ಒಟ್ಟು 11 ಕಡೆಗಳಲ್ಲಿ , 9 ದಾಸರು , 11 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರೋಗಣೆಯ ಮಾಡು ಶ್ರೀವೆಂಕಟೇಶ ಸಾಗರಶಯನನೆ ಸರ್ವವ್ಯಾಪಕ ಕೃಷ್ಣ ಪ ಗಂಗೆಯ ಜನಕಗೆ ಮಂಗಳ ಅಭಿಷೇಕ ಸಂಭ್ರಮದಲಿ ಮಾಡಿ ತವಕದಲಿ ಶಂಭುವಂದಿತಗೆ ಪೀತಾಂಬರನುಡಿಸಿ ಪಾ- ದಂಗಳನೆ ಪೂಜಿಸುತ ಸ್ತುತಿಪರು ಇಂದಿರಾಪತಿ ಶೀಘ್ರದಿಂದಲಿ 1 ಅಪ್ರಮೇಯನೆ ನಿನಗೆ ಅಪ್ಪಾಲು ಅತಿರಸ ವಪ್ಪಾದ ವಡೆದೋಸೆ ಚಿತ್ರಾನ್ನವೂ ಸತ್ಯಮೂರುತಿ ನಿನಗೆ ಮುತ್ತಿನಂಥಲಾಡುಓಗರ ಮತ್ತೆ ಪಾಯಸ ಮೊಸರು ಬುತ್ತಿ ವಿ- ಚಿತ್ರದಲಿ ತಂದರ್ಪಿಸಿಹರು2 ಕನಕ ಮಂಟಪದೊಳು ಕರ್ಪೂರದಾರತಿ ವಿನಯದಿ ಮಾಡುತ್ತ ನಮಿಸುವರು ಮನಕೆ ಬೇಸರ ಬೇಡ ಕಮಲನಾಭ ವಿಠ್ಠಲ ಘಮ ಘಮಿಪ ತಾಂಬೂಲ ವೀಳ್ಯವ ತವಕದಲಿ ಸ್ವೀಕರಿಸು ಶ್ರೀಶಾ 3
--------------
ನಿಡಗುರುಕಿ ಜೀವೂಬಾಯಿ
ಕನ್ಯಾರತ್ನವನಿತ್ತನು ಹರಿಗೆ ಸತ್ರಾಜಿತರಾಯನು ಪ ಧನ್ಯನು ತಾನೆಂದೆನ್ನುತ ಯದುಕುಲರನ್ನ ಸುಗುಣ ಸಂಪನ್ನಗೆ ಹರುಷದಿ ಅ.ಪ. ಸನ್ನುತ ಚರಣನಿಗೆ ಕಮನೀಯ ಸ್ವರೂಪಗೆ ಕಮಲಾರಮಣಗೆ ಸ್ವರತನಿಗೆ ಕಾಮಿತ ಫಲದಾತಗೆ ಸುಮಬಾಣನ ಪಿತ ಸುಂದರಗೆ ಸುಮದಳನೇತ್ರನಿಗೆ ನಮಿಪ ಜನರ ಸುರದ್ರುಮನೆಂದೆನಿಸುವ ಅಮಿತ ಮಹಿಮಯುತಸಮವಿರಹಿತನಿಗೆ 1 ಬೃಂದಾರಕ ಬೃಂದ ಸುವಂದಿತಗೆ ಶ್ರೀ ಗೋವಿಂದಗೆ ಬೃಂದಾವನ ವಿಹರಣ ವಿಭವಗೆ ವಿಶ್ವಂಭರನಿಗೆ ಮಂದಾಕಿನಿ ಜನಕಗೆ ಮಾಧವಗೆ ಮರಕತಶ್ಯಾಮನಿಗೆ ಮಂದರಧರ ಮುಚುಕುಂದವರದ ಪೂ ರ್ಣೇಂದು ವದನಗುಣಸಾಂದ್ರ ಮುಕುಂದಗೆ 2 ವರಲೀಲಾ ಮಾನುಷ ವೇಷನಿಗೆ ವದನಾಂಬುಜದಲಿ ಸರಸಿಜ ಜಾಂಡವ ತೋರಿಪಗೆ ಸಾರಸನಾಭ ಪರಮಪಾವನ ಚರಿತಗೆ ಪುರುಷೋತ್ತಮನಿಗೆ ಗರುಡಗಮನ ಶ್ರೀ ಕರಿಗಿರೀಶ ಯದು ವರಕುಲಮಣಿ ಮುರಹರನಿಗೆ ಮುದದಲಿ 3
