ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಓದುವುದು ವೇದ ಹಾಕುವುದು ಗಾಳ ಪ. ಮಾಧವನು ತಾನೆ ಗಡ ಮನುಜರನುಸರಣೆ ಗಡವ್ಯಾಧಿಗಳು ಬಿಡವು ಗಡ ಸುರನದಿಯಯಾತ್ರೆ ಗಡ 1 ಆ ದೇವನೆ ತಮ್ಮ ಮನೆಮನೆಗೆ ದೈವ ಗಡಪೋದ ನಿಗಮವ ತಂದ ಹಯವದನನೇ ಜಗವ(?) 2 ಕಾದಿಗೆಲಿದನು ಗಡ ಎಡರುಗಳು ಬಿಡವು ಗಡಕ್ರೋಧದಿ ದೋಷವಲ್ಲದವಸ್ತು ತಾನೆ ಗಡ 3 ಶಿವನಲ್ಲ ಹರಿಯಲ್ಲ ವಿಪ್ರರುಗಳಲ್ಲಅವರ ನೋಡಲಿ ಬೇಡ ಅವರಿಗೀಯಲಿ ಬೇಡ 4 ಇಂತೆಂಬ ನುಡಿಯೊಳು ದ್ವೇಷ ಕಾಣಿಸಲುಸಂತರೆಲ್ಲರು ನೋಡಿ ಹಯವದನನಿದ ಮೆಚ್ಚ 5
--------------
ವಾದಿರಾಜ
ನೋಡಿದೆ ಶ್ರೀಕೃಷ್ಣನ ನೋಡಿದೆ ಪ. ನೋಡಿದೆ ಒಂಬತ್ತುಗೂಡಿನ ಕಿಟಕಿಯೊಳ್ಕೂಡಿದ ಮಂದಿಯೊಳ್ಗಾಡಿಕಾರನನಿಂದುಅ.ಪ. ನಾರಿಪುರುಷರೊಂದುಗೂಡಿ ಮುಂದೆದಾರಿಯ ಬಿಡದೆ ಹೋರ್ಯಾಡಿ ದೇಹಯಾರದಂತೆÉ ಪುಡಿಪುಡಿ ಮತ್ತೆಶ್ರೀರಮಣನ ಪಾಡಿ ಬೇಡಿ ಆಹಾ ಸುತ್ತಸೇರಿದ ಜನರಿವರ ಮಧ್ಯದಿಚಾರು ಮೌಕ್ತಿಕದ ಮಣಿಹಾರÀ ಶೃಂಗಾರನ್ನ1 ಅಂಗದೊಳಿಹ ದಿವ್ಯಾಭರಣ ಕನ-ಕಂಗಳೊಪ್ಪಿದ ರವಿಕಿರಣ ಮುನಿ-ಪುಂಗವೆ ವಂದಿಪ ಚರಣಕಮ-ಲಂಗಳ ನೆನೆವರ ಕರುಣ ಆಹಾ ಹಿಂಗದೆÉ ಪೊರೆವ ಶ್ರೀರಂಗನುತ್ಸವÀಕೆಂದುಮಂಗಲಾರತಿಯಾಗಿ ಸಂಗಡ ಪೊರಡಲು 2 ಭರದಿಂದ ಪಲ್ಲಕ್ಕಿನೇರಿ ಮಧ್ವಸರೋವರದೆಡೆಯನು ಸಾರಿ ಸುತ್ತಮೆರೆವ ದೀಪದಿಂದೀರಿ (?) ನೋಳ್ಪ ಜ-ನರಿಗೆ ಜಲಕ್ರೀಡೆ ತೋರಿ ಆಹಾಸಿರಿ ಅರಸನು ಹಯವದನನೇರಿ ಮೆರೆವ ಉಡುಪಿಯೊಳ್ಪರಿಯಾಯ ವಿನೋದವನ್ನು 3
--------------
ವಾದಿರಾಜ
