ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೇವ ನೀನಹುದೋ ದೇವರದೇವ ನೀನಹುದೋ ಪ ದೇವ ರಿಪುವನದಾವ ದುರಿತಾಖ್ಯನಾವ ನಮಿತರ ಕಾವ ಕರುಣಸಂಜೀವ ಜಿತಪೂರ್ಣಕಾಮ ಅ.ಪ ದೇವಕಿಯಲ್ಲವತರಿಸಿ ಗೋಕುಲವನ್ನು ಪಾವನವನ್ನು ಮಾಡಿ ಮಡುಹಿ ಮಾವನ ಮಧು- ರಾವನಿಯನುಗ್ರಸೇನಗಿತ್ತು ದೈತ್ಯಾಳಿಯ ಸವರಿ ಜೀವ ಸಖನಾಗಿ ಪಾಂಡವರಿಗೆ, ಪಾರ್ಥ ಸೇವೆಯಲಿ ಸಂದು ಕೀಲಿಸಿ ಕೌರವರನ್ನು ಭೂವರನ ಹಯಮೇಧಕೊಲಿದು ಬಂದಾ 1 ಧರ್ಮರಾಜನ ಯಜ್ಞತುರಗ ರಕ್ಷೆಗೆ ಕೃತ- ವರ್ಮಜರು ಕೂಡಿ ನಡಸಿ ನೀಲಾಂಕನ ಮರ್ಮವರಿತು ಸೋಲಿಸಿ ಹಂಸಧ್ವಜರನ್ನು ಮಾಮಳಿದಡರಿ ಕರ್ಮವಶದಿಂದ ಬಭ್ರುವಾಹನನ ಕೈಯ ದುರ್ಮರಣವಾದ ವಿಜಯ ಕರ್ಣರನು ನಿತ್ಯ ನಿರ್ಮಳಿಕನಹುದೊ 2 ಮುಂತೆ ನಡೆದರ್ಜುನಿಯ ಗೂಡಿ ತಾಮ್ರಧ್ವ ಜಂ ತುಡುಕಿ ಬರೆ ದ್ವಿಜನಾಗಿ ಶಿಖಿ ದಂತಿಪುರಕೆ ಬಂದರಸನ ಹಯಮೇಧ- ಮಂ ಪಾಲಿಸಿ ತ್ರಿಜಗವನು ಪಾಂಡವರಿ- ಗಿತ್ತೊಲಿದು ಸುರಪುರವ ಪೊರೆವ ಲಕ್ಷ್ಮೀಕಾಂತ ನೀನಹುದೋ 3
--------------
ಕವಿ ಲಕ್ಷ್ಮೀಶ
ಧನ್ಯನು ಶಚಿಪತಿ ಧನ್ಯಳು ಶಚಿಯು ಅ.ಪ ಚಂದ್ರನು ತನ್ನಯ ಸುಂದರ ಬಿಂಬದಿ ನಂದನ ವನದಲಾನಂದಪಡುತಿಹನು 1 ಮಂದಮಾರುತ ಸುಮಗಂಧವ ಬೀರುತ ಮಂದದಿಂದಲಿ ಸುಧೆ ಬಿಂದುಗಳೆಸವುದು 2 ಮಣಿಮಯ ತರುಗಳು ಎಣಿಕೆಗೆ ಬಾರವು ಕುಣಿಯುತಲಿದೆ ಎನ್ನ ಮನದಭಿಲಾಷೆಯು * 3 (ನಂದನವನವನ್ನು ಕಂಡಾಗ ಸತ್ಯಭಾಮೆಯ ಸಂತೋಷ)
--------------
ವಿದ್ಯಾಪ್ರಸನ್ನತೀರ್ಥರು
