ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂಥಾ ಮಹಿಮನಿವನೆ ಗೋಪಾಲಕೃಷ್ಣ ಎಂಥ ಮಹಿಮನಿವನೆ ಪ. ಎಂಥಾ ಮಹಿಮನಿವನಂತ ಕಂಡವರಿಲ್ಲ ಕಂತು ಜನಕ ಸರ್ವರಂತರಂಗದೊಳಿಪ್ಪ ಅ.ಪ. ಕರಚರಣಗಳಿಲ್ಲದೆ ಇದ್ದರು | ಮುದುರಿ ಘುರುಘುರುಗುಟ್ಟುತಿಹುದೆ ವರಕಂಬೋದ್ಭವ ವಟು ಪರಿಶು | ಧರಿಸಿರುವನ ಚರಿಸಿ ಮಾವನ ಕೊಂದ ನಿರ್ವಾಣ ಹಯವೇರಿ ಶರಧಿಯೊಳಾಡಿ ಗಿರಿಯಡಿ ಓಡಿ ಧರೆಯನು ತೋಡಿ ಕರಳೀಡ್ಯಾಡಿ ಕರವ ನೀಡಿ ಭಾರ್ಗವ ದಶರಥ ಸುತ ಅಂಬರ ತೊರೆದ ರಾವುತ 1 ಮಂದರ | ಬೆಂಡಂತೆ ಧರಿಸಿ ವನಿತೆಯ ತಂದನೀ ಧೀರ ಘನ‌ಘರ್ಜನೆಯು ಗಂಗಾಜನಕ | ಜಮದಗ್ನಿಸುತ ವನಚಾರಿ ತುರುಪಾಲ ವನಿತೆರೊಂಚಕ ಕಲ್ಕಿ ಜನಿಸಿ ಜಲದಿ ಬೆನ್ನಲಿ ಗಿರಿಕೋರೆ ಘನ ಹೊಸಲಾಸನ ತಿರಿದನುಜನ ತರಿದ ಮಾತೆ ಕಪಿವೆರಸಿ ವೃಂದಾವನ ಚರಿಸಿ ದಿಗಂಬರ ಹರಿ ಏರಿದನೆ 2 ಸುತನಿಗಾಗಮವಿತ್ತನೆ | ಕ್ಷಿತಿಧರಧಾರಿ ಸುತನ ಮೂಗಿನೊಳ್ ಬಂದನೆ ಸುತವಾಕ್ಯ ಸತ್ಯವೆನಿಸಿ ಅತಿ ಕುಬ್ಜ ಕ್ಷಿತಿಯನಿತ್ತು ವ್ರತಧಾರಿ ವಸನ ಚೋರ ವ್ರತಭಂಗ ಏರಿ ತುರಂಗ ಸತಿಯನೆ ಪೊರೆದ ಸತಿಯಂತಾದ ಸತಿಯಳ ಸಂಗ ಸತಿಗರಿದಂಗ ಸತಿಯ ಬೇಡಿ ನೀಡಿ ಸತಿಯ ಕೂಡಿ ಜಾರ ಸತಿ ಹೆಗಲೇರಿದ 3 ವಾಸ ಜಲದಿ ಮೈ ಚಿಪ್ಪು | ಯಜ್ಞ ಸ್ವರೂಪ ಮಾನವ ಮೃಗರೂಪು ಆಸೆಬಡಕ ಮಾತೆ ದ್ವೇಷ ವನದಿ ವಾಸ ಪೋಷ ಪಾಂಡವ ಜಿನ ಮೋಸ ವಾಜಿ ಮೇಲ್ವಾಸ ನಾಸಿಕ ಶೃಂಗ ನಗಪೋತ್ತಂಗÀ ಮಾನವ ಸಿಂಗ ನೃಪರ ದ್ವೇಷ ಪೋಷಿ ಯಜ್ಞವೃಂದ ವಾಸಿ ಘಾಸಿವ್ರತ ಕಲಿಮುಖ ದ್ವೇಷಿ 4 ಅಮೃತ ಭೂಸತಿಯ ಪೊರೆದು ಪಾಪಿ ಕರುಳ್ಬಗೆದ ಜಲಪಿತ ಭೂಪರ ಕಾಡಿ ರಘುಭೂಪ ಸೋದರತಾಪ ಗೋಪ್ಯಕಲ್ಯಂತಕಾಲ ಗೋಪಾಲಕೃಷ್ಣವಿಠ್ಠಲ ಆಪಜವಾಸ ಆ ಪೃಥ್ವೀಶ ಆ ಪುತ್ರಪೋಷ ಆ ಪದ ಸರಿತ ಕೋಪಿ ಲಂಕೆ ಪುರತಾಪಿ ಗೋಪಿಕಾ ವ್ಯಾಪಿ ಮಾನಹೀನ ಘೋಟಕವಹನ 5
--------------
ಅಂಬಾಬಾಯಿ
