ಒಟ್ಟು 6 ಕಡೆಗಳಲ್ಲಿ , 4 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜೋ ಜೋ ಶ್ರೀಹರಿ ಮಲಗೊ ಜೋಗುಳ ಪಾಡಿ ಪಾಡಿ ತೂಗುವೆ ಮುದದಿಪ ಯೋಗಿಗಳರಸನೆ ಸಾಗರಶಯನನೆ ಭಾಗವತರಪ್ರಿಯ ಬಾಗಿ ಸ್ತುತಿಪರೊ ನಿನ್ನ ಅ.ಪ ಹರ ಬ್ರಹ್ಮಾದಿಗಳು ಕೂಡಿ ನಿನ್ನನು ಪರಿಪರಿ ವಿಧದಲಿ ಕೊಂಡಾಡಿ ಸುರರು ಗಂಧರ್ವರು ವರಋಷಿಗಳು ಕೂಡಿ ಪರಮ ಸಂಭ್ರಮದಿಂದ ಹರಿ ನಿನ್ನ ಸ್ತುತಿಪರು 1 ಗೋಕುಲದ ನಾರಿಯರು ಗೋವಿಂದ ನಿನಗೆ ಬೇಕಾದ ಪಾಲ್ಮೊಸರು ಜೋಕೆಯಿಂದಲಿ ಹೊಸ ಬೆಣ್ಣೆ ತಂದಿಹೆವೆಂದು ಅ- ನೇಕ ಬಗೆಯಲಿ ಸ್ತುತಿ ಮಾಡಿ ಬೇಡುತಲಿರುವರು 2 ದಿಟ್ಟ ಗೋಪಾಲ ಕಯ್ಯೊಳಗೊಂದು ಪುಟ್ಟ ಬಚ್ಚೆಯ ಪಿಡಿದು ಅಚ್ಚುತ ನಿನಗೀವೆವೆಂದು ಬಾಗಿಲೋಳ್ ನಿಂದು ಪುಟ್ಟ ಮಕ್ಕಳು ಬಾಯಿಬಿಟ್ಟು ಪ್ರಾರ್ಥಿಸುವರು 3 ಇನಕೋಟಿ ಪ್ರಭೆ ನಾಚಿಪ ಮುಖ ಕಮಲದ ದನುಜದಲ್ಲಣ ನಿನ್ನನು ಸನಕಾದಿಗಳು ಸ್ತುತಿಮಾಡಿ ಮೈ ಮರೆತರೊ ವನಿತೆಯರೋಕುಳಿಗಳನಾಡಿ ನರ್ತಿಸುವರೊ 4 ನಿದ್ರೆ ಮಾಡಿದರೆ ನೀನು ಈ ಜಗವೆಲ್ಲ ಉದ್ಧಾರವಾಗುವುದೇನು ನಿದ್ರೆ ಸಾಕೇಳೆಂದು ದುರ್ಗಾದೇವಿಯರು ಸ್ತುತಿಸೆ ಮುದ್ದು ಕೃಷ್ಣನೆ ಭಕ್ತರುದ್ಧಾರಕರ್ತನೆ5 ಹಯ ಮುಖ ಹರಿ ಮತ್ಸ್ಯನೆ ಕೂರ್ಮನೆ ವರಹ ಹಯಗ್ರೀವ ನರಸಿಂಹನೆ ಜಯವಟು ಭೃಗು ರಾಮಕೃಷ್ಣ ಬುದ್ಧನÉ ಕಲ್ಕಿ ಜಯ ನಾನಾ ರೂಪನÉ ಜಯವೆಂದು ಪೊಗಳ್ವರೊ6 ನವನೀತ ಚೋರನೆಂದು ನಾರಿಯರೆಲ್ಲ ನವವಿಧ ನುಡಿ ನುಡಿವರೊ ಭುವನ ಮೋಹನಸ್ವಾಮಿ ಸುಮನಸ ವಂದ್ಯನೆಕವಿ ಜನರಪ್ರಿಯ ಶ್ರೀ ಕಮಲನಾಭ ವಿಠ್ಠಲ 7
