ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಧರ್ಮೇಂದ್ರಿಯಕ್ಕೆ ದಟ್ಟಡಿಯನಿಡಲೊಲ್ಲೆ ದುಷ್ಕರ್ಮೇಂದ್ರಿಯಕ್ಕೆ ಕಾಲ್ಗೆರಗುತ್ತಲಿಹೆ ಮರುಳೆ ಪ ಪುಸ್ತಕವ ಬಿಚ್ಚಿ ಪೌರಾಣ ಶಾಸ್ತ್ರಂಗಳಿಂವಿಸ್ತರಿಸಿ ಹರಿಯ ಕಲ್ಯಾಣಗುಣ ಕಥೆಯನ್ನುಸ್ವಸ್ಥದಿಂ ಕುಳ್ಳಿರ್ದು ಕೇಳೆಂಬ ಠಾವಿನಲಿಮಸ್ತಕಕೆ ವ್ಯಥೆಯೆಂದು ಮನೆಯತ್ತ ನೀ ನಡೆವೆಹಸ್ತದಿಂ ಹಣ ಭತ್ತ ಹಚ್ಚಡಂಗಳ ಕೊಟ್ಟುಕುಸ್ತರಿಸಿ ಬಿನಗು ಚಾರಿತ್ರ್ಯವಂ ಲಾಲಿಸುತದುಸ್ತರದ ಲೆತ್ತ ಚದುರಂಗ ಪಗಡೆಯನು ಉದಯಾಸ್ತದವರೆಗಾಡುತ ಮೇಲೇಳದಿಹೆ ಮರುಳೆ 1 ಸುರಭಿ ಸೇವಂತಿ ಮಲ್ಲಿಗೆ ಮೊಲ್ಲೆ ಬಕುಳ ಪಾದರಿ ಚಂಪಕಾ ಕಂಜ ಕಣಿಗಲು ಶ್ರೀ ತುಳಸಿಪರಿಮಳದ ಪಚ್ಚೆತೆನೆ ಹರಿಪಾದಕರ್ಪಿಸುತೆನಿರುಮಾಲ್ಯ ಪರಿಮಳವನಾಘ್ರಾಣಿಸೆನೆ ಒಲ್ಲೆಬಿರಿದ ಕೆಂಜಾಜಿ ಪುಷ್ಪಂಗಳಂ ವನಿತೆಯರಸಿರಿ ಮುಡಿಗೆ ಮುಡಿಸಿ ಕುಂತಳ ಸೌರಭವ ಕಂಡುಹರುಷದಿಂ ರೋಮ ಪುಳಕಿತನಾಗುತಡಿಗಡಿಗೆಪರಮ ಸಂತೋಷಮಂ ನೀ ಪಡೆಯುತಿಹೆ ಮರುಳೆ 2 ಭಾಗವತ ನೃತ್ಯವಂ ನೋಡುತತಿಶಯದ ಹರಿದಿನವ್ರತದಲ್ಲಿ ಜಾಗರವ ಮಾಡದಲೆ ನಿದ್ರೆಗೈವೆಕೃತಕ ಪಣ್ಯಾಂಗನೆಯ ಚತುರ ನೃತ್ಯಕೆ ಮನೋ-ರಥ ಸಿದ್ಧಗೊಳಿಸಿ ಈಕ್ಷಿಪೆನೆಂದು ಕುಜನ ಸಂ-ಮತವೆರಸಿ ಬೆಳತನಕ ಕುಳ್ಳಿರುತ ನಿದ್ರಾ ವ-ರ್ಜಿತನಾಗಿ ಪರಮ ಸಂತಸ ಪಡೆಯುತಿಹೆ ಮರುಳೆ 3 ಗಂಧ ಶಾಲ್ಯಾನ್ನ ನವಘೃತ ತೋಯ ಪಳಿದ್ಯ ನಲ-ವಿಂದ ಪರಮಾನ್ನ ಮಹಶಾಕ ಸೀಕರಣೆಯನುಒಂದೆರಡು ಪರುಠವಿಸಿ ದ್ವಾದಶಿ ದಿನದಂದು ಮು-ಕುಂದಾರ್ಪಣವ ಮಾಡಿ ಮನೆಯೊಳಗೆ ಉಣ್ಣದಿಹೆಬಂದಾವನಾದೊಡಂ ಕರೆಯೆ ದೇಹದ ಪುಣ್ಯವೆಂದವರ ಮನೆಗಳಿಗೆ ಹೋಗಿ ನೀ ಕುಳ್ಳಿರ್ದುಚಂದದಿಂ ಬಣ್ಣಿಸುತ ಮಿಂಚುಕೂಳುಗಳನ್ನುತಿಂದೊಡಲ ಪೊರೆದು ಕಾಲವ ಕಳೆಯುತಿಹೆ ಮರುಳೆ4 ಸಿರಿ ವೈಕುಂಠ ಪದವಿಯನು ಪಡೆ ಮರುಳೆ 5
--------------
ಕನಕದಾಸ
