಭೇದಿವಂದಿತ ಅತ್ರಿವಂದಿತ ಲಂಬೋದರ ವಿಘ್ನಾಂಬುಧಿ ಕುಂಭಜ 2 ಚಾರುಭಾರ ಕನ್ಯಾಪುರವರ ನಿಲಯ ಮೃಕಂಡುಜದ ಮುನಿವರ ಸಾರಮಂತ್ರಸ್ಥಾಪಿತ ಮಂಗಲ ಕೆರೆಯ ವರಕಪಿತ್ಥಫಲೋರಸಭುಂಜಿತ ಧೀರ ಲಕ್ಷ್ಮೀ ನಾರಾಯಣಸಖಸುತ 3
--------------
ತುಪಾಕಿ ವೆಂಕಟರಮಣಾಚಾರ್ಯ
ಶ್ರೀ ತುಳಸಿ ದೇವಿ ತಾಯಿ ಶ್ರೀ ತುಳಸೀಯೆ | ಕಾಯೆ ಭಕ್ತರ ಪ್ರೀಯೆಕಾಯೆ ಶ್ರೀಹರಿ ಜಾಯೆ | ತಾಯೆ ವರವ ನೀಯೇ ಪ ಪಾದ | ತೋಯಜ ಕಾಂಬುವದಾಯವಿತ್ತೆನ್ನ ನೀ | ಪ್ರೀಯದಿಂದಲಿ ಕಾಯೇ ಅ.ಪ. ಅಮೃತ ಕಲಶಹರಿಯು ಉದುಭವಿಸಲು | ವರ ಧನ್ವಂತ್ರೀಯೂ ||ಹರುಷೋದ್ರೇಕದಿ ನಯನ | ವರಬಿಂದು ಉದುರಲುಶಿರಿ ತುಳಸಿ ಎನಿಸೀದೆ | ಶರಣರ್ಗೆ ಗತಿ ಕೊಡುವ 1 ಓಲಗ ಗೈವರು 2 ಕಲುಷ ಸುಜನ | ಮಲಗಳ ಕಳೆದೂ |ಆಲವ ಭೋದರೆ ಶಾಸ್ತ್ರ | ವಲಿಸಿ ಕೀರ್ತಿಪ ನರಗೆನೆಲೆಯ ಕಾಣಿಪ ತನ್ನ | ಚೆಲುವ ವೈಕುಂಠದಿ 3 ಕರುಣಿಸು ಹರಿಪಾದ | ವರ ಪದ್ಮ ದ್ವಯದಲ್ಲಿನಿರುತ ಭಕುತಿಯನ್ನೆ | ವರಗುಣ ಸಂಪನ್ನೆ |ಕರವೀರ ಪುರದರಿಸಿ | ವರ ಸನ್ನಿಧಾನಕ್ಕೆನಿರುತದಿ ಸತ್ಪಾತ್ರೆ | ಪರಮ ಪಾವನ ಗಾತ್ರೆ 4 ಹಂಬಲೊಂದೆನಗುಂಟು | ಜಾಂಬುವತಿಯೆ ತುಳಸಿಇಂಬಿಟ್ಟು ಸಲಹುವೆ | ನೆಂಬ ಮತಿಯು ಇರೇ |ಬಿಂಬನು ಗುರು ಗೋ | ವಿಂದ ವಿಠಲ ಪಾದಅಂಬುಜದ್ವಯ ತೋರಿ | ಸಂಭ್ರಮದಲ್ಲಿ ಇರಿಸೆ 5
--------------
ಗುರುಗೋವಿಂದವಿಠಲರು
ಸಂಪ್ರದಾಯದ ಹಾಡುಗಳು ಆರತಿಯೆತ್ತಿರೆ ನಾರಿಯರೆಲ್ಲರು ಶಾರದದೇವಿಗೆ ಭೂರಿಸಂಭ್ರಮದೆ ಪ. ಬೊಮ್ಮನ ರಾಣಿಯ ನೆಮ್ಮಿಭಜಿಸುವ ಸುಮ್ಮಾನದಿಂ ಪರಬೊಮ್ಮನ ಪಾಡುವ 1 ಕರಗಳ ಜೋಡಿಸಿ ಶಿರವನು ಬಾಗಿಸಿ ಸರಸತಿಗೊಂದಿಸಿ ಪರಮನ ಧ್ಯಾನಿಸಿ 2 ಪರಮೇಷ್ಟಿದಯಿತೆಗೆ ವರಗುಣಭರಿತೆಗೆ ಸುರಮುನಿ ಮಾತೆಗೆ ಶರಣಸಂಪ್ರೀತೆಗೆ 3 ಪಾಡಿರಿ ಗುಣಗಳ ಮೂಡಿದ ಭಕ್ತಿಯಿಂ ನೋಡಿರಿ ದೇವಿಯ ಬೇಡಿರಿ ವರಮಂ 4 ವರಶೇಷಗಿರೀಶನ ಹಿರಿಯಸೊಸೆಗಿಂದು ಮರಕತದಾರತಿ ಹರುಷದಿಂದೆತ್ತಿ 5
