ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರಿರಾಜ ವರದ ಕಾಯೊ ಪ ವರ ಕರಿರಾಜ ವರದ ಕಾಯೊ ಕರವ ಪಿಡಿದು 1 ವರಕರಿರಾಜವರದ ಕಾಯೊ ಶರಣರ ಚರಣ ಸ್ಮರಣೆಯ ಕರುಣಿಸಿ 2 ಸಿರಿ ಪ್ರಾಣನಾಥ ವಿಠ್ಠಲ ನಿನ್ನಧ್ಯಾನ ಕೊಟ್ಟೆನ್ನ ಕಾಯೊ 3
--------------
ಬಾಗೇಪಲ್ಲಿ ಶೇಷದಾಸರು
ವಂದಿಪೆ ಮುದದಿಂದಲಿ ನಾನು ವಂದಿಪೆ ಮುದ್ದು ಗಣಪಗೆ ವಂದಿಪೆ ಪ ನಂನಂದನನಾಮ ಮನದೊಳು ಆ- ನಂದದಿ ಭಜಿಸುವ ಚಂದ್ರಶೇಖರಸುತಗೆ ಅ.ಪ. ಆಕಾಶಕಭಿಮಾನಿ ಶ್ರೀಕಂಠವರಪುತ್ರ ರಾಕೇಂದುವದನ ಶ್ರೀಕಾಂತ ನಿಜಭಕ್ತ ಏಕಾಂತದಲಿ ಹರಿ ಆಕಾರತೋರಿಸಿ ನೂಕುತಭವಪಾಶ ಸಾಕು ಸಾಕು ಎಂದು 1 ವರವರದಾಯಕ ಸುರಗಣಪೂಜಿತ ವರಕರಿಮುಖವೇಷ ವರಸರ್ಪಕಟಿಸೂತ್ರ ಸಿರಿಕಾಂತಸೇವೆಗೆ ಬರುವ ವಿಘ್ನಂಗಳೆಲ್ಲ ಭರದಿಂದ ತರಿಯುತ ಕರುಣದಿ ಸಲಹೆಂದು 2 ವೇದವ್ಯಾಸರಶಿಷ್ಯ ಮೋದಕಗಳ ಪ್ರಿಯ ಮದನನಸೋದರ ಮುದವಿದ್ಯೆದಾಯಕ ಮಧ್ವಾಗಮದಲಿ ಅದ್ದುತ ಎಮ್ಮನು ಶುದ್ಧರನು ಮಾಡೋ ಸಿದ್ಧಿ ವಿನಾಯಕನೆಂದು 3 ಏಕದಂತನೆ ವರ ಆಖುವಾಹನ ಭಕ್ತರ ಶೋಕ ಹರಿಸೊ ಬೇಗ ಲೋಕ ವಂದಿತನೆ ರಕ್ತಾಂಬರ ತನು ರಕ್ತಗಂಧಪ್ರಿಯ ವಿ - ರಕ್ತಿನೀಡುತ ಹರಿಭಕ್ತನೆಂದೆನಿಸು ಎಂದು 4 ಪಾಶಾಂಕುಶ ಶಶಿದರ್ಪಭಂಜನ ಶ್ರೀಶನಾಭಿವಾಸ ವಿಶಾಲಕರ್ಣಯುತ ನಾಶಗೈಸುತವಿಷಯ ವಾಸನೆಗಳೆಲ್ಲ ವಿಶ್ವೋಪಾಸಕ ಪ್ರಭು ಶ್ವಾಸಾವೇಶಯುತನೆಂದು 5 ಚಾರುದೇಷ್ಣನೆ ನಿನ್ನ ಚರಣಕ್ಕೆ ಶರಣೆಂಬೆ ಸರಿನೀನು ಧನಪಗೆ ಗುರುಶೇಷಶತರಿಗೆ ತರಿದು ತಾಪತ್ರಯ ವರಜ್ಞಾನ ವೈರಾಗ್ಯ ಹರಿಭಕ್ತಿ ಹರಿ ಧ್ಯಾನ ನಿರುತ ಕೊಡು ಎಂದು 6 ಜಯತೀರ್ಥ ಹೃದಯದಿ ವಾಯುವಿನೊಳಿಪ್ಪ ಸಿರಿ ತಾಂಡವ ಕೃಷ್ಣವಿಠಲ ರಾಯನ ಧ್ಯಾನ ಕಾಯಾ ವಾಚಾ ಮನಸಾ ದಯಮಾಡಿ ಸಲಹೈಯ್ಯ ಜೀಯಾ ಗಣಪನೆಂದು7
--------------
ಕೃಷ್ಣವಿಠಲದಾಸರು