ಸೀತಾರಾಮ ಶ್ರೀರಘುರಾಮ ಕಾ ಕುತ್ಸ್ಥರಾಮ ಕರುಣಾಳು ರಾಮ ಪ ಉತ್ತಮ ಗುರುಗಳಿಗೆ ಭಕ್ತಿಯಿಂದಲೆ ಎರಗಿ ಭಕ್ತವತ್ಸಲನ ಚರಿತ್ರೆ ಪೇಳುವೆನು 1 ಆದಿಮೂರುತಿಮಹಿಮೆ ವೇದಂಗಳರಿಯದು ಎನ್ನ ಭೇದಬುದ್ಧಿಗೆ ಇದು ಬೋಧವಾಗುವುದೆ 2 ಪತಿತಪಾವನ ನಿಮ್ಮ ಸ್ತುತಿಯ ಮಾಡುವುದಕ್ಕೆ ಮತಿಯ ಪಾಲಿಸಿ ಸದ್ಗತಿಯ ಕೊಡೆನೆಗೆ 3 ಆದಿಸೃಷ್ಟಿಯಲಿ ಆದುದು ಈ ಆತ್ಮ ಬಾಧೆಯ ಪಡುತಿಹುದು ಭವರೋಗದಲಿ 4 ಜನನ ಮರಣವೆಂಬ ಜಾಡ್ಯವನು ಬಿಡಿಸಿ ನಿನ್ನ ಚರಣದೊಳಿರಿಸೆನ್ನ ಕರುಣವಾರಿಧಿಯೆ 5 ಹೃಷಿಕೇಶವ ಎನ್ನ ಹೃದಯದೊಳಗೆ ಇದ್ದು ವಿಷಯಕೆ ಎನ್ನನು ವಶವ ಮಾಡುವರೇ 6 ದೆ ಮನ್ನಿಸಿ ರಕ್ಷಿಸೊ ಪನ್ನಗಶಯನ 7 ಪಾರ್ಥಸಾರಥಿ ನಿಮ್ಮ ಪಾದವ ನಂಬಿದೆ [ಅರ್ಥಿಯಿಂ] ಪಾವನ ಮಾಡೆನ್ನ ಪರಮಪುರುಷನೆ 8 ನಿಮ್ಮ ಪಾದದ ಭಕ್ತಿ ನಿಮ್ಮ ಪಾದದ ಸ್ತುತಿ ನಿಮ್ಮ ಪೊಗಳುವ ಮತಿಗತಿಯ ಕೊಡೆನಗೆ 9 ತಂದೆತಾಯಿಯು ನೀನೇ ಬಂಧುಬಳಗವು ನೀನೆ ಆ ನಂದದಿಂದಲಿ ಕಾಯೊ ಇಂದಿರಾರಮಣ 10 ಸುರರೆಲ್ಲ ಪೋಗಿ ಮೊರೆಯಿಡಲಾಗಿ ಅರಿತನು ಭೋಗಿಶಯನ ತಾನಾಗಿ11 ವಸುಧೆಯ ಭಾರವನಿಳುಹುವೆನೆಂದು ದಶರಥನುದರದಿ ಜನಿಸಿ ತಾ ಬಂದು 12 ಪಂಕಜನೇತ್ರ ಪರಮಪವಿತ್ರ [ಸು]ಕೋಮಲಗಾತ್ರ ಕೌಸಲ್ಯಪುತ್ರ 13 ಪುತ್ರರ ನೋಡಿ ಸಂತೋಷಗೂಡಿ ಅರ್ತಿಯಿಂದಲೆ ಚೌಲ ಉಪನಯನ ಮಾಡಿ 14 ನೋಡಿ ಕೌಶಿಕನ ಚಿಂತೆಯ ಮಾಡಿ ಕೂಡಿ ಅನುಜನ ಮುನಿವರನೊಡನೆ ವೋಡಿ 15 ಕರೂಶದೇಶಕೆ ಬಂದು ತಾಟಕಿಯನು ಕೊಂದು ಮ ಹ ಸ್ತ್ರೀಯೆಂದು ಆನಂದದಿ ಗ್ರಹಿಸಿ 16 ಮಾರೀಚನ ಹಾರಿಸಿ ಕ್ರತುವನ್ನು ಪಾಲಿಸಿ ತೋರಿಸಿ ಗಂಗೆಯ ಆನಂದದಿಂ ಸ್ತುತಿಸಿ 17 ಮಾಡಿ ಶಿಲೆಯ ಪಾವನ ಮಿಥಿಲಪುರಕೆ ವೋಡಿ ನೋಡಿ ಧನುವ ಮುರಿದು ಜಾನಕಿ ಕೂಡಿ 18 