ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂಥಾ ಮಹಿಮನಿವನೆ ಗೋಪಾಲಕೃಷ್ಣ ಎಂಥ ಮಹಿಮನಿವನೆ ಪ. ಎಂಥಾ ಮಹಿಮನಿವನಂತ ಕಂಡವರಿಲ್ಲ ಕಂತು ಜನಕ ಸರ್ವರಂತರಂಗದೊಳಿಪ್ಪ ಅ.ಪ. ಕರಚರಣಗಳಿಲ್ಲದೆ ಇದ್ದರು | ಮುದುರಿ ಘುರುಘುರುಗುಟ್ಟುತಿಹುದೆ ವರಕಂಬೋದ್ಭವ ವಟು ಪರಿಶು | ಧರಿಸಿರುವನ ಚರಿಸಿ ಮಾವನ ಕೊಂದ ನಿರ್ವಾಣ ಹಯವೇರಿ ಶರಧಿಯೊಳಾಡಿ ಗಿರಿಯಡಿ ಓಡಿ ಧರೆಯನು ತೋಡಿ ಕರಳೀಡ್ಯಾಡಿ ಕರವ ನೀಡಿ ಭಾರ್ಗವ ದಶರಥ ಸುತ ಅಂಬರ ತೊರೆದ ರಾವುತ 1 ಮಂದರ | ಬೆಂಡಂತೆ ಧರಿಸಿ ವನಿತೆಯ ತಂದನೀ ಧೀರ ಘನ‌ಘರ್ಜನೆಯು ಗಂಗಾಜನಕ | ಜಮದಗ್ನಿಸುತ ವನಚಾರಿ ತುರುಪಾಲ ವನಿತೆರೊಂಚಕ ಕಲ್ಕಿ ಜನಿಸಿ ಜಲದಿ ಬೆನ್ನಲಿ ಗಿರಿಕೋರೆ ಘನ ಹೊಸಲಾಸನ ತಿರಿದನುಜನ ತರಿದ ಮಾತೆ ಕಪಿವೆರಸಿ ವೃಂದಾವನ ಚರಿಸಿ ದಿಗಂಬರ ಹರಿ ಏರಿದನೆ 2 ಸುತನಿಗಾಗಮವಿತ್ತನೆ | ಕ್ಷಿತಿಧರಧಾರಿ ಸುತನ ಮೂಗಿನೊಳ್ ಬಂದನೆ ಸುತವಾಕ್ಯ ಸತ್ಯವೆನಿಸಿ ಅತಿ ಕುಬ್ಜ ಕ್ಷಿತಿಯನಿತ್ತು ವ್ರತಧಾರಿ ವಸನ ಚೋರ ವ್ರತಭಂಗ ಏರಿ ತುರಂಗ ಸತಿಯನೆ ಪೊರೆದ ಸತಿಯಂತಾದ ಸತಿಯಳ ಸಂಗ ಸತಿಗರಿದಂಗ ಸತಿಯ ಬೇಡಿ ನೀಡಿ ಸತಿಯ ಕೂಡಿ ಜಾರ ಸತಿ ಹೆಗಲೇರಿದ 3 ವಾಸ ಜಲದಿ ಮೈ ಚಿಪ್ಪು | ಯಜ್ಞ ಸ್ವರೂಪ ಮಾನವ ಮೃಗರೂಪು ಆಸೆಬಡಕ ಮಾತೆ ದ್ವೇಷ ವನದಿ ವಾಸ ಪೋಷ ಪಾಂಡವ ಜಿನ ಮೋಸ ವಾಜಿ ಮೇಲ್ವಾಸ ನಾಸಿಕ ಶೃಂಗ ನಗಪೋತ್ತಂಗÀ ಮಾನವ ಸಿಂಗ ನೃಪರ ದ್ವೇಷ ಪೋಷಿ ಯಜ್ಞವೃಂದ ವಾಸಿ ಘಾಸಿವ್ರತ ಕಲಿಮುಖ ದ್ವೇಷಿ 4 ಅಮೃತ ಭೂಸತಿಯ ಪೊರೆದು ಪಾಪಿ ಕರುಳ್ಬಗೆದ ಜಲಪಿತ ಭೂಪರ ಕಾಡಿ ರಘುಭೂಪ ಸೋದರತಾಪ ಗೋಪ್ಯಕಲ್ಯಂತಕಾಲ ಗೋಪಾಲಕೃಷ್ಣವಿಠ್ಠಲ ಆಪಜವಾಸ ಆ ಪೃಥ್ವೀಶ ಆ ಪುತ್ರಪೋಷ ಆ ಪದ ಸರಿತ ಕೋಪಿ ಲಂಕೆ ಪುರತಾಪಿ ಗೋಪಿಕಾ ವ್ಯಾಪಿ ಮಾನಹೀನ ಘೋಟಕವಹನ 5
--------------
ಅಂಬಾಬಾಯಿ