--------------
ವರಾವಾಣಿರಾಮರಾಯದಾಸರು
ಜಯ ಜಯವೆನ್ನಿ ಗುರು ಜಗದೀಶಗೆ ಜಯ ಜಯ ಜಗತ್ರಯ ಪಾವನಗೆ ಧ್ರುವ ಆನಂದೊ ಬ್ರಹ್ಮ ಆನಂದ ಕಂದಗೆ ಅನುದಿನ ಜಯ ಜಯ ಅನುಪಮಗೆ ಸನಕ ಸನಂದನ ವಂದಿತಗೆ ಮುನಿಜನ ಹೃದಯ ನಿವಾಸಗೆ 1 ನಿತ್ಯ ನಿರ್ಗುಣಗೆ ಅಗಣಿತಗುಣ ಪರಿಪೂರ್ಣಗೆ ಝಗಿಝಗಿಸುವ ಜಗನ್ಮೋಹನಗೆ ಜಗಜ್ಜೀವ ಜಗದಾತ್ಮಗೆ 2 ಜಯ ಜಯ ಮಂಗಳ ಮಹಾಮುನಿಗೆ ಮಹಿಮಾನಂದ ಗುರುಮೂರ್ತಿಗೆ ಮಹಿಪತಿ ಸ್ವಾಮಿ ಸರ್ವೋತ್ತಮಗೆ ಜಯ ಜಯವೆನ್ನಿರೊ ಜಗದೊಳಗೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತ್ರಾಹಿ ತ್ರಾಹಿ ತ್ರಾಹಿ ತ್ರಾಹಿಯೆನ್ನಿರೊ ತ್ರಾಹಿ ತಾರಕ ಬ್ರಹ್ಮಗೆನ್ನಿರೊ ಧ್ರುವ ತ್ರಾಹಿ ಮಚ್ಚ ಕೂರ್ಮಾವತಾರಗೆನ್ನಿರೊ ತ್ರಾಹಿ ವರಹ ನರಸಿಂಹಗೆನ್ನಿರೊ ತ್ರಾಹಿ ವಾಮನ ಭಾರ್ಗವಗೆನ್ನಿರೊ ತ್ರಾಹಿ ರಾಮಕೃಷ್ಣ ಗೋಪಾಲಗೆನ್ನಿರೊ 1 ತ್ರಾಹಿ ಭೌದ್ಧ ಕಲ್ಕ್ಯಾವತಾರಗೆನ್ನಿರೊ ತ್ರಾಹಿ ಸಗುಣ ನಿರ್ಗುಣಗೆನ್ನಿರೊ ತ್ರಾಹಿ ವಟಪತ್ರಶಯನಗೆನ್ನಿರೊ ತ್ರಾಹಿ ತ್ರೈಲೋಕ್ಯ ವಂದಿತಗೆನ್ನಿರೊ2 ತ್ರಾಹಿ ಹರಿಹರ ವಿರಂಚಿಗೆನ್ನಿರೊ ತ್ರಾಹಿ ಸುರವರ ನಿರಂಜನಗೆನ್ನಿರೊ ತ್ರಾಹಿ ಭಕ್ತಜನ ಸಹಕಾರಗೆನ್ನಿರೊ ತ್ರಾಹಿ ಮಹಿಪತಿ ಪಾಲಗೆನ್ನಿರೊ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಪರಮ ಪುರುಷ ನಿನಗೆ ನಮೋ ನಮೋಪರಮ ಪರಾತ್ಪರಗೆ ನಮೋ ನಮೋ ಪ ಆದಿ ಅನಾದಿಗೆ ನಮೋ ನಮೋ ಮಹದಾದಿ ತತ್ವಕೆ ನಮೋ ನಮೋವಾದರಹಿತನಿಗೆ ನಮೋ ನಮೋ ನಿಜವಾದ ವಸ್ತುವಿಗೆ ನಮೋ ನಮೋ 1 ಲೋಕ ಹಿತಾಖ್ಯಗೆ ನಮೋ ನಮೋ ಜಗದೇಕವಲ್ಲಭನಿಗೆ ನಮೋ ನಮೋನಾಕ ವಂದಿತಗೆ ನಮೋ ನಮೋ ನಿ-ರಾಕಾರ ನಿತ್ಯನಿಗೆ ನಮೋ ನಮೋ2 ಸಿಂಧು ಆನಂದಗೆ ನಮೋ ನಮೋನಾದ ಬಿಂದು ಕಳಾತ್ಮಗೆ ನಮೋ ನಮೋಸುಂದರ ತೇಜಗೆ ನಮೋ ನಮೋಚಿದಾನಂದ ವಿಗ್ರಹಗೆ ನಮೋ ನಮೋ 3
--------------
ಚಿದಾನಂದ ಅವಧೂತರು
ಮಂಗಲಂ ಮಂಗಲಂ ಭವತು ತೇ ಮಂಗಲಂ ಪ. ವಿಜ್ಞಾನಶಕ್ತಿ ಪ್ರಕಾಶಗೆ ಈಶಗೆ ಸಜ್ಜನನಿವಹಾರಾದಿತಗೆ ಅಜ್ಞಾನತಿಮಿರಮಾರ್ತಾಂಡ ಪ್ರಚಂಡಗೆ ಮೂಜದೊಡೆಯ ಮನೋಜ್ಞ ಮೂರುತಿಗೆ 1 ಚಂದ್ರಶೇಖರಸುಕುಮಾರಗೆ ಮಾರನ ಸುಂದರರೂಪ ಪ್ರತಾಪನಿಗೆ ನಿಂದಿತ ಖಲಜನವೃಂದವಿದಾರಗೆ ಸ್ಕಂದರಾಜ ಕೃಪಾಸಿಂಧು ಪಾವನಗೆ 2 ತಾರಕದೈತ್ಯಸಂಹಾರಗೆ ಧೀರಗೆ ಶೂರಪದ್ಮಾಸುರನ ಗೆಲಿದವಗೆ ಸೇರಿದ ಭಕ್ತರ ಸುರಮಂದಾರಗೆ ನಾರದಾದಿ ಮುನಿವಾರವಂದಿತಗೆ 3 ವಲ್ಲೀವಲ್ಲಭನಿಗೆ ಒಲಿದರ್ಗೆ ವರದಗೆ ಎಲ್ಲ ಭೂತಾಶ್ರಯ ಬಲ್ಲವಗೆ ಖುಲ್ಲದಾನವರಣಮಲ್ಲ ಮಹೇಶಗೆ ಬಿಲ್ಲುವಿದ್ಯಾಧೀಶ ಭೀಮವಿಕ್ರಮಗೆ 4 ಕಂಜಾಕ್ಷ ಲಕ್ಷ್ಮೀನಾರಾಯಣ ತೇಜಗೆ ಮಂಜುಳಕಾಂತಿ ವಿರಾಜನಿಗೆ ನಂಜುಂಡನ ಕರಪಂಜರಕೀರ ಪಾ- ವಂಜೆ ಕ್ಷೇತ್ರಾದಿವಾಸ ಸುರೇಶನಿಗೆ 5
--------------
ತುಪಾಕಿ ವೆಂಕಟರಮಣಾಚಾರ್ಯ
