ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣಿಸೆನ್ನನು ಕರುಣಾನಿಧಿಯೆ ಪ ಹರಿ ಭಜಕರಾಗ್ರಣಿಯೆ ವರಕಪಿಶಿರೋಮಣಿಯೆ ಅ.ಪ ಧರಣಿತಳದಲ್ಲಿ ಪರಿಪೂರ್ಣವಾಗೀ ಇರುವ ವಾರ್ತೆಯ ಕೇಳಿ ಹರುಷ ಮನದಲಿ ನಿನ್ನ ಚರಣ ಪಂಕಜಯುಗ್ಮ ಭರದಿ ಭಜಿಪ ಎನ್ನ 1 ದುರುಳ ದೈತ್ಯನ ಶೀಳಿ ಧರಣಿಸುರಸುತನ ನೀ ಪೊರೆದ ಕೀರುತಿ ಕೇಳಿ ತ್ವರದೀ ಪಾದ ಸರಸಿಜ್ವದಯವನ್ನು ದುರುಳ ಮಾನವ ನಾ 2 ಜನಕ ಮಾಡಿದ ಋಣವ ಹುಣಿಸೆ ಬೀಜಗಳಿಂದ ಋಣಗಳೆದ ಘನ ಮಹಿಮೆ ಕೇಳಿ ಮನದಿ ಯೋಚಿಸಿ ಚರಣವನಜ ಭಜಿಸುವ ಎನ್ನ ಋಣ ಬಿಡಿಸೊ ಗುರುಜಗನ್ನಾಥ ವಿಠಲ ಪ್ರಿಯಾ 3
--------------
ಗುರುಜಗನ್ನಾಥದಾಸರು
ದಾಸರಿವರ ನೋಡಿರೊ | ಗುರು ವಿಜಯ |ದಾಸರಿವರ ಪಾಡಿರೋ ಪ ವ್ಯಾಸರಾಜ್ಞೆಯಲಿಂದ | ವ್ಯಾಸ ಕಾಶಿಗೆ ಪೋಗಿ |ಶ್ರೀಶಾನುಗ್ರಹದಲಿ | ಭಾಸಿಸೀ ಮೆರೆದಂಥ ಅ.ಪ. ಎರಡನೆ ಯುಗದೊಳಗೆ | ಸುರಲೀಲ | ವರಕಪಿ ಎಂದೆನೆಸಿ |ಶಿರಿ ರಾಮಚಂದ್ರನ್ನ | ಚರಣ ಸೇವಕರಾಗಿಸುರ ವಿರೋಧಿಗಳ ಬಹಳ ಸಂಹರಿಸಿದ 1 ಯಾದವರಲಿ ಜನಿಸಿ | ನಿಕಂಪಾಖ್ಯ | ಶ್ರೀದಕೃಷ್ಣನ ಭಜಿಸಿ |ಮಾಧವ ಗೆದುರಾಂತ | ದೈತ್ಯರ ಸದೆಬಡಿದುಯಾದವೇಶನ ಪದ | ಕರ್ಪಿಸಿ ಮೆರೆದಂಥ 2 ಪುರಂದರ ದಾಸರ | ವರ ಗೃಹದಲಿ ಇದ್ದುಹರಿಚರಿತೆ ಶ್ರವಣದಿ | ವಿಪ್ರನಾಗ್ಯುದೀಸಿದ 3 ಮಧ್ವಪತಿಯ ನಾಮದಿ | ಭೃಗ್ವಂಶದಿ | ಮುದ್ದು ಮಗನೆನಿಸಿಮಧ್ವೇಶ ಹರಿಪಾದ | ಶ್ರದ್ಧೆಯಿಂದಲಿ ಭಜಿಸಿಮಧ್ವರಾಯರ ಮತ | ತುತಿಸಿ ಮೋದಿಸಿದಂಥ 4 ಚೀಕನಪರಿ ಕ್ಷೇತ್ರದೀ | ದಾಸಪ್ಪನು | ಆ ಕೂಸಮ್ಮನ ಉದರದಿಬೇಕಾಗಿ ಜನಿಸುತ್ತ | ಪ್ರಾಕು ಪ್ರಾರಬ್ದವನೇಕ ಬಗೆಯಲಿ ಉಂಡ | ಮಾಕಳತ್ರನ ಕಂಡ 5 ಪುರಂದರ | ದಾಸರೂಪಿಯಲಿಂದ |ಸೂಸಿ ಶಾಸ್ತ್ರವ ಮಧ್ವ | ಭಾಷ್ಯಾನು ಸಾರದಿ |ಭಾಷೆ ಕನ್ನಡದಲ್ಲಿ | ಮೀಸಲೆನಿಸಿ ಪೇಳ್ದ 6 ಧ್ಯಾನೋಪಾಸನೆ ಕರ್ಮವ | ಯೋಗ್ಯರಿಗೆ | ಗಾನಗೈದಿಹ ಸುಜ್ಞಾನೀ | ಮಾನ್ಯ ಮಾನದ ದುಷ್ಟ | ಗಾನಕೆ ಮನ ಕೊಡದೆಮೌನಿಯಾಗುವ ಮಾರ್ಗ | ದಾನವ ಮಾಡೀದ 7 ಸ್ವಪ್ನದಲ್ಲೆನಗವರೂ | ದರ್ಶನದಿ | ಕೃಪ್ಪೆಯಲನುಗ್ರಹಿಸಿ |ಅಪ್ಪಾರ ಮಹಿಮರು | ತಪ್ಪದೆ ತ್ರಯ ಬಾರಿಒಪ್ಪಿ ತೀರ್ಥವನಿತ್ತು ಕಳುಹಿದ ಮಹಾಂತ 8 ವತ್ಸರ ಕಾರ್ತೀಕ | ಸಿತ ದಶಮಿ | ಆವಗುರುವಾಸರದಿಭಾವಜ ಪಿತ ಗುರು | ಗೋವಿಂದ ವಿಠಲನಭಾವದಿ ಕಂಡು ಸುಯೋಗದಿ ಪೊರಟಂಥ 9
--------------
ಗುರುಗೋವಿಂದವಿಠಲರು
ಮುಖ್ಯಪ್ರಾಣ ಕರವೆತ್ತಿ ನಿಂದ ಪ ಹರಿಯೆ ಪರನೆನ್ನದವನ ಹಲ್ಮುರಿವೆನೆಂದು ಅ.ಪ. ಸಿರಿ ರಾಮನಾಜ್ಞೆಯನು ಸಿರದೊಳಾನುತ ಬಂದು ವರಕಪಿಗಳೊಡಗೂಡಿ ಸಿರಿದೇವಿಯನರಸುತ ಶರಧಿತಟಕೆ ಬಂದು ಸಿರಿಪೋದ ಪಥವರಿಯದೆ ಪರಿತೋರದಿರ್ದ ಹರಿವರರಿಗಭಯವಿತ್ತು 1 ಇರುಳು ಇಂದ್ರಜಿತುವಿನ ಶರಹತಿಯಲಳಿದಂಥ ಸಿರಿ ರಾಮ ನೋಡುತ ಮರುಗುತಿರಲಂದು ವರ ಜಾಂಬವನ ಸುಮತಿಯಲಿ ತ್ವರಿತದಿ ಸಂಜೀವನ ಗಿರಿಯ ತಹೆನೆನ್ನುತ 2 ಭರದಿ ದಶಶಿರನು ತಾನರಿಯದೆ ಹನುಮನ ಬಲ ಭರವಸದಲಿ ಮಾಡಿ ಮೂರು ಗುದ್ದಿನ ಪಂಥ ಕರಹತಿಗೆ ಕಂಗೆಟ್ಟು ಧುರವ ಬಿಟ್ಟೋಡುತಿರೆ ಅರಸಿ ಅಸುರನ ಪಿಡಿದ ಹರಿಸು ಋಣವನೆಂದು 3 ದುರುಳ ಕೀಚಕನಂದು ಕರಿಗಮನೆಯನು ಕಂಡು ಸ್ಮರಶರಹತಿಯಿಂದ ಉರುತರದಲಿ ನೊಂದು ಹರಿಣಾಕ್ಷಿಯನು ಬರಿಸಿ ಸೆರಗ್ಹಿಡಿದೆಳೆದುದನು ತರಳೆ ಮುಖದಿ ಕೇಳವನ ಸಿರ ಮುರಿವೆನೆಂದು 4 ಕುರುಪತಿಯ ಸಭೆಯಲಿ ದುರುಪದಿ ಗೈದ ಶಪಥ ಮರೆಯದೆ ದುಶ್ಶಾಸನನ ಧುರದಿ ಕೆಡಹಿ ಕೊಂದು ಉರ ಬಗೆದು ಕರುಳ ನಿಜತರುಣಿಗೆ ಮುಡಿಸುವಾಗ ಬರಲಿ ಬಿಡಿಸುವರೆಂದು ಉರು ಗದೆಯನು ಪಿಡಿದು 5 ಹರಿಹರರು ಸರಿಯೆಂದು ಹರಟುತಿರ್ದವರನು ಗುರುತರ ವಾಕುಗಳೆಂಬ ಬಿರುಬಾಣದಿಂದ ಗರ ಹೊಡೆದವರ ಮಾಡಿ ಪರತತ್ವವನು ಪೇಳಿ ಭರದಿ ನಡೆದೆ 'ಪರಮೋನಹತಿ ಸದೃಶ' ವೆಂದು 6 ಸರುವರಂತರ್ಯಾಖ್ಯ ಹರಿಯಾಜ್ಞಾನುಸಾರ ಸರುವ ಜೀವರಿಗೆ ತಾನು ಗುರುವೆನಿಸಿಕೊಂಡು ಸಿರಿ ರಂಗೇಶವಿಠಲನ ದುರಿತ ಭಯವಿಲ್ಲೆಂದು 7
