ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಲ್ಲಕ್ಕಿ ಸೇವೆಯವಧಾನ ಆಳಪಲ್ಲಕ್ಕಿಯಲಿ ಮಂಡಿಪುದು ಶಿವ ನಿಧಾನ ಪ ಮದನ ಕೈಗಳ ಸುಭುಜ-ವಲಯದೊಳ್ತಳದ ಪೂರುಷರ ಸರಪಂಸೆಗಳತೊಳಪಗಜಪಕ್ಷಿಯಗ್ರಗಳಾ ದೇವಲಲನೆಯರ ಚಾಮರದ ಕರದ ಚಲನೆಗಳಾ 1 ವಂದಿಮಾಗಧರೆಲ್ಲ ಕರವೆತ್ತಿ ಪೊಗಳುತಿರೆದಾಂಧಣಧಣಾ ಎಂದು ಮೊಳಗೆ ಮಂಗಳವಾದ್ಯಚಂದ್ರಸೂರ್ಯರು ಜಗಜ್ಯೋತಿಯನುಪಿಡಿದಿರಲು ಗಂಧರ್ವತತಿ ಪಾಡುತಿರಲುಮುಂದೆ ರಂಭಾದಿ ಗಣಿಕೆಯರು ನರ್ತಿಸಲು ದೇವೇಂದ್ರ ಮುಕ್ತಾಛತ್ರಮಂ ಪಿಡಿದಿರಲು ಧನದಕುಂದಣದ ಪಾದುಕೆಯ ಪಿಡಿದಿರಲುವಾಯು ನಲವಿಂದ ಸೀಗುರಿಯ ವೀಜಿಸಲುಸುರರು ಮುಂದೆ ಜಯಜಯವೆಂದು ಓಲೈಸುತಿರಲು 2 ಸುರರು ಹೂಮಳೆಗರೆಯೆ ಸುರದುಂದುಭಿಯು ಮೊಳಗೆಪರಮಋಷಿವರರು ವೇದಂಗಳನು ಪಠಿಸೆ ತುಂ-ಬುರನಾರದರು ವೀಣೆಯನು ಬಾಜಿಸಲು ಗಣನಿ-ಕರ ಖಡ್ಗಶರವ ಪಿಡಿದಿರಲುಸರಸಿಜೋದ್ಭವನು ನಿಮ್ಮುನ್ನತಿಯನರುಹುತಿರೆಸುರರಾಜಮಂತ್ರಿ ಸಮಯವ ಸೂಚಿಸುತಿರಲುವರಕೆಳದಿಪುರವಾಸ ರಾಮೇಶ ಜಯವೆಂದುಹರಿ ಹಸ್ತಲಾಘವನು ಕೊಡಲು ಗೌರಿಹರುಷದಿಂ ಮುಂಬಿನೊಳು ರಂಜಿಸುತ್ತಿರಲು 3
--------------
ಕೆಳದಿ ವೆಂಕಣ್ಣ ಕವಿ
ಬಂದಾನು ಬಂದಾನು ಪ ಬಂದನಾಗ ಗೋವಿಂದ ಯದುಕುಲಾ ನಂದ ಮುಕುಂದನು ಮಂದಹಾಸದಲಿ ಅ.ಪ. ಬೀದಿ ಬೀದಿಯೊಳು ಬಲು ಶೃಂಗಾರ ಬಗೆ ಬಗೆ ತೋರಣದಿಂದಲಂಕಾರ ಕಾದುನಿಂತಿಹ ಜನ ಪರಿವಾರ ಮೋದದಿ ಮಾಡುವ ಜಯ ಜಯಕಾರ ಮೇದಿನಿ ಸುರರಾಮ ಮಂತ್ರದ ಉಚ್ಚಾರ ಸೌಧಗಳಲ್ಲಿಹ ಸ್ತ್ರೀಯರಪಾರ ಸಾಧರದಿಂದೀಕ್ಷಿಸೆ ಜನನಿ ಕರವು ಮೋದವೆ ಬೀರುತ ಯಾದವ ಕುಲಮಣಿ 1 ಸುಂದರಿಯರು ನಲವಿಂದ ನಿಂದಿಹರು ಗಂಧ ಪರಿಮಳದ ಜಲವೆರಚಿಹರು ಅಂದದರಳ ಪುಷÀ್ಪಗಳ ವರ್ಷಿಪರು ಕುಂದಣದಾರತಿಗಳ ಪಿಡಿದಿಹರು ವಂದಿಮಾಗಧರು ಪೊಗಳುತಿಹರು ಚಂದದಿ ಮಣಿಮಯ ಸ್ಯಂದನದಲಿ ಅರ ವಿಂದ ನಯನ ಬಲು ಸುಂದರಾಗನು 2 ಬಂಗಾರದ ರಥವೇರಿ ಬರುತಿಹನು ಕಂಗಳಿಗುತ್ಸವ ತಾ ತರುತಿಹನು ಮಂಗಳಕರ ತಿಲಕವನಿಟ್ಟಿಹನು ಬಂಗಾರದ ಮಕುಟ ಧರಿಸಿಹನು ಶೃಂಗಾರದ ಶಿಸ್ತಲಿ ಶೋಭಿಪನು ಅಂಗಜಕೋಟಿ ನಿಭಾಂಗನಾಗಿಹನು ಮಂಗಳಾಂಗ ಶ್ರೀರಂಗ ಕರಿಗಿರಿ ನೃಸಿಂಗನು ಕರುಣಾಪಾಂಗವ ಬೀರುತ 3
--------------
ವರಾವಾಣಿರಾಮರಾಯದಾಸರು
ಲೋಕನೀತಿಯ ಪದಗಳು 448 ಅನ್ನದಾನವನ್ನೆ ಮಾಡು ಕನ್ಯದಾನವನ್ನೆ ಮಾಡುನಿನ್ನ ನಂಬಿದರ ಪೊರೆದುನ್ನತ ಹರ್ಷದಿ ಬಾಳುಸನ್ನುತ ಸರ್ವಲೋಕಗಳನ್ನು ರಕ್ಷಿಸುವನಾಗ ಪ್ರ-ಸನ್ನ ಮೂರುತಿಯಾಗುರನ್ನದ ರಾಶಿಗಳನ್ನು ಚಿನ್ನದ ಆಭರಣಗಳನ್ನುಭೂಸುರರಿಗಿತ್ತು ಮನ್ನಿಸು ಉದಾರನಾಗುಮನ್ನೆಯರೆಲ್ಲರು ಬಂದುನಿನ್ನನೋಲೈಸಲೆಂದು ಅಪರ್ಣೆಪರಿಸಿದಳು 1 ಕೋಟಿ ಗೋದಾನವ ಮಾಡು ಸಾಟಿಯಿಲ್ಲದಂಥಾ ಪಂಚಕೋಟಿ ಗಜದಾನ ಶತಕೋಟಿಯಶ್ವದಾನಗಳಮೀಟಾದ ಬ್ರಾಹ್ಮರಿಗಿತ್ತು ಕೀರ್ತಿವಂತನಾಗು ಕಿ-ರೀಟ ಶೌರ್ಯದೊಳಾಗು ಮೀಟಾದ ಮಂತ್ರಿಗಳ ಕಿ-ರೀಟ ರತ್ನಕಾಂತಿಗಳ ಕೋಟಿ ನಿನ್ನ ಪಾದದಲ್ಲಿಧಾಟಿಯಾಗಿರುವನಾಗುಲೂಟಿಸಿ ವೈರಿಗಳನು ಗೋಟುಗೊಳಿಸುವ ಶಶಿಜೂಟ ಭಕ್ತನಾಗು 2 ಇತ್ತೆರದೆ ಬೀಸುತಿಹ ಮುತ್ತಿನ ಚಾಮರ ಶ್ವೇತಛ್ಛತ್ರ ಸೀಗುರಿಗಳ ಮೊತ್ತದ ಸಾಲೊಳಗೆ ಒ-ಪ್ಪುತ್ತಲಿರುವವನಾಗು ಸತ್ಯವಂತನಾಗು ಸುವ್ರತ ನೀನಾಗುಪೆತ್ತವರ ನೋಡಿ ನಲಿವುತ್ತಿರಲು ಭೂಸುರರುಮುತ್ತಿನಕ್ಷತೆಯನಾಂತುಪೃಥ್ವಿಯ ವೊಳಗೆಲ್ಲಾ ಸ-ರ್ವೋತ್ತಮ ಪುರುಷನಾಗೆನುತ್ತಮಸ್ತಕದಿ ತಳಿವುತ್ತ ಪರಸಿದರು 3 ಇಂದ್ರನಾಗು ಭೋಗದೊಳು ಸತ್ಯವಾಕ್ಯದೊಳು ಹರಿ-ಶ್ಚಂದ್ರನಾಗು ಪಾಲನೆಯ ಮಾಡುವುದರೊಳಗೆ ಉ-ಪೇಂದ್ರನಾಗು ಬುದ್ಧಿ ಕೌಶಲದೊಳು ತಿಳಿಯಲು ನಾ-ಗೇಂದ್ರ ನೀನಾಗುಚಂದ್ರನಾಗು ಶಾಂತಿಯೊಳಗೆಂದು ವಂದಿಮಾಗಧರವೃಂದ ಕರವೆತ್ತಿ ಜಯವೆಂದು ಪೊಗಳುತ್ತಿರಲಾ-ಚಂದ್ರಾರ್ಕವು ಸೌಖ್ಯದಿ ಬಾಳೆಂದು ಸಾನಂದದೊಳಾಗಇಂದಿರೆ ಪರಸಿದಳು4 ಧೀರನಾಗುದಾರನಾಗು ಸೂರಿಜನವಾರಕೆ ಮಂ-ದಾರನಾಗು ಸಂಗರ ಶೂರನಾಗು ವೈರಿ ಜ-ಝ್ಝೂರನಾಗು ಮಣಿಮಯ ಹಾರನಾಗುವೀರಾಧಿವೀರ ನೀನಾಗುಭೂರಮಣನಾಗು ಮಂತ್ರಿವಾರ ಸಂರಕ್ಷಕನಾಗುಕಾರುಣ್ಯಸಾಗರನಾಗು ಕಾಮಿತಫಲಿದನಾಗುಶ್ರೀ ರಾಮೇಶನಪಾದಾಬ್ಜ ವಾರಿಜ ಭಕ್ತನಾಗೆಂದುಶಾರದೆ ಪರಸಿದಳು5
--------------
ಕೆಳದಿ ವೆಂಕಣ್ಣ ಕವಿ
ಸರಸಿಜಾಲಯವೆಂಬುವ ಸೊಗಸಿನ [ಶಯನಿಸು] ಪ. ವರರತ್ನ ಮಂಟಪದೊಳು ಉರಗಪತಿಯಂತು ವರತಲ್ಪವಾಗಿರಲು ಸಿರಿಯೊಡನೆ ನೀಂ ಶಯನಿಸು ಅ.ಪ ತಪನ ಶಶಿಗಳೆಂಬುವ ಅಪ್ರತಿಮ [ವೆ ಚಪಲಾಕ್ಷಿ ಶ್ರೀದೇವಿಯುಪಚಾರದಿಂ ನಲಿದು ಅಪರಿಮಿದಾನಂದದಿಂ ಶಯನಿಸು 1 ತುಂಬುರು ನಾರದರೆಂಬುವ ವಂದಿಮಾಗಧರ ತಂಬೂರಿ ಸ್ವರಗಾನಮಂ | ಸಂಭ್ರಮದಿ ಕೇಳುತ್ತ ನಲಿಯುತ [ಶಯನಿಸು] 2 ಗರುಡಪವನಜರೆಂಬುವ ನಿನ್ನಂಘ್ರಿ | ಸರಸಿಜವ ಸೇವಿಸುವ ವರಭಕ್ತರು ಬಂದು | ಕರಮುಗಿದು ನಿಂದಿರಲು ನಲಮಂ[ಶಯನಿಸು] 3 ವರಶೇಷಗಿರಿ ನಿಲಯನೇ ಜಯಜಯತು | ವರದ ನಾರಾಯಣನೇ | ಕರುಣಾಭರಣ ಲಕ್ಷ್ಮೀನರಹರಿಯೆ ನಿ | ನ್ನರಸಿಯೊಡನೆ ನೀಂ ಶಯನಿಸು 5
--------------
ನಂಜನಗೂಡು ತಿರುಮಲಾಂಬಾ