--------------
ನಿಡಗುರುಕಿ ಜೀವೂಬಾಯಿ
ತಿರುಮಲೇಶನೆ ನಿನ್ನ ಚರಣ ಪಂಕಜಯುಗಲ ನೆರೆನಂಬಿದವ ಧನ್ಯನೋ ಪ ಗುರು ಮೂಲ ಪುರುಷ ನಾರಪ್ಪಯ್ಯ ಮುನಿಗೊಲಿದು ಕುರಿಕಿಹಳ್ಳಿಯಲಿ ಬಂದಾ ನಿಂದಾ ಅ.ಪ ವರಋಷಿಯ ಪೂರ್ವದಲಿ ತಿರುಪತಿಯ ಮುಟ್ಟಿ ಮಲ- ಗಿರಲು ಸ್ವಪ್ನವ ಕಾಣುತ ತುರುರೂಪದಲಿ ನಾನೆ ಬರುವೆ ಕಾ- ರ್ಪರ ವನಕೆ ದರುಶನವÀÀ ಕೊಡುವೆ ನಿರುತ ಬರುತ ಬರುತಲಿ ವಿಪ್ರ ತಿರುಗಿ ನೋಡಲು ಪದದಿ ಕಿರುಗಜ್ಜೆಗಳ ನುಡಿಸುತಾ ಕುರಿಕಿ ಹಳ್ಳಿಯ ಸುಮಂದಿರನೆನಿಸಿ ಸಿರಿಸಹಿತ ವರಶಿಲೆಯ ಮೇಲೆ ಪಾ ಲ್ಗರಿದು ನೆಲೆಸಿರುವಂಥ 1 ತೋಂಡಮಾನಕ್ಷಿತಿಪ ಪುಂಡಲೀಕಾದಿ ಬಹು ತೋಂಡರಿಗೆ ಒಲಿದು ದೇವಾ ಕುಂಡಲಿ ಪರ್ವತದಿ ತಂಡತಂಡದಿ ಭಕುತ ಮಂಡಲಿಗೆ ಫಲವ ಕೊಡುವ ದುಂಡುಮುತ್ತಿನಹಾರ ಮುಕುಟ ರತ್ನಾಭರಣ ಮಂಡಿತನಾಗಿ ಮೆರೆವ ಕಂಡೆನಾನಿಮ್ಮ ಪದ ಪುಂಡಲೀಕವನು ಈ ಗುಂಡಿನಾ ತಿಮ್ಮಯ್ಯನೆಂದು ಕರೆಸಿಕೊಳುವಿ 2 ಕರಮುಗಿವೆ ಮನ್ಮನದಿ ಕರುಣದಲಿ ತೋರೋತವ ಪರಮ ಸುಂದರ ಚರಣವ ನಿರುತ ಸ್ಮರಿಸುವ ಜನರ ದುರಿತ ತಿಮಿರಕೆ ದಿವಾ ಕರನೆನಿಸಿ ಸುಖವಗರಿವಾ ಸೇವ್ಯ ಕಾರ್ಪರನಿಲಯನೆನಿಸೆ ಬಹು ಶರಣು ಜನರನು ಪೊರಿಯುವಾ ವರಕೃಷ್ಣ ಗರ್ಭದಲಿ ಒಪ್ಪುವ ಪಿಪ್ಪಲಸ್ಥಶ್ರೀ ನರಹರಿಯ ಬಳಿಯಲಿರುವಾಮೆರೆವಾ 3
--------------
ಕಾರ್ಪರ ನರಹರಿದಾಸರು
