ಒಟ್ಟು 6 ಕಡೆಗಳಲ್ಲಿ , 6 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೇವಿ ಭಜನೆ ಓಂ ನಮೋ ಓಂ ನಮೋ ಓ ನಮೋ ದೇವಿ || ಓಂ ನಮೋ ಓಂ ನಮೋ ಭಕ್ತ ಸಂಜೀವಿ ಪ. ಶಂಭು ಮನೋಹರೆ | ಶಾಂಭವಿ ದೆÉೀವಿ || ಜಂಭಾರಿ ಸುರನರ | ವಂದಿತೆ ದೇವಿ ಅ.ಪ. ಮಧುಕೈಟಭಾಖ್ಯರ ವಧಿಸಿದ ದೇವಿ || ಮುದದೊಳೀ ಮಹಿಯ | ನುದ್ಧರಿಸಿದ ದೇವಿ 1 ಮಹಿಷಾಖ್ಯ ದಾನವ ಮರ್ದಿನಿ ದೇವಿ || ದಹಿಸಿದೆ ಧೂಮ್ರಾಕ್ಷ | ನನು ಮಹಾದೇವಿ 2 ಚಂಡಮುಂಡಾಖ್ಯರ | ಖಂಡಿಸಿ ಶಿರಗಳ || ಚೆಂಡಾಡಿದ ಶ್ರೀ ಚಾಮುಂಡಿ ದೇವಿ 3 ರುಧಿರಬೀಜಾಖ್ಯನ | ರುಧಿರವ ಹೀರಿ || ವಧಿಸಿದೆ ಅದ್ಭುತ | ಮಹಿಮೆಯದೋರಿ 4 ಶುಂಭ ನಿಶುಂಭ ನಿ | ಷೂದಿನಿ ದೇವಿ || ಕುಂಭಿನಿ ಭಾರವ | ಹರಿಸಿದ ದೇವಿ 5 ಅರುಣಾಸುರ ಸಂ | ಹಾರಿಣಿ ದೇವಿ || ಶರಣರಿಗೊಲಿದ ಶ್ರೀ | ಭ್ರಾಮರಿ ದೇವಿ6 ನಂದಿನಿ ನದಿಯೊಳು | ನೆಲೆಸಿದ ದೇವಿ || ಕಂದರಂತೆಮ್ಮನು | ಸಲಹುವ ದೇವಿ7 ನಂಬಿದ ಭಕ್ತರ | ವೃಂದವ ದೇವಿ || ಅಂಬಿಕೆ ಪಾಲಿಸು | ಜಗದಂಬ ದೇವಿ 8 ಜಟಾಧರೇಶನ | ರ್ಧಾಂಗಿನೀ ದೇವಿ || ಕಟಿಲೊಳು ಮೆರೆದ | ಭ್ರಮರಾಂಬ ದೇವಿ9
--------------
ವೆಂಕಟ್‍ರಾವ್
ರಕ್ಷಿಸೊ ಎನ್ನ ರಕ್ಷಿಸೋ ಪ ರಕ್ಷಿಸು ಎನ್ನನು ಅಕ್ಷಯಗುಣಪೂರ್ಣ ಲಕ್ಷುಮಿರಮಣನೆ ಪಕ್ಷಿವಾಹನನೇ ಅ.ಪ ಪಾದವಿಲ್ಲದೆ ಜಲದೊಳು ಮುಳುಗಾಡಿ ವೇದಚೋರಕನನ್ನು ಸೀಳಿ ಬೀಸಾಡಿ ವೇದಾಚಲದೊಳು ನಿಂತು ಕೈ ನೀಡಿ ಸಾಧು ಸಜ್ಜನಪಾಲ ನೀ ದಯಮಾಡಿ 1 ವಾರಿಧಿ ಮಥನದಿ ಸುರರಿಗೆ ಒಲಿದು ಮೇರು ಮಂದರವನ್ನು ನೀ ಹೊತ್ತೆ ಒಲಿದು ವಾರಿಜಾಕ್ಷನೆ ವೈಕುಂಠದಿಂದಿಳಿದು ಊರಿದೆ ಚರಣವ ಗಿರಿಯೊಳು ನಲಿದು 2 ಧರಣಿಯ ಒಯ್ದ ದಾನವಗಾಗಿ ನೀನು ಹರಣದ ಸೂಕರನಂತಾದುದೇನು ಚರಣ ಸೇವಕರಿಗೆ ನೀ ಕಾಮಧೇನು ಕರುಣದಿ ಸಲಹೆನ್ನ ನಂಬಿದೆ ನಾನು 3 ತರಳನು ಕರೆಯೆ ಕಂಬದೊಳುದಿಸಿದೆಯೊ ದುರುಳ ದಾನವರ ಪ್ರಾಣವ ವಧಿಸಿದೆಯೊ ಕರಳಮಾಲೆಯ ಕೊರಳೊಳು ಧರಿಸಿದೆಯೊ ಮರಳಿ ಬಂದವ ಫಣಿಗಿರಿಯನೇರಿದೆಯೊ 4 ಕೋಮಲ ರೂಪದಿ ಭೂಮಿಯನಳೆದೆ ಆ ಮಹಾಬಲಿಯ ಪಾತಾಳಕ್ಕೆ ತುಳಿದೆ ಸ್ವಾಮಿ ಪುಷ್ಕರಣಿಯ ತೀರದಿ ಬೆಳೆದೆ ಪ್ರೇಮದಿ ಭಕ್ತರ ಕಾಮಿಸಿ ಪೊರೆದೆ 5 ತಾತನಪ್ಪಣೆಯಿಂದ ಮಾತೆಗೆ ಮುನಿದೆ ಜಾತಿಕ್ಷತ್ರಿಯರ ವಿಘಾತಿಸಿ ತರಿದೆ ನೂತನವಾಗಿಹ ನಾಮದಿ ಮೆರೆದೆ ಧಾತುಗೆಟ್ಟೆನು ಸ್ವಧೈರ್ಯಗಳಿರದೆ 6 ದಶರಥನುದರದಿ ಶಿಶುವಾಗಿ ಬಂದೆ ವಸುಮತಿ ತನುಜೆಯ ಕುಶಲದಿ ತಂದೆ ಅಸುರರ ಹೆಸರನುಳಿಸದೆ ನೀ ಕೊಂದೆ ಕುಸುಮನಾಭನೆ ಶೇಷಗಿರಿಯಲ್ಲಿ ನಿಂದೆ 7 ಮಧುರೆಯೊಳುದಿಸಿ ಗೋಕುಲದಲ್ಲಿ ಬೆಳೆದೆ ಉದಧಿಯ ಮಧ್ಯದಿ ದುರ್ಗವ ಬಲಿದೆ ಹದಿನಾರು ಸಾವಿರ ಸತಿಯರ ನೆರೆದೆ ಉದಯವಾದೆಯೊ ವೇದಗಿರಿಯೊಳು ನಲಿದೆ 8 ಶಶಿಮುಖಿಯರನು ಮೋಹಿಸುವಂಥ ಬಗೆಗೆ ವ್ಯಸನವ ಬಿಡುವುದುಚಿತವೇನೊ ನಿನಗೆ ವಸುಧೆಗುತ್ತಮವಾಗಿ ಎಸೆವಂಥ ಗಿರಿಯೊಳು ಹಸನಾಗಿ ನಿಂತಿಹ ಚರಣ ಸನ್ನಿಧಿಯೊಳು 9 ವಾಜಿಯನೇರಿಯೆ ನೇಜಿಯ ಪಿಡಿದೆ ಮಾಜುವ ಕಲಿಯನ್ನು ಕಡೆಯೊಳು ಕಡಿದೆ ಮೂಜಗದೊಡೆಯನ ಮನದೊಳು ಇಡುವೆ ಮಾಜ ಬೇಡೆಲೊ ವೇಂಕಟೇಶ ಎನ್ನೊಡವೆ 10 ಹತ್ತವತಾರದ ವಿಸ್ತಾರದಿಂದ ಕರ್ತು ವರಾಹತಿಮ್ಮಪ್ಪನು ನಿಂದ ಭೃತ್ಯವತ್ಸಲನಾಗಿ ಭೂಮಿಗೆ ಬಂದ ಅರ್ಥಿಯೋಳ್ಭಕ್ತರ ಸಲಹುವೆನೆಂದ 11
--------------
ವರಹತಿಮ್ಮಪ್ಪ
ಮಂಗಳ ಮಾರುತಿ ನಂದನಿಗೆಮಂಗಳ ಭಾರತಿ ಸುಂದರಗೆ ಪ ಮಂಗಳ ಮಾಧವನನು ದಿನ ಪಾಡುವಾನಂದತೀರ್ಥ ಸುರವಂದ್ಯನಿಗೆಅ.ಪ. ತರುಣಿ ರೂಪದಿ ಮೋಹಿಸುತಗರಡಿ ಮನೆಯೊಳು ಬಾರೆನುತದುರುಳನ ಮುಂದಲೆಗುರುಳನು ಪಿಡಿದುಧರೆಯೊಳು ಕೆಡಹಿದಿ ನೀ ತ್ವರಿತಾ 1 ಎಲ್ಲರು ಬಂದರು ಕೀಚಕರುಫುಲ್ಲಾಕ್ಷಿಯ ಚಿತಿಕ್ಹಾಕಿದರುವಲ್ಲಭೆ ಚೀರುವ ಕೇಳುತಕ್ಷುಲ್ಲಕರ ಹೆಡೆ ಖಂಡಿಸಿ ನೂರಾರು 2 ಸೈಂಧವ ವೇಷದಿಯನು ಪಿಡಿಯೆಸುಂದರಿ ನಿನ್ನಗೆ ಅಲ್ಪರಿಯೆತಂದು ಅವನ ಅವಳಿಂದ ವಧಿಸಿದೆಇಂದಿರೇಶನ ಪ್ರಿಯ ಸುರದೊರೆಯೆ 3
--------------
ಇಂದಿರೇಶರು
ವಂದಿಸುವೆನು ನಾ ನರನಾರಯಣ ಭಕ್ತ ಪ- ರಾಧೀನ ನಾನಾರೂಪಿಯೆ ಪ ಈ ಜಗವನೆ ಎತ್ತಿದೆ ವರಾಹನಾಗಿ ಮೂಜಗವನೆ ಅಳೆದ ವಾಮನಮೂರ್ತಿ ಯಾಜಿಪರನು ಕಾಯೋ ಪ್ರಹ್ಲಾದ ಧ್ರುವರೊಲು ಹೇ ಜಗದೋದ್ಧಾರ ಭಕ್ತವತ್ಸಲ 1 ದೇವ ಶ್ರೀಪತಿಯಾಗಿ ಅಸುರರ ಕೊಂದೆ ದೇವಕಿಸುತನಾಗಿ ಕಂಸನ ವಧಿಸಿದೆ ದೇವಜರ ಮೈದುನನಾಗಿ ದೌರ್ಜನ್ಯ ಮುರಿದೆ ದೇವ ಜಾಜಿಪುರೀಶ ದಾಸೋತ್ತಮನೇ 2
--------------
ನಾರಾಯಣಶರ್ಮರು
ಶ್ರೀನಿವಾಸ ನಿನಗೆ ನಾ ಮಣಿದು ಫಲವೇನೊ ಕಾಣಿಸದೊ ನಿನಗೆನ್ನ ಕಷ್ಟ ಪ. ಜಾಣತನವಿದನೆಲ್ಲಿ ಮಾನನಿಧಿ ಕಲಿತೆಯೊ ಗಾನವಿಲೋಲ ಸ್ವಾಮಿ ಪ್ರೇಮಿ ಅ.