ಮಾರ್ಗದಲ್ಲಾಗ ಭಾರ್ಗವನ ಆಗ್ರಹವ ಬೇಗ ಮುರಿದು ತಾ ಶೀಘ್ರದಿಂ ಬಂದ 19 ಸತಿ ಸಹಿತನಿಂದು ರಾಜ್ಯ ಗ್ರಹಿಸುವೆನೆಂದ ಮಾತೆಗಾನಂದ 20 ಮಾತೆಗೆ ವಂದಿಸಿ ಸೀತೆಯನೊಡಗೊಂಡು ಸು ಮಿತ್ರೆಜಾತನ ಸಹಿತ ರಘುನಾಥ ತಾ ಪೊರಟ 21 ಪೋಗಿ ಜನಕನಿಗಾಗಿ ವನಕೆ ತಾ ಯೋಗಿ 22 ಬೇಗ ಭರತನಿಗಾಗಿ ಪಾದುಕೆಗಳ ಅನು ರಾಗದಿಂದಿತ್ತು ಯೋಗದಿಂ ಪೋಗಿ 23 ಅತ್ರಿಮಹಾಮುನಿ ಇತ್ತ ಆಭರಣವ ವಸ್ತ್ರವ ಗ್ರಹಿಸಿದ ಪುರುಷೋತ್ತಮನು 24 ವಿರಾಧನ ಕೊಂದು ಹರುಷದಿಂ ಬಂದು ಕರುಣದಿಂದ ನಿಂದು ಋಷಿಗಳಿಗಭಯವ[ನಿತ್ತು] 25 ದನುಜೆನಾಸಿಕವರಿದು ಖರದೂಷಣರ ತರಿದು ತಾನೊಲಿದು ಸತಿಗೆ ಗುಹೆಯಲ್ಲಿ ನಲಿದು26 ಬಂದು ರಾವಣ ಜಾನಕಿಯ ಕದ್ದೊಯ್ಯಲಂದು ಕೊಂದು ಮಾರೀಚನ ಗೃಧ್ರಗೆ ಮೋಕ್ಷಾವ [ನಿತ್ತು] 27 ಕಬಂಧನ ಗೆಲಿದು ಪಂಪಾತೀರದಿ ನಲಿದು ಶಬರಿಯಿತ್ತ ಫಲವನ್ನು ಸವಿದು ಹರಿಗೆ ತಾನೊಲಿದು 28 ಕುಟ್ಟಿ ವಾಲಿಯ[ನು] ರವಿಜಗೆ ಪಟ್ಟವ ಕಟ್ಟಿ ಸೃಷ್ಟಿಜಾತೆಯನರಸಲು ಕಪಿಗಳನಟ್ಟಿ 29 [ಭರದಿವಾನರ] ಕೈಲಿ ಉಂಗುರವಿರಿಸೆ ಆ ಮಾರುತಿ ಕಪಿಗಳುವೆರಸಿ ಜಾನಕಿ[ಯ]ನರಸೆ 30 ಶರಧಿಯನ್ಹಾರಿ ಸೀತೆಯ ನೋಡಿ ಗುರುತನು ತೋರಿ ದುರುಳನೊಡನ್ಹೋರಿ ಮಣಿಯ ತಂದನಾಧಾರಿ 31 ವನವನ್ನು ಮುರಿದು ಅಕ್ಷನ ತರಿದು ಅಸ್ತ್ರಕ್ಕೆ ಅ [ವನೊ]ಲಿದು ರಾವಣನೆದುರಲ್ಲಿ ನಲಿದು 32 ಪುರವೆಲ್ಲ ಸುಟ್ಟು ವಿಭೀಷಣನ ಗುಟ್ಟು ಬಾಲ ಶರಧಿಯೊಳಿಟ್ಟು ಕಪಿಗಳ ಸೇರಿದನಷ್ಟು 33 ಭಂಗಿಸಿ ಮಧುವನವ ಭರದಿಂದ [ರಾಮನೆಡೆಗೆ] ಲಂಘಿಸಿ ಮಾತೆಯ ಕಂಡೆವೆಂದೊಂದಿಸಿ ಮಣಿಯನಿರಿಸೆ 34 [ವರರಾಮ] ತಾ ನೋಡಿ ವ್ಯಸ ಮಾಡಿ ಹರಿಯನ್ನು ಕೂಡಿ ಆಲಿಂಗನೆ ಮಾಡಿ 35 ಹರಿಗನ ಕೂಡಿ ಭರದಿಂದಲೋಡಿ ಶರಧಿಯ ನೋಡಿ ಯೋಚನೆ ಮಾಡಿ 36 ವರುಣನ ವಂದಿಸಿ ವಿಭೀಷಣನ ಮನ್ನಿಸಿ ಶರಧಿಯ ಬಂಧಿಸಿ ಅಂಗದನ ಸಂಧಿಗೆ ಕಳುಹಿಸಿ 37 ಇಂದ್ರಜಿತುವೊಡನೆ ಛಂದದಿಂದಲೆ ಕಾದಿ ಬಂದ ಸರ್ಪಾಸ್ತ್ರವ ಖಗನಿಂದ ಬಿಡಿಸಿ 38 ಹಂಗಿಸಿ ರಾವಣನಕಿರೀಟವ ಮೈಯೆಲ್ಲ ನಡುಗಿಸಿ ಭಂಗಿಸಿ ತಾ ಜಗದೊಡೆಯನೆಂದೆನಿಸಿ 39 ಕುಂಭನಿಕುಂಭ ಕುಂಭಕರ್ಣರ ಕೊಂದು ಕುಂಭಿನಿಯೊಳು ನಿಂದನಂಬುಜನಾಭ 40 ಪತಿತಪಾವನ [ನನುಜನ] ಪಿತಾಮಹಾಸ್ತ್ರದಿ ಕಟ್ಟೆ ಹಿತದಿಂದೌಷಧಿ ತಂದ ಮಾರುತನ ಕುಮಾರ 41 ಮಾಯೆ ಸೀತೆಯನರಿ[ಯದೆ] ಮೋಹಪಡು ತ ಉ ಪಾಯದಿಂದಲೆ ಬಂದ ಮಾಯಾವಿಯೆಡೆಗೆ 42 ತಮ್ಮ ಲಕ್ಷ್ಮಣ ತಾನು ಹೆಮ್ಮೆಯಿಂದಲೆ ಕಾದಿ ಒಮ್ಮೆ [ಲೆ] ಅಸ್ತ್ರಗಳ ಸುಮ್ಮಾನದಿಂ ಬಿಟ್ಟು 43 ಸತ್ಯಮೂರುತಿ ಪವಿತ್ರ ತಾನಾದರೆ ಅಸ್ತ್ರವೆ ಶತ್ರುವ ಜಯಿಸಲೆಂದನಾಗ 44 ಎಂದು ಬಾಣವಬಿಡೆ ಇಂದ್ರಜಿತುವ ಕೊಂದು ಆ ನಂದದಿಂ ಲಕ್ಷ್ಮಣನ ಹೊಂದಿತಾ ಬಾಣ 45 ವಿರೂಪಾಕ್ಷ ಯೂಪಾಕ್ಷ ಶೋಣಿತಾಕ್ಪನ ಕೊಂದು ಮ ಕರಾಕ್ಷನ ಕೊಂದ ಮಹಾನುಭಾವರಾವಣನ 46 ಮೂಲಬಲವನ್ನೆಲ್ಲ ಲೀಲೆಯಿಂದಲೆ ನಿ ರ್ಮೂಲನ ಮಾಡಿ[ದ] ಲೀಲಾವಿನೋದದಿ 47 ಬಂಧುಗಳೆಲ್ಲರು ಮರಣ ಪೋಗಲು ಕಂಡು ಬಂದ ರಾವಣನು ತಾನು ಒಂದೆಮನಸಿನಲಿ 48 ಯಾರು ಇಲ್ಲದಾಗ ಚೋರತನದಲ್ಲಿ ನಾರಿಯ ಕದ್ದೊಯ್ದ ಧೀರ ಬಾರೆಂದ [ರಾಮ] 49 ಅಸ್ತ್ರಕ್ಕೆ ಅಸ್ತ್ರವ ಒತ್ತಿ ಬಿಡಲು ಆಗ ಮತ್ತೆ ಆಕಾಶವ ಮುತ್ತಿತು ಬಾಣ 50 ರಾಮರಾವಣರ್ಯುದ್ಧ ನೋಡಿ ಮಹಾಸುರರೆಲ್ಲ ಪ್ರೇಮದಿಂದಲೆ [ಹರಸಿದರು] ಆನಂದಗೂಡಿ 