ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಪ್ಪಿಸಿದೆ ಒರೆದು ದೂರ ಮುಂದೆನ್ನ ತಪ್ಪನೆಣಿಸದಿರು ಧೀರ ಅಪ್ಪಳಿಸು ಕಡು ಮೂರ್ಖರ ನಿನಗೆಂದು ತಪ್ಪುವುದೆ ಭಕ್ತಭಾರ ಪ. ದುರ್ಗಾಧಿಪತಿ ಲಾಲಿಸು ಮನಸಿಜನ ಮಾರ್ಗಣಕೆ ಸಿಲುಕಿ ಮನಸು ನಿರ್ಗಮಿಸದೊಳಸರಿದು ಮುಳುಗಿ ಸ- ನ್ಮಾರ್ಗಗಾಣದೆ ಕುಂದಿತು 1 ಪಂಚಾಂಗ ಪಲುಗುತಿರಲು ಮನೆಯ ಮ್ಯಾ- ಲ್ಹಂಚುಗಳಸ್ಥಿರವಾಗಲು ಚಂಚಲದಿ ಮನ ಕೆದರಲೂ ತದಧೀನ ಪಂಚಕರಣವು ಕೆಡುವವು 2 ಹೀಗಾದ ಬಳಿಕ ನಿನ್ನ ಸೇವೆ ಚೆ- ನ್ನಾಗುವದ ಕಾಣೆ ಮುನ್ನ ಶ್ರೀ ಗುರುವೆ ತ್ವರೆಯೊಳೆನನ ಮನವ ಪದ ರಾಗಿಯಾಗಿಸು ರನ್ನ 3 ಮೂರು ಋಣಬಾಧೆಯನು ಸಹಿಸುವದ- ಕಾರಿಂದ ಶಕ್ಯವಿನ್ನು ತೋರು ತ್ವಕ್ಕರುಣವನ್ನು ದಾಸನ್ನ ದೂರ ಬಿಡಲ್ಯಾತಕಿನ್ನು 4 ಸಂದಣಿಸಿಕೊಂಡು ಬರುವ ಸರ್ವ ಪ್ರತಿ ಬಂಧಕಗಳೆಲ್ಲ ತರಿವ ಕರವ ಶಿರದಿ ಭುಜ- ಗೇಂದ್ರ ಗಿರಿನಾಥ ದೇವ 5
--------------
ತುಪಾಕಿ ವೆಂಕಟರಮಣಾಚಾರ್ಯ
ಗಮನ ಕೃಷ್ಣಾ ಪ ಇಂದಿರೇಯರಸ ಮುಕುಂದ ಮೂಜಗಕ್ಕೆ ತಂದೆತಾಯಿ ನೀನೇ | ಶ್ರೀರಾಮಾ ಅ.ಪ ಕೇಸರಿ ಪುನಗುಗಳೂ ನೀಸತಿ ಸಹಿತ ಸದಾ ಲೇಪಿತ ಶ್ರೀನಿ- ವಾಸ ಸುಗುಣಧಾಮಾ | ಶ್ರೀ ರಾಮ 1 ಸ್ಪುರಿಪಲಲಾಟದೊಳೂಧ್ರ್ವ ಪುಂಡ್ರಕ- ಸ್ತುರಿತಿಲಕವು ಬೆಳಗೇ ಹರಿದ್ರಾ ಕುಂಕುಮ ಮಂಗಲ ದ್ರವ್ಯ ನಿನ್ನ ಅರಸಿ ಜಾನಕಿ ದೇವಿಗೇ | ಶ್ರೀರಾಮ 2 ಕ್ಷತೆಯಿಲ್ಲದವನು ನೀನೆಂಬುವದ- ಕ್ಷತೆ ನಿನದಿದೊ ದೇವಾ ತ್ಪತಿ ಮಹಾನುಭಾವಾ | ಶ್ರೀರಾಮ 3
--------------
ಗುರುರಾಮವಿಠಲ
ದೇವಾ ಬಾರಯ್ಯಾ ವೈಭವದಿ ರಥವನೇರಿ ಸೇವಿಸುವೆನು ಮಧ್ಭಾವದಿ ನೆಲಸೆಂದು ಪಾವನ ಮಣಿಪುರ ಠಾವಿನೊಳಿಹ ಭೂದೇವ ವರ್ಯ ಸಂಶೇವಿತ ಕೇಶವ ಪ ದೇವಗಂಗೆಯಪೆತ್ತ ಪಾವನಗಾತ್ರಧ್ರುವ ಭೂವರೋÀಪಾಸಿತನಾಗಿ ಈ ವಸುಧಿಗೆ ಬಂದು ಪಾವಮಾನ ಶಾಸ್ತ್ರದಿ ಕೋವಿದಯತಿ ವರ ಶ್ರೀ ವಿದ್ಯಾನಿಧಿ ತೀರ್ಥ ಸೇವಿತ ಸಂಸ್ಥಾಪಿತ ಸೇವಕ ಜನ ಸಂಭಾವಿತ ಕಾಮಿತ ವೀವ ಕಾವ ಸದಶಾವತಾರ ನಮೋ ಶ್ರಿವಿರಂಚಿಮುಖ ದೇವನ ಮಿತ ಕಂಚೀವರದನೆ ಪೊರೆ ಶ್ರೀ ವರಕೇಶವ 1 ಕಡು ಶೋಭಿಸುವ ಬಿಳಿಗೊಡೆ ಚಾಮರಾದಿಗಳ ಪಿಡಿದು ಶೇವಿಪ ಜನರೆಡಬಲದಿ ಬರೆ ಸುರರು ಪಂಥsÀವಿಡಿದು ವೇದಪಠಣ ಬಿಡದೆ ಮಾಡುತ ಬರೆ ನುಡಿವ ವಾದ್ಯಗಳಿಂದ ಸಡಗರದಲಿ ದ್ವಿಜಮಡದಿಯರಾರುತಿ ಪಿಡಿದು ಬೆಳಗುತಿರೆ ಕಡು ವೈಭವದಲಿ ಅಡಿಗೆರಗುವೆ ಪಾಲ್ಗಡಲ ಶಯನ ಮೂ- ರಡಿ ರೂಪನೆ ಜಗದೊಡೆಯ ಕೇಶವ 2 ನಂದ ತೀರ್ಥರ ಮತ ಸಿಂಧುವಿಗೆ ಪೂರ್ಣ ಚಂದ್ರರೆನಿಪಯತೀಂದ್ರ ಸತ್ಯ ಪ್ರಮೋದ ರಿಂದ ಪೂಜಿತ ಪದ ದ್ವಂದ್ವ ಮಧ್ಯದೊಳಿಹ ಮಂದಾಕಿನಿಗೆ ಪಿತನೆಂದು ತೋರಿಸಿದಂಥ ಇಂದಿರೆಯರಸನೆ ಮಂದರಧರ ಗೋ ವಿಂದ ಪಾಹಿ ಮುಕುಂದನೆ ಬಾಬಾ- ರೆಂದು ಕರೆವ ದ್ವಿಜ ವೃಂದಮಧ್ಯದಲಿ ಶ್ಯಂದನ ವೇರಿದ ಸುಂದರ ಕೇಶವ 3 ಅಂಬುಜನಾಭನೆ ನಿತಂಬದಿ ಪೊಳೆವ ಪೀ- ತಾಂಬರ ಧೃತ ಶಾತಕುಂಭ ಮಕುಟವದ- ನಾಂಬೋಜವನು ತೋರೋಕುಂಭೀನಸ ಪರಿಯಂಕ ಶಂಭ್ವಾದಿನಮಿತ ನೀಲಾಂಬುಧ ನಿಭಗಾತ್ರ ಕಂಬುಚಕ್ರಸುತ- ದಾಂಬುಜಧರ ಬಲು ಸಂಭ್ರಮದಲಿ ಮುನಿಕುಂಭಜ ಪೂಜಿತ ಕದಂಬ ದುರಿತ ಕಾದಂಬನಿ ಪವನ ಕೃ ಪಾಂಬುಧೆ ಕೇಶವ 4 ಗರುಡ ಮಾರುತರಿಂದ ಪರಶೇವಿತನೆ ಬಾರೊ ಶರಣು ಜನರ ಸುರತರುವೆ ಚನ್ನಕೇಶವ ಧರೆಯೊಳಧಿಕ ಮಣಿಪುರ ಪಂಡಿತಾಗ್ರಣಿ ಸನ್ನುತ ಸರಸಿಜಾಸನ ಪಿತ ಸಿರಿದೇವಿಯು ಈರೆರಡು ರೂಪದಲಿ ಕರದೊಳಗಾರುತಿ ವರಚಾಮರಗಳ ಧರಿಸಿ ಸಿರಿ ' ಕಾರ್ಪರ ನರಹರಿ ' ರೂಪನೆ ಮಾಂ ಪೊರೆವುದು ಕೇಶವ 5
--------------
ಕಾರ್ಪರ ನರಹರಿದಾಸರು
ಸರಸ್ವತಿ ಸ್ತುತಿ ಅಂಬ ಬ್ರಹ್ಮಾಣಿ ನಿನ್ನ ನಂಬಿದೆನು ವಾಣಿ ವದ- ನಾಂಬುಜದಿನೀನಿಂಬುಗೊಂಡು ಪರಾಂಬರಿಸು ಜನನೀ ಪ. ಶೋಕಭಯದೂರೆ ಭಕ್ತಾನೀಕಮಂದಾರೆ ಜಗ- ದೇಕನಾಥೆ ಪಿನಾಕಿಮುಖ್ಯ ದಿವೌಕಸಾಧರೆ 1 ಶಾರದೆ ವರದೆ ಶ್ರುತಿಸಾರೆ ಸುಗುಣನಿಧೇ ಮಮ- ಕಾರ ಮೋಹವಿಕಾರಭಿದೆ ಜಂಭಾರಿವಿನುತಪದೆ 2 ಮಂಗಲಪ್ರದೆ ಸಾರಂಗನೇತ್ರೆ ಬುಧೆ ಕನ- ಕಾಂಗಿ ಸದಯಾಪಾಂಗಿ ಹಂಸತುರಂಗಿ ಸರ್ವವಿದೆ 3 ಪುಸ್ತಕಪಾಣಿ ನಮಸ್ತೇ ಕಲ್ಯಾಣಿ ಪರ- ವಸ್ತುವಿನ ಗುಣವಿಸ್ತರೈಕಪ್ರಶಸ್ತಫಣಿವೇಣಿ 4 ಪ್ರೀಯೆ ಶ್ರೀ ಲಕ್ಷ್ಮೀನಾರಾಯಣೀಪ್ರೇಮಿ ನಿಧಿ- ಜಾಯೆ ಚತುರೋಪಾಯೆ ಪಾವನಕಾಯೆ ನಿಷ್ಕಾಮಿ 5
--------------
ತುಪಾಕಿ ವೆಂಕಟರಮಣಾಚಾರ್ಯ
ಸರಸ್ವತಿ ಸ್ತುತಿ ಅಂಬ ಬ್ರಹ್ಮಾಣಿ ನಿನ್ನ ನಂಬಿದೆನು ವಾಣಿ ವದ- ನಾಂಬುಜದಿನೀನಿಂಬುಗೊಂಡು ಪರಾಂಬರಿಸು ಜನನೀ ಪ. ಶೋಕಭಯದೂರೆ ಭಕ್ತಾನೀಕಮಂದಾರೆ ಜಗ- ದೇಕನಾಥೆ ಪಿನಾಕಿಮುಖ್ಯ ದಿವೌಕಸಾಧರೆ 1 ಶಾರದೆ ವರದೆ ಶ್ರುತಿಸಾರೆ ಸುಗುಣನಿಧೇ ಮಮ- ಕಾರ ಮೋಹವಿಕಾರಭಿದೆ ಜಂಭಾರಿವಿನುತಪದೆ 2 ಮಂಗಲಪ್ರದೆ ಸಾರಂಗನೇತ್ರೆ ಬುಧೆ ಕನ - ಕಾಂಗಿ ಸದಯಾಪಾಂಗಿ ಹಂಸತುರಂಗಿ ಸರ್ವವಿದೆ 3 ಪುಸ್ತಕಪಾಣಿ ನಮಸ್ತೇ ಕಲ್ಯಾಣಿ ಪರ- ವಸ್ತುವಿನ ಗುಣವಿಸ್ತರೈಕಪ್ರಶಸ್ತಫಣಿವೇಣಿ 4 ಪ್ರೀಯೆ ಶ್ರೀ ಲಕ್ಷ್ಮೀನಾರಾಯಣೀಪ್ರೇಮಿ ನಿಧಿ- ಜಾಯೆ ಚತುರೋಪಾಯೆ ಪಾವನಕಾಯೆ ನಿಷ್ಕಾಮಿ5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಬಂದು ನಿಂದಿಹ ನೋಡಿ- ಭೂತಳದಿ ವೆಂಕಟಇಂದಿರೆಯನೊಡಗೂಡಿ- ಒಪ್ಪುವ ನಿರಂತರಪೊಂದಿ ಭಜನೆಯ ಮಾಡಿ- ಆನಂದ ಬೇಡಿ ಪವಂದಿಸುತ ಮನೆದೊಳಗೆ ಇವನಡಿ-ದ್ವಂದ್ವ ಭಜಿಸಲು ಬಂದ ಭಯಹರ |ಇಂದುಧರಸುರವೃಂದನುತ ಗೋ-ವಿಂದಘನದಯಾಸಿಂಧು ಶ್ರೀಹರಿ ಅ.