ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಳು ಪೀಠಕೇ ನಳಿನದಳಾಂಬಕೇ ಜಗನ್ನುತೆ ಪ. ಬಾಲೇಂದುನಿಭ ಫಾ¯ ಶ್ರಿತಪರಿಪಾಲೇ ಕೋಮಲೇ ಅ.ಪ ಕುಂದರದನೆ ಮಂದಗಾಮಿನೀ ವಂದಿತಾಮರ ವೃಂದಾರ ವೃಂದಾನಂದಪ್ರದೇ 1 ತೋರಮುತ್ತಿನ ಚಾರುಪೀಠಕೆ ಸಾರಿಬಾ ವರ ಸಾರಸಾನನೇ ನಾರೀಮಣಿಯರೆ ಸಾರಿಕರುವರು ಮೀರಿದಾನಂದದಿಂದ 2 ಶೇಷಶೈಲ ನಿವಾಸಿನೀ ನತ ಪೋಷಿಣೀ ಜಯಶ್ರೀ ರಮಾಮಣಿ ಯಾಸಾ ಸಾರಸನೇತ್ರೇ ಕಮಲಾವಾಸೇ ದಯೆತೋರಿಸೇ 3
--------------
ನಂಜನಗೂಡು ತಿರುಮಲಾಂಬಾ
ತಂದು ತೋರೆ ಮಂದಹಾಸನ | ಕಾಮಿನಿ | ತಂದು ತೋರೆ ಮಂದಹಾಸ | ನಂದ ಕಂದ ಶ್ರೀಮುಕುಂದ | ವಂದಿತಾಮರೇಂದ್ರ ವಂದ್ಯನ | ಕಾಮಿನಿ ಪ ಉರವನಿತ್ತಗುರುಮೊಮ್ಮನುದರಲಿ ಬಂದ ಮಾತೆ ಮಗನ | ಶರದ ಭರಕೆ ಫಣಿಲಿ ತಾಳ್ದಾನಾ | ಕಾಮಿನಿ 1 ಸರಳದಿಂದ ಪ್ರಾಣ ತೊರಿದನಾ | ಪ್ರೀತಿಯಾ | ಸರಳಕಾದು ಅಳಿದನಯ್ಯನ | ಸರಳಗದೆಯ ಕೈಯ್ಯಲಿಂದ | ಸರಳತ್ರಯನ ಕೊಲಿಸಿದಾತನ | ಕಾಮಿನಿ 2 ಶತಕಮೃಗನ ಭೋಜ್ಯವಾಹನ | ಸಖಉರಭಕಾಗಿ ನಿಲ್ಲದೇ | ಅಖಿಲದೋಳಗೆನುಸಲುತಿಹನಾ | ರಾಶಿಯ | ಪಕವನಳಿದನರಿಯಸುತನ | ರಕ್ಷಕಮಹೀಪತಿನಂದನ| ಮುಖದಿ ತನ್ನ ಚರಿತೆನುಡಿಪನ ಕಾಮಿನಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ವಂದಿಸುವೆನೆಲೆ ತಾಯೆ ವಂದಿತಾಮರೆಯೆ ಪ. ಶ್ರೀಕಲಶಾಬ್ಧಿಕನ್ಯೆ ಸುರಕುಲಮಾನ್ಯೆ ಶ್ರೀಕರ ಗುಣಪೂರ್ಣೆ ಶೋಕಾಪಹರಣೆ ಲೋಕನಾಯಕೆ ಘನ್ನೆ ಪಾಕಶಾಸನಸುತೆ ಪವನಜಸೇವಿತೆ ಸಾಕೇತನಿಲಯೆ ಸರಾಗದಿ ರಕ್ಷಿಸು 1 ಆನತನುತ ಗೀರ್ವಾಣಿ ಅಂಬುಜಪಾಣಿ ಮಾನಿನೀಮಣಿ ಕಲ್ಯಾಣಿ ಭಯವಾರಿಣಿ ಭಾವಜಾತ ಜನನೀ ಭಾಗವತಾರ್ಚಿತೆ ಭಕ್ತಾಭಯಪ್ರದಾತೆ ಬಾಗುತೆ ಶಿರ ನಿನಗೇಗಳುಂ ಮನವಾರೆ 2 ಅರಿಯೆನು ನಿನಗೆಣೆಯಾರ ಕಾಣೆನು ಹಿತರ ಚರಣವ ನಂಬಿದೆ ಮನವಾರ ಪಿಡಿಯೆನ್ನ ಕರವ ಕರುಣದಿ ನೋಡೆನ್ನಿರವ ಪರಮಪಾವನ ಶೇಷಗಿರೀಶನ ಕರುಣಾರೂಪಿಣಿ ಜಗತ್ಕಾರಿಣಿ3
--------------
ನಂಜನಗೂಡು ತಿರುಮಲಾಂಬಾ
ಸೇವಕನೆಲೊ ನಾನು ನಿನ್ನಯ ಪಾದಸೇವೆ ನೀಡೆಲೊ ನೀನು ಪ. ಸೇವಕನೆಲೊ ನಾನು ಸೇವೆ ನೀಡೆಲೊ ನೀನುಕಾವದೇನೆಲೊ ಶ್ರೀವಧೂವರ ರಾವಣಾಂತಕ ರಕ್ಷಿಸೆನ್ನನುಗೋವರ್ಧನ ಗಿರಿಧರ ದೇವ ಗೋವುಗಳ ಕಾವಶ್ರೀಮಹಾನುಭಾವ ವರಗಳನೀವ ದೇವಶ್ರೀವಲ್ಲಭ ದಯಮಾಡೆನ್ನನುಈ ವ್ಯಾಳೆಗೆ ಇಂದಿರೆರಮಣ ಅ.ಪ. ರಾಮ ದಶರಥನಂದನ ರಘುಕುಲಾಬ್ಧಿಸೋಮ ಸುಂದರವದನವಾಮನ ಪರಿಪೂರ್ಣಕಾಮ ಕೌಸಲ್ಯರಾಮಸ್ವಾಮಿ ಶ್ರೀರಂಗಧಾಮ ದೈತ್ಯವಿರಾಮಶ್ರೀಮದನಂತ ನಾಮಭೀಮ ಮುನಿಜನಸ್ತೋಮರಮ್ಯಗುಣಧಾಮ ರಣರಂಗಭೀಮಕೋಮಲಶ್ಯಾಮ ಹೇಸಾಮಜವರದ ನೀನನುದಿನಕಾಮಿತಫಲವನು ಕರುಣಿಸಿ ಕಾಯೊ 1 ಶಂಕರ ಸುರಸೇವಿತ ಶೇಷಗರುಡಾ-ಲಂಕಾರ ಮಣಿಶೋಭಿತಪಂಕಜನಯನ ಮೀ-ನಾಂಕ ಜನಕ ಪಾದ-ಪಂಕಜಾಸನವಿನುತ ತಿರುಪತಿವೆಂಕಟ ಬಿರುದಾಂಕ ಜಯ ಜಯಶಂಖಚಕ್ರಗದೆ ಪಂಖ ಪಿಡಿದಕಳಂಕ ಚರಿತ ತಾ-ಟಂಕಗೊಲಿದ ನಿಶ್ಶಂಕಲಂಕಾಧಿಪರಿಪು ರಘುಪತಿಕಿಂಕರರಿಗೆ ಕಿಂಕರ ನಾನೆಲೊ 2 ಮಾಧವ ಮಧುಸೂಧನನಂದಮಂಗಳ ವಿಗ್ರಹಬಿಂದುಮಾಧವ ಶ್ರೀಮುಕುಂದ ಶ್ರೀಮದಾ-ನಂದ ವಂದಿತಾಮರವೃಂದ ಶ್ರುತಿಗಳ ತಂದ ತುರಗವನೇರಿ ಬಂದವೃಂದಾವನದೊಳಗಿಂದ ಯಶೋದೆಯಕಂದ ಹರಿಗೋ-ವಿಂದ ಶೇಷಗಿರಿಯಲಿ ನಿಂದಮಂದಾಕಿನಿ ಪಡೆದೆಲೊ ಧ್ರುವಗೊಲಿ-ದಂದದಿ ಎನಗೊಲಿಯೊ ಹಯವದನ 3
--------------
ವಾದಿರಾಜ