ವರದ ಗುರು ಗೋವಿಂದ ವಿಠಲ ಪೊರೆ ಇವನಾ ಪ
ತರಳನನು ಒಪ್ಪಿಸಿಹೆ | ಕರಪಿಡಿಯೊ ಹರಿಯೆ ಅ.ಪ.
ಮರುತ ಮತದಲಿ ಭಾವಿ | ಮರುತರೆಂದೆನಿಸುತಿಹಗುರುರಾಜ ಸಚ್ಚರಣ | ಕರುಣ ಪಾತ್ರಾಇರುವ ಈ ಶಿಶುವ ತವ | ಚರಣ ಕಮಲಂಗಳಿಗೆಅರ್ಪಿಸುತ ಭಿನ್ನವಿಪೆ | ನಿರುತ ಪೊರೆಯೆಂದು 1
ಗುರು ಹಿರಿಯರ ಸೇವೆ | ನಿರುತ ಗೈಯ್ಯುವ ಮನವಕರುಣಿಸುತ ಧರೆಯೊಳಗೆ | ಮೆರೆಸೊ ಕೀರ್ತಿಯಲೀಬರ ಬರುತ ವೈರಾಗ್ಯ | ಹರಿ ಗುರೂ ಸದ್ಭಕ್ತಿಉರುತರದ ಸುಜ್ಞಾನ | ಪರಿಪಾಲಿಸಿವಗೇ 2
ಭೃತ್ಯ ವತ್ಸಲನೇ 3
ಸರ್ವಗುಣ ಸಂಪೂರ್ಣ | ಸರ್ವವ್ಯಾಪ್ತ ಸ್ವಾಮಿನಿರ್ವಿಕಾರನೆ ದೇವ | ಶರ್ವ ವಂದ್ಯಾಸರ್ವದಾ ಸರ್ವತ್ರ | ದುರ್ವಿಭಾವ್ಯನೆ ಹರಿಯೆಪ್ರವರ ತವ ಸಂಸ್ಮರಣೆ | ಸರ್ವದಾ ಈಯೋ 4
ಜೀವ ಪರತಂತ್ರತೆಯ | ಭಾವುಕಗೆ ಅರಿವಿತ್ತುಭಾವದೊಳು ಮೈದೋರೊ | ದೇವದೇವೇಶಾಈ ವಿಧದ ಭಿನ್ನಪವ | ನೀ ವೊಲಿದು ಸಲಿಸುವುದುಮಾವಿನೋದಿಯೆ ಗುರು | ಗೋವಿಂದ ವಿಠಲಾ 5