ಒಟ್ಟು 5 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಾಢದಿಂ ಹರಿಯೇ ಪ ಹರಿಸದನಕ್ಕೆ ಹೋಗದ ತಪ್ಪು ಅಗ್ರೋದಕ ತಾರದೇ ಬಿಟ್ಟ ತಪ್ಪು ಸದಮಲಸುಜ್ಞಾನದಿ ಹರಿ ಕೀರ್ತನೆ ಕೇಳದೆ ಬಿಟ್ಟೆನ್ನ ತಪ್ಪು 1 ಸ್ನಾನ ಜಪವನು ಬಿಟ್ಟು ಕುಪಿತನಾಗಿ ಕಪಿಯಂತೆ ತಿರುಗಿದ ತಪ್ಪು ಅಪರಿಮಿತ ದ್ರವ್ಯ ಅಪಹರಿಸಿ ಕೆಟ್ಟ ಅಪಕೀರ್ತಿ ಹೊತ್ತೆನ್ನ ತಪ್ಪು ಅನುದಿನ ಸ್ನಾನ ಸಂಧ್ಯಾದಿಗಳನು ಬಿಟ್ಟ ತಪ್ಪು 2 ಮನಿ ಮನಿ ತಿರುಗಿದ ತಪ್ಪು ತನು ಸುಖಕಾಗಿ ವನಿತೇರ ರಮಿಸಿನಾ ಘನ ಪಾಪ ಮಾಡಿದ ತಪ್ಪು ಅನುದಿನದಲಿ ಹನುಮೇಶ ವಿಠಲನ ನೆನೆಯದೆ ಬಿಟ್ಟ ತಪ್ಪು 3
--------------
ಹನುಮೇಶವಿಠಲ
ತಪ್ಪ ಪಾಲಿಸಿಕೊಳ್ಳೊ ಜೀಯಾ ತಿಮ್ಮಪ್ಪ ವೆಂಕಟಗಿರಿರಾಯ ಪ. ಬಪ್ಪ ತನ್ನಯ ಭಕ್ತ ಜನರ ಬವಣೆಗಳ ನೊಪ್ಪನೆಂಬ ಬಿರುದಿಪ್ಪ ಭಾಸುರಕಾಯ ಅ.ಪ. ಅರವಿಂದ ಸಖನುದಯಿಸಲು ಅಜ ಗರನಂತೆ ಬೀಳುವ ತಪ್ಪು ಗುರು ಹಿರಿಯರ ಜರಿವಂಥ ತಪ್ಪು ನಿನ್ನ ಸ್ಮರಣೆಯ ಮಾಡದ ತಪ್ಪು ನಿತ್ಯ ಕರ್ಮಗಳ ಬಿಡುವ ತಪ್ಪು ಸ್ಥಿರ ಚಿತ್ತದಲಿ ನಿನ್ನ ಚರಣಾರಾಧಿಸದಂಥ 1 ಸಂಧ್ಯಾ ಕೃತ್ಯಗಳ ಕಾಲದಲಿ ಪರ ನಿಂದೆಯ ಮಾಡುವ ತಪ್ಪು ದಿವ್ಯ ಶ್ರೀ ಗಂಧ ಶ್ರೀ ತುಳಸಿ ಪುಷ್ಪಗಳ ತಾನೆ ತಂದಿರಿಸದ ಮಹಾ ತಪ್ಪು ಮಿಂದು ಮಡಿಯೊಳಿದ್ದು ಮರುಳನಾಗಿ ನಿಜ ಮಂದಗಮನೆಯಳ ಮಾತನಾಲಿಸುವಂಥ 2 ಮನ ವಚನಾದಿಗಳಿಂದ ಪರ ವನಿತೇರ ಸ್ಮರಿಸುವ ತಪ್ಪು ಪುಣ್ಯ ದಿನಗಳ ತ್ಯಜಿಸುವ ತಪ್ಪು ಪರ ಧನಾಭಿಲಾಶಿಯ ತಪ್ಪು ಕನಸಿಲಾದರು ನಿನ್ನ ನೆನೆಯದೆ ಸತಿಸುತ ತನುವೆನ್ನದೆಂಬ ಚಿಂತನೆಯಿಂದ ಬಳಲುವ 3 ನೇಮ ವ್ರತಗಳೆಲ್ಲ ಮರತು ಸೌಖ್ಯ ಕಾಮುಕನಾಗಿಹ ತಪ್ಪು ಬಹು ಪಾಮರವೃತ್ತಿಯ ತಪ್ಪು ನಿನ್ನ ದಯ ಶೋಭಿಸದಂಥ ತಪ್ಪು ಆ ಮಹಾ ಮಂತ್ರಗಳ ಜಪಿಸದ ತಪ್ಪು ಕಾಮಿನಿಯರ ಮೋಹಕ್ಕೊಳಗಾಗಿ ಬಳಲುವ 4 ನರಗುರಿಯಾದೆನ್ನ ತಪ್ಪ ನೋಡೆ ಹುರುಳು ಗಾಣುವುದುಂಟೆನಪ್ಪ ಸರ್ವ ಸ್ಥಿರ ಚರಾದಿಗಳೊಳಗಿಪ್ಪ ಲಕ್ಷ್ಮೀ ವರನಿತ್ಯ ಸತ್ಯ ಸಂಕಲ್ಪ ಪರಮ ಪಾವನ ಶ್ರೀಮದುರಗೇಂದ್ರ ಗಿರಿವಾಸ ಕರುಣದಿಂದೆನ್ನನುದ್ಧರಿಸಿ ರಕ್ಷಿಸು ಬೇಗ 5
--------------
ತುಪಾಕಿ ವೆಂಕಟರಮಣಾಚಾರ್ಯ
ಸಕಲವೆಲ್ಲವು ಹರಿಸೇವೆ ಎನ್ನಿ ಯಕುತಿವಂತರು ಹರಿಭಕುತಿ ಯೆನ್ನಿ ಧ್ರುವ ಹುಟ್ಟಿ ಬಂದಿಹ್ಯದೆ ವಿಠ್ಠಲನ ಸುಸೇವೆಗೆನ್ನಿ ಸೃಷ್ಟಿಯೊಳಿಹ್ಯದೆ ಶ್ರೀ ವಿಷ್ಣು ಸಹವಾಸವೆನ್ನಿ 1 ಬದುಕಿ ಬಾಳುದೇ ಇದು ಶ್ರೀಧರ ಉದ್ದೇಶವೆನ್ನಿ ಸಾಧನ ಸಂಪತ್ತು ಶ್ರೀ ಮಾಧವನದು ಎನ್ನಿ 2 ಉಂಬುಂತಿಂಬುದೆಲ್ಲ ಅಂಬುಜಾಕ್ಷನ ನೈವೇದ್ಯವೆನ್ನಿ ಕೊಂಬುಕೊಡುವ ಹಂಬಲ ಶ್ರೀ ಹರಿಯದೆನ್ನಿ 3 ಇಡುವ ತೊಡುವದೆಲ್ಲ ಪೊಡವಿಧರನಾಭರಣವೆನ್ನಿ ಉಡುವ ಮುಡಿವದೆಲ್ಲ ಹರಿಯ ಸಡಗರವೆನ್ನಿ 4 ನುಡಿವ ನುಡಿಗಳೇ ಹರಿಬಿಡದೆ ಕೊಂಡಾಡುದೆನ್ನಿ ಬಡುವ ಹರುಷವೆಲ್ಲ ವಸ್ತುದೇ ಎನ್ನಿ 5 ನಡೆವ ನಡಿಗೆಯಿಲ್ಲ ಹರಿಯ ಪ್ರದಕ್ಷಿಣಿ ಎನ್ನಿ ಎಡವಿ ಬೀಳುದು ಹರಿನಮವೆನ್ನಿ 