51 ಕತ್ತರಿಸಿದ [ರಾವಣನ]ಶಿರ ಮತ್ತೆ ಬೆಳೆಯಲು ನೋಡಿ ಚಿತ್ತದಿಂ ನೆನೆದು [ರಾಮ] ಬ್ರಹ್ಮಾಸ್ತ್ರದಿಂ ಕಡಿದ 52 ದಶಕಂಠನೆಂತೆಂಬ ಹಸನಾದ ವೃಕ್ಷವ ದಶರಥಸುತವಾತ ಬಂದು ಮುರಿಯಿತು 53 ರಾವಣನೆಂತೆಂಬ ವಾರಣ[ದ ಕೋಡ] ವೀರ ರಾ ಘವನೆಂಬ ಕೇಸರಿಯು ಮುರಿಯಿತು 54 ಪುಲಸ್ತ್ಯಪುತ್ರನೆಂಬ ರಾಜವೃಷಭವನ್ನು ಇಕ್ಷ್ವಾಕು [ಕುಲದ] ವ್ಯಾಘ್ರವು ಭಕ್ಷಿಸಿತಾಗ 55 [ಆಮಹಾ] ರಾಕ್ಷಸೇಂದ್ರನೆಂಬ ಜ್ವಲಿಸುವ ಅಗ್ನಿಯ [ಶ್ರೀ] ರಾಮಜೀಮೂತವು ಬಂದು ಕೆಡಿಸಿತು 56 ಸುರರೆಲ್ಲ ಜಯವೆಂದು ಪುಷ್ಪಗಳರಳನ್ನು ಕರೆಯಲು ಶಿರದಲ್ಲಿ ಧರಿಸಿದ [ತಾ] ಪರಮಪುರುಷನು 57 ರಾಕ್ಷಸೇಂದ್ರ [ವಿಭೀಷಣ]ಗೆ ಮಾಡಿ ರಾಜ್ಯಾ ಭಿಷೇಕವ ಮೂರ್ಜಗದಲಿ ಕೀರ್ತಿ ಪಡೆದ ರಾಘವ 58 ತಂದೆಗೆರಗಿ ಅಗ್ನಿತಂದ ಸೀತೆಯ ನೋಡಿ ಆ ನಂದದಿಂದಲೆ ಕೂಡಿನಿಂದ ರಾಘವನು 59 ಅಜಭವಸುರರೆಲ್ಲ ಭುಜಗಶಯನನ ನೋಡಿ ನಿಜವಾಗಿ ಸ್ತೋತ್ರ ಮಾಡಿದರು ನಿರ್ಮಲದಿ 60 ವೇದವನಿತ್ತು ಅಜನಿಗೆ ಭಾರವ ಹೊತ್ತು [ಆ] ಧಾರುಣಿಯ ತಂದು ಕಂಬದಿಂ ಬಂದು 61 ದಾನವ ಬೇಡಿ ಕ್ಷತ್ರಿಯಕುಲವನೀಡಾಡಿ ಜಾನಕಿಯ ತಂದು ಪ್ರಲಂಬನ ಕೊಂದು 62 ಕಾಳಿಯ ಒತ್ತಿ ಕುದುರೆಯ ಹತ್ತಿ ಜಗ ವೆಲ್ಲ ಸುತ್ತಿ ನಿಮ್ಮ ದರ್ಶನ ಮುಕ್ತಿ 63 ಜಗದೋದ್ಧಾರ ದುರಿತಕ್ಕೆ ದೂರ ಜಗಕೆ ಆಧಾರ ದುಷ್ಟರಿಗೆ ಕ್ರೂರ 64 ಪೃಥುವಿಯ ಪಾಲ ದಿಟ್ಟಗೋಪಾಲ ಸತ್ಯದಲಿ ಶೀಲ ರುಕ್ಮಿಣೀಲೋಲ 65 ಅರಿ ನಿ ಸ್ಸೀಮ ಭಕ್ತರಾಪ್ರೇಮ 66 ವಿಶಾಲನೇತ್ರ ಪರಿಪೂರ್ಣಗಾತ್ರ [ವ ರ] ಸೀತಾಕಳತ್ರ ಸುಗ್ರೀವಮಿತ್ರ 67 [ರಾಜ] ದಶರಥ ಬಾಲ ಜಾನಕೀಲೋಲ ಮೂರ್ಜಗಪಾಲ ಕೀರ್ತಿವಿಶಾಲ 68 ಸತ್ಯಮೂರುತಿ ಪವಿತ್ರ ನೀನೆ ಜಗಕೆ ಕರ್ತನೂ ಕಾರಣಮೂರ್ತಿಯೂ ನೀನೆ 69 ನಂದನಕಂದ ಮುಕುಂದ ಗೋವಿಂದ ಇಂದಿರಾರಮಣ ನೀನೆಂದು ಪೊಗಳಿದರು 70 ಪುಷ್ಪಕವನು ಏರಿ ಲಕ್ಷ್ಮೀಸಹಿತವಾಗಿ [ರಾಮ]<
--------------
ಯದುಗಿರಿಯಮ್ಮ
ಸ್ವಾಮಿಪರಾಕುಮಹಾಸ್ವಾಮಿ ಸಜ್ಜನಪ್ರೇಮಿಪ.ಕ್ಷೀರಸಾಗರಶಯನ ನಿವಾಸಾಪಾರಗುಣಗಣಾಶ್ರಯಪಾರಮೇಷ್ಠಿ ಪ್ರಮುಖಾಮರಪೂಜಿತಚಾರುಪದಾಬ್ಜದ್ವಯ ದನು-ಜಾರಿ ಧನಂಜಯಪ್ರಿಯ ಮದವಾರಣಕೃತನಿರ್ಭಯ ನಮ್ಮದೂರನುಲಾಲಿಸುಚಿನ್ಮಯ ಜಯ1ದುಷ್ಟ ನಿಶಾಚರರಟ್ಟುಳಿಘನಕಂಗೆಟ್ಟುದು ಸುರಮುನಿಗಣ ಆಭ್ರಷ್ಟರು ಮಾಡುವ ನಿಷ್ಠುರಕೆ ಮೈಗೊಟ್ಟೆವು ಸಂಕರ್ಷಣ ನಾವಿ-ನ್ನೆಷ್ಟೆಂಬುದು ದುರ್ಗುಣವಶ ಬಿಟ್ಟೆವು ಸುರಪಟ್ಟಣ ನಮ್ಮಕಷ್ಟವು ಪದಕರ್ಪಣ ಪರಾಯಣ 2ಅಂತರಂಗ ಬಹಿರಂಗ ಭ್ರಷ್ಟದನುಸಂತತಿ ಸಂತತಿ ಭಾರಿ ಬಲುಭ್ರಾಂತಿವಿಜ್ಞಾನವಿತಾನಧುರೀಣರ್ಸಂತಾಪಿಪರು ಮುರಾರಿ ನಮ್ಮಸಂತೈಸೈ ಗಿರಿಧಾರಿ ಶ್ರೀಕಾಂತ ಕೃಪಾರ್ಣವಶೌರಿಜಗ-ದಂತ ವಿಹಾರಿ ನಿರಂತ ಪರಂತಪ 3ಚೆನ್ನಕೇಶವ ಚರಾಚರಾತ್ಮ ಚೈತನ್ಯರೂಪ ಶ್ರೀರಂಗ ನಮ್ಮಬಿನ್ನಪಲಾಲಿಸುತ್ರಿಭುವನವನ್ನುಸನ್ನುತಶುಭಾಂಗ ಸ-ರ್ವೋನ್ನತ ಮಹಿಮತರಂಗದುರಿತಾನ್ವಯತಿಮಿರಪತಂಗ ಸುಪ್ರಸನ್ನಸದೋದಿತವಿಹಂಗತುರಂಗ4ನೀಲೇಂದೀವರ ಶ್ಯಾಮಲ ಕೋಮಲಕಾಲನಿಯಾಮಕ ಪ್ರಾಣ ನಿನ್ನೋಲಗ ಸೇವಕರಾಳಿಯೂಳಿಗವ ಕೇಳು ತ್ರಿಲೋಕತ್ರಾಣನತಪಾಲ ಪರೇಶ ಪುರಾಣ ಶ್ರೀಲೋಲ ವಿಗತ ಪರಿಮಾಣ ಹೃದ-ಯಾಲಯಮಣಿ ಲಕ್ಷ್ಮೀನಾರಾಯಣ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