ಸರಸೀರುಹಾಂಬಕಿ ನಿನ್ನ ಪಾದ- ಸರಸಿಜಗಳ ಸ್ಮರಿಸುವೆ ಪೊರೆಯೆನ್ನಪ. ಕಾಳಾಹಿವೇಣಿ ಕಲಕೀರವಾಣಿ ಫಾಲಾಕ್ಷನ ರಾಣಿ ಪರಮಕಲ್ಯಾಣಿ1 ಕಣ್ಮಯಜಾತೆ ಹಿರಣ್ಮಯ ಖ್ಯಾತೆ ಕಣ್ಮುಖ ವರಕರಿ ಷಣ್ಮುಖಮಾತೆ2 ಕಣ್ಮನದಣಿಯೆ ಕೊಂಡಾಡುವೆ ಪಾಡುವೆ ಮನ್ಮನೋರಥದಾಯೆ ಚಿನ್ಮಯೆ ಚೆಲುವೆ3 ಕಂಬುಕಂಧರಿ ನಿನ್ನ ನಂಬಿದೆ ಶಂಕರಿ ಕುಂಭಪಯೋಧರಿ ಶಂಭುಮನೋಹರಿ4 ಸಿರಿ ಕಾತ್ಯಾಯಿನಿ ಗೌರಿ ಭವಾನಿ ಹರಿಸರ್ವೋತ್ತಮ ಲಕ್ಷ್ಮೀನಾರಾಯಣ ಭಗಿನಿ5
--------------
ತುಪಾಕಿ ವೆಂಕಟರಮಣಾಚಾರ್ಯ
ಪಾಲಿಸು ಲೋಕನಾಯಕನೆಗುಣಶೀಲ ಶಂಕರ ಗಂಗಾಧರನೆಫಾಲಲೋಚನಘೋರಕಾಲಭಯ ವಿದೂರನೀಲಕಂಠೇಶ್ವರನೇ ಭಕ್ತರಕಾವಬಾಲ ಚಂದಿರಧರನೇ ಪನಂಬಿದ ಮುನಿಬಾಲನ ಪೊರೆಯುವನೆ ನರರರುಂಡಮಾಲೆಯ ಧರಿಸಿದ ಶೂಲಪಾಣಿಯೆನಿನ್ನ ಮಹಿಮೆಯ ಪೇಳುವರೆ ಪಾತಾಳಲೋಕದಸೀಳು ನಾಲಗೆಯುಳ್ಳ ಸಹಸ್ರಕಪಾಲಶೇಷಗೆಗಿಂತು ಸಾಧ್ಯವೇ 1ಉರಗಕುಂಡಲಧರ ರಜತಾದ್ರಿ ಗಿರಿವರಕರಿಚರ್ಮಾಂಬರಧರನೇ ಮುಕ್ತಿಯನೀವಪರಮೇಶ ಗುಣಕರನೇ ರಾಮನ ರಾಣಿ-ಗಿರವ ತೋರಿಸಿದವನೇಕಾಮನ ಕಣ್ಣ ಉರಿಯೊಳು ದಹಿಸಿದಕರುಣನಿಧಿ ಕೈಲಾಸದಲೀ ಸ್ಥಿರದಿ ನೆಲಸಿದನಿನ್ನ ಚರಣವಸುರರುನರದಾನವರು ಭಜಿಸಲುವರವನಿತಾ ತೆರದೊಳೆನ್ನನು 2ಒಂದಿನ ಸುಖವಿಲ್ಲ ಬಂಧು ಬಾಂಧವರಿಲ್ಲನಂದಿವಾಹನ ದೇವನೆನಿನ್ನಯ ಪಾದಕೊಂದಿಸುವೆನು ಶಿವನೆಎನ್ನೊಳು ಬಂದು ಪಾಲಿಸು ಪರಮೇಶನೆಭೀಮನಿಗಂದು ವರವಿತ್ತು ಮೆರೆಸಿದೆಇಂದ್ರಸುತನಿಗೆ ವನದಿ ನೀನತಿಚಂದದಲಿ ಶರ ಒಂದ ಪಾಲಿಸಿದಂದು ಕುರುಕುಲ ವೃಂದವನು ಗೋವಿಂದಸಾರಥಿಯಾಗಿ ಕೊಂದನು ಚಂದ್ರಧರನೇ 3
--------------
ಗೋವಿಂದದಾಸ
ಸರಸೀರುಹಾಂಬಕಿ ನಿನ್ನ ಪಾದ-ಸರಸಿಜಗಳ ಸ್ಮರಿಸುವೆ ಪೊರೆಯೆನ್ನ ಪ.ಕಾಳಾಹಿವೇಣಿ ಕಲಕೀರವಾಣಿಫಾಲಾಕ್ಷನ ರಾಣಿ ಪರಮಕಲ್ಯಾಣಿ 1ಕಣ್ಮಯಜಾತೆ ಹಿರಣ್ಮಯ ಖ್ಯಾತೆಕಣ್ಮುಖ ವರಕರಿ ಷಣ್ಮುಖಮಾತೆ 2ಕಣ್ಮನದಣಿಯೆ ಕೊಂಡಾಡುವೆ ಪಾಡುವೆಮನ್ಮನೋರಥದಾಯೆ ಚಿನ್ಮಯೆ ಚೆಲುವೆ 3ಕಂಬುಕಂಧರಿ ನಿನ್ನ ನಂಬಿದೆ ಶಂಕರಿಕುಂಭಪಯೋಧರಿ ಶಂಭುಮನೋಹರಿ 4ಸಿರಿಕಾತ್ಯಾಯಿನಿ ಗೌರಿ ಭವಾನಿಹರಿಸರ್ವೋತ್ತಮ ಲಕ್ಷ್ಮೀನಾರಾಯಣ ಭಗಿನಿ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