ಪದ್ವಾರದೆಡಬಲದಲ್ಲಿ- ಜಯವಿಜಯರಿಬ್ಬರುಸೇರಿ ಸೇವಿಪರಲ್ಲಿ- ಸನಕಾದಿನುತ ಶೃಂ-ಗಾರನಿಧಿ ಅಂಗದಲಿ- ಮುತ್ತಿನಲಿ ಶೋಭಿಪಹಾರ ಹೊಂದಿಹುದಲ್ಲಿ- ವಿಸ್ತಾರದಲ್ಲಿ ||ವಾರವಾರಕೆ ಪೂಜೆಗೊಂಬುವಹಾರ ಮುಕುಟಾಭರಣ ಕುಂಡಲ-ಧಾರಿ ಭುಜ ಕೇಯೂರ ಭೂಷಿತಮಾರಪಿತಗುಣಮೋಹನಾಂಗ ||ಚಾರುಪೀತಾಂಬರ ಕಟಿಯ ಕರ-ವೀರ ಕಲ್ಹಾರಾದಿ ಹೂವಿನಹಾರ ಕೊರಳೊಳು ಎಸೆಯುತಿರೆ ವದ-|ನಾರವಿಂದನು ನಗುತ ನಲಿಯುತ 1ಎಲ್ಲ ಭಕುತರಭೀಷ್ಟ-ಕೊಡುವುದಕೆ ತಾ ಕೈ-ವಲ್ಯ ಸ್ಥಾನವ ಬಿಟ್ಟ- ಶೇಷಾದ್ರಿ ಮಂದಿರದಲ್ಲಿ ಲೋಲುಪ ದಿಟ್ಟ-ಸೌಭಾಗ್ಯನಿಧಿಗೆದುರಿಲ್ಲ ಭುಜಬಲ ಪುಷ್ಪ-ಕಸ್ತೂರಿಯಿಟ್ಟ ||ಚೆಲ್ವ ಪಣೆಯಲಿ ಶೋಭಿಸುವ ಸಿರಿ-ವಲ್ಲಭನಗುಣಪೊಗಳದಿಹ ಜಗ-ಖುಲ್ಲರೆದೆದಲ್ಲಣ ಪರಾಕ್ರಮಮಲ್ಲಮರ್ದನಮಾತುಳಾಂತಕ||ಫಲ್ಗುಣನಸಖಪ್ರಕಟನಾಗಿಹದುರ್ಲಭನು ಅಘದೂರ ಬಹುಮಾಂಗಲ್ಯ ಹೃಯಯವ ಮಾಡಿ ಸೃಷ್ಟಿಗೆಉಲ್ಲಾಸ ಕೊಡುತಲಿ ಚೆಂದದಿಂದಲಿ 2ಪದಕ-ಕೌಸ್ತುಭದಾರ-ಸರಿಗೆಯ ಸುಕಂಧರಸುದರ್ಶನ-ದರಧಾರ-ಸುಂದರ ಮನೋಹರಪದಯುಗದಿ ನೂಪುರ-ಇಟ್ಟಿಹನು ಸನ್ಮುನಿಹೃದಯ ಸ್ಥಿತ ಗಂಭೀರ-ಬಹುದಾನ ಶೂರ ||ವಿಧಿ-ಭವಾದ್ಯರ ಪೊರೆವ ದಾತನುತುದಿ ಮೊದಲು ಮಧ್ಯವು ವಿರಹಿತನುಉದುಭವಾದಿಗಳೀವ ಕರ್ತನುತ್ರಿದಶಪೂಜೀತ ತ್ತಿಭುವನೇಶ ||ಸದುನಲಾಸದಿ ಸ್ವಾಮಿ ತೀರ್ಥದಿಉದುಸುತಿರೆಸಿರಿಮಹಿಳೆ ಸಹಿತದಿಪದುಮನಾಭಪುರಂದರವಿಠಲನುಮುದದಿ ಬ್ರಹ್ಮೋತ್ಸವದಿ ಮೆರೆಯುತ 3
--------------
ಪುರಂದರದಾಸರು