ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೈಬಿಡದೆ ಕಾಪಾಡು ಕರುಣಾಳು ಹರಿಯೇ ನಾಬಿಡದೆ ನಿನ್ನಡಿಯ ಮೊರೆಹೊಕ್ಕೆ ದೊರೆಯೇ ಪ ಎಲ್ಲಿನೋಡಿದರಲ್ಲಿ ನಿನ್ನ ಮೂರ್ತಿಯ ತೋರಿ ಎಲ್ಲಕಾಲಗಳೊಳಗು ಭಜನೆ ಬಲಿಸಿ ಉಲ್ಲಸದಿ ಕಾರ್ಯಗಳೊಳೆಲ್ಲ ಸೇವೆಯಗೈಸಿ ನಿಲ್ಲದೆಯ ನೀನಂತ್ಯಕೊದಗು ಸಂತೈಸಿ1 ಧನ್ಯ ಭಕ್ತರೊಳಾಡಿ ಚನ್ನಚರಿತೆಯ ಪಾಡಿ ಉನ್ನತೋತ್ಸವಗಳನು ನೋಡಿ ನೋಡಿ ಯನ್ನ ಮನಕಿನ್ನೊಂದ ತೋರಿಸದೆಯೆ ಸಂ ಪನ್ನ ಪದಯುಗಪೂಜೆ ಕೊಡು ಮುನ್ನ 2 ಘನಜಾಜಿ ಪಟ್ಟಣವಾಸ ಇನಕರ ಪ್ರಭುಶ್ರೀಶ ವನಜಸಂಭವನಯ್ಯ ವರದ ಜೀಯ ಅನುನಯದಿ ಬೇಡುವೆನು ನಾನಂಬೆನನ್ಯರನು ತನಯನೊಳು ಕನಿಕರಿಸು ನಿನ್ನಡಿಯೊಳಿರಿಸು 3
--------------
ಶಾಮಶರ್ಮರು
ನಾನೇನು ಬಲ್ಲೆ ನಿಮ್ಮ ನಾಮದ ಸ್ಮರಣೆಯನುಏನೆಂದು ಸ್ತುತಿ ಮಾಡಲರಿಯೆ ಪ ದುರುಳ ಕರ್ಮಿಯು ನಾನುಪರಂಜ್ಯೋತಿಯು ನೀನು ಪಾಮರನು ನಾನು 1 ಅಣುರೇಣು ತೃಣ ಕಾಷ್ಠ ಪರಿಪೂರ್ಣನು ನೀನುಕ್ಷಣಕ್ಷಣಕೆ ಅವಗುಣದ ಕರ್ಮಿ ನಾನುವನಜಸಂಭವನಯ್ಯ ವೈಕುಂಠಪತಿ ನೀನುತನುವು ಸ್ಥಿರವಲ್ಲದ ನರಬೊಂಬೆ ನಾನು 2 ದುರಿತ ಮಾಯಾ ಶರೀರಿ ನಾನು 3 ಭೂರಿ ಕಾರುಣ್ಯಪತಿ ನೀನುಘೋರತರ ಕಾಮಕ್ರೋಧಿಯು ನಾನುಈರೇಳು ಲೋಕವನು ಪೊಡೆಯಲಿಟ್ಟವ ನೀನುಸಾರಿ ಭಜಿಸದ ದುಷ್ಟ ಕರ್ಮಿ ನಾನು 4 ತಿರುಪತಿಯೊಳು ನೆಲಸಿದ ವೆಂಕಟೇಶನು ನೀನುಚರಣಕೆರಗುವ ಕನಕದಾಸನು ನಾನುಬಿರಿದುಳ್ಳ ದೊರೆ ನೀನು ಮೊರೆ ಹೊಕ್ಕೆನಯ್ಯ ನಾನುಮರಣ ಕಾಲಕೆ ಬಂದು ಕಾಯೊ ಹರಿಯೆ5
--------------
ಕನಕದಾಸ
ಭಯಕೃದ್ಭಯನಾಶನ ಮಾಯಾರಮಣ ಭವಭಯಹರಣ ಪ ಜೀಯ ಕಾಯುವುದಯ್ಯ ಪರಿಹರಿಸಯ್ಯ ತಾಪ- ತ್ರಯ ದಯೆತೋರಯ್ಯ ಎನ್ನೊಡೆಯಾ ಅ.