ಮಂಗಳಂ ಜಯ ಮಂಗಳಂ ಲಿಂಗಾಕಾರದ ಪರಶಿವಗೆ ಪ ರಜತಾದ್ರಿಪುರದೊಳು ನಿಂದವಗೆ ಭಜಕರ ಸಲುಹಲು ಬಂದವಗೆ ನಿಜಸುರ ಸೇವಿತ ಗಜಚರ್ಮಾಂಬರ ತ್ರಿಜಗ ವಂದಿತನಾದ ಪರಶಿವಗೆ1 ಬಾಣನ ಬಾಗಿಲ ಕಾಯ್ದವಗೆ ತ್ರಾಣದಿ ತ್ರಿಪುರವ ಗೆಲಿದವಗೆ ಕಾಣದ ಅಸುರಗೆ ಪ್ರಾಣಲಿಂಗವನಿತ್ತು ಮಾಣದೆ ಭಕ್ತರ ಸಲುಹುವಗೆ 2 ಗಂಗೆಯ ಜಡೆಯೊಳು ಧರಿಸಿದಗೆ ಸಿಂಗಿಯ ಕೊರಳೊಳು ನುಂಗಿದಗೆ ತಿಂಗಳ ಸೂಡಿಯೆ ಅಂಗ ಭಸ್ಮಾಂಗದಿ ಕಂಗಳು ಮೂರುಳ್ಳ ಕೃಪಾಂಗನಿಗೆ 3 ಅಸ್ಥಿಯ ಮಾಲೆಯ ಧರಿಸಿದU É ಹಸ್ತದಿ ಶೂಲವ ಪಿಡಿದವಗೆ ವಿಸ್ತರವಾಗಿಯೆ ಭಸ್ಮಸುವಾಸಿಗೆ ಸತ್ಯದಿ ವರಗಳನಿತ್ತವಗೆ 4 ಅಂಬಿಕಪತಿಯೆಂದೆನಿಸಿದಗೆ ತ್ರಿ- ಯಂಬಕ ಮಂತ್ರದಿ ನೆಲೆಸಿದಗೆ ನಂಬಿದ ಸುರರಿಗೆ ಬೆಂಬಲವಾಗಿಯೆ ಇಂಬಾದ ಪದವಿಯ ತೋರ್ಪವಗೆ 5 ಪಂಚಾಕ್ಷರದೊಳು ಒಲಿದವಗೆ ಪಂಚಮ ಶಿರದೊಳು ಮೆರೆವವಗೆ ಪಾತಕ ಸಂಚಿತ ಕರ್ಮವ ವಂಚಿಸಿ ಭಕ್ತರ ವಾಂಛಿತವೀವಗೆ 6 ಪಾಶುಪತವ ನರಗಿತ್ತವಗೆ ಶೇಷಾಭರಣವ ಹೊತ್ತವಗೆ ಕಾಶಿಗಧಿಕವಾಗಿ ಕೈವಲ್ಯವಿತ್ತು ವಿ- ಶೇಷದಿ ಜನರನು ಸಲುಹುವಗೆ7 ಯಕ್ಷ ಸುರಾಸುರ ವಂದಿತಗೆ ದಕ್ಷನ ಮಖವನು ಕೆಡಿಸಿದಗೆ ಕುಕ್ಷಿಯೊಳೀರೇಳು ಜಗವನುದ್ಧರಿಸಿಯೆ ರಕ್ಷಿಸಿಕೊಂಬಂಥ ದೀಕ್ಷಿತಗೆ 8 ಕಾಮಿತ ಫಲಗಳ ಕೊಡುವವಗೆ ಪ್ರೇಮದಿ ಭಕ್ತರ ಸಲಹುವಗೆ ಭೂಮಿಗೆ ವರಾಹತಿಮ್ಮಪ್ಪನ ದಾಸರ ಸ್ವಾಮಿಯೆಂದೆನಿಸುವ ಈಶನಿಗೆ 9
--------------
ವರಹತಿಮ್ಮಪ್ಪ
ಮಂಗಳ ಮಣಿಮಲ ಲಂಘಿತಾಂಗಳ ಕಪಿಸಾಂಗ ವಂದಿತ ಭೂಷಿತಾಂಗ ಮಾರುತಿಗೆ ಪ ವ್ಯಾಳ್ಯದಂದದಿ ಪುಚ್ಛಮ್ಯಾಲೆ ತೂಗುತಲೆಂಕಿಲೆಂಕಿರಾಮಗ ಸೀತಾಲಂಕನಿತ್ತವಗೆ 1 ಹೂಂಕರಿಸುತ ಬಾಲ ಬೆಂಕಿಯಿಂದಲ್ಲೆ ಸುಟ್ಟಏಳುಚಿರಿಪ ಸಣ್ಣ ಬಾಲ ಹನುಮನಿಗೆ 2 ದಾಶರಥಿಯ ಮುಂದೆ ವಾಸಮಾಡುತ ಕೆಂಪುರುಷ ಬಾಡದಿ ಸಮ ಘೋಷನಿತ್ತವಗೆಇಂದಿರೇಶನರ್ಚಿಪಗೆ ದ್ರೌಪದೀಶ ವಂದಿತಗೆ 3
