ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚರಣವನೆನೆಮನವೆ | ನಂಬಿ ಚರಣವ ನೆನೆಮನವೆ | ಶ್ರೀರಾಮವೇದವ್ಯಾಸರ ಪಾದಕಮಲವ | ನಿರುತದಿ ಪೂಜಿಪಗುರು ಸತ್ಯಪೂರ್ಣರ ಪ ಶ್ರೀ ಮಧ್ವಶಾಸ್ತ್ರದಾ | ಸರೋವರ | ಪ್ರೇಮದಿಹಂಸರಾ | ವ್ಯೋಮ ಕೇಶನಪ್ರಿಯನಾಮ ಮುಕ್ತಾಫಲ | ಪ್ರೇಮದಿಸೇವಿಪ ಕೋಮಲ ಕಾಯರ 1 ಪೋಕದುರ್ವಾದಿಗಳಾ | ವದನಕೆ | ಹಾಕಿದ ಕೀಲಿಗಳಾ | ಬೇಕಾದ ಸಂಪದನೇಕವನುಣಿಸುವ | ಲೋಕಕೆ ಮಾನ್ಯಾಗಿ ಸಾಕುವರೊಡೆಯರ 2 ಮುನಿ ಅಭೀನವತೀರ್ಥರ | ಶುಭಕರ | ವನಜದಿಜನಿಸಿದರಾ | ವನಿಯೊಳು ಮಹೀಪತಿಜನ ಸಲಹುವರಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಿತ್ಯ ಶುಭಮಂಗಳಂ ಪ. ಮಂಗಳಂ ಶ್ರೀ ಭೂಮಿದೇವಿಯ ರಮಣಗೆ ಮಂಗಳಂ ಸದ್ಗುಣಗಣಪೂರ್ಣಗೆ ಮಂಗಳಂ ನಿರ್ದೋಷ ನಿಗಮತತಿ ವೇದ್ಯನಿಗೆ ಮಂಗಳಂ ಶ್ರೀ ವೇಂಕಟಾಧೀಶಗೆ 1 ವಂದಾರು ಸುರವೃಂದ ರುಚಿರಮಣಿಮಯ ಮಕುಟ ಸಂದೋಹ ಸಂಘಟಿತಪದಪೀಠಗೆ ಇಂದಿರಾಕರಕಮಲರಂಜಿತ ಧ್ವಜವಜ್ರ ಸಂದಿಪ್ಪ ಪಾದಾದಿ ಶುಭರೇಖಗೆ 2 ದಿವ್ಯನಖಮಣಿರಾಗರಂಜಿತಾಂಗುಲಿ ರಮ್ಯ ಭವ್ಯ ಮಂಗಳದಾಯಿ ಭಯಹಾರಿಗೆ ನವ್ಯ ಜಲರುಹಭಾಸ ಮುನಿಜನಾರ್ಚಿತ ಪುಣ್ಯ ಸೇವ್ಯ ಗಂಗಾಜನಕ ಶ್ರೀಚರಣಗೆ 3 ವರಕನಕವನಯುತ ಉರುನಿತಂಬದ್ವಯಗೆ ಸರಸಕೇಳೀವಾಸಸಜ್ಜಘನಕೆ ಸ್ಥಿರರತ್ನ ಮೇಖಲಾ ಸುಕಲಾಪ ಭೃತ್ಕಟಿಗೆ ಹೃ- ತ್ಸರಸಿಜಾಸನಜನಿತ ಶುಭನಾಭಿಗೆ 4 ಭುವನ ಪೂರಿತ ವಳಿತ್ರಯರಾಜದುದರಗೆ ವಿವಿಧ ಕುಸುಮಾಕಲಿತ ಸುಮಮಾಲಿಗೆ ಕೌಸ್ತುಭ ಶ್ರೀವತ್ಸ ನವಹಾರಕೃತ ರಮಾಶ್ರಿತ ವಕ್ಷಕೆ 5 ದೈತ್ಯಜನತಿಮಿರಹರ ವರದೀಪ್ತಿ ಚಕ್ರಕೆ ಶತ್ರುಭೀಷಣ ಘನಧ್ವನಿ ಶಂಖಕೆ ಗೋತ್ರÀಪತಿ(ತಿಯ?) ಸಮಬಲ ಪ್ರೋದ್ಭಾಸಿ ಸದ್ಗದೆಗೆ ಶ್ರಿತಜನ ಭಯಹಾರಿ ವರಪದ್ಮಕ್ಕೆ 6 ಕಂದರ ವದನಕೆ ನಾಸಿಕ ಕಾಲ ಸನ್ಮುಖಕಮಲಕೆ ಅರುವಾರಿಜನೇತ್ರ ಶೋಭನ ಭ್ರೂಯುಗಳ ವರ ಫಾಲತಿಲಕ ಕುಂತಳರಾಯಗೆ 7 ಕಮನೀಯ ಕರ್ಣಯುಗ ರಕ್ತಕುಂಡಲ ಲಲಿತ ವಿಮಲದರ್ಪಣ ಭಾಸ ಗಂಡಯುಗಕೆ ಸುಮಮಾಲಿಕಾಸ್ಥಿತಿತ ವೃತ್ತಕೇಶ ಸಂತತಿಗೆ ರಮಣೀಯ ಗುಣರಚಿತ ವರ ಮಕುಟಕೆ 8 ಉದಯಗಿರಿನಿಕರ ವಿಸ್ಫುರಿತ ಶುಭಗಾತ್ರಕೆ ಮದನಮದಗಜಶೀಲ ಲಾವಣ್ಯಕೆ ಸದಭೀಷ್ಟÀದಯ ಪೂರ್ಣಪ್ರಜ್ಞಮುನಿಸೇವ್ಯ ಪದ ಹಯವದನ ವೆಂಕಟರಮಣಗೆ 9
