ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದಿರೆ ಮನೋಹರನ ಪ ಒಂದು ಕ್ಷಣ ತಾಳಲಾರೆ ವಂದಿಸುವೆನೆಲೆ ನೀರೆ ಅ.ಪ ಚಂದ್ರಕಿರಣಗಳುರಿಯಂದದಿ ತೋರುತಲಿದೆ ಮಂದ ಮಾರುತಗೆ ಕಡು ಕುಂದಿದೆನೆ ಮಂದಯಾನೆ 1 ಸೇರಿದ ಸುಖವ ಮರೆಯಲಾರೆನೆ ಸರೋರುಹಾಕ್ಷಿ 2 ಭೂತಳಕಧಿಕವಾದ ನೂತನಾವರಣಪುರಿ ದಾತ ಗುರುರಾಮವಿಠಲ ಯಾತಕೆ ನಿರ್ದಯಗೈದ 3
--------------
ಗುರುರಾಮವಿಠಲ
ಇಂದಿರೆ ಇಂದುವದನೇ ಸರಸಿಜಸದನೇ ನಿಂದಿತ ಜನಸೂದನೆ ಪ ವಂದಿಸುವೆನೆ ಅರವಿಂದಗಂಧಿನಿ ಮಂದಿರದಲಿ ಗೋವಿಂದನ ತೋರಿಸೆ ಅ.ಪ. ಮೂಲೋಕಮಾತೆ ವಿಖ್ಯಾತೆ ಕೈವಲ್ಯದಾತೆ ಕಾಲ ದೇಶದಿ ವ್ಯಾಪಿತೆ ಭಜಕರಪ್ರೀತೆ ಶೀಲೆ ಸಂಪೂರ್ಣ ಗುಣವ್ರಾತೇ ಫಾಲನಯನ ತ್ರಿದಶಾಲಯ ಪ್ರಮುಖರ ಪಾಲಿಸುತಿಹೆ ಮಂದಜಾಲಜನಕೆ ರಮೇ ಶ್ರೀಲತಾಂಗಿ ನಿನ್ನಾಳುಗಳೊಳು ಹರಿ ಲೀಲೆಯ ಮನದಲಿ ಅಲೋಚನೆ ಕೊಡೆ 1 ಲೋಕನಾಯಕಿ ಲಕುಮಿ ಶ್ರೀ ಸಾರ್ವ ಭೌಮೆ ಶೋಕರಹಿತ ಸುನಾಮೆ ನಾಕಜವನಧಿ ಸೋಮೆ ದೇವಲಲಾಮೆ ಸಾಕಾರವಂತೆ ಗುಣ ಸÉ್ತೂೀಮೆ ನೀ ಕರುಣಿಸಿ ಅವಲೋಕಿಸಿ ಎನ್ನಯ ಕಾಕುಮತಿಯ ಕಳೆದೇಕಾಂತದಿ ನಿತ್ಯ ಏಕ ಮನದಿ ಹರಿ ಶ್ರೀ ಕರಪದಧ್ಯಾನ ನೀ ಕರುಣಿಸು ನಿರಾಕರಿಸದಲೆ 2 ಜಾತರಹಿತ ಜಯವಂತೆ ದೈತ್ಯಕೃತಾಂತೆ ಸೀತಾಂಶುಕೋಟಿ ಮಿಗೆಕಾಂತೆ ಪಾತಕದೂರೆ ನಿಜಪಂಥೆ ನಿತ್ಯಾ ನಿಶ್ಚಿಂತೆ ನೀತದೂರಾದಿ ಮಧ್ಯಾಂತೆ ಪುರುಹೂತ ಮುಖಾವರ ವ್ರಾತ ವಿನುತೆ ಅತಿಪ್ರೀತಿಯಿಂದಲಿ ನಮ್ಮ ವಾತಜನಕ ಜಗನ್ನಾಥ ವಿಠಲನ ಮಾತು ಮಾತಿಗೆ ನೆನೆವಾತುರ ಮನ ಕೊಡೇ 3
--------------
ಜಗನ್ನಾಥದಾಸರು
ವಂದಿಸುವೆನೆಲೆ ತಾಯೆ ವಂದಿತಾಮರೆಯೆ ಪ. ಶ್ರೀಕಲಶಾಬ್ಧಿಕನ್ಯೆ ಸುರಕುಲಮಾನ್ಯೆ ಶ್ರೀಕರ ಗುಣಪೂರ್ಣೆ ಶೋಕಾಪಹರಣೆ ಲೋಕನಾಯಕೆ ಘನ್ನೆ ಪಾಕಶಾಸನಸುತೆ ಪವನಜಸೇವಿತೆ ಸಾಕೇತನಿಲಯೆ ಸರಾಗದಿ ರಕ್ಷಿಸು 1 ಆನತನುತ ಗೀರ್ವಾಣಿ ಅಂಬುಜಪಾಣಿ ಮಾನಿನೀಮಣಿ ಕಲ್ಯಾಣಿ ಭಯವಾರಿಣಿ ಭಾವಜಾತ ಜನನೀ ಭಾಗವತಾರ್ಚಿತೆ ಭಕ್ತಾಭಯಪ್ರದಾತೆ ಬಾಗುತೆ ಶಿರ ನಿನಗೇಗಳುಂ ಮನವಾರೆ 2 ಅರಿಯೆನು ನಿನಗೆಣೆಯಾರ ಕಾಣೆನು ಹಿತರ ಚರಣವ ನಂಬಿದೆ ಮನವಾರ ಪಿಡಿಯೆನ್ನ ಕರವ ಕರುಣದಿ ನೋಡೆನ್ನಿರವ ಪರಮಪಾವನ ಶೇಷಗಿರೀಶನ ಕರುಣಾರೂಪಿಣಿ ಜಗತ್ಕಾರಿಣಿ3
--------------
ನಂಜನಗೂಡು ತಿರುಮಲಾಂಬಾ