--------------
ರಂಗೇಶವಿಠಲದಾಸರು
ವಾರಣವದನ ತ್ರೈಲೋಕ್ಯಸುಮೋಹನ ವಾರಣವದನ ಪ. ವಾರಿಜಾಕ್ಷ ವರಗುಣಾಕರ ವಾರಿಜಾಕ್ಷಿ ವರದಾಯಕ ಸನ್ನುತ ನಾರದಾದಿ ಮುನಿವಂದಿತ ಪದಯುಗ ಅ.ಪ. ಸುಂದರಾಂಗ ಸುಕಲಾನ್ವಿತ ನಿಭಚರಣ ಕಟಿಶೋಭಿತ ವ್ಯಾಳಸ- ಬಂಧನಾಬ್ಧಿ ಶತಕೋಟಿಸದೃಶ ಕಿರಣ ಚಂದನಾಂಗಾರ್ಚಿತ ಸುಮನೋಹರ ಮಂದಹಾಸ ಮಹಿಮಾಂಬುಧಿಚಂದಿರ 1 ಕಂಬುಗ್ರೀವ ಕಮನೀಯ ಕರಾಂಬುರುಹ ಪಾಶಾಂಕುಶಧರ ವರ ಶಂಬರಾರಿಜಿತುತನಯ ಮಧುರಗೇಹ ಜಂಭಭೇದಿವಂದಿತ ಅತ್ರಿವಂದಿತ ಲಂಬೋದರ ವಿಘ್ನಾಂಬುಧಿ ಕುಂಭಜ 2 ಚಾರುಭಾರ ಕನ್ಯಾಪುರವರ ನಿಲಯ ಮೃಕಂಡುಜದ ಮುನಿವರ ಸಾರಮಂತ್ರಸ್ಥಾಪಿತ ಮಂಗಲ ಕೆರೆಯ ವರಕಪಿತ್ಥಫಲೋರಸಭುಂಜಿತ ಧೀರ ಲಕ್ಷ್ಮೀ ನಾರಾಯಣಸಖಸುತ 3
--------------
ತುಪಾಕಿ ವೆಂಕಟರಮಣಾಚಾರ್ಯ
ವಾರಣವದನ ತ್ರೈಲೋಕ್ಯಸುಮೋಹನ ವಾರಣವದನ ಪ.ವಾರಿಜಾಕ್ಷ ವರಗುಣಾಕರವಾರಿಜಾಕ್ಷಿ ವರದಾಯಕಸನ್ನುತನಾರದಾದಿ ಮುನಿವಂದಿತ ಪದಯುಗ ಅ.ಪ.ಸುಂದರಾಂಗ ಸುಕಲಾನ್ವಿತ ನಿಭಚರಣಕಟಿಶೋಭಿತ ವ್ಯಾಳಸ-ಬಂಧನಾಬ್ಧಿ ಶತಕೋಟಿಸದೃಶ ಕಿರಣಚಂದನಾಂಗಾರ್ಚಿತ ಸುಮನೋಹರಮಂದಹಾಸ ಮಹಿಮಾಂಬುಧಿಚಂದಿರ 1ಕಂಬುಗ್ರೀವಕಮನೀಯಕರಾಂಬುರುಹಪಾಶಾಂಕುಶಧರವರಶಂಬರಾರಿಜಿತುತನಯ ಮಧುರಗೇಹಜಂಭಭೇದಿವಂದಿತ ಅತ್ರಿವಂದಿತಲಂಬೋದರ ವಿಘ್ನಾಂಬುಧಿಕುಂಭಜ2ಚಾರುಭಾರ ಕನ್ಯಾಪುರವರನಿಲಯಮೃಕಂಡುಜದ ಮುನಿವರಸಾರಮಂತ್ರಸ್ಥಾಪಿತ ಮಂಗಲ ಕೆರೆಯವರಕಪಿತ್ಥಫಲೋರಸಭುಂಜಿತಧೀರ ಲಕ್ಷ್ಮೀ ನಾರಾಯಣಸಖಸುತ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