--------------
ವಾದಿರಾಜ
ನೋಡು ನೋಡು ಗರುಡಗಮನನೆ ಮಾಡು ದಯವನು ವೇಗದಿ ಪ ಪಾಡುವೆ ಆನಂದದಲಿ ನಿನ್ನನು ಕೊಂಡಾಡುವೆನು ನಿನ್ನ ಮೂರ್ತಿಯಾ ಅಪ ಮಂಗಳಾಂಗನೆ ಮನ್ಮಥನ ಪಿತ ಸಂಗೀತ ಸುರಲೋಲನೆ ಕಂಗಳಬ್ಬರ ತೀರುವಂತೆ ಚರಣಂಗಳನೆ ತೋರೋ ವಿನಯದಿ1 ಪರಮ ಪುರುಷನೆ ಪುಣ್ಯ ಶ್ಲೋಕನೆ ದುರುಳ ದೈತ್ಯರ ದಲ್ಲಣ ಮರಿಯಲೀಸದೆ ನಿನ್ನ ಚರಣ ಸ್ಮರಣೆ ಒದಗಿಸೊ ವದನಕೆ 2 ವಂದನೆಯು ಗೋವಿಂದ ಗೋಪಾಲಾ ಮಂದರಧರ ಮಾಧವಾ ಇಂದು ವಿಜಯವಿಠ್ಠಲ ನಿನ್ನ ಸಂದರ್ಶನವ ಕೋರುತಾ 3
--------------
ವಿಜಯದಾಸ
ಬಂದೆ ಬಂದೆ ಸ್ವಾಮಿಯೆ ಬಂದೆ ಬಂದೆ ಪ. ಬಂದೆ ಬಂದೆ ಗೋವಿಂದ ಗೋವಳ ಬಾಂಧವ ಭಕ್ತವತ್ಸಲಇಂದಿರೇಶ ಶ್ರೀ ವೆಂಕಟ ನಿನ್ನ ಸಂದರುಶದಕೆ ಸಾಗಿ ನಾನಿಲ್ಲಿ ಅ.ಪ. ನಡೆದು ನಡೆಸುತ ನುಡಿದು ನುಡಿಸುತಅಡಿಗಡಿಗೆ ಕಾಪಾಡುತಒಡನೆ ಆಡುತ ಬಿಡದೆ ಕ್ಷಣವನುಸಡಗರದಿ ಕರೆತರಲು ನಾನಿಲ್ಲಿ 1 ಆಪ್ತ ಅನಿಮಿತ್ತ ವ್ಯಾಪ್ತ ಸರ್ವತ್ರಗುಪ್ತ ಗುಣಗಣಪೂರ್ಣನೆಪ್ರಾಪ್ತ ನೀನೆನಗಾಗಬೇಕೆಂದುವ್ಯಾಪ್ತಿ ನಿನ್ನದು ಹುಡುಕುತಲಿ ನಾ2 ಒಂದು ರೂಪದಿ ನಿಂದು ಎನ್ನಲ್ಲಿಚೆಂದದಿಂ ಕರೆತಂದೆ ಇಲ್ಲಿಒಂದರಿಯೆ ನಿನ್ನ ವಂದಿಸುವ ಬಗೆಬಂದೊದಗೊ ನೀನೆನ್ನ ವದನಕೆ 3 ಬಂದೆ ಬಂದೆ ನೀ ಬಂದಂತೆ ಕರ-ತಂದುದಕೆ ಫಲ ನೀನೆ ಬಲ್ಲೆಸಂದರುಶನ ನಿನಗೆ ನೀ ಮಾಳ್ಪಂದವನು ನೋಳ್ಪಾತುರದಿ ನಾ 4 ಏನು ಕೊಡಲಿಲ್ಲ ಏನು ಬೇಡಲಿಲ್ಲಏನು ಪಡೆಯಲೊ ಕರುಣಿಯೆನೀನು ಕೊಟ್ಟ ಸ್ವಾತಂತ್ರ್ಯದ ಫಲನಿನಗೆ ಅರ್ಪಿಸಬೇಕೆನುತ ಇಲ್ಲಿ 5 ರಕ್ಷಶಿಕ್ಷಕ ಮೋಕ್ಷದಾಯಕಸೂಕ್ಷ್ಮ ಘನ ಮಹಾವ್ಯಾಪಕಕುಕ್ಷಿಯೊಳು ಜಗದ್ಭರಿತ ಪೂರಿತಅಕ್ಷಯಫಲದಾಯಕ 6 ನಮೋ ನಮೋ ನಾಗಾರಿವಾಹನನಮೋ ನಮೋ ಸುರಸುಪ್ರಸನ್ನನೆನಮೋ ನಮೋ ಗೋಪಾಲವಿಠಲನಮಿಪ ಭಕ್ತರ ಸಲಹುವನೆಂದು 7
--------------
ಗೋಪಾಲದಾಸರು