--------------
ಇಂದಿರೇಶರು
ಮಂಗಳ ಮುಖ್ಯಪ್ರಾಣೇಶಗೆ ಜಯ ಮಂಗಳ ಮೂಜಗವಂದಿತಗೆ ಪ. ಅಂಜನೆತನಯಂಗೆ ಮಾಪ್ರತಿ ಮಹಿಮಂಗೆ ಕಂಜನಾಭನ ಕಾರ್ಯದನುಕೂಲಗೆ ರಂಜಿಪ ಹನುಮಗೆ ಮಂಗಳ 1 ಆ ಮಹಗಡಲ ಲಂಘಿಸಿ ಹೋಗಿ ಲಂಕೆಯ ಧಮಧುಮ ಮಾಡಿ ವನವ ಕಿತ್ತು ರಾಮ ಮುದ್ರಿಕೆ ಜಾನಕಿಗೆ ತಂದಿತ್ತÀ ಹೇಮಾದ್ರಿ ಹನುಮಗೆ ಮಂಗಳ 2 ಸುತ್ತ ಸಾಗರ ಮಧÀ್ಯದಲ್ಲಿ ಲಂಕೆಯ ಮುತ್ತಿ ವನಜಾಕ್ಷಿಯ ಮುಂದೆ ಬಂದು ಹತ್ತು ತಲೆಯ ರಾವಣನೈಶ್ವರ್ಯವನಳಿದಗೆ ಖ್ಯಾತ ಹನುಮಗೆ ಮಂಗಳ 3 ಜಾತಿ ಬಂಧುಗಳ ಒಡಗೊಂಡು ಸಮುದ್ರದ ಸೇತುವ ಕಟ್ಟಿ ಸಾಹಸದಿಂದಲಿ ಸೀತಾಪತಿಯ ಬಲವ ನಡೆಸಿದ ಪ್ರ ಖ್ಯಾತ ಹನುಮಗೆ ಮಂಗಳ 4 ಈ ಕಾಡಕಪಿಯಲ್ಲ ನಿಮ್ಮ ಸೇವಕನೆಂದು ಬೇಡವೆಂದು ಸೀತೆಯ ಭಯಬಿಡಿಸಿ ಚೂಡಾರತ್ನ ಶ್ರೀ ರಾಮರಿಗಿತ್ತ ಬಂಟ ಕೊಂಡಾಡಿಸಿಕೊಂಬಗೆ ಮಂಗಳ 5 ಬಲ್ಲಿದ ರಾವಣೇಶ್ವರನ ಮಾರ್ಬಲವನು ಕಲ್ಲು ಮರದೊಳಿಟ್ಟು ಕೆಡಹಿದಗೆ ಜಲ್ಲುಕ ದೈತ್ಯರಿಗೆಲ್ಲ ಎದೆಯ ಶೂಲವಗಿದ ಧಲ್ಲ ಹನುಮಗೆ ಮಂಗಳ 6 ಬಲು ದೈತ್ಯರನೆಲ್ಲ ಗೆಲಿದು ಮುದ್ದೇನಹಳ್ಳಿಲಿ ಸ್ಥಿರವಾಗಿ ನಿಂದು ಭಕ್ತರ ಹೊರೆವ ಹೆಳವನಕಟ್ಟೆ ವೆಂಕಟೇಶನ ದೂತ ಚಲದಂಗ ಹನುಮಗೆ ಮಂಗಳ 7
--------------
ಹೆಳವನಕಟ್ಟೆ ಗಿರಿಯಮ್ಮ
