ಒಟ್ಟು 7 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕದವ ತೆಗೆಯೆ ಸುಂದರಿವಯ್ಯಾರಿ ಮುತ್ತಿನ ಪ ಕಡಲ ಶಯನನೆ ಮಡದಿ ಹರುಷದಿ ಸಡಗರದಿ ಮುಂದಡಿ ಇಡುತ ನಿನ್ನ ಒಡೆಯ ಬಂದಿಹನೆಂದು ಹರುಷದಿ ಬೆಡಗು ಮಾಡದೆ ಬಿಡಿಯ ಮುತ್ತಿನ 1 ಯಾರು ನಿನ್ನಯ ಪೆಸರ ಏನೆಂದು ತಿಳಿಯದೆ ಹೇಗೆ ತೆಗೆಯಲಿ ಕದವಾ ಘೋರ ರಾತ್ರಿಯ ವೇಳೆಯಲಿ ಬಂ- ದೀಗ ಬಾಗಿಲ ಬಡಿಯ ನಿಂದಿರೆ ನಾರಿಯರು ಏನೆಂದು ಕೇಳ್ಪರು ದ್ವಾರ ಬಿಡುಬಿಡುತಲಿ ಸಾಗು ಮುಂದಕೆ2 ತೆಗೆಯಲೊಲ್ಲೆನು ಕದವ ಸಮರಾತ್ರಿ ವೇಳದಿ ರುಕ್ಮನ ಅನುಜೆ ಕೇಳೆ ಪೃಥ್ವಿಯೊಳು ಎನ್ನನು ಚಕ್ರಿ ಎನ್ನುತ ಪೇಳ್ವರೆ ಅರ್ಥಿವಚನಗಳನ್ನು ಕೇಳುತ ಸತ್ವರದಿ ನೀ ಬಂದು ಮುಂದಕೆ ಮುತ್ತಿನ ಕದತೆಗೆದು ಬೇಗನೆ ರತ್ನ ಪೀಠದಿ ಕುಳ್ಳಿರಿಸೆ ಹೊಸ ಮುತ್ತಿನರಗಿಣಿ ಸತ್ಯವಾಣಿಯೆ3 ಕೇಳಿ ಹರ್ಷಿತನಾದೆನು ನಿನ್ನಯ ಮಾತ ಕೇಳಿ ನಗುವರು ಜನರು ಹೇಳಿ ಕೇಳುವರಿಲ್ಲ ನಿನ್ನ ಮನಸಾರ ಮಾತುಗಳಾಡಲೇತಕೆ ಕು- ಲಾಲ ಭವನವಿದಲ್ಲ ಸುಮ್ಮನೆ ಹೇಳ ಕೇಳದೆ ಹೊರಡು ಮುಂದಕೆ 4 ಹೀಗೆ ನುಡಿಯುವದೇತಕೆ ಈಗೆನ್ನ ಮಾತಿಗೆ ಬೇಗದಿ ತೆಗೆ ಕದವ ನಾಗವೇಣಿಯೆ ನಗುತ ಪೇಳುವೆ ಬೇಗದಲಿ ಇನ್ನೊಂದು ನಾಮವ ಈಗ ಧರಣಿಧರನು ಬಂದಿಹೆ ಸಾಗರನ ಸುತೆ ಸರ್ಪವೇಣಿಯೆ 5 ಧರಣೀಧರ ನೀನಾದರೆ ಈ ಧರೆಯನೆಲ್ಲವ ಸಿರದ ಮೇಲಿರಿಸುವೆಯ ಸರ್ವ ಜನರಿಗೆ ಭಯವ ಪಡಿಸುವ ಉರಗರಾಜ ನೀನೆಂದು ತಿಳಿದೆನು ಇರುತ ಸರ್ಪಗಳೊಳಗೆ ನೀ ಬಲು ಹರುಷದಿಂದಲಿ ಸಾಗುಮುಂದಕೆ6 ಹರಿಣಾಕ್ಷಿ ಕೇಳೆ ನೀನು ಎನ್ನನು ಜನರು ಹರಿಯೆಂದು ಕರಿಯುವರು ಕರೆ ಕರೆಯ ಮಾಡದಲೆ ಬೇಗನೆ ವರ ಕನಕ ಕದ ತೆಗೆದು ಸುಮ್ಮನೆ ಇರಿಸು ಸುಖ ಸಾಮ್ರಾಜ್ಯ ಪೀಠವ ಹರುಷದಿಂ ಕುಳಿತೆಲ್ಲ ಪೇಳುವೆ 7 ಕೋತಿ ನೀನಹುದಾದರೆ ಮಾತುಗಳ್ಯಾಕೆ ಜಾತಿ ಕಪಿಗಳ ಕೂಡುತ ಪ್ರೀತಿಯಿಂದಲಿ ಮನಕೆ ಬಂದೆಡೆ ನೀತೆರಳುತಲಿ ಪೋಗು ಮುಂದಕೆ ಕೋತಿಗಳ ಗುಂಪಿದಲ್ಲ ತಿಳಿಮಹ- ರೂಪವತಿಯರಿರುವ ಸ್ಥಳವಿದು 8 ಪ್ರೀತಿಸತಿಯೆ ನೀ ಕೇಳೆ ನಿನ್ನೊಳು ಬಹು ಪ್ರೀತಿಯಿಂದಲಿ ಬಂದೆನು ಶ್ರೀಶನ ನುಡಿಕೇಳಿ ರುಕ್ಮಿಣಿ ಆತುರದಿ ಬಾಗಿಲನೆ ತೆಗೆಯುತ ನಾಥ ಕಮಲನಾಭ ವಿಠ್ಠಲನಿಗೆ ತಾನಮಿಸಿ ವಂದಿಸುತ ಭಕುತಿಯಲಿ ಬಾಗಿಲು ತೆಗೆದಳಾಗ ಭಕುತಿಯಲಿ ಶ್ರೀಶಗೆ ಬಾಗಿಲು ತೆಗೆದಳಾಗ9
--------------
ನಿಡಗುರುಕಿ ಜೀವೂಬಾಯಿ
ಕೋಲ ಕೋಲೆನ್ನ ಕೋಲ ಕೋಲ ಕೋಲೆನ್ನ ಕೋಲಕೋಲೆಂದು ಪಾಡುವರೆಷ್ಟು ಕೇಳ ವಯ್ಯಾರಿ ಪ. ಚಿತ್ರ ವಿಚಿತ್ರದ ಮುತ್ತು ಮಾಣಿಕ ಎಸವೋಛತ್ರÀ ಹಿಡಿದವರೆಷ್ಟ ಕೇಳ ವೈಯಾರಿ 1 ಶ್ವೇತ ಛತ್ರವುಕೋಟಿ ಪ್ರೀತಿಲಿ ಹಿಡಿದವರೆಷ್ಟ ಕೇಳವಯ್ಯಾರಿ2 ಸೂರ್ಯ ಪಾನವುಕೋಟಿಸಾರೆ ಹಿಡಿದವರೆಷ್ಟ ಕೇಳ ವಯ್ಯಾರಿ3 ಎಡಬಲ ಚಾಮರ ಹಿಡಿಕೆ ನವರತ್ನ ಹೊಳೆವ ಹಿಡಿದು ಬೀಸುವರವರೆಷ್ಟ ಕೇಳ ವಯ್ಯಾರಿ 4 ರತ್ನ ಮಾಣಿಕ ಬಿಗಿದ ಬೀಸಣಿಕೆಯ ಹಿಡಿದುಚೆನ್ನಾಗಿ ಬೀಸುವವರೆಷ್ಟ ಕೇಳ ವಯ್ಯಾರಿ 5 ಚಲುವ ರಂಗನ ಮುಂದೆ ನಲಿಯುತ ನವಿಲಗÀರಿಯಸುಳಿಸುವವರೆಷ್ಟ ಕೇಳ ವಯ್ಯಾರಿ 6 ಅಚ್ಚ ಜರತಾರಿ ವಸ್ತ್ರ ಜತ್ತಾಗಿ ನಿರಿ ಹೊಯ್ದುಬಿಚ್ಚಿಹಾರಿಸುವರೆಷ್ಟ ಕೇಳ ವೈಯ್ಯಾರಿ 7 ಫುಲ್ಲನಾಭನ ಮುಂದೆ ಮಲ್ಲ ಮುಷ್ಠಿಕರುತಮ್ಮೆಲ್ಲವಿದ್ಯೆಯನು ತೋರಿಸುವರೆಷ್ಟ ಕೇಳ ವೈಯಾರಿ 8 ಬಂದಿಗಳು ರಾಮೇಶನ ಒಂದೊಂದು ಗುಣ ರಚಿಸಿಚಂದಾಗಿ ಹೊಗಳುವರೆಷ್ಟ ಕೇಳ ವೈಯ್ಯಾರಿ9
--------------
ಗಲಗಲಿಅವ್ವನವರು