6 ಏಳುವ ಕೂಡುವದೆಲ್ಲ ಹರಿಯ ಊಳಿಗವೆನ್ನಿ ಹೇಳಿ ಕೇಳುದೆಲ್ಲ ಹರಿಪುರಾಣವೆನ್ನಿ 7 ನೋಡುವ ನೋಟಗಳೆಲ್ಲ ಹರಿ ಸುಲಕ್ಷಣವೆನ್ನಿ ಮಾಡುವ ಮಾಟಗಳೆಲ್ಲ ಹರಿಯದೆನ್ನಿ 8 ಮಲಗಿ ನಿದ್ರೆಗೈವದೇ ಹರಿಯ ಕಾಲಿಗೆರಗುದೆನ್ನಿ ಬಲಕ ಎಡಕ ಹೊರಳುದೇ ಲೋಟಾಂಗಣ(?) ವೆನ್ನಿ 9 ವನಿತೇರ ಸಂಗವೇ ತಾ ಹರಿಯ ಲೀಲೆಯು ಎನ್ನಿ ತನುಮನವೆಲ್ಲಾ ಹರಿಸ್ಥಾನವೆ ಎನ್ನಿ 10 ಸತಿಸುತ ಮಿತ್ರರೆಲ್ಲ ಹರಿಸೇವೆ ದೂತರೆನ್ನಿ ಮತ್ತೆ ಬಂಧುಬಳಗೆಲ್ಲ ಹರಿಯದೆನ್ನಿ11 ಸುಖದು:ಖವೆಂಬುದೇ ಶ್ರೀಹರಿಯ ಸಂಕಲ್ಪವೆನ್ನಿ ನಕ್ಕು ನುಡುವುದೆಲ್ಲ ಹರಿ ಆಖರವೆನ್ನಿ 12 ಹೆಣ್ಣು ಹೊನ್ನಾರ್ಜಿತವೆಲ್ಲ ಹರಿಯ ಕಾಣಿಕೆ ಎನ್ನಿ ನಾನೀನೆಂಬುದೆಲ್ಲ ಹರಿಚೇತನವೆನ್ನಿ 13 ಸ್ವಾರ್ಥ ಹಿಡಿವದೆಲ್ಲ ಪಾರ್ಥನ ಸ್ವಾಮಿಗೆ ಎನ್ನಿ ಅರ್ತು ಮರ್ತು ನಡೆವ ಹರಿಕರ್ತೃತ್ವವೆನ್ನಿ 14 ಅಂತ್ರಬಾಹ್ಯವೆಲ್ಲ ಹರಿಗುರು ಮಾತೃಪಿತೃವೆನ್ನಿ ಗುರ್ತುವಾದದ್ದೆಲ್ಲ ತೀರ್ಥಕ್ಷೇತ್ರವೆನ್ನಿ 15 ಲಾಭಾಲಾಭವೆಲ್ಲ ಹರಿಪಾದಕರ್ಪಿತವೆನ್ನಿ ಶುಭಾ ಶುಭವೆಲ್ಲ ಹರಿಶೋಭೆಯು ಎನ್ನಿ 16 ಕನಸು ಮನಸುಗಳೆಲ್ಲ ಹರಿಯ ನೆನೆವ ಸೇವೆನ್ನಿ ಧೇನಿಸಿ ಬಯಸುದೇ ಹರಿಧ್ಯಾನವೆನ್ನಿ 17 ನಿತ್ಯಕರ್ಮವೆಲ್ಲ ಹರಿಪಾದಕ ಸಮರ್ಪಣವೆನ್ನಿ ಸತ್ಯಾಸತ್ಯವೆಲ್ಲ ಹರಿ ಅಗತ್ಯವೆನ್ನಿ 18 ಹೆಜ್ಜೆಗೊಮ್ಮೆ ಬೆಜ್ಜರ್ಹಿಡಿದು ರಾಜೀವನಯನನೆನ್ನಿ ಸಜ್ಜನರೊಡೆಯ ಗಜವರದ ಎನ್ನಿ 19 ಸೋಹ್ಯ ಸೂತ್ರವೆಲ್ಲ ಹರಿಯ ಮಹಾಮಹಿಮೆ ಎನ್ನಿ ಗುಹ್ಯಗೂಢವೆಲ್ಲ ಹರಿಯಗುರುತ ಎನ್ನಿ 20 ಇಹಪವೆಲ್ಲ ಹರಿಸೇವೆಗನುಕೂಲ ವೆನ್ನಿ ಸೋಹ್ಯ ಮಾಡುದೆಲ್ಲ ಹರಿಯ ದಯವೆನ್ನಿ 21 ಸಕಲ ಧರ್ಮಗಳೆಲ್ಲ ಹರಿಯ ಶಿಖಾಮಣಿಯೆನ್ನಿ ಪ್ರಕಟವಾಗಿ ದೋರುದೇ ಪ್ರತ್ಯಕ್ಷವೆನ್ನಿ 22 ನೇಮನಿತ್ಯ ಇದೇ ಮಹಿಪತಿಯ ಸ್ವಾಮಿಯದೆನ್ನಿ ಪ್ರೇಮದಿಂದ ಒಪ್ಪಿಸಿಕೊಂಬ ದಯಾಳುವೆನ್ನಿ 23
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮನುಜ ವಿಶ್ವಾಸ ಬೇಡ ವನಿತೇರೊಳ್ಮನುಜ ವಿಶ್ವಾಸ ಬೇಡ ತಿಳಿದು ಪ.ನಗೆಮೊಗದಬಲೇರ ಬೆಗಡು ಸ್ನೇಹದಕಿಂತಹೆಗಲ ಶೂಲವೆ ಸುಖವುಸುಗುಣವಿಲ್ಲದ ನರ್ಕಸೌಖ್ಯ ಬೇಕಾದರೆವಿಗಡೆಯರ್ಸಖ್ಯವೆ ಸಾಕು ತಿಳಿದು 1ಮಹಪ್ರೇಕ್ಷರಾದರ ಅಹಿತಕಾರಿಣಿಮಾಯೆಸಹಜ ತಾಮಸರೂಪಿಯಐಹಿಕಾಮುಷ್ಮಿಕದ ಬಹು ಪುಣ್ಯ ಕೆಡಿಸುವಕುಹಕಕೃತ್ರಿಮಶೀಲೆಯ ತಿಳಿದು2ಗುರುಹಿರಿಯರ ಭಕ್ತ್ಯಾಚರಣೆಗೆ ಪ್ರತಿಕೂಲೆತ್ವರಿತ ಕಾಮುಕಿ ಮೋಹಿಯಧರೆಯೊಳಭಿಜÕರ ಮರುಳು ಮಾಡುವ ಬುದ್ಧಿಭರಿತೆ ನಿಷ್ಠುರೆ ನೀಚೆಯ ತಿಳಿದು 3ಎನಿತಿಲ್ಲ ಪತಿವ್ರತೆ ವನಿತೇರವರೆ ನಾಕಾವನಿಯ ಪಾವನ ಮಾಳ್ಪರುಅನುದಿನವರ ನಾಮ ನೆನವಿಗಿರಲಿ ಮಿಕ್ಕಬಿನುಗುನಾರೇರ ನೆಚ್ಚದೆ ತಿಳಿದು4ಪ್ರಸನ್ವೆಂಕಟೇಶಪಾದಬಿಸಜಾರ್ಚನಾನುಕೂಲೆಯಾದಸಿಯಳೆ ಶುಭಗುಣಳುಹುಸಿಢೌಳಿಕಾರ್ತಿ ದುವ್ರ್ಯಸನಿಯನಾಳ್ವಮಾನಿಸಗೆ ಸುಖವೆ ಸ್ವಪ್ನವು ತಿಳಿದು 5
--------------
ಪ್ರಸನ್ನವೆಂಕಟದಾಸರು