ಏನು ಹಾವಳಿ ಮಾಡುತಿಹನಮ್ಮ ಗೋಪಮ್ಮ ಕೇಳೆಏನು ಹಾವಳಿ ಮಾಡುತಿಹನಮ್ಮ ಪ ಏನು ಹಾವಳಿ ಮಾಡುತಿಹಮನೆ ಓಣಿಯಲಿ ಕ್ರೀಡಿಸುವ ಮಕ್ಕಳನುತಾನು ಅಳಿಸುವ ಹಿಡಿಯ ಪೋಗಲುವೇಣುನೂದುತ ಮೋಹಿಸುವನು ಅ.ಪ. ಮನಿಯೊಳು ತಾ ಪೊಕ್ಕು ನೋಡುವನೆ ಪಾಲ್ಮೊಸರ ಕೊಡಗಳಮನಸಿನಂದದಿ ತಿಂದು ಒಡೆಯುವನೆತಿನಿಸಿ ಬೆಕ್ಕಿಗೆ ಕ್ಷಣವು ತಡೆಯದೆ ವನಿತೆರೆಲ್ಲರು ಹಿಡಿಯ ಕೂಸಿನತನುವು ಧರಿಸಿ ನಿಂತ ಕಟಿಯಲಿ ಸ್ತನವ ತಿಂಬುವ ವನರುದೇಕ್ಷಣ1 ತರುಗಳಾಲಯದಲ್ಲಿ ತಾ ಬರುವಕರೆಸದಲೆ ಮುಂಚಿತ ತೊರಿಸಿ ಮೊಲೆಗಳ ಪಾಲ ತಾ ಕುಡಿದಕರಸಿಕೊಳ್ಳದೇ ಸುರಭಿ ತಿರುಗಲು ಸರಣಿಯೊಳು ತಾ ನಿಂತು ನಗುತಲಿ ತರುಣಿಯರ ಹೆರಳ್ಹಿಡಿದುಜಗ್ಗುತ ಕರದಿ ಸಿಗದಲೆ ಭರದಿ ಓಡುವ 2 ಕೂಸಿನಂದದಿ ತೊಡೆಯೊಳಾಡುವನೆ ಕ್ಷಣದೊಳಗೆ ಪತಿಗಳವೇಷಧರಿಸಿ ಮೋಸ ಮಾಡುವನೆತಾಸು ಘಳಿಗೆ ಬಿಡದೆ ನಮ್ಮ ನಿವಾಸ ಮಾಡುತ ಕಾಡುತಿಹಇಂದಿರೇಶವಚ್ಛವ ಸಾಕು ಮಾಡು ಹೇ ಶುಭಾಂಗಿ3
--------------
ಇಂದಿರೇಶರು
ಬಾಲನ ಕಂಡಿಹೆನೆ ಗೋಪಾಲನ ಕಂಡಿಹೆನೆ ಪ ಬಾಲನ ಕಂಡಿಹೆ ಲೀಲೆಯ ಮಾಡುತ ಅಂಬೆ-ಗಾಲಿಕ್ಕುತ ಗೋಕುಲಾಲಯದೊಳಗಿಹಅ.ಪ. ಮುರಳಿ ಮುಖದೊಳಿದ್ದು ಊದುತ ವೃಜದಿಸರಸಿ ಗೋಪಿವನಿತೆರ ಮೋಹಿಪ 1 ಇಂದು ವಕ್ತ್ರನ 2 ಕಟಿ ಮಂದ-ಹಾಸ ಮಾಡುತಲಿದ್ದ ಇಂದಿರೇಶನ ಹೇ ಸಖಿ 3
--------------
ಇಂದಿರೇಶರು
ಭಾರತೀ ರಮಣ ಸುರವಿನುತ ಚರಣ ಶಾರದಾ ಪುರ ಶರಣ ಪ ನೂರು ಯೋಜನಮಿರ್ದವಾರಿಧಿ ಲಂಘಿಸಿ ಬೇಗ ಧಾರುಣಿ ಸುತೆಯ ಕಂಡು ದೂರ ನಮಿಸಿ ಸಾರಿ ಮುದ್ರಿಕೆಯ ನಿತ್ತು ತೋರಿರಾಕ್ಷಸಗೆ ಭಯ ಶ್ರೀರಾಮಗೆ ಬಂದು ಕ್ಷೇಮ ವಾರುತಿಯ ಪೇಳಿದಂಥ 1 ಇಂದು ಕುಲದಲ್ಲಿ ಪಾಂಡುನಂದನನೆನಿಸಿ ಜರಾ ಸಂಧ ಮುಖರನು ಗದೆಯಿಂದವರಸಿ ಅಂದುರಣದಲ್ಲಿ ಕರುವೃಂದವ ಮಥಿಸಿ ಆ ನಂದ ಕಂದನೊಲಿಮೆಯ ಛಂದದಿ ಪಡೆದು ಗುರು 2 ಮೇದಿನಿ ಮೋದ ತೀರ್ಥರೆಂದೆನಿಸಿ ವಾದದಿಂದಲಿ ವಾದಿ ಮತ್ತ ವಾರಣ ಮೃಗಾಧಿಪರೆನಿಸಿ ಪಂಚ ಬೇಧ ಬೋಧಿಸುವ ಶಾಸ್ತ್ರ ಸಾದರದಿ ವಿರಚಿಸಿದ 3 ಕಾಲಕಾಲದಲಿ ದ್ವಿಜರಾಲಯದಿ ಬಂದು ನಿನ್ನ ಬಾಲವನಿತೆರ ಸಹ ಶೇವಿಸುವರು ಪಾಲಿಕಿ ಉತ್ಸವದಲ್ಲಿ ಶೇರುವದು ಪೌರಜನ ಪಾಲಿಸಬೇಕಯ್ಯ ಪಾಂಚಾಲಿರಮಣನೆ ನಮೊ 4 ಭವ ಕೂ ಪಾರ ನಾವಿಕನೆ ಎಂದು ಪ್ರಾರ್ಥಿಸುತಲಿ ಸೇರಿದ ಸಜ್ಜನರಘ ದೂರಮಾಡಿ ಪೊರೆವಂಥಕಾರ್ಪರ ನಿಲಯ ಸಿರಿನಾರಸಿಂಹ ನೊಲಿಸಿದ 5
--------------
ಕಾರ್ಪರ ನರಹರಿದಾಸರು
ಸಾರವಲ್ಲ ಸಂಸಾರವಿದು ಪ ತನುವಿನ ಪಾಶವು ವನಿತೆರ ಪಾಶವು | ಉಣಲುಡುಪಾಶಾ ಹಣಗಳ ಪಾಶವು | ಮನೆ ಪಶು ಪಾಶಾ ಇನಿತಿಹ ಪಾಶದ | ಮನುಜಗ ಸುಖವೆ 1 ಭ್ರಾಂತಿಯ ಮಂದಿರ ಚಿಂತೆಯ ಮಡುವು | ಪಂಥವು ನರಕದ ಕಂತುವಿನಾಶ್ರಯ | ಖಂತಿಯ ನೆಲೆಭವ ಜಂತುರ ನೋಡಲು | ಸಿಂತರ ಬೀಳುವಂತಿನಾ ಜನುಮಾ 2 ತಾಪತ್ರಯ ನಾನಾ ಪರಿಯಿಂದಲಿ | ವ್ಯಾಪಿಸಿಕೊಂಡಿಹ ದೀಪರಿ ಭವಣಿ | ಆ ಪರಗತಿ ನಿನಗಾಪೇಕ್ಷಾದರ | ಪಡಿ ತಂದೆ ಮಹಿಪತಿ ಬೋಧಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮಂದರಧರ ದೇವ ಮೊರೆಹೊಕ್ಕವರ ಕಾಯ್ವಪಮಂದಾಕಿನಿಯ ಪಿತ ಮಾವ ಕಂಸನ ಹೃತ |ಸುಂದರ ಶಶಿವದನ ರಂಗಯ್ಯ ಅ.ಪಕಣ್ಣು ನೋಟದಿ ಚೆಲುವ, ಕಮಠರೂಪದಿ ನಲಿವ |ಹೆಣ್ಣ ಮೊರೆಯಕೇಳಿ ಹಿರಣ್ಯನುದರ ಸೀಳಿ ||ಮಣ್ಣು ಬೇಡಿ ಬೆಳೆದೆ - ಕೃಷ್ಣಯ್ಯ ||ಹೊನ್ನ ಕೊಡಲಿಯ ಪಿಡಿದು ಹತ್ತು ಗ್ರೀವನ ಕಡಿದು |ಚಿಣ್ಣರ ಒಡಗೂಡಿ ಚಪಲೆಯರ ವ್ರತಗೆಡಿಸಿ |ಚೆನ್ನರಾವುತನಾದೆಯೊ - ರಂಗಯ್ಯ 1ಗೋಚರನಂದದಲಿ - ಗಿರಿಯ ತಾಳಿದೆ ಬೆನ್ನಿನಲಿ |ಭೂಚೋರನ ಕೊಂದು ಬಾಲ ಕರೆಯಲು ಬಂದು |ಯಾಚಕ ನೀನಾದೆ - ರಂಗಯ್ಯ ||ಸೂಚತನ ಸುತಗೊಲಿದು ಶರಧಿಯಕಟ್ಟಿ ಮೆರೆದೆ |ಕೀಚಕಹತಪೋಷ ಖೇಚರಪುರವಾಸ |ನೀಚಜನರ ತರಿದೆ - ರಂಗಯ್ಯ 2ವನವನಲೆದು ಬಂದ - ವನಿತೆರತ್ನವ ತಂದ |ಘನಕಂಭದಿಂದ ಬಂದುಗರುವ ಮುರಿದು ಬಲಿಯ |ಜನನಿಯ ಶಿರವರಿದೆ - ರಂಗಯ್ಯ ||ಹನುಮವಂದಿತಪಾದ ಹರುಷ ಪಾಂಡುವವರದ |ಮನಸಿಜ ವೈರಿಗೊಲಿದು ಮಹಾಕಲಿಕಿಯಾದೆ |ಘನಪುರಂದರ ವಿಠಲ - ರಂಗಯ್ಯ 3
--------------
ಪುರಂದರದಾಸರು