ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾನಪರಾಧಿ ಶ್ರೀನಿಧಿ ದೇವ ಪ ನಾನಪರಾಧಿ ನೀನದನೆಣಿಸದೆ ದೀನವತ್ಸಲ ಎನ್ನ ಮಾನದಿಂದಲಿ ಕಾಯೊ ಅ.ಪ ತನಯರಿಲ್ಲದೆ ಬಲು ಮನದೊಳು ಚಿಂತಿಸೆ ಮನದಿ ಸಂಕಲ್ಪಿಸೆ ವನಜನೇತ್ರನ ದಯದಿ ತನಯಳು ಜನಿಸಲು ಧನಮದದಲಿ ಮರೆತೆ 1 ಏನ ಪೇಳುವೆ ನಾನು ಧನದ ಮಹಿಮೆಯನ್ನು ಹೀನ ಬುದ್ಧಿಯನಿತ್ತು ಹರಿಯ ಮರೆಸುವುದು ದಾನವಾಂತಕ ಹರಿ ದೀನನಾಗಿಹೆನಯ್ಯ ಸಾನುರಾಗದಿ ಸಲಹೊ ಸತ್ಯನಾರಾಯಣ 2 ಮಂಗಳರೂಪ ಕೃಪಾಪಾಂಗದಿ ನೋಡೊ ರಂಗ ಶ್ರೀ ಕರಿಗಿರಿಯನಿಲಯ ಶುಭಾಂಗ ಗಂಗಾ ಜನಕನೆ ಗಜರಾಜವರನೆ ಭಂಗ ಬಿಡಿಸಿ ಕಾಯೊ ಭಕ್ತವತ್ಸಲ ದೇವ 3
--------------
ವರಾವಾಣಿರಾಮರಾಯದಾಸರು
ಮಾರ ಕೋಟಿ ಸುಂದರ ಪ ಸೋಮಶೇಖರಾದಿ ಸುರ ಸ್ತೋಮನುತ ನಾಮ ಅ.ಪ ಸಾಯಕ ಶ್ರೀದಾಯಕ ನಿರ್ಮಾಯ ರಘುರಾಯ 1 ಅಪ್ರಾಕೃತ ಶರೀರ ಗೋ ವಿಪ್ರಜನ ಪಾಲ ನಿನ್ನ ಸುಪ್ರಭಾವ ಪೊಗಳಲು ಸರ್ಪಾಧಿಪಗಳವೇ 2 ದೇವ ಗುರುರಾಮ ವಿಠಲಾ ವನಜನೇತ್ರ ನೂತ- ನಾವರಣ ಪುರಿವಾಸ ಕಾವುದೆಮ್ಮನು ಸರ್ವೇಶಾ 3
--------------
ಗುರುರಾಮವಿಠಲ
ವನಜನೇತ್ರೆ ಕನಕಗಾತ್ರೆ ಅನುವಿನಿಂ ಬಾ ಮಿತ್ರೆ ಪ. ವಿನಯದಿಂದ ಜನಕ ಸಾರುವ ಕೋಲನಾಡುವ ಅ.ಪ. ಆರ್ಯಮಾತೆಯ ಆರ್ಯಧರ್ಮದ ಸಾರವರಿಯುವ ವೀರಮಾತೆಯ ಭೂರಿಕೀರ್ತಿಯ ಪಾಡಿಸುಖಿಸುವ 1 ಬೇಗನೇಳಿರೆ ಭಾಗ್ಯೋದಯಮದೀಗ ನೋಡಿರೇ ಬೀಗಿಮಲಗುವ ರೋಗವುಳಿದು ಸರಾಗದೆ ಪಾಡಿರೇ 2 ಅವನೀಮಾತೆಯ ಭವಿತವ್ಯತೆಗೆ ತವಕಗೊಳ್ಳುತ 3 ಶುದ್ಧರಾಗಿ ತಿಲಕತಿದ್ದಿ ವೃದ್ಧರಂ ನಮಿಸಿರಿ4 ಶ್ರದ್ಧೆಯಿಂ ಕಾರ್ಯಸಿದ್ಧಿಗೊಯ್ಯಿರಿ ಸಿದ್ಧಾರ್ಥರೆನಿಸಿರಿ ಸದ್ಧರ್ಮ ದೀಕ್ಷಾಬದ್ಧರಾಗಿ ಸುಭದ್ರವಿಳೆಗೊದವಿರಿ5 ಅರಸರನ್ನು ಸರಸದಿಂದ ಹುರುಡಿಸಿರಿನ್ನು ಪುರುಷರೆನ್ನಿಸಿ ಕಾರ್ಯಮೆಸಗುವ ತೆರನ ತೋರಿಸಿ 6 ದೇಶದೇಳ್ಗೆಯೊಳಾಸೆಯಿರಿಸಿ ಲೇಸನೆಸಗಿರಿ ದೋಷಹರಣ ಶೇಷಗಿರೀಶಗೆ ಮೀಸಲಿರಿಸಿರಿ7
--------------
ನಂಜನಗೂಡು ತಿರುಮಲಾಂಬಾ
ಶ್ರೀರಂಗ ಶ್ಯಾಮಲಕೋಮಲಾಂಗ ಕ್ರೂರರಕ್ಕಸಕುಲನಿವಾರಣ ನಾರದಾದಿವಂದ್ಯನೆ ಪ. ಮಾಣಿಕ್ಯ ಮೌಕ್ತಿಕಹಾರ ಧೀರ ವಾಣೀಪತಿಪಿತ ವನಜನೇತ್ರನೆ ವಾಣಿಬಾಹೋತ್ತಂಡನ ಚಾಣೂರಮರ್ದನ ಚಿದಾನಂದ ವೇಣುನಾದಪ್ರಿಯದೇವನೆ ಇನಕುಲಾಂಬುಧಿಚಂದ್ರನೆ 1 ಅಕ್ರೂರ ಅಂಬರೀಷವರದ ನಕ್ರಬಂಧನ ನಾಗಸ್ತ್ರೀರಕ್ಷಕ ಚಕ್ರಧರ ಮುಕುಂದನೆ ರುಕ್ಮಿಣೀವಲ್ಲಭ ವಾಸುದೇವ ಶಕ್ರಶಶಿಧರಶೇಷಸನ್ನುತ ಸಕಲಲೋಕೋತ್ಪತ್ಯನೆ 2 ನಿತ್ಯಾನಂದನೆ ನಿಗಮಗೋಚರನೆ ಮದನ ಶ್ರೀಗೋಪಾಲನೆ ಕರ್ತು ಹೆಳವನಟ್ಟೆರಂಗನೆ ಕೃಪಾಂಗನೆ3
--------------
ಹೆಳವನಕಟ್ಟೆ ಗಿರಿಯಮ್ಮ