ಭುಜಗ ಭೂಷಣ ಪಾಹಿ ಪ ಗಜ ಅಜಿನಾಂಬರ ಅ.ಪ. ಗಿರಿಜೆಯ ಮನೋಹರ | ಸುರಪತಿ ಗುರುವರಕರುಣದಿಂದಲಿ ತವ | ಚರಣ ಸ್ಮರಣೆ ಕೊಡು 1 ಪಂಚಸುವದನನೇ | ಸಂಚಿತಪ ಕೆಡಿಪನೇಪಂಚ ಬಾಣನ ಪಿತ | ಮಂಚ ಪದಾರ್ಹನೆ 2 ತ್ರಿಶೂಲ ಡಮರುಗಾ | ಭಸುಮಾದಿ ಭೂಷಿತಾದಶ ಶಿರ ಮದಹರ | ನಿಶಿಚರ ಗುರುವರ3 ಪಕ್ಷೀಂದ್ರ ವಂದ್ಯರಾ | ಅಕ್ಷಾರಿ ಹರಿವರಾಕುಕ್ಷ್ಯುದ್ಭವ ಹರ | ದಕ್ಷಾದ್ವರ ಹರ 4 ವಿಷಧಿಯೋಳುದಿಸಿದಾ | ವಿಷಗಣ ಭುಜಿಸಿದಾವಿಷಕಂಠನೆನಿಸಿದ | ನಿಶಿಚರ ವರಪ್ರದ 5 ಗಗನೇಶಾ ಜನಕಾ | ಮೃಗಾಂಕ ಶ್ರೀ ಶುಕಾನಗಪಗೆ ಪೋಷಕ | ಷಣ್ಮುಖ ಜನಕಾ 6 ತ್ರೈರೂಪಾ ತ್ರಿನಯನಾ | ಗುರು ಗೋವಿಂದ ವಿಠಲನಾನಿರುತದಿ ಸ್ಮರಣಾ | ಭರಣ ಶೋಭನ 7
--------------
ಗುರುಗೋವಿಂದವಿಠಲರು
ತ್ವರಿತಾ ಬಾರಯ್ಯ ಹೇ ಶ್ರೀಯರಸ ವೆಂಕಟ ದೀನ |ಸುರತರುವೆ ದೇವೇಶವರಾಹಭೂಧರಧಾಮ|ಕರುಣಾ ಪಯೋದಧೆ ಸರ್ವ ರಕ್ಷಿ ಕಂಧರದೊಳ- |ಗಿರುತಿಹ ನರಗಜ ವದನನೇ ಪಇಳಿಪತಿಗಳ ಕೂಡ ಕಲಹ ಮಾಡಿ ತೋರೆಂದುಅಂಗಲಾಚಲಾ ಕುಂತೀದೇವಿ |ಗೊಲಿದಾಸೆ ಪೂರ್ತಿಸಿ ಅನಿಲಜನಾಗ ನಿನ್ನ ತೇರೊ-ತ್ತಲು ಹಿಂದಕ್ಕೆ ನೀ ನಗು- |ತ್ತಲೆ ಮುಂದಕ್ಕೆ ಬಂದಿ ದೂರಲಾಘವವಾದಿಂದಂದೀಗಹಲವು ಜನರು ಬಹು |ಬಲುವಿಂದ ರಥವನೆಳೆದರೂ ಬಾರದಿದುಖಲು ಸೋಜಿಗವೆಲೆ |ಹಲಧರನನುಜ ಕಡಲ ಮನೆ ಕಾರವಡಲ ರವಿದಶ ಧರಖಳವಿಪಿನದ್ವಿದಲ 1ಬರಬೇಡವೆಲವೊ ನಮ್ಮ ಮಂದಿರಾಕೆಂದು ಬಹಳಾ ಬೈ-ದರೂ ಮುದದಿಂದ ಗೋಪಿ- |ಯರ ಸದ್ಮಕೆ ಪೋಗುವೆಜರಿದುನಿನ್ನನು ತಾನಾತರಳನ ಕಾಯ್ವೆನೆಂದಾ |ನರನ ತಪ್ಪೆಣಿಸದೆ ಕರೆಯದಲೆ ಪೋದೆ ನಿ-ನ್ನರಮನೆಯ ತನಕಲಿ |ಎರಡೇ ಘಳಿಗೆಯೊಳು ಪರಿಪರಿ ಭಕುತ ಜನರುಗಳು ಬಿನ್ನೈ-ಪರು ಬೀದಿಗಳೊಳು |ಮೆರೆಯುತಲೀಗಲೆ ಸರಸರ ಬರುವದುಪರಮಾಯಾಸವೇ 2ಮೀನಾಕ್ಷಿ ಯಶೋದೆ ನಿನ್ನನು ಪೊತಾನೆಂದುನುಣ್ಣನೆ ತೊಟ್ಟಿಲೊಳಿಟ್ಟು |ತಾ ನುಡಿಯಲು ಜೋಗುಳಾನು ಕೇಳ್ವೆ ಕಿವಿಗೊಟ್ಟುನಾನಾಗಮ ಸಮ್ಮತ |ಗಾನ ಮಾಳ್ಪುದು ವಿದ್ವಾಂಸಾನೀಕವೀಗ ನಿನ್ನಧ್ಯಾನಕೆ ಬಾರದೆಯೇನು |ನಿನ್ನ ಬಗೆ ತಾನರಿಯಳು ಶ್ರೀಮಾನಿನಿಖಗವಹಶ್ರೀನಿಧೆ ಮೂರೊಂದು |ಹಾನಿರಹಿತ ಗದಾಪಾಣಿ ಹರಿಯೇ ಶ್ರೀ-ಪ್ರಾಣೇಶ ವಿಠಲನೆ 3
