ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯಮಂಗಳಂ ವೈಕುಂಠನಿಲಯಗೆ ಪ. ಆಮನಸಿಜನಯ್ಯಗೆ ಭುಜಗಭೂಷಣ ಪ್ರಿಯಗೆ ತ್ರಿಜಗತ್ಪತಿ ಪುರುಷೋತ್ತಮಗೆ ಭಜಕರಕ್ಷಕ ಶ್ರೀ ವಿಜಯಸಾರಥಿಗೆ ದ್ವಿಜರಾಜಗಮನ ಅಜಾಮಿಳವರದಗೆ 1 ಆಪನ್ನಿವಾರಣ ಅಪ್ರಮೇಯನಿಗೆ ತಾಪತ್ರಯಹರ ಶ್ರೀಪತಿಗೆ ತಾಪಸವಂದಿತ ಕೋಪವಿರಹಿತ ಗೋಪಾಲಕನಂದನ ಯದುಪತಿಗೇ 2 ಸನಕಾದಿಮುನಿಗಳಿಂದನವರತವು ಪೂಜೆಯನು ಕೈಗೊಂಬ ವನಜಾಕ್ಷಗೆ ಘನಶೇಷಗಿರಿವಾಸ ಚಿನ್ಮಯರೂಪ ಶ್ರೀ ವನಜನಾಭವೇಂಕಟಗೆ ಮಂಗಳಂ ಶ್ರೀ ಲಕ್ಷ್ಮೀಕಾಂತಗೆ3
--------------
ನಂಜನಗೂಡು ತಿರುಮಲಾಂಬಾ
ಮಧ್ವನುದಿಸಿದನು ಭೂತಳದಲಿ ಪ ವದ್ದು ದುರ್ಮತ ತಿದ್ಧಿ ಸುಜನರ ಪದ್ಮನಾಭನ ಪಾದಸೇವಿಸೆ ಅ.ಪ ಕುಣಿದು ಕುಣಿಯೇ ಖೇದ ಉಕ್ಕಿಹರಿಯೆ ಸರ್ವಲಕ್ಷಣದಿಂದ ಶೊಭಿಪ ಸರ್ವತೆರದಲಿ ಪೂರ್ಣಕಾಯದಿ ಸರ್ವಜೀವರ ನಾಥನಾಯಕ ಸರ್ವರೀಶನ ಆಜ್ಞೆಧರಿಸುತ 1 ವಾಸುದೇವನಲ್ಲೆ ರತನು ವಾಸುದೇವನ ತೋರಿ ಪೊರೆವಾ ದೋಷವಿಲ್ಲದ ಮಹಾಮಹಿಮಾ ನಾಶವಿಲ್ಲದ ಜ್ಞಾನಸ್ವರೂಪಾ ವಾಸುದೇವ ಸುನಾಮಗೊಳ್ಳುತ ನಾಶಮಾಡುತ ದೋಷಜ್ಞಾನವ ಭಾಸಬೀರಲು ವೇದರಾಶಿಯ 2 ವನಜಜಾಂಡವ ಪೊತ್ತಿಹಧೀರ ವನಜನಾಭವ ಮುಖ್ಯದೂತ ಅನಿಲ ದೇವನ ತೃತೀಯ ರೂಪ ವನಜಸಂಭವ ಪದಕೆ ಬರುವ “ಶ್ರೀಕೃಷ್ಣವಿಠಲ” ದಣಿವು ಕಾಣದೆ ವೇದವತಿಯಲಿ 3
--------------
ಕೃಷ್ಣವಿಠಲದಾಸರು