ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದಿರೆ ಮನೋಹರನ ಪ ಒಂದು ಕ್ಷಣ ತಾಳಲಾರೆ ವಂದಿಸುವೆನೆಲೆ ನೀರೆ ಅ.ಪ ಚಂದ್ರಕಿರಣಗಳುರಿಯಂದದಿ ತೋರುತಲಿದೆ ಮಂದ ಮಾರುತಗೆ ಕಡು ಕುಂದಿದೆನೆ ಮಂದಯಾನೆ 1 ಸೇರಿದ ಸುಖವ ಮರೆಯಲಾರೆನೆ ಸರೋರುಹಾಕ್ಷಿ 2 ಭೂತಳಕಧಿಕವಾದ ನೂತನಾವರಣಪುರಿ ದಾತ ಗುರುರಾಮವಿಠಲ ಯಾತಕೆ ನಿರ್ದಯಗೈದ 3
--------------
ಗುರುರಾಮವಿಠಲ
ವಂದಿಸುವೆನೆಲೆ ತಾಯೆ ವಂದಿತಾಮರೆಯೆ ಪ. ಶ್ರೀಕಲಶಾಬ್ಧಿಕನ್ಯೆ ಸುರಕುಲಮಾನ್ಯೆ ಶ್ರೀಕರ ಗುಣಪೂರ್ಣೆ ಶೋಕಾಪಹರಣೆ ಲೋಕನಾಯಕೆ ಘನ್ನೆ ಪಾಕಶಾಸನಸುತೆ ಪವನಜಸೇವಿತೆ ಸಾಕೇತನಿಲಯೆ ಸರಾಗದಿ ರಕ್ಷಿಸು 1 ಆನತನುತ ಗೀರ್ವಾಣಿ ಅಂಬುಜಪಾಣಿ ಮಾನಿನೀಮಣಿ ಕಲ್ಯಾಣಿ ಭಯವಾರಿಣಿ ಭಾವಜಾತ ಜನನೀ ಭಾಗವತಾರ್ಚಿತೆ ಭಕ್ತಾಭಯಪ್ರದಾತೆ ಬಾಗುತೆ ಶಿರ ನಿನಗೇಗಳುಂ ಮನವಾರೆ 2 ಅರಿಯೆನು ನಿನಗೆಣೆಯಾರ ಕಾಣೆನು ಹಿತರ ಚರಣವ ನಂಬಿದೆ ಮನವಾರ ಪಿಡಿಯೆನ್ನ ಕರವ ಕರುಣದಿ ನೋಡೆನ್ನಿರವ ಪರಮಪಾವನ ಶೇಷಗಿರೀಶನ ಕರುಣಾರೂಪಿಣಿ ಜಗತ್ಕಾರಿಣಿ3
--------------
ನಂಜನಗೂಡು ತಿರುಮಲಾಂಬಾ