ಪಾಹಿಮಾಂ ಪರಮೇಶ ಪಾಹಿಪನ್ನಗಭೂಷ ಪಾಹಿಕೈಲಾಸವಾಸ ಪ ಸ್ವಾಮಿ ಗಿರಿಜಾನಾಥ ಸಮರ ವಿಜಯ ತ್ರಿಣೇತ್ರ ಸುಜನ ವಿನುತ ಕಾಮಿತಾರ್ಥ ಪ್ರದಾತ ಕ್ಷೇಮತರ ಸುಚರಿತ್ರ ಸಾಮಗಜ ವದನ ತಾತರಾಮೇಶ ಕೇಶಪುನೀತ ಪ್ರಖ್ಯಾತ 1 ಕಾಲ ಭಾಳಾಕ್ಷಭಯ ಸಂಹಾರ ಜನಸಾರ ಶೂಲಧರ ಕರುಣಾಕರ ಶೀಲವರಗುಣ ಸುಂದರ ಹರಪಾಶ ಭಯವಶಂಕರ ಓಂಕಾರ 2 ಬಲಸಾಕಾರತ ವಿಶಾಲ ಏಕಮಯ ತ್ರಿಗುಣದಿಂದ ಖಿಲಲೋಕ ವಿಸೂತ್ರ ಜಾಲ ಸಾಕೆನ್ನ ಭವದಳಲ ಶೋಕವನು ನೀಕೇಳದೇಕೆ ಈ ಚೇಷ್ಟೆಬಹಳ ಕಾಲ ಮೂಕಾಂಬಿಕಾಂಬಲೋಲ3 ನಾಗವಾಹನ ನಮಿತನೆ ಯೋಗಮಾಯಾತೀತನೆ ಸಾಗರಾಂಬರದೊಡೆಯನೆ ಭಾಗವತ ಭಾಗಚಂದಿರಧರನೆ ಹರನೆ 4 ಧರಣಿಯೊಳಗೆ ವಿಶೇಷತರ ಗೌಜದೊಳುವಾಸ ವರಋಷಿ ಸ್ಥಾಪನೇಶ ಸರಸಕೀರ್ತಿ ವಿಲಾಸ ಸ್ಮರಹರ ಸುರಾಧ್ಯಕ್ಷ ದುರಳ ದಾನವ ವಿನಾಶ ದುರಿತಹರ ನಿರ್ದೋಶ ಧರಣಿ ಸುರಜನರಕ್ಷ ಕರಿಚರ್ಮಧರಮಹೇಶ ಉರಗರಾಜ ವಿಭೂಷವರ ಗುರು ವಿರೂಪಾಕ್ಷ ಪುರಮಥನ ಗೌತಮೇಶ 5
--------------
ಕವಿ ಪರಮದೇವದಾಸರು
ರಾಮನಾಮ ಕೀರ್ತನೆ ಮಾಡೊ ಮುದಗೊಡೊ ಪ ಹೃತ್ತಾಮರಸದಿ ನೋಡೋ ಕೊಂಡಾಡೊ ಅ.ಪ ವರಋಷಿ ಎನ್ನಿಸಿದಾತನ ಮರುತಾತ್ಮಜಾದಿ ನುತನ ಸುಚರಿತನ 1 ಬ್ರಹ್ಮಾದಿದೇವ ವಂದ್ಯನಾ ರಾಜೇಂದ್ರನಾ 2 ಭರತ ಶತೃಘ್ನ ಲಕ್ಷ್ಮಣ ಸೇವ್ಯನ ಸರಸಿಜಗಾಪ್ತಜ ಭಾವ್ಯನ ನೃಪಾಗ್ರಗಣ್ಯನಾದನ ವಿನೋದನಾ 3
--------------
ಗುರುರಾಮವಿಠಲ