ಕರುಣಾದಿ ಪಿಡಿ ಕರವಾ ದೇವರ ದೇವ ಪ ಕರುಣಾದಿ ಪಿಡಿಕರ ಸರಸಿಜಾಂಬಕ ಎನ್ನ ಗುರು ರಘುಪತಿ ಪಾಲಾ ಮರುತಾಂತರಿಯಾಮಿ ಅ.ಪ ಗತಶೋಕ ಜಿತಮಾಯ ಪತಿತ ಪಾವನವೇದ್ಯ ಪ್ರತಿಪಾದ್ಯ ಕ್ಷಿತಿಪ ಭಾರತಿ ಕಾಂತ ವಂದ್ಯಾ ಆ ನತರ ಪಾಲಕ ದುಷ್ಟದಿತಿಜಾರಿ ತವಪಾದ ಶತಪತ್ರ ಬಿಡದೆ ಸಂತತ ಭಕುತಿಯಲಿಂದ ಸ್ತುತಿಪಾರ ಮಿತ ಅಘವಾ ಕಳೆದು ಮತ್ತೆ ಹಿತದಿ ಸದ್ಗತಿ ಕೊಡುವಾ ನಿನ್ನಯ ದಿವ್ಯಾಚ್ಯುತವಾದ ಘನದಯವಾ ಪೊಗಳು ವಂಥ ಮತಿವಂತರನು ಕಾಣೆ ಶತಮುಖಜಜ ಮಾವಾ 1 ಅನಿಮಿತ್ಯ ಬಂಧುವೆ ವನಚಾರಿ ಕೂರ್ಮನೆ ಕನಕ ನೇತ್ರಾರಿ ಪಾವನತರ ನರ ಪಂಚ ನಾನಾ ರೂಪದಿಂದ ಬಾಲನಾ ಕಾಯ್ದೊನರ ಹರಿಬಲಿ ನಿತ್ಯ ಅನಘಾತ್ಮ ಜನನೀಯ ಕೊಂದಾನೆ ಜನಕ ಜಾಪತಿಯ ರು ಕ್ಮಿಣಿ ಮನೋಹರನೆ ವಸನದೂರ ಹಯರೂಢ ಜನನ ರಹಿತ ವಿಖ್ಯಾತಾ ನಮಿಸುವೆ ಅನಿಮಿಷಪಜನ ಸುತಾ ಬೇಡಿಕೊಂಬೆ ಅನುದಿನದಲಿ ಮಮತಾ ಕನಕೋದರನ ತಾತಾ 2 ಸರಿವೀರ ಹಿತ ಬಲಿಸರಸಿ ಜಾಂಬಕ ಮುರ ಹರ ಹರ ವಂದಿತ ಹರಿಮುಖ ಹರಿನುತ ಪಾದ್ಯ ಹರಸು ಎನ್ನಯ ಅಘ ನಿರುತ ನಿನ್ನ ಡಿಂಗರರ ನೀಕರದಿತ್ತು ಗುರುವಿನ ಚರಣಾದಿ ಸ್ಥಿರ ಭಕುತಿಯ ಕೊಟ್ಟು ವರ ಶಿರಿಗೋವಿಂದ ವಿಠಲನೆ ನೀ ಯನ್ನ ಮರಿಯದೆ ಮಮತೆಯಿಂದಾ ನಿತ್ಯ ಗರಿಯುತಲಿರು ಆನಂದಾ ನಿನ್ನಯ ಪಾದಾದಿರಲಿ ಮನಸು ಮುಕುಂದಾ ದುರುಳ ಭವದ ಬಂಧ 3
--------------
ಅಸ್ಕಿಹಾಳ ಗೋವಿಂದ
ಸ್ಮರಿಸಿ ಸುಖಿಸೆಲೋ ಮಾನವಾ ಪ ಸರಸಿಜಾಸನ ಸತತ ನೆನೆವ ಹರಿನಾಮವನು ಅ.ಪ ಜವರಾಯ ಕಿಂಕರರ ಹಿಮ್ಮೆಟ್ಟಸಿದ ನಾಮ ಧ್ರುವರಾಯಗೊಲಿದ ಘನವು ಈ ನಾಮ ನವನೀತರೂಪದಿಂದ ಘನವ ತಾಳ್ದಿಹ ನಾಮ ಸುವಿಲಾಸದಿಂ ಪಾರ್ಥಗೊಲಿದಿರ್ಪನಾಮವನು 1 ಸನಕಾದಿ ಮುನಿಗಳು ಸತತ ಭಜಿಸುವ ನಾಮ ಅನಿಲಜಾತನಿಗೊಲಿದ ಪರಮನಾಮ ವನಚಾರಿಯಾಗಿದ್ದ ಶಬರಿಗೊಲಿದ ನಾಮ ವನಚರರ ಗರುವವನು ಮುರಿಯುವ ನಾಮ 2 ಪಾಂಚಾಲಿಗಕ್ಷಯದ ವರವನಿತ್ತಾ ನಾಮ ಪಾಂಚಜನ್ಯವ ಸಿರಿಯೊಳೆಸೆಯುತಿಹ ನಾಮ ವಂಚಕರ ಹೃದಯಗಳ ಭೇದಿಸುತ್ತಿಹನಾಮ ಚಂಚಲೆಯರುತ್ಸಾಹದಿಂ ಭಜಿಪ ನಾಮವನು 3 ದುರುಳದೈತ್ಯರ ಮನವ ಕದಡಿ ಕಲಕುವ ನಾಮ ಶರಣಾಗತಾವಳಿಯ ಪೊರೆಯುತಿಹನಾಮ ತರಳಪ್ರಹ್ಲಾದ ತಾ ಪಿತಗೊರೆವ ನಾಮವನು 4 ಮಾಂಗಿರೀ ವರಾಗ್ರದೊಳು ಮರೆಯುತಿಹ ಸಿರಿನಾಮ ಶೃಂಗಾರ ಶ್ರೀ ಪಾಂಡುರಂಗ ನಾಮ ಗಂಗಾಧರಾನುತ ಸುಖದಾತ ಶ್ರೀನಾಮ ಮಂಗಳಕರ ರಾಮದಾಸನುತ ನಾಮವನು 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್