ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ರುದ್ರ ದೇವರ ಸ್ತುತಿ ಪಾಲಿಸೆನ್ನ ಕಾಪಾಲಿಯೆ ನೀನು ಪ ವಾಲಗ ಕೊಟ್ಟು ಅ.ಪ ನೀ ಮಹದೌಷಧಿ ಕಾಮಾದಿಗಳೆಂಬಾಮಯ ಸ್ತೋಮಕೆ ಹೇ ಮಮಸ್ವಾಮಿ 1 ನೀ ಕಾಯದೆ ಬಿಡೆ ಕಾಯಜ ಭಯ ನೂಕೆಯನ್ನ ಕಡೆಗ್ಹಾಕುವರ್ಯಾರೈ 2 ತಿಂಗಳಚೂಡ ತ್ರಿಗಂಗಳ ಶೋಭಿತ ಅಂಗಜ ರಿಪು ಭಸಿತಾಂಗನೆ ಲಿಂಗಾ 3 ನಾಕರಮುಗಿಯುವೆನು ನಾಕಪನುತ ರ ತ್ನಾಕರ ಸುತೆವರನಾ ಕರತಾರೋ 4 ಕಂದನು ಇವನೆಂತೆಂದು ಎನ್ನ ನೀ ಮುಂದಕೆ ಕರೆಯೈ ನಂದಿಶ್ಯಂದನಾ 5 ಅರ್ಧಂಗನ ವಪುಸ್ವರ್ಧುನಿಧರಾ ಅಘ ಮರ್ದನ ಕಾಯೋ ಕಪರ್ದಿಯೆ ನಿರುತಾ 6 ಪತಿ ಮಹರುದ್ರನೆ ನಮಿಸುವೆ ಕ್ಷುದ್ರ ಮನಸಿನ ಉಪದ್ರವ ಬಿಡಿಸಿ 7 ದುರ್ಜನರರಿ ಖತಿವರ್ಜಿತ ಪಾಲಿಸೋ ನಿರ್ಜರನುತನ ಗುರು ಅರ್ಜುನ ವರದಾ 8 ನೀನೊಲಿಸಿದ ಸಿರಿಗೋವಿಂದವಿಠಲನ ಪಾವನ ಮೂರುತಿ ಕೋವಿದರೊಡೆಯ 9
--------------
ಅಸ್ಕಿಹಾಳ ಗೋವಿಂದ