ಪ. ಎಷ್ಟು ಕೂಗಲು ದಯವು ಪುಟ್ಟಲಿಲ್ಲವೊ ನಿನಗೆ ಕೃಷ್ಣಮೂರುತಿಯೆ ಕೇಳೊ ಕಷ್ಟಪಡಿಸುವುದೀಗ ದಿಟ್ಟತನವೇ ನಿನಗೆ ಶ್ರೇಷ್ಠ ನೀನೆನಿಸಿಕೊಂಡು ಪಟ್ಟವ್ಯಾತಕೆ ನಿನಗೆ ಮೂರು ಲೋಕದ ರಾಜ್ಯ ಬಿಟ್ಟು ಬಿಡು ನೀನೀಗಲೆ ದೃಷ್ಟಿಯಿಂದಲಿ ನೋಡಿ ನಿನ್ನ ತೋರೆಂದೆನಲು ಸೊಟ್ಟ ತಿರುಹಿರುವೆ ಮುಖವ ದೇವ 1 ತೋರೊ ಮೋರೆಯನೆನಲು ನೀರ ಪೋಗುವೆ ಬೆನ್ನು ಭಾರ ಪೊತ್ತು ಕೋರೆ ತೆರೆವೆ ಘೋರ ರೂಪವ ತೋರಿ ಈ ರೀತಿ ಬೆದರಿಸುವೆ ದಾರಿ ಎನಗಿನ್ನಾವುದೊ ನಾರಿಯನೆ ಪೆತ್ತು ನೀ ನಾರಿಯನೆ ಕೊಂದು ನಿನ್ನ ನಾರಿ ಚೋರನ ವಧಿಸಿದೆ ನಾರೆರೋಸ್ತ್ರವ ಕದ್ದು ನಾರಿಯರ ವ್ರತ ಕೆಡಿಸಿ ಏರಿ ಓಡಿದೆ ಕುದುರೆಯ ಜೀಯಾ 2 ಈ ಪರಿಗೈದರೆ ಕಾಪಾಡುವವರ್ಯಾರೊ ಭೂಪರೈವರ ಪೊರೆದನೆ ತಾಪಪಡುವುದು ನಿನಗೆ ತೋರ್ಪುದಿಲ್ಲವೆ ದೇವ ಪಾಪಿ ಎಂದೆನಬೇಡವೊ ನೀ ಪಾರುಗೊಳಿಸಬೇಕೀಪರಿಯ ಬವಣೆಗಳ ಶ್ರೀಪತಿಯೆ ಶ್ರೀನಿವಾಸ ಗೋಪಾಲಕೃಷ್ಣವಿಠ್ಠಲನೆ ನೀನಲ್ಲದೆಕಾಪಾಡುವವರನರಿಯೆ ದೊರೆಯೆ 3
--------------
ಅಂಬಾಬಾಯಿ
ಸರ್ವಾಂತರ್ಯಾಮಿ ಸಲಹೊ ಎನ್ನ ಸರ್ವಕಾಲದಲಿ ಭಕ್ತರ ಅಂತರಂಗದಿ ನಲಿವೆ ಪ ಭಕ್ತರನು ತೋಷಿಸಲು ಹತ್ತವತಾರದಿ ಯುಕ್ತಿಯಲಿ ಖಳರ ವಧಿಸಿದೆಯಲ್ಲವೆ ಭಕ್ತವತ್ಸಲನೆಂಬೊ ಬಿರುದು ಹೊತ್ತಿಹೆ ದೇವ ಭಕ್ತರಾಧೀನ ನಾನೆಂದು ನಿನ್ನ ಭಕ್ತರೊಳು ನಲಿವೆ 1 ಅಂತ್ಯದೊಳು ಅಜಮಿಳನ ಅಂತರಂಗದಿ ಪೊಕ್ಕು ಸಂತ ಆತ್ಮಜನ ಸಾರಗನೆಂದು ನುಡಿಶಿ ನಿನ್ನ ಸ್ವಂತ ಲೋಕಕೆ ಕಳಿಸಿ ಅಜಭವಾದಿಗಳಿಂದ ಅ ತ್ಯಂತ ಹೆಚ್ಚಿನ ಸ್ತುತ್ಯನಾದೆ ಗೋವಿಂದ 2 ಆವಾವ ಕಾಲದೊಳು ಆವಪರಿ ಕಷ್ಟದೊಳು ಕಾವ ನಿನ್ನಯ ನಾಮ ಮರೆಯದಂತೆ ದೇವ ಶ್ರೀ ಶ್ರೀನಿವಾಸ ಝಾಮಝಾಮದಿ ನುಡಿಸೊ ಶ್ರೀವರ ನೀನಲ್ಲದೆ ಮತ್ತಾರಿಹರೊ ದೇವ 3
--------------
ಸರಸ್ವತಿ ಬಾಯಿ