ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಂಗಳಾರತಿಯಾ ತಂದೆತ್ತಿರೇ ಮಂಗಳವದನೆಯರೆಲ್ಲಾ ಅಮಂಗಜನಪಡದಾ ಮಂಗಳಾತ್ಮಗ ಪ ಪೊಂಬ್ಹರಿವಾಣದೊಳಗ | ಕೆಂಬ್ಹವಳದಾರತಿ ನಿಲಿಸಿ ಮುಂಬ್ಹರಿವರನ್ನ ಜ್ಯೋತಿಯಲಿ ಬೆಳಗಿರೆ 1 ಉತ್ತಮ ಪುರುಷ ಶ್ರೀ ಹರಿಗೆ ಮತ್ತ ಜಗನ್ಮಾತೆ ಸಿರಿಗೆ | ಮುತ್ತಿನ ಶಾಶೆಯನಿಟ್ಟು ಬೆಳಗಿರೆ 2 ಜಯ ಜಯ ಶಿಷ್ಟ ರಕ್ಷಕನೇ ಜಯ ಜಯ ದುಷ್ಟಶಿಕ್ಷಕನೇ | ಜಯವೆಂದು ಬೆಳಗಿ ಮಹಿಪತಿ ಸುತಪ್ರೀಯಗೆ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮಗಳೆಂದು ಬೆಳಗಿರೆ ಕುರಂಗಕೇತು ವದನೆಯರೆ ಪ ಕುಂಡಲಿಶಯನ ಶ್ರೀಧವಗೆ | ಕೋದಂಡಪಾಣಿ ವಾವನಗೆ | ಪಾಂಡವಪಕ್ಷ ಪಿಡಿದವಗೆ | ಪಂಢರಿಪುರ ನಿವಾಸನಿಗೆ 1 ಸುರೇಶಮದವಿಭಂಜನಗೆ | ಪುರಾರಿ ಹರನ ಪೊರೆದವಗೆ | ದರಾರಿ ಪದುಮಗದಾಧರಗೆ | ಧರಾಮರಾರ್ಚಿತಾಂಘ್ರಿಗೆ 2 ಚಟುಲ ಶಾಮಸುಂದರಗೆ | ವಿಠಲವೀಶವಾಹನಗೆ | ಕುಟಿಲ ಚÀದುರೆಯರು ಬೇಗ | ಕುಠಾರಿಧರ ನರಮೃಗಗೆ 3
--------------
ಶಾಮಸುಂದರ ವಿಠಲ
ಹಾಲು ಮಾರಲು ಪೋದೇವಮ್ಮ ಗೋಕುಲದೊಳ- ಗ್ಹಾಲು ಮಾರಲು ಪೋದೆವಮ್ಮ ಹಾಲು ಮಾರುವ ಧ್ವನಿ ಆಲಿಸಿ ಕೇಳುತ ಬಾಲಕೃಷ್ಣ ಬಹು ಲೀಲೆ ಮಾಡುತ ಬಂದಪ ಹಸಿರು ಜರದ ಸೀರೆಯನುಟ್ಟು ಕುಸುರಿಕಂಕಣ ಎಸೆವೊ ಹವಳದ ಹಿಂಬಳೆ ಕಟ್ಟು ಮೊಸರಿನ ಕುಂಭ ಕÀುಸುಮ ಮಲ್ಲಿಗೆಯ ಮುಡಿಯಲ್ಲಿಟ್ಟು ಶಶಿವದನೆಯರೆಲ್ಲ ಚೆಂದದಿ ಬರುತಿರೆ ಕುಸುಮನಾಭ ಮುಸುಗೆಳೆದು ಮೊಸರು ಸುರಿದ1 ಬಣ್ಣ ಬಣ್ಣದ ಸೀರೆಯನುಟ್ಟು ಮುತ್ತಿನ ಬಟ್ಟು ಹೊಳೆವೊ ಕಸ್ತೂರಿ ತಿಲಕವನಿಟ್ಟು ಹಾಲಿನಕುಂಭ ಸಣ್ಣಮಲ್ಲಿಗೆ ಮುಡಿಯಲಿಟ್ಟು ಚೆನ್ನಾರ ಚೆಲುವೇರು ಚೆಂದದಿ ಬರುತಿರೆ ಕಣ್ಣು ಸನ್ನೆಮಾಡಿ ಕರೆದು ಮುದ್ದಿಡುವ 2 ಮುಂದೆ ಮುಂದಾಗಿ ಹೋಗುತಿರಲು ಹಿಂದ್ಹಾಲಿನ್ಹರವಿ- ಗೊಂದೊಂದ್ಹರಳು ಮೀಟುತಿರಲು ಧಾರೆಗೆ ಬಾಯಾ- ನಂದದಿಂದೊಡ್ಡಿ ಕುಡಿಯುತಿರಲು ಸÀಂದಣಿಯೊಳು ನಾವು ಒಂದರಿಯದಲೆ ಬಂದಿಳುಹಲು ಬರೀ ಗಡಿಗೆ ಕಾಣಮ್ಮ 3 ಕಡಗೋಲಿಂದೊಡೆದÀು ಗಡಿಗೆಯನು ಬಡವರ ಬೆಣ್ಣೆ ಒಡಲಿಗೆ ಕದ್ದು ತಿಂಬುವುದೇನು ಕಂಡರೆನಗಂಡ ಬಡಿದÀರಿನ್ನೇನು ಮಾಡುವೆ ನೀನು ಗಡಿಬಿಡಿ ಮಾಡುತ ಕತ್ತಲ ಮನೆಯೊಳು ತÀುಡುಗನಂತೆ ತಿರುಗಾಡುವ ತಾನು 4 ಸಿಟ್ಟು ಮಾಡುವುದ್ಯಾತಕಮ್ಮ ಶ್ರೀ ರಮಣನ ಬಿಟ್ಟು ಬಾಹುವುದೆ ಲೇಸಮ್ಮ ಭೀಮೇಶಕೃಷ್ಣನ ಕಟ್ಟಿ ಹಾಕುವುದೆ ಲೇಸಮ್ಮ ಪಟ್ಟುಮಾಡಿ ಪರಹೆಂಗಳೇರೊಳು ಕ- ಣ್ಣಿಟ್ಟ ಮ್ಯಾಲೆ ಒಂದಿಷ್ಟಾದರು ಬಿಡ5
--------------
ಹರಪನಹಳ್ಳಿಭೀಮವ್ವ