ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಬಾಲಕೃಷ್ಣ ವರ್ಣನೆ) ಕಂಸಾರಿ ಕೃಷ್ಣಾ ಕಾಡದಿರೆನ್ನನು ಪ ಹಳ್ಳದ ತಡಿಯಲ್ಲಿ ಮಳಲು ತೋಡಿ ತೋಡಿ ಗೊಲ್ಲಿತೆರೊಡÀನಾಡಿ ಕಲಿತ್ಯೋ ಬೆಡಗಾ ಅಹಿನೇರಿ ಹುಡುಗಾ ಮಾಡಿದಿ ತುಡುಗಾ 1 ನೀರಿಗ್ಹೋಗುವಾಗ ದಾರಿಗಡ್ಡಕಟ್ಟಿ ನಾರಿ ನೀನಾರೆಂದ್ವಿಚಾರಿಸುವೀ ದೂರದಲ್ಲಿರುವಿ ಬದಿಯಲ್ಲಿ ಬರುವಿ ಬೇರೆ ಕರೆವೆ ಈ ಬುದ್ಧಿ ತರವೆ 2 ವರ ಕದರುಂಡಲಗಿ ಹನುಮಯ್ಯನೊಡೆಯನೆ ನಿನಗೆಣೆಯಿಲ್ಲವೊ ವನಜನಾಭಾ ವನಿತೆಯರೆಲ್ಲಾ ಒಲಿಸಿದೆಯಲ್ಲಾ ಮನುಜನಲ್ಲಾ ಮಾಯದ ಗೊಲ್ಲಾ 3
--------------
ಕದರುಂಡಲಗಿ ಹನುಮಯ್ಯ
ಏಕೆ ಪೋಗುವೆ ರಂಗಾ, ರಂಗಯ್ಯ ರಂಗ ಪ ಏಕಾಂತದೊಳು ಪೇಳ್ವ ವಾಕ್ಕುಗಳನು ಕೇಳಿ ಅ.ಪ ಮುನಿಸತಿ ಶಿಲೆಯಾಗಿ ವನಜನಾಭಾಯೆಂದು ನೆನೆಯುತಲಿಲ್ಲವೋ ಮನ ಮೋಹನಾ ತನಯ ಪ್ರಹ್ಲಾದ ತಾ ಜನಕಾ ಬಾರೆನಲಿಲ್ಲ 1 ದುರುಳ ಮಕರಿಯಿಂದೆ ಪರಿತಾಪವಾಂತಿಲ್ಲ ಸ್ಮರಿಸಲಿಲ್ಲ ದುರುಳ ಕದ್ದೊಯ್ಯಲಿಲ್ಲ ಸರಸಿಜಾನನನೀಗ ಚರಣಕೆರಗಲಿಲ್ಲ 2 ಹದಿನಾರು ಸಾವಿರ ಸುದತೀ ಮಣಿಯರೆಲ್ಲ ಮದನಾಂಗ ಬಾರೆಂದು ಕರೆಯಲಿಲ್ಲ ಉದಧಿ ನಿನ್ನರಸಲಿಲ್ಲ ಪದುಳದೆ ಬಲಿ ನಿನ್ನ ಚದುರ ಬಾರೆನಲಿಲ್ಲ 3 ಕರದೆ ಕೊಡಲಿಯ ಪಿಡಿದು ಮರದೆ ನಿ[ಲ್ಲೆನುತಲಿ] ನೂರಾರು ಕೈಯವ ಕರೆಯಲಿಲ್ಲ ಹರನೀಗ ತ್ರಿಪುರರ ತರಿಯೆ ಬಾರೆನಲಿಲ್ಲ ವರತುರುಗವೇರಿ ಧುರಕೆ ಬಾರೆಂಬರಿಲ್ಲ4 ಕಾಮಿತವೀಯೆಂದು ಪ್ರೇಮದಿ ಭಜಿಸುವ ಪಾಮರರಿಲ್ಲಿಗೇ ಬರುತಿರ್ಪರೋ ಶಾಮನೆ ಮಾಂಗಿರಿಗಾಮಿಯಾಗಿಹೆಯೇಕೆ ಕಾಮಹರನೆ ಬಾರೊ ರಾಮದಾಸಜೀವ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಹರಿಗೆ ಶಿಷ್ಯನು ಬ್ರಹ್ಮ ಕಮಲಜಗೆ ಸನಕಾದಿ ವರಋಷಿಗಳವರನಂತರದಿ ದೂರ್ವಾಸಮುನಿ ಪ್ರಾಜ್ಞತೀರ್ಥರುಮವರಿಗೆ 1 ಘನ ತಪೋನಿಧಿಯೆನಿಸುವಚ್ಚುತ ಪ್ರೇಕ್ಷ್ಯರಾ ತ್ರಿವಿಧ ಜೀವಗುರುವೆನಿಸು ದಶಮತಿಯೆನಿಸುವ | ವನಜನಾಭಾಕ್ಷೋಭ್ಯಮಾಧವನೃಹರಿ ತೀರ್ಥ ರಿನಿತು ನಾಲ್ವರೊಳಗಕ್ಷೋಭ್ಯ ತೀರ್ಥಯತೀಂದ್ರ ಶ್ರೀಪಾದರಿಗೆ ಶಿಷ್ಯರು 2 ಆನಂದತೀರ್ಥವಿರಚಿತ ಗ್ರಂಥಗಳಿಗೆ ತ ತ್ವಾನುಸಾರಾರ್ಥಸುಧೆ ರಚಿಸಿದರ್ಜಯತೀರ್ಥ ಮೌನಿ ವಿದ್ಯಾಧಿರಾಜಂಬಳಿಕ ರಾಜೇಂದ್ರ ಗಾನಕ ಜಯಧ್ವಜಗುರುಪ್ರವರವರಶಿ ಪ್ರಸಾದದಿಂ 3 ವ್ಯಾಸಮುನಿರ್ಯರಾತರ್ವಾಯದಲಿ ಶ್ರೀನಿ ರಾಮಚಂದ್ರತೀರ್ಥರ್ | ಲೇಸಾಗಿ ಮುಂದೆ ಲಕ್ಷ್ಮೀವಲ್ಲಭಾಖ್ಯಯೋ ಶ್ರೀನಾರಾಯಣÁಖ್ಯ ಬಳಿಕ 4 ಜಗನ್ನಾಥ ಮುನಿಯವರ ಬಳಿಕ ಶ್ರೀನಾಥ ತೀ ರ್ಥಗೆ ಶಿಷ್ಯರಾದ ವಿದ್ಯಾನಾಥ ಯೋಗೀಂದ್ರರವರ್ಗೆ ವಿದ್ಯಾಪತಿಗುರು | ಜಗವರಿಯೆ ಮುಂದೆ ವಿದ್ಯಾವಲ್ಲಭಾಖ್ಯಯೋ ಗಿಗೆ ಶಿಷ್ಯನಾದ ವಿದ್ಯಕಾಂತ ಮುನಿವರ್ಯ ವಿದ್ಯಾಪೂರ್ಣರವರ ಬಳಿಕ 5 ವಿದ್ಯಾಸಮುದ್ರ ತೀರ್ಥರವರ್ಗೆ ಶಿಷ್ಯನಾ ತೀರ್ಥಯತೀಂದ್ರ ಶ್ರೀಪಾದರು ಶುದ್ಧ ಮನದಲಿ ಗುರುಪರಂಪರೆ ಸ್ತೋತ್ರವಂ ಪದ್ಮಾಕ್ಷ ಗುರುರಾಮವಿಠಲ ನುಡಿಸಿದ ತೆರದೊ ತಿದ್ದುವುದು ಕರುಣದಿಂ 6
--------------
ಗುರುರಾಮವಿಠಲ