ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಂದ ಕುಮಾರ ಇಂದುಕುಲ ತಿಲಕ ಪ ಎಂದಿಗು ನಿನ್ನಯ ಸುಂದರ ಚರಣವ ವಂದಿಸಿ ನಲಿಯುವ ನಂದವೆನಗೆ ಕೊಡೊ ಅ.ಪ ಧನಕನಕಗಳನು ದಿನ ದಿನ ಗಳಿಸುವ ಅನುರಾಗಗಳನು ಕೊನೆಗಾಣಿಸೊ ದೇವ ವನಜಸಂಭವಪಿತ ಕನಸಿನಲ್ಲಿಯೂ ನಿನ್ನ ಮನನದಿ ಹಿಗ್ಗುವ ಮನವ ಎನಗೆ ಕೊಡೆಲೊ 1 ಭಯವಿಲ್ಲದೆ ದೋಷಮಯದ ನೋಟಗಳನು ಬಯಸುವ ಮತಿಯನು ಲಯಮಾಡೋ ದೇವ ಮಾಧವ ಎನ್ನ ನಯನಗಳಿಗೆ ನಿನ್ನ ಪ್ರಿಯ ರೂಪದ ಪರಿಚಯವ ಮಾಡಿಸೊ ಸದಾ 2 ಕಾಲವ ಕಳೆಯಲು ಆಲಸವಿಲ್ಲದೆ ಪೇಳಬಾರದ ನುಡಿ ಚಾಲನು ತೊಲಗಿಸೊ ಬಾಲ ಗೋಪಾಲ ಎನ್ನ ನಾಲಿಗೆಯಲಿ ನಿನ್ನ ಲೀಲೆಗಳನು ಸದಾ ಲಾಲಿಸಿ ಪೊಗಳಿಸೊ 3 ಪರಿಪರಿ ಭೋಗಕೆ ಪರಿದಾಡುತ ಸದಾ ಪರರ ಸೇವಿಸುತಿಹ ಕರಗಳ ನಿಲ್ಲಿಸೊ ಮುರಳೀಧರ ಕೃಷ್ಣ ಕರುಣದಿಂದಲಿ ಎನ್ನ ಕರಗಳಿಗೆ ನಿನ್ನ ವರಸೇವೆಯ ನೀಡೊ 4 ಭುವಿಯಲಿ ದುರುಳರ ಸವಿನುಡಿಗಳಿಗತಿ ಕಿವಿಗೊಟ್ಟು ಕೇಳುವ ಲವಲವಿಕೆಯ ಬಿಡಿಸೊ ದಿವಿಜರೊಡೆಯ ಎನ್ನ ಕಿವಿಯೊಳಗೆ ನಿನ್ನ ನವ ನವ ಚರಿತೆಯ ಸವಿರಸ ಸುರಿಸೆಲೊ 5 ಮಾಧವನನು ಮರೆತು ಪಾದಗಳಿಂದಲಿ ಮೇದಿನಿ ತಿರುಗುವ ಮೋದವೆನಗೆ ಬೇಡ ಯಾದವಪತಿ ನಿನ್ನ ಪಾದದರುಶನದ ವಿ ನೋದಕ್ಕೆ ಸುತ್ತಲು ಆದರ ಪೊಂದಿಸೊ 6 ಭಿನ್ನ ಅಂಗಗಳಿಂದ ಎನ್ನ ಕರ್ಮಗಳನು ನಿನ್ನ ಸೇವೆಯೆಂದು ಬಿನ್ನೈಸುವೆ ದೇವ ಎನ್ನ ದುರಿತಗಳ ಭಿನ್ನ ಮಾಡುತಲಿ ಪ್ರ ಸನ್ನನಾಗಿ ಎನಗೆ ಸನ್ಮತಿ ದಯಮಾಡೊ 7
--------------
ವಿದ್ಯಾಪ್ರಸನ್ನತೀರ್ಥರು
ಮುರಳಿ ಧ್ವನಿಯ ಮಾಡೋ ಮುರಾರೇ ಪ ಮುರುಳಿ ಧ್ವನಿಯ ಕೇಳಿ ಪರಮ ಭಕುತರೆಲ್ಲ ಭವ ಶರಧಿ ದಾಟುವರೈ ಅ.ಪ ವಾಮ ಭುಜದಿ ದಿವ್ಯ ವಾಮ ಕಪೋಲಿಟ್ಟು ಕಾಮಜನಕ ಗುಣಧಾಮ ಶ್ರೀ ಕೃಷ್ಣಾ 1 ಶ್ರೀ ವರ ನಿನ್ನಯ ಭ್ರೂ ವಿಲಾಸದಿಂದ ಆವು ಮೆಚ್ಚುವಂತೆ ಸಾವಧಾನದಿಂದ 2 ಶ್ಯಾಮಸುಂದರ ಬಲು ಕೋಮಲ ಬೆರಳಲ್ಲಿ ಪ್ರೇಮದಿಂದೊಪ್ಪುತ ಶ್ರೀ ಮನೋರಮನೆ 3 ಕೆಳ ಕೆಂದುಟಿಯಲ್ಲಿ ಕೊಳಲ ನಿಲ್ಲಿಸಿ ಬೇಗ ನಳಿನಮುಖಿಯರನ್ನು ಒಲಿಸುತಲೊಮ್ಮೆ 4 ವನಜಸಂಭವಪಿತ ಶೀ ನರಹರಿಯೆ ಕನಸಿನಂದದಿ ಜಗವರಿತು ನೆನೆಯುವಂತೆ 5
