ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದಿಗೆ ಇರುತಿಹ ಮಂದನ ಶÀ್ರಮ ಬಹು ಬಂಧನ ಬಿಡಿಸೊ ಗೋವಿಂದ ಎನ್ನನು ಕಾಯೊ ಮುಕುಂದ ಪ ಹಿಂದಿನ ಕಾಲದೊಳಾದ ಪ್ರತೀಕಾರ ದಿಂದ ಬಾಧಿಪನಿವನೆನ್ನ ಕಾಯ ಬೇಕೈಯ್ಯಾ ನೀ ಎನ್ನ 1 ನಿಂದ್ರಾದೆ ಗ್ರಾಮದಿ ಪೊಂದಾದೆ ಜನರನ್ನು ಕುಂದುತ ಬಂದೆನಾರಣ್ಯ ವಾಸವಮಾಡುತ ಇನ್ನಾ 2 ಇಂದಿರಪತಿಪಾದದ್ವಂದ್ವವು ಮನ್ಮನ ಮಂದಿರದಲಿ ತೋರಿನ್ನಾ ಐದುವೆ ನಿಜಸುಖವನ್ನಾ 3 ಪೊಂದಿಸು ನಿನ್ನಯ ವಂದಿಸುವಾ ಜನ ಸಂದಣಿಯೊಳು ಮುಂದೆನ್ನಾ ಐದುವೆ ನಾ ನಿನ್ನಾ 4 ಇಷ್ಟುಶ್ರಮವ ನಾ ತಪ್ಟಿಸಿ ಪೇಳಿದೆ ಧಿಟ್ಟಗುರುಜಗನ್ನಾಥಾ ವಿಠ್ಠಲ ನಿಜಜನಪ್ರೀತಾ
--------------
ಗುರುಜಗನ್ನಾಥದಾಸರು
ವಂದಿಸುವಾನರ ಶ್ರೇಷ್ಠಗ್ವಂದಿಸು ಪ ಕೇಸರಿ ಸುತನಾದ ಭೂತನುಜಳ ವಾರ್ತೆ ಲೇಸಾಗಿ ತಂದ ಪ್ರಾಣೇಶನ ಪಾದಕ್ಕೆ 1 ಸುಗ್ರೀವನಗ್ರಜನಾಗ್ರ(ಹ)ದಿ ಕೊಲಿಸಿದ ದ- ಶಗ್ರೀವನ ಬಲ ನೆಗ್ಗೊತ್ತಿದ್ವಾನರಗೆ 2 ಭೂಮಿಗೊಡೆಯ ಸೀತಾರಾಮಸೇವಕನಂಘ್ರಿ ಪ್ರೇಮದಿ ಭಜಿಸೋ ಭೀಮೇಶಕೃಷ್ಣನ ಭಕ್ತಗೆ3
--------------
ಹರಪನಹಳ್ಳಿಭೀಮವ್ವ
ಶಯನ ಸುಖವೇ ಸುಖವೆ ರಂಗನಾಥ ಭಯಗೊಂಡ ಭಕ್ತರೊಳು ದಯವಿಲ್ಲವೆ ಪ ಶರಣನ ಕೈ ನೀಡಿ ಪೊರೆಯೆಂದು ಪೇಳ್ವಾಗ ದುರಿತಗಳ ಹರಿಸೆಂದು ಬೇಡುವಾಗ ಕರುಣಾನಿಧಿ ನೀನೆಂದು ಹಾಡಿ ಹಂಬಲಿಪಾಗ ಶಿರಬಾಗಿ ಪಾದಕೆ ವಂದಿಸುವಾಗ ರಂಗಾ 1 ಜೀವಿಗಳ ಪಾಲಿಸುವ ಹೊಣೆ ನಿನಗೆ ಸಲುವಾಗ ದೇವ ನೀನೋಬ್ಬನೇ ದಿಕ್ಕೆನುವಾಗ ಭಾವದಲಿ ನಿನ್ನಮೂರ್ತಿಯ ನೆನೆದು ನಲಿವಾಗ ದೇವ ಎನ್ನಪ್ಪ ಬಾಯೆನುವಾಗ ರಂಗಾ 2 ಸ್ವಾಭಿಮಾನದಿ ನೀನು ಲೋಕವನು ಮರೆವಾಗ ಲೋಭಿ ನೀನೆನ್ನದೇ ಜಗವೆಲ್ಲ ರಂಗಾ ಲಾಭವುಂಟೇ ಭಕ್ತಜನಕೆಲ್ಲ ಕ್ಷಯರೋಗ ನಾಭಿಗಂಟದೆ ಪೇಳು ಮಾಂಗಿರಿಯರಂಗ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ವಂದಿಸಿದವರೆ ಧನ್ಯರು - ನಮ್ಮ - |ಇಂದಿರಾಪತಿಗಡ್ಡ ಬೀಳುತಲೊಮ್ಮೆ ಪ.ಒಂದೊಂದು ಸ್ತೋತ್ರದಿ ಒಂದೊಂದು ಮಂತ್ರದಿ |ಒಂದೊಂದು ನಾಮವ ನೆನೆಯುತಲಿ ||ಮಂದರೋದ್ಧರನನು ಕುಂದದೆ ಪೂಜಿಸಿ |ವಂದಿಸುವಾನಂದದಿಂದ 1ಬಿಟ್ಟು ಲಜ್ಜೆಯನು ದೃಷ್ಟಿಸಿ ನೋಡುತ |ವಿಟ್ಠಲ ವಿಟ್ಠಲ ಎನುತ ಮನ - ||ಮುಟ್ಟಿ ಮಾಡುವ ಭಕ್ತಿ - ಸ್ತೋತ್ರ - ಸ್ತುತಿಗಳಿಂದ |ಅಷ್ಟಾಂಗದಲಿ ವಂದನೆಯ ಮಾಡುತಲಿ 2ಸಿರಿಲಕ್ಷ್ಮೀಪತಿ ಶರಣಾಗತರನು |ಕರುಣಿಸೆಂದೆನುತಕರವ ಮುಗಿದು ||ಹರುಷ ಪುಳಕದಿಂದ ಹೊರತ ದೇಹವನು ಶ್ರೀ - |ಪುರಂದರವಿಠಲರಾಯನ ಚರಣಕೆ 3
--------------
ಪುರಂದರದಾಸರು