ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕ್ಷಮಾ ಪ್ರಾರ್ಥನೆ ಗುರುಹಿರಿಯರೆಡೆಯಲ್ಲಿ ಶಿರಬಾಗಿಸಿನಯದಲಿ ಎರೆವೆನೀಪರಿಯಲ್ಲಿ ಕರವಮುಗಿದು ಯತಿನಿಯಮ ಛಂದಸ್ಸು ಗತಿತಾಳಲಯಬಂಧ ನುತಶಬ್ದ ತತ್ವಾರ್ಥ ಸಂಗತಿಯನು ವರಕವಿಗಳೊರೆದಿರ್ಪ ತರತರದ ಪ್ರಾಸಗಳ ವರಲಕ್ಯಣಲಂಕಾರ ಮೆಂಬ ಪರಿಕರಂಗಳನರಿದು ಪರಿಪರೀಸಿಂಗರಿಸ ಲರಿಯೆ ಕವಿತಾಮಣಿಯ ಪರಿಯನರಿಯೆ ಸರಿಸದೋಳ್‍ನಿಂದೆ ನೆಂದರಿಯ ಬೇಡಿ ಅರಿಯದಾತರಳೆ ರಚಿಸಿದುದನುನೋಡಿ ಹಿರಿಯರೊಳುಗರುವತೋರಿದೆನೆನ್ನ ಬೇಡಿ ಸರಿದೋರಿದಂತೆಸಿಗೆ ಕೃಪೆಮಾಡಿ ಸಮರ್ಪಣೆ ತ್ವದ್ದತ್ತವಾಚಾ ತವಕಿಂಕರೇಣ ತ್ಪತ್ಪ್ರೀತಿ ಕಾಮೇನ ಮಯಾಕೃತೇನ | ಸ್ತೋತ್ರೇಣ ಲಕ್ಷ್ಮೀನೃಹರೇ ಸವಿಷ್ಣುಃ ಪ್ರೀತೋಭವತ್ಪಂ ಕರುಣಾದ್ರ್ರದೃಷ್ಟಿಃ ||
--------------
ನಂಜನಗೂಡು ತಿರುಮಲಾಂಬಾ
ವರಕವಿಗಳ ಮುಂದೆ ನರಕವಿಗಳ ವಿದ್ಯೆ ತೋರಬಾರದು - ಈಧರಣಿಯ ಕಲ್ಲಿಗೆ ಶರಣೆಂದು ಪೂಜೆಯ ಮಾಡಬಾರದು ಪ ಪಾಪಿಗಳಿದ್ದಲ್ಲಿ ರೂಪುಳ್ಳ ವಸ್ತುವ ತೋರಬಾರದು - ಬಹುಕೋಪಿಗಳಿದ್ದಲ್ಲಿ ಅನುಭವಗೋಷ್ಠಿಯ ಮಾಡಬಾರದು1 ಅಡಿ ಸತ್ತ ಮಡಕೆಗೆ ಜೋಡಿಸಿ ಒಲೆಗುಂಡು ಹೂಡಬಾರದು - ಬಹುಬಡತನ ಬಂದಾಗ ನೆಂಟರ ಬಾಗಿಲ ಸೇರಬಾರದು2 ಹರಿಯ ನಿಂದಿಸಿ ಹರ ಘನನೆಂದು ನರಕಕ್ಕೆ ಬೀಳಬಾರದು - ತಾಪರರನು ಬೈದು ಪಾತಕಕೆ ಮುನ್ನೊಳಗಾಗಬಾರದು 3 ಮಡದಿ ನುಡಿಯ ಕೇಳಿ ಜಗಳಕೊಬ್ಬರ ಕೂಡೆ ಹೋಗಬಾರದು - ಬಾ-ಯ್ಬಡಿಕರು ಇದ್ದಲ್ಲಿ ವಸ್ತಿ ಬಿಡಾರವ ಮಾಡಬಾರದು 4 ಮುಂದೆ ಭಲಾ ಎಂದು ಹಿಂದೆ ನಿಂದಿಪರನ್ನು ಕೂಡಬಾರದು - ನಮ್ಮತಂದೆ ಬಾಡದಾದಿಕೇಶವನ ಸ್ಮರಣೆಯ ಬಿಡಬಾರದು5
--------------
ಕನಕದಾಸ
ವರಕವಿಗಳಿದ್ದಲ್ಲಿ ನರಕವಿಗಳ ಕೊಂಡಾಡಬಾರದು - ಇಂಥಾಧರಣಿಯ ಕಲ್ಲಿಗೆ ಸ್ಥೀರವೆಂದು ಪೂಜೆಯಮಾಡಬಾರದು ಪ.ಆಡಿಗೋದ ಮಡಕಿಗೆ ಜೋಡಿಸಿ ಒಲೆಗುಂಡ ಹೂಡಬಾರದುಬಡತನ ಬಂದರೆ ನಂಟರ ಬಾಗಿಲ ಸೇರಬಾರದು 1ಮಡದಿಯ ನುಡಿಕೇಳಿ ಬಡವರ ಜಗಳಕೆಹೋಗಬಾರದು - ಬಹಳಬಡತನ ಬಂದವಳ ಕೈಯಿಂದ ಅಡಿಗೆಯ ಉಣ್ಣಬಾರದು 2ಪಾಪಿಗಳಿದ್ದಲ್ಲಿ ರೂಪದ ಒಡವೆಯ ತೋರಬಾರದು - ಕಡುಕೋಪಿಗಳಿದ್ದಲ್ಲಿ ಅನುಕೂಲಗೋಷ್ಠಿಮಾಡಬಾರದು3ಪರರ ನಿಂದಿಸಿ ಪರಬ್ರಹ್ಮ ರೂಪೇಂದ್ರನ ಜರೆಯಬಾರದುವರದ ಶ್ರೀ ಪುರಂದರವಿಠಲನ ಸ್ಮರಣೆಯ ಮರೆಯಬಾರದು 4
--------------
ಪುರಂದರದಾಸರು