ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಂಬು ಮನವೆ ರಾಮಚಂದ್ರನಾ ದ | ಯಾಂಬು ನಿಧಿ ಸದ್ಗುಣ ಸಾಂದ್ರನಾ|| ನಂಬಿದ ಭಕ್ತ ಕುಟುಂಬಿಯೆನಿಸುವ| ಅಂಬುಜನಾಭನ ಹಂಬಲವಿಡಿದು ಪ ದಶರಥ ಕೌಸಲ್ಯ ಬಸುರಿಲಿ ಬಂದು| ಋಷಿಮಖ ರಕ್ಷಿಸಿ ಶರದಿ|| ಅಸುರೆಯ ಭಂಗಿರಿಸಿ ನಡೆಯಲಿ|ಮುನಿ| ಅಸಿಯಳುದ್ದರಿಸಿ ಉಂಗುಟದಲಿ| ಅಸಮ ಧನುವೆತ್ತಿ ವಸುಧಿಯ ಮಗಳ ವ ರಿಸಿಕೊಂಡು ಬಂದನು ಕುಶಲವಿಕ್ರಮನಾ1 ಜನಕನ ವಚನಕ ಮನ್ನಿಸಿ|ಸತಿ| ಅನುಜನೊಡನೆ ವಿಹರಿಸಿ| ವನಚರ ಭೂಚರ ನೆರಹಿಸಿ|ದಾಟಿ| ವನಧಿಯೊಳಗ ಗಿರಿಬಂಧಿಸಿ|| ಮುನಿದು ಮರ್ದಿಸಿ ದಶಾನನ ಮುಖ್ಯ| ದನುಜರಾ ವನಸಿರಿ ಪದವಿ ವಿಭೀಷಣಗ ನೀಡಿದಾ2 ಸುರರಿಗೆ ನೀಡಿದಾನಂದನು|ಸೀತೆ| ವರಿಸಿ ಅಯೋಧ್ಯಕ ಬಂದನು| ಧರಿಸಿ ಸಾಮ್ರಾಜ್ಯದಿ ಹೊರೆದನು|ಗುರು| ವರ ಮಹಿಪತಿ ನಂದನೊಡೆಯನು|| ಅರಿತು ಸದ್ಬಾವತಿ ಸರಿಸಲಿ ಸದ್ಗತಿ| ಶೆರೆವಿಡಿದೆಳೆತಹದರಿಯಲೋ ನಾಮಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸಂಪತ್ತು ನಿನಗಿಂದು ಪೊಸದಾಯಿತೆ | ಸಿಂಪಿನಲಿ ಪಾಲುಗುಡಿದದು ಮರದಿಯಾ ರಂಗ ಪ ಪಾಲು ಮೊಸರು ಕದ್ದು ಗೋವಳರೆಂಜಲನುಂಡು | ತಾಳ ಫಲಗಳ ಮೆದ್ದದು ಮರದಿಯಾ || ಕಾಲ ಕಾಲಕೆ ಇಲ್ಲಿ ಷಡುರಸಾಯನ ಸವಿದು | ಮೇಲಾಗಿ ಪೊಟ್ಟೆಯೆ ಪೊರೆವ ಅತಿಶಯವೇನು 1 ಕಂಡವರ ಕೈಯ್ಯ ಪಳ್ಳಿಯಲಿ ಹಳ ಹಳ ಎನಿಸಿ | ಕೊಂಡು ಭಂಡಾಗಿ ಇದ್ದದು ಮರದಿಯಾ || ವಾಹನ | ಕರ ಮುಗಿದು ಕೊಂಡಾಡುವ ಭರವೊ 2 ಮತಿಹೀನ ಖಳಗಂಜಿ ವನಧಿಯೊಳಗೆ ದ್ವಾರ | ವತಿಯಲ್ಲಿ ವಾಸವಾದದು ಮರದಿಯಾ || ಪ್ರತಿದಿವಸದಲ್ಲಿ ಸದ್ಭಕ್ತಿಯುಳ್ಳ ಶುದ್ಧ | ಯತಿಗಳಿಂದಲಿ ಪೂಜೆ ಕೈಗೊಂಬ ಸಂಭ್ರಮವೊ 3 ಈ ವೈವಸ್ವತ ಮನ್ವಂತರ ಉಳ್ಳತನಾಕಾ | ಕರ್ಮ ತಪ್ಪಲರಿಯದು || ಕೋವಿದರು ಪೇಳುವದು ಪುಸಿ ಎನ್ನದಿರು ದೇವ | ಈ ಉಡಪಿನ ಸ್ಥಾನ ನೆಚ್ಚಕೇನೊ ನಿನಗೆ 4 ಕ್ಲೇಶ ಕಳಿಯದಿರಲು | ಭಕುತವತ್ಸಲನೆಂಬ ಬಿರಿದು ಬರಿದೇ || ಮುಕುತೀಶ ಶಿರಿ ಕೃಷ್ಣ ವಿಜಯವಿಠ್ಠಲ | ವಿ |ರುಕತಿಯೆ ಇತ್ತರೆ ಕೀರ್ತಿ ಬಾಹದು ನಿನಗೆ 5
--------------
ವಿಜಯದಾಸ