ಹರಿಗೆ ಶಿಷ್ಯನು ಬ್ರಹ್ಮ ಕಮಲಜಗೆ ಸನಕಾದಿ ವರಋಷಿಗಳವರನಂತರದಿ ದೂರ್ವಾಸಮುನಿ ಪ್ರಾಜ್ಞತೀರ್ಥರುಮವರಿಗೆ 1 ಘನ ತಪೋನಿಧಿಯೆನಿಸುವಚ್ಚುತ ಪ್ರೇಕ್ಷ್ಯರಾ ತ್ರಿವಿಧ ಜೀವಗುರುವೆನಿಸು ದಶಮತಿಯೆನಿಸುವ | ವನಜನಾಭಾಕ್ಷೋಭ್ಯಮಾಧವನೃಹರಿ ತೀರ್ಥ ರಿನಿತು ನಾಲ್ವರೊಳಗಕ್ಷೋಭ್ಯ ತೀರ್ಥಯತೀಂದ್ರ ಶ್ರೀಪಾದರಿಗೆ ಶಿಷ್ಯರು 2 ಆನಂದತೀರ್ಥವಿರಚಿತ ಗ್ರಂಥಗಳಿಗೆ ತ ತ್ವಾನುಸಾರಾರ್ಥಸುಧೆ ರಚಿಸಿದರ್ಜಯತೀರ್ಥ ಮೌನಿ ವಿದ್ಯಾಧಿರಾಜಂಬಳಿಕ ರಾಜೇಂದ್ರ ಗಾನಕ ಜಯಧ್ವಜಗುರುಪ್ರವರವರಶಿ ಪ್ರಸಾದದಿಂ 3 ವ್ಯಾಸಮುನಿರ್ಯರಾತರ್ವಾಯದಲಿ ಶ್ರೀನಿ ರಾಮಚಂದ್ರತೀರ್ಥರ್ | ಲೇಸಾಗಿ ಮುಂದೆ ಲಕ್ಷ್ಮೀವಲ್ಲಭಾಖ್ಯಯೋ ಶ್ರೀನಾರಾಯಣÁಖ್ಯ ಬಳಿಕ 4 ಜಗನ್ನಾಥ ಮುನಿಯವರ ಬಳಿಕ ಶ್ರೀನಾಥ ತೀ ರ್ಥಗೆ ಶಿಷ್ಯರಾದ ವಿದ್ಯಾನಾಥ ಯೋಗೀಂದ್ರರವರ್ಗೆ ವಿದ್ಯಾಪತಿಗುರು | ಜಗವರಿಯೆ ಮುಂದೆ ವಿದ್ಯಾವಲ್ಲಭಾಖ್ಯಯೋ ಗಿಗೆ ಶಿಷ್ಯನಾದ ವಿದ್ಯಕಾಂತ ಮುನಿವರ್ಯ ವಿದ್ಯಾಪೂರ್ಣರವರ ಬಳಿಕ 5 ವಿದ್ಯಾಸಮುದ್ರ ತೀರ್ಥರವರ್ಗೆ ಶಿಷ್ಯನಾ ತೀರ್ಥಯತೀಂದ್ರ ಶ್ರೀಪಾದರು ಶುದ್ಧ ಮನದಲಿ ಗುರುಪರಂಪರೆ ಸ್ತೋತ್ರವಂ ಪದ್ಮಾಕ್ಷ ಗುರುರಾಮವಿಠಲ ನುಡಿಸಿದ ತೆರದೊ ತಿದ್ದುವುದು ಕರುಣದಿಂ 6
--------------
ಗುರುರಾಮವಿಠಲ
ಎಂತು ಶೋಭಿಸುತಿಹಳು ಈ ಕನ್ನಿಕೆಸಂತೋಷದಿಂದಲಿಸುರರುಸ್ತುತಿಸುತಿರಲುಪಮಂಧರಗಿರಿ ತಂದು ಸಿಂಧುವಿನೊಳಗಿಟ್ಟುಚಂದದಿಂ ಮಥಿಸಲಮೃತ ಪುಟ್ಟಲುಬಂದು ದಾನವರ ಪಹರಿಸಬೇಕೆನುತಿರಲುನಿಂದರುಸುರರುಮುಂದೋರದೆ ಚಿಂತಿಸೆಇಂದಿರಾಪತಿ ಇವರ ಭಾವವಕಂಡುಮನದಲಿ ಹರುಷಪಡುತಲಿಬಂದು ಅಸುರರ ಸುರರ ಮನ್ನಿಸಿನಿಂದ ಶ್ರೀ ಗೋವಿಂದ ಮುದದಲಿ 