ಶ್ರೀಹರಿಯ ಮಂಗಳ ಪದಗಳು ಆರುತಿ ಬೆಳಗುವೆನು ಮಾಧವಗಾರುತಿ ಬೆಳಗುವೆನು ಪ ಆರುತಿ ಬೆಳಗುವೆ ಮಾರುತಿ ಪ್ರಿಯ ಯದು-ಕೀರುತಿಕರ ಪಾರ್ಥಸಾರಥಿ ಹರಿಗೆ ಅ.ಪ. ನೀರೊಳು ಪೊಕ್ಕವಗೆ ಕಡಲೊಳು ಭಾರವ ಪೊತ್ತವಗೆಮೂರು ಪಾದದಿ ಸರ್ವಧಾರುಣಿ ಅಳೆಯುತಧೀರ ಬಲಿಯ ಮನೆ ದ್ವಾರ ಕಾಯ್ದವಗೆ 1 ಕ್ಷತ್ರಿಯರ ಗೆಲಿದವಗೆ ಗಾರ್ಜಿತ ಸತ್ರವ ಕಾಯ್ದವಗೆಸತ್ಯ ರುಕ್ಮಿಣಿ ಮುಖ್ಯ ಪತ್ನಿಯರಾಳಿದಬತ್ತಲೆ ಕುದುರಿಯ ಹತ್ತಿ ಮೆರೆದವಗೆ 2 ಸೃಷ್ಟಿಯು ಇಲ್ಲದವಗೆ ಜಗವನು ಸೃಷ್ಟಿ ಪಾಲಿಪಗೆಬಟ್ಟಿಲಿಂದಲೇ ಗಿರಿ ಬೆಟ್ಟನೆತ್ತಿದ-ಭೀಷ್ಟ ನೀಡಲು ಸುಖ ಪುಷ್ಪವಂದಿತಗೆ 3 ನಂದಗೋಕುಲದಲ್ಲೆ ಬೆಳೆಯುವ ಮಂದಜಾಕ್ಷಿಯರಲ್ಲೆಒಂದೊಂದು ಆಟಗಳಾಡಿ ಸುಖವನಿತ್ತನಂದ ಬಾಲಕನಾದ ಇಂದಿರೇಶನಿಗೆ4
--------------
ಇಂದಿರೇಶರು
ಮಂಗಲಂ ಮಂಗಲಂ ಭವತು ತೇ ಮಂಗಲಂ ಪ.ವಿಜ್ಞಾನಶಕ್ತಿ ಪ್ರಕಾಶಗೆ ಈಶಗೆಸಜ್ಜನನಿವಹಾರಾದಿತಗೆಅಜ್ಞಾನತಿಮಿರಮಾರ್ತಾಂಡ ಪ್ರಚಂಡಗೆಮೂಜದೊಡೆಯ ಮನೋಜÕ ಮೂರುತಿಗೆ 1ಚಂದ್ರಶೇಖರಸುಕುಮಾರಗೆ ಮಾರನಸುಂದರರೂಪ ಪ್ರತಾಪನಿಗೆನಿಂದಿತ ಖಲಜನವೃಂದವಿದಾರಗೆಸ್ಕಂದರಾಜ ಕೃಪಾಸಿಂಧು ಪಾವನಗೆ 2ತಾರಕದೈತ್ಯಸಂಹಾರಗೆ ಧೀರಗೆಶೂರಪದ್ಮಾಸುರನ ಗೆಲಿದವಗೆಸೇರಿದ ಭಕ್ತರ ಸುರಮಂದಾರಗೆನಾರದಾದಿ ಮುನಿವಾರವಂದಿತಗೆ 3ವಲ್ಲೀವಲ್ಲಭನಿಗೆ ಒಲಿದರ್ಗೆ ವರದಗೆಎಲ್ಲ ಭೂತಾಶ್ರಯ ಬಲ್ಲವಗೆಖುಲ್ಲದಾನವರಣಮಲ್ಲ ಮಹೇಶಗೆಬಿಲ್ಲುವಿದ್ಯಾಧೀಶ ಭೀಮವಿಕ್ರಮಗೆ 4ಕಂಜಾಕ್ಷ ಲಕ್ಷ್ಮೀನಾರಾಯಣ ತೇಜಗೆಮಂಜುಳಕಾಂತಿ ವಿರಾಜನಿಗೆನಂಜುಂಡನ ಕರಪಂಜರಕೀರ ಪಾ-ವಂಜೆ ಕ್ಷೇತ್ರಾದಿವಾಸ ಸುರೇಶನಿಗೆ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