ಹ್ಯಾಗೆ ಕಾಂಬೆನು ಹಂಸಯೋಗಗಮ್ಯನೆ ನಿನ್ನ ವಾಗೀಶಪಿತ ದಯವಾಗೋ ಮೋಹನ ಪ. ಮನವು ನಿನ್ನಯ ಸೇವೆಗನುವಾಗಿ ನಿಲದು ಸ- ಜ್ಜನ ಸಂಗ ಸಲ್ಲಾಪವನು ಮಾಡಗೊಡದು ಘನಮೋಹಕೊಳಗಾದ ತನುವ ಪಿಡಿವುದು ಶ್ರೀ- ವನಿತೆಯರಸ ನಿನ್ನ ನೆನವೆಂತು ಬಹುದೊ 1 ಹಂಚಿ ದುರ್ವಿಷಯಕ್ಕೆ ವಂಚನೆಗೊಳಿಸಿ ಪ್ರಪಂಚದೋಳಿರಿಸಿ ಪಂಚಬಾಣನ ಶುಕಚುಂಚುವೇದದಿ ತ್ವಂಚ ಹಂಚಗೊಳಿಸಿ ಮೋಹ ಮಿಂಚಿಕೊಂಡಿಹುದೊ 2 ದೀರ್ಘಾದಿ ಸಹಿತಾದಿ ವರ್ಗಗಳನು ಗೆಲುವ ಮಾರ್ಗ ಕಾಣದೆ ದುಸ್ಸಂಸರ್ಗದಿ ಸಿಲುಕಿ ಭರ್ಗ ವಂದ್ಯನೆ ಗುಣಸರ್ಗದ ಬಲೆಯಿಂದ ನಿರ್ಗಮಗೊಂಡಪವರ್ಗವೆಂತಹುದೊ 3 ದಿನದಿನದೊಳಗಾಹತನುವ ನೋಡಲು ಮುಂದಿ ನನುಭವವನು ಕಾಂಬದನು ನಾನೇನರಿಯೆ ಜನರ ರಕ್ಷಾದಿಕರ್ತನೆ ನೀನೆ ಬಲ್ಲಿ ಮುಂ- ದಿನ ಕಾರ್ಯವಹದೆಂತೊ ವನಜಲೋಚನನೆ 4 ಸತಿ ಸುತಾದಿಗಳೆಲ್ಲ ಹಿತರೆಂದು ಗ್ರಹಿಸುವ ಮತಿಹೀನ ಜನಕೆ ದುರ್ಗತಿಯು ತಪ್ಪುವದೆ ಅತುಳ ಮಹಿಮ ಭಕ್ತಹಿತನಾದ ವೆಂಕಟ ಪತಿ ನೀನೆ ಎನಗೆ ಸದ್ಗತಿ ತೋರೊ ಹರಿಯೆ 5
--------------
ತುಪಾಕಿ ವೆಂಕಟರಮಣಾಚಾರ್ಯ
ಭಗವಂತನ ಸಂಕೀರ್ತನೆ2ಅಷ್ಟರೊಳಗೆ ಕೃಷ್ಣ ಬಂದನೆಸೃಷ್ಟಿಗೊಡೆಯ ದೇವನು ಪಜಗದುದರಜಾÕನಿಗಳ ಧ್ಯಾನಕೆಗೋಚರಾಗೋಚರನಾಗುತ ಅಪಅಂದಿಗೆ ಕಾಲ್ಗೆಜ್ಜೆ ಸರಪಣಿಬಂದಿ ಕಂಕಣ ತೋಳಬಾಪುರಿಮಂದಹಾಸ ಮುಂಗುರುಳು ಮುಖದಸುಂದರಾಂಗನ ಹುಡುಕುತಿರಲು 1ತರಳರೊಡನೆ ಕೂಡಿ ಕೃಷ್ಣಮುರಳಿನಾದ ಗೇಯ್ಯುತಿರಲುಸರಸಿಜಾಕ್ಷನ ಕಾಣದೆ ತವಕಿಸಿಹರಿಯ ಹುಡÀುಕುತಿರಲೆಶೋದೆ 2ವತ್ಸಗಳ ಬಾಲಗಳನೆ ಪಿಡಿದುಸ್ವೇಚ್ಛೆಯಿಂದ ನಲಿಯುತಿರಲುಅಚ್ಚುತನೆಲ್ಲೊ ಕಾಣೆನೆನುತಕೃಷ್ಣ ಕೃಷ್ಣನೆಂದು ಕರೆಯೆ 3ಮನೆ ಮನೆಗಳ ಪೊಕ್ಕು ಪಾಲುಮೊಸರು ಬೆಣ್ಣೆ ಮೆಲುವೆನೆನುವವನಿತೆಯರಸಂತೈಸಿಕಳುಹಿತನಯನೆಲ್ಲೆಂದುಡುಕುತಿರಲು 4ಬಂದನು ಬಲರಾಮ ಭಯದಿಇಂದಿರೇಶ ಮಣ್ಣು ಮೆಲುವನೆಂದು ಪೇಳೆ ಬಾಯ ತೆಗಿಸಿಕಂಡು ವಿಶ್ವವ ವಿಸ್ಮಯಗೊಳುತಿರೆ 5ಸುರಗಂಧರ್ವರು ನೆರೆದರಂಬರದಿಪರಮಧನ್ಯಳೆಶೋದೆ ಎನುತಹರಿಯ ಗುಣಗಳನ್ನೆ ಸ್ತುತಿಸಿಹರುಷದಿಂದ ನಲಿಯುತಿರಲು 6ಕಮಲಸಂಭವ ಜನಕನನೆತ್ತಿವಿನಯದಿಂದ ಮುದ್ದಿಸುತ್ತಿರೆಕಮಲನಾಭ ವಿಠ್ಠಲನ ಸಿರದಿಕಮಲಕುಸುಮಮಳೆಗರೆದರು7ಮಂಗಳಂ ಜಯ ಮಂಗಳಂಶುಭಮಂಗಳಂ ಶ್ರೀ ಕೃಷ್ಣಗೇ
--------------
ನಿಡಗುರುಕಿ ಜೀವೂಬಾಯಿ