--------------
ನಂಜನಗೂಡು ತಿರುಮಲಾಂಬಾ
ಹರಿಯೆ ಎನ್ನ ದೊರೆಯೆ ನಿನ್ನಯ ಮರೆಯಹೊಕ್ಕೆನೊ ಪ ವ್ಯಾಘ್ರಗಿರಿಯೊಳಿರುವ ಸಿರಿನಾರಾಯಣ ಅ.ಪ ಸಕಲ ಲೋಕಗಳನು ನೀನೇ ಸೃಜಿಸುವಾತನು ಸುಖದಿ ಪ್ರಾಣಿಗಳನು ನೀನೇ ಸಲಹುವಾತನು ಪ್ರಕಟವಾದ ಜಗವ ನೀನೆ ಪ್ರಳಯಗೈವನು ನಿತ್ಯ ನೀನೆ ನಿಯಮಿಸುವನು 1 ಸ್ಥೂಲ ಸೂಕ್ಷ್ಮರೂಪ ನೀನೆ ಮೂಲ ಪುರುಷನು ಲೀಲೆಯನ್ನು ಪ್ರಕಟಗೈವ ಕಾಲರೂಪನು ನೀಲಲೋಹಿತಾದಿ ವಿಬುಧಜಾಲವಂದ್ಯನು ಪಾಲಿತಾಖಿಲಾಂಡ ರಮಾಲೋಲ ಸುಗುಣಜಾಲ ಶ್ರೀ 2 ಪರಮಪುರುಷ ಪಂಕಜಾಕ್ಷ ಪತಿತಪಾವನ ಶರಧಿ ಶಯನ ಸಕಲಲೋಕ ಸಂವಿಭಾವನ ವರಗುಣಾಢ್ಯ ವಿಗತಮಾಯ ವಿಶ್ವಮೋಹನ ದುರಿತಗಜ ಮೃಗಾಧಿರಾಜ ವರದವಿಠಲ ವಿಹಗಯಾನ3
--------------
ವೆಂಕಟವರದಾರ್ಯರು
ವಾರಣವದನ ತ್ರೈಲೋಕ್ಯಸುಮೋಹನ ವಾರಣವದನ ಪ.ವಾರಿಜಾಕ್ಷ ವರಗುಣಾಕರವಾರಿಜಾಕ್ಷಿ ವರದಾಯಕಸನ್ನುತನಾರದಾದಿ ಮುನಿವಂದಿತ ಪದಯುಗ ಅ.ಪ.ಸುಂದರಾಂಗ ಸುಕಲಾನ್ವಿತ ನಿಭಚರಣಕಟಿಶೋಭಿತ ವ್ಯಾಳಸ-ಬಂಧನಾಬ್ಧಿ ಶತಕೋಟಿಸದೃಶ ಕಿರಣಚಂದನಾಂಗಾರ್ಚಿತ ಸುಮನೋಹರಮಂದಹಾಸ ಮಹಿಮಾಂಬುಧಿಚಂದಿರ 1ಕಂಬುಗ್ರೀವಕಮನೀಯಕರಾಂಬುರುಹಪಾಶಾಂಕುಶಧರವರಶಂಬರಾರಿಜಿತುತನಯ ಮಧುರಗೇಹಜಂಭಭೇದಿವಂದಿತ ಅತ್ರಿವಂದಿತಲಂಬೋದರ ವಿಘ್ನಾಂಬುಧಿಕುಂಭಜ2ಚಾರುಭಾರ ಕನ್ಯಾಪುರವರನಿಲಯಮೃಕಂಡುಜದ ಮುನಿವರಸಾರಮಂತ್ರಸ್ಥಾಪಿತ ಮಂಗಲ ಕೆರೆಯವರಕಪಿತ್ಥಫಲೋರಸಭುಂಜಿತಧೀರ ಲಕ್ಷ್ಮೀ ನಾರಾಯಣಸಖಸುತ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