--------------
ಪ್ರದ್ಯುಮ್ನತೀರ್ಥರು
ಶ್ರೀ ಗೋಪಾಲದಾಸರು ನಿನ್ನ ದಯದಿಂದಲೇ ಎನ್ನ ಜೀವನವು ಘನ್ನ ಗೋಪಾಲ ವಿಠ್ಠಲ ದಾಸರಾಯ ಪ ತುಂಗೆ ಕೃಷ್ಣೆ ಮಧ್ಯರಂಗ ಕ್ಷೇತ್ರದಿ ಮುದದಿ ತುಂಗ ವಿಜಯಾರ್ಯರ ಪದಂಗಳಿಗೆ ಎರಗಿ ಗಂಗೆಪಿತ ಮಾತಂಗ ವರದನಾಮನ ಅಂತ ರಂಗದಿ ನೋಡಿ ಗುಣಗಳನು ಪಾಡಿದೆಯೊ 1 ಅನುಜರಿಗು ಅಚಲ ಮಾತೆಗು ಶರಣು ಸುಜನರಿಗು ಮೌನಿ ಪಂಡಿತರಿಗೂ ಎನ್ನಂಥ ಪಾಮರಗು ಜ್ಞಾನ ಸುತತ್ವ ಸನ್ಮಾರ್ಗ ಬೋಧಿಸಿ ಜಗ ನ್ನಾಥನ ಮನಸಿನ ಅನುಭವಕೆ ತಂದೆ 2 ಬೇಸರದಿ ನಾ ಸೀತಾಪತಿಪಲ್ಲಿಯಲಿ ಮಲಗೆ ಏಸು ಕರುಣವೊ ದಾಸರಾಜ ನೀ ಬಂದು ವ್ಯಾಸಮುನಿಮಠ ಗುರುಪೂಜೆಗೆ ಕರೆದೊಯ್ದು ದಶಪ್ರಮತಿ ಭಾಷ್ಯಪಠನಾರ್ಚನೆಯ ತೋರಿಸಿದೆ 3 ಗೋ ಎನಲು ಗರುಡವಾಹನ ಪೀಡೆ ಪರಿಹರಿಪ ಪಾ ಎನಲು ಪರಮಪೂರುಷ ಪಾಲಿಸುವ ಲ ಎನಲು ಲಕ್ಷ್ಮೀಶ ನಿಖಿಳೇಷ್ಟಗಳನೀವ ಅನವರತ ಗೋಪಾಲದಾಸರಿಗೆ ಶರಣು 4 ಆನಂದಮುನಿಹೃಸ್ಥ ವನಜಸಂಭವಪಿತ ಪ್ರ ಸನ್ನ ಶ್ರೀನಿವಾಸ ಜಗನ್ನಾಥ ನಿನ್ನ ಪಾದ ಸಂಸ್ಮರಿಸುವ ಸುಜನರನು ಅನವರತ ಪಾಲಿಸುವ ಸಂದೇಹವಿಲ್ಲ 5
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಗೋಪೀವಲ್ಲಭ ಗೋಪಾಲವಿಠಲ 144-1 ಗೋಪೀವಲ್ಲಭ ಗೋಪಾಲ ವಿಠಲದೇವ ಕಾಪಾಡೊ ಇವಳ ಭಕ್ತ್ಯಾದಿಗಳನಿತ್ತು ಪ ಶ್ರೀಪ ಕೃಷ್ಣ ನಿನ್ನ ಭಕ್ತಸುಜ್ಞಾನಿಗಳ ಸತ್ಪಂಥದಲಿ ಇಟ್ಟು ದಯದಿ ಪಾಲಿಪುದು ಅಪ ಭೀಷ್ಮಕನ ಸುತೆ ಸತ್ಯಭಾಮಾಸಮೇತ ನೀ ವಾಮಚಿನ್ಮಯ ಹರಿಣ್ಮಣಿನಿಭ ಸುಕಾಯ ಅಮಲ ಸುಸ್ವರ ವೇಣು ಅಭಯ ವರಹಸ್ತದಲಿ ವಾಮದಷ್ಟದಿ ಶಂಖ ತಮ ತರಿವ ಚಕ್ರ 1 ಇಂದಿರಾಪತಿ ಕಂಬುಗ್ರೀವದಲಿ ಕೌಸ್ತುಭವು ಇಂದುಧರೆ ಆಶ್ರಿತನಾಗಿರುವ ವೈಜಯಂತಿ ಸುಂದರ ಸು¥ಟ್ಟೆ ಪೀತಾಂಬರವನುಟ್ಟಿಹ ಸೌಂದರ್ಯಸಾರನೆ ಜಗದೇಕವಂದ್ಯ 2 ವನಜನಾಭನೆ ಅಜನೆ ವನಜಾಪತಿಯೆ ನಮೋ ವನಜಸಂಭವಪಿತ ಪ್ರಸನ್ನ ಶ್ರೀನಿವಾಸ ವನಜಲೋಚನ ಮಧ್ವ ಸಾಧು ಸುಜನರ ಹೃದಯ ವನಜಕೆ ದಿನಪ ನಮ್ಮೆಲ್ಲರನು ಪೊರೆಯೊ 3
--------------
ಪ್ರಸನ್ನ ಶ್ರೀನಿವಾಸದಾಸರು