1ಸಾಲಾಗಿ ಕುಳಿತಿರಿ ಮೇಲಾದಮೃತವನ್ನುಲೀಲೆಯಿಂದಲಿ ಬಡಿಸುವೆನೆನ್ನಲುಕೇಳಿಅಸುರರು ಹರುಷತಾಳಿ ಸಂಭ್ರಮದಿಂದಸಾಲಾಗಿ ಕುಳಿತು ಆ ವೇಳೆ ನೋಡುತಲಿರಲುಶ್ರೀ ರಮಣ ಕರದಲ್ಲಿ ಕಲಶವÀಲೀಲೆಯಿಂದಲಿ ಪಿಡಿದು ನಿಲ್ಲಲುತಾಳಿ ಹರುಷವ ದಾನವರು ಸÀು-ಮ್ಮಾನದಿಂದಲಿ ನೋಡÀುತಿಹರು 2ಗಂಗೆಯ ಪಡೆದ ಪಾದಗಳ ಶೃಂಗಾರಅಂದಿಗೆ ಕಿರುಗೆಜ್ಹೆ ಸರಪಣಿಯುಚಂದುಳ್ಳ ಬೆರಳುಗಳಿಗೆ ಪಿಲ್ಲಿ ಕಿರುಪಿಲ್ಲಿ ಕಾ-ಲುಂಗರಗಳನಿಟ್ಟು ರಂಭೆಯಂತ್ಹೊಳೆಯಲುಬಂದಿ ಬಾಪುರಿ ಥಳಥಳಿಸುತಲಿಚಂದದನಾಗಮುರಿಗಿ ತಾಯಿತಸುಂದರಹಸ್ತಕಡಗ ಹಾಸರಇಂದಿರಾಕ್ಷಿ ಕೈ ಬಳೆಗಳ್ಹೊಳೆಯುತ 3ಹಲವು ಸೂರ್ಯರ ಕಾಂತಿ ಹೊಳೆವೊ ಪೀತಾಂಬರಸರಿಗೆ ಅಂಚಿನ ಕುಪ್ಪುಸವನೇ ತೊಟ್ಟುನಡುವಿಗೆ ನವರತ್ನ ಬಿಗಿದ ಪಟ್ಟೆಯನಿಟ್ಟುಸಡಗರದಲಿ ಆಣೆಮುತ್ತಿನ ಸರಗಳುಸರಗಿ ಏಕಾವಳಿಯು ವಜ್ರದಪದಕಗಳು ಥಳಕೆಂಬ ಸರಗಳುಕೊರಳ ಗೆಜ್ಜೆಟ್ಟಿಕೆಯು ಕಂಠಿಯುಮುರಳಿಸರ ಕಠ್ಠಾಣಿವಲಿಯುತ 4ಹೊಳೆವೊಗಲ್ಲಕೆ ಥಳಥಳಿಪ ಅರಿಶಿನಹಚ್ಚಿಹೊಳೆವೊ ಮೀನ್ ಬಾವುಲಿ ಕರ್ಣದಲಿಗಿಳಿಗೆಜ್ಜೆ ಚಳತುಂಬು ಬುಗುಡಿ ಬಾವುಲಿ ಚಂದ್ರಮುರುವುಸರಪಳಿಗಳು ಥಳಥಳ ಹೊಳೆಯಲುಆಣಿಮುತ್ತಿನ ಮುಖುರ ಬೇಸರಿಜಾಣೆ ನಾಶಿಕದಲ್ಲಿ ಹೊಳೆವ ಬು-ಲಾಕುನಿಟ್ಟಿ ಬೆಳಕು ಗಲ್ಲದಮೇಲೆ ಥಳಥಳ ಹೊಳೆವ ಕಾಂಚಿಯು 5ಸಣ್ಣ ಬೈತಲೆ ಬಟ್ಟು ಚಂದ್ರ ಸೂರ್ಯರ ನಿಟ್ಟುಹಿಂದೆ ಜಡೆಬಿಲ್ಲೆ ಗೊಂಡ್ಯಗಳನಿಟ್ಟುಚಂದ್ರ ಸೂರ್ಯರ ಪೋಲ್ವ ಚೌರಿ ರಾಗಟಿ ಜಡೆಬಂಗಾರ ಹೊಳೆಯುತ್ತ ಬಡನಡು ಬಳಕುತ್ತಕಂಗಳ ಕಡೆನೋಟದಿಂದಲಿಭಂಗಪಡಿಸುತ ಅಸುರ ಕೋಟಿಯಮಂದಗಮನದಿ ಅಡಿಯನಿಡುತಲಿಬಂದಳಮೃತದ ಕಲಶ ಪಿಡಿಯುತ 6ಕಂಗಳುಮುಚ್ಚಿ ಕುಳಿತಿರಲು ದಾನವ ಪಂಕ್ತಿಮುಂದೆ ಕಾಲ್ಗೆಜ್ಜೆ ಧ್ವನಿಯ ಮಾಡುತಅಂದಿಗೆ ಸರಪಣಿನಾದ ತುಂಬಲು ಭರದಿಸುಂದರಿ ಬಂದಿಹಳೆÀಂದು ದಾನವರೆಲ್ಲಮಂದಹಾಸದಿ ಮೈಮರೆತು ಮತ್ತೊಂದು ತೋರದೆ ಕಳವಳಿಸುತಲಿರೆಇಂದಿರೇಶನು ದೇವೆತೆಗಳಿಗೆಪೊಂದಿಸಿದ ಅಮೃತವನು ಹರುಷದಿ 7ಕಲಕಲಕೂಗುತ ಕಲಹಕೆನ್ನುತ ಬರೆಬಲವು ಸಾಲದೆ ಹಿಂದಿರುಗಲವರುಸುರರುಪುಷ್ಪದ ಮಳೆಕರೆದರು ದೇವನವರಋಷಿಗಳು ನೆರೆದು ಸ್ತುತಿಸಿ ಕೊಂಡಾಡಲುಪರಮಪುರುಷನೆ ಪುಣ್ಯಚರಿತನೆಗರುಡ ಗಮನನೆ ಉರಗಶಯನನೆಸರಸಿಜಾಕ್ಷನೆ ನಮಿಪೆವೆನ್ನುತಸನಕಾದಿಗಳು ಸಂಸ್ತುತಿಸೆ ದೇವನ 8ಪರಶಿವನಿದ ನೋಡಿ ಪರಿಪರಿ ಪ್ರಾರ್ಥಿಸಿತರುಣಿಯ ರೂಪವ ನೋಡಲನುವಾಗಲುಸರಸಿಜಾಕ್ಷನ ಸ್ತ್ರೀರೂಪ ನೋಡುತಲಿ ಮೈಮರೆದು ಕೈಮುಗಿದು ಕೊಂಡಾಡಿ ಸುತ್ತಿಸಿದನುಮರಳಿ ಭಸ್ಮಾಸುರನ ಭಾಧೆಗೆತರಹರಿಸಿ ಮುಂದೋರದಿರುವಸಮಯದಲಿ ಸ್ತ್ರೀರೂಪ ತಾಳುವತ್ವರದಿ ರಕ್ಷಿಸಿ ಪೊರೆದ ದೇವನು 9ಕಮಲಸಂಭವನಯ್ಯಕಮಲಜಾತೆಯ ಪ್ರಿಯಕಮಲಾಕ್ಷಕಂಸಾರಿಕರುಣಾನಿಧೆಶರಣು ಶರಣೆನ್ನುತ ನಭವ ತುಂಬಲು ಸ್ವರಸುರಗಂಧರ್ವರು ಪಾಡಿಪೊಗಳುತಿಹರೊ ದೇವಕನಕಗರ್ಭನ ಪಿತನೆ ರಕ್ಷಿಸುಕಮಲನಾಭ ವಿಠ್ಠಲನೆ ನಮಿಸುವೆಸವಿನಯದಿ ನಿನ್ನ ಸ್ತುತಿಪ ಭಾಗ್ಯವಕರುಣಿಸೆನಗೆ ಶ್ರೀ ಕರುಣಾನಿಧಿಯೆ 10
--------------
ನಿಡಗುರುಕಿ ಜೀವೂಬಾಯಿ