ಪ ನಾನರಿಯೆ ನಿನ್ನಯ ಗುಣಗಣಾದಿಗಳ ಅನುದಿನದಿನಾ ಅನುಭವಿಸಿ ಭವಚಕ್ರದಾಟಗಳ ಜನುಮ ಜನುಮಾಂತರದಿ ಬಂದ ವಾಸನಾದಿಗಳ ದೀನವತ್ಸಲ ದೂರ ನೋಡುವೆಯ ನೀನರಿಯ ಎನ್ನನು ಉಳುಹುವ ಪರಿಯ ಎನಗ್ಯಾರಿಹರೊ ನಿನ್ಹೊರತು ಪೂರೆವರಯ್ಯ ವನಜಸಂಭವನಯ್ಯ ಜೀಯ 1 ಕರಿ ಮಕರಿ ಪಿಡಿಯಲು ಬಂದ ಪರಿಯೇನು ನಿಖಿಳಖಳಕುಲವೈರಿ ಶ್ರೀಹರಿ ಸಿರಿಗೆ ಹೇಳದ್ದೇನು ಭಕುತನಾರ್ತಧ್ವನಿಯ ಕೇಳಿ ಬಂದೆಯಾ ಏನು ನಾನು ಆಸಾಧನವನರಿಯೇನು ಘನ್ನಮಹಿಮ ನಿನ್ನಯ ಕೀರ್ತಿಯನು ಕೇಳಿ ಬಂದೆನು ಇನ್ನೇನು ನಿನಗೆ ಏನು ತೋರಿದಂತೆ ಮಾಡಿನ್ನು ಎನ್ನೊಡೆಯ ನೀನೆಂದಡಿಗೆ ಬಿದ್ದಿಹೆನೊ ಇನ್ನು 2 ಈಸಲಾರೆನು ಸಾರಿ ಈ ಭವಸಾಗರದೊಳಗೆ ಶ್ರೀಶ ನಿನಗತಿಶಯವೆ ಕರುಣವಿಲಾಸ ತೋರೆನಗೆ ದಾಸದಾಸದಾಸರದಾಸ್ಯ ಕೊಡಿಸೆನಗೆ ಶ್ರೀಶ ಎನ್ನಯ ಮನದ ಕ್ಲೇಶವನೂ ನಾಶವಗೈಸು-ನಿರಾಶ್ರಯನಾಗಿಹೆನು ಏಸುಬಲ್ಲೆನು ಕಾಸಿನವನು ಬೇಸರಿಸದಿರು ಇನ್ನೂ-ಮುನ್ನೂ 3 ತಾಪತ್ರಯಗಳಿಂದನುದಿನದಿ ನಾ ನೊಂದೆ ಶ್ರೀಪತಿಯೆ ಹೃತ್ತಾಪಕಳೆದು ಪೊರೆಯಬೇಕೆಂದೆ ಗೋಪನಿನ್ನಯ ಶ್ರೀಪಾದದೊಳು ಮನವ ನೀಡೆಂದೆ ಕುಪಿತವೇ ನಿನ್ನವನು ನಾನೆಂದೆ ಭೂಪ ಆಪತ್ತೋದ್ಧಾರಕನೆಂದೆ ಪಾಪಿಮಾನವಜನುಮದಲಿ ಬಂದೆ ಕಾಪಾಡುವುದು ಎಂದೇ-ತಂದೇ 4 ಭೂಸ್ಥಳದಿ ನಿಂತ ಶ್ರೀ ವೇಂಕಟೇಶ ಹರೇ ತ್ರಿಸ್ಥಳದೊಳು ಈ ಸ್ಥಳವೆ ವೈಕುಂಠ ದೊರೆಯೆ ವಿಸ್ತರದಿ ಮಹಿಮೆಯ ಪಾಡಿ ಪೊಗಳಲು ನಾವು ಶಕ್ತರೆ ಸ್ವಸ್ಥಚಿತ್ತವಿಲ್ಲ ಶ್ರೀಹರೇ ಈ ಸ್ಥಿತಿಯಲ್ಲಿ ಎನ್ನ ನೋಡುವರೆ ದುಸ್ಥಿತಿಯಬಡವನಕೈಯ ಬಿಡುವರೆ-ಶೌರೆ5
--------------
ಉರಗಾದ್ರಿವಾಸವಿಠಲದಾಸರು
ಕಂಡು ಕಂಡು ನೀ ಎನ್ನ ಕೈ ಬಿಡುವರೆ ಕೃಷ್ಣಪುಂಡರೀಕಾಕ್ಷಪುರುಷೋತ್ತಮ ಹರೇಪಬಂಧುಗಳು ಎನಗಿಲ್ಲ ಬದುಕಿನಲಿ ಸುಖವಿಲ್ಲನಿಂದೆಯಲಿ ನೊಂದೆನಯ್ಯನೀರಜಾಕ್ಷ||ತಂದೆ ತಾಯಿಯು ನೀನೇ ಬಂಧು ಬಳಗವು ನೀನೇಎಂದೆಂದಿಗೂ ನಿನ್ನ ನಂಬಿದೆನೊ ಕೃಷ್ಣಾ 1ಕ್ಷಣವೊಂದು ಯುಗವಾಗಿ ತೃಣವು ಪರ್ವತವಾಗಿಎಣಿಸಲಳವಲ್ಲ ಈ ಭವದ ವ್ಯಥೆಯ ||ಸನಕಾದಿ ಮುನಿವಂದ್ಯ ವನಜಸಂಭವನಯ್ಯಫಣಿಶಾಯಿ ಪ್ರಹ್ಲಾದಗೊಲಿದ ನರಹರಿಯೆ 2ಭಕ್ತ ವತ್ಸಲನೆಂಬ ಬಿರುದು ಬೇಕಾದರೆಭಕ್ತರ ಅಧೀನನಾಗಿ ಇರಬೇಡವೆ ||ಮುಕ್ತಿದಾಯಕ ದೇವ ಹೊನ್ನೂರ ಪುರವಾಸಶಕ್ತಪುರಂದರವಿಠಲ ಶ್ರೀ ಕೃಷ್ಣಾ3
--------------
ಪುರಂದರದಾಸರು