--------------
ಪ್ರಾಣೇಶದಾಸರು
ಪಾಲಿಸು ಗಣನಾಥ ನೀ ಎನ್ನ ಮೇಲೆ ಕೃಪೆಯ ನಿರತ ಪಸ್ಥೂಲ ಶರೀರ ವಿಶಾಲ ಲೋಚನ ಸುರಜಾಲ ವಂದಿತಜಾಲವಂದಿತ ಗುಣಶೀಲ ಸಜ್ಜನಪಾಲ ಅ.ಪಮೂಷಿಕವಾಹನನೆ ವಿಘ್ನೇಶ್ವರ ಪಾಶಾಂಕುಶಧರನೆಈಶ ನಂದನ ನಿನ್ನ ದಾಸನೆನಿಸೊ ಎನ್ನಆಸೆಯ ಸಲಿಸು ವಿಘ್ನೇಶ ವಿನಾಯಕ 1ಕಾಮಿತಫಲಪ್ರದನೇ ವಿನಾಯಕ ಸ್ವಾಮಿ ಶನೇಶ್ವರನೆಸಾಮಜವದನನೇ ಶ್ಯಾಮಲವರ್ಣನೇಕಾಮವರ್ಜಿತ ಗುಣಸ್ತೋಮ ವಂದಿತನೇ 2ಗಿರಿಜೆಯ ವರಸುತನೇ ಲಂಬೋದರ ಉರಗನ ಸುತ್ತಿಹನೇಕರದಿ ಮೋದಕಹಸ್ತವರಏಕದಂತನೆಶರಣು ನಿನಗೆ ಗೋವಿಂದನ ಸಖನೆ 3
--------------
ಗೋವಿಂದದಾಸ
ಶಿವ ಮಹಾಗುರು ಸಹಜಾನಂದಭವಹರಮೃಡಬ್ರಹ್ಮಾನಂದ|xmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ಭವಮೃಡಸಾಂಬಶಿವಾನಂದ | ದಶಭುಜ ಪಂಚವದನನೇತ್ರ |ದಳಪಂಚಕ ಮಂಗಳಗಾತ್ರ| ಭಸಿತವಿಲೇಪಸುಜನಸ್ತೋತ್ರ |ಪಶುಪತಿಬಿಸಜಾಕ್ಷನಮಿತ್ರ1ಸುರನದಿಶಿರದಲಿಟ್ಟಿಹನು | ಸ್ಮರನ ಉರಿಗಣ್ಣಿಲಿಸುಟ್ಟಿಹನು |ಉರಗಭೂಷಣ ಕುಂಡಲದ್ವಯನ |ಪರಮಪುರಷ ಗೌರೀವರನ2ಅಮರೇಂದ್ರಾದಿ ಪದಾರ್ಚಿತನು ಡಮರುತ್ರೀಶೂಲ ಮೃಗಾಯುಧನು | ಶಮನ ಮಹಾ ಭಯಸಂಹರನು | ಸುಮನ ಸುಭಕ್ತರ ಪೊರೆವವನು3ಗಜಚರ್ಮಾಂಬರಧರ ಯತಿ | ರಜನೀಪತಿ ಶೇಖರಗೋಪತಿಭಜಕ ಜನಗಳಾಂತರ ಸ್ಫೂರ್ತಿ |ಅಜಸುರನುತ ಸಚ್ಚಿನ್ಮೂರ್ತಿ4ಸಿದ್ಧರ ಮಡುವಿನೊಳಗೆ ವಾಸಾ |ಬದ್ಧಜೀವಂಗಳುದ್ಧರಿಪ ಈಶಾ |ಶುದ್ಧ ಲಕ್ಷಕೆ ಉಪದೇಶ | ಅದ್ವಯಗುರುಶಂಕರ ವೇಷಾ5
--------------
ಜಕ್ಕಪ್ಪಯ್ಯನವರು