ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪ್ರಮಾಣ ಕೊಟ್ಟ ತರುವಾಯ ತಪ್ಪುವ ನೀನಲ್ಲ ಪ ಅಸುರ ತಾರಕನು ಸುಮನಸರ ಬಳಲಿಸುತಿರಲು ಬಿಸಿಗಣ್ಣವನ ತಪಸು ಹಾನಿಮಾಡಿ ಶಶಿವದನೆ ಪಾರ್ವತಿಯಲ್ಲಿ ಗರ್ಭವನಿಡಿಸಿ ಹಸುಳೆ ಕೈಯಿಂದ ರಾಕ್ಷಸನ ಕೊಲ್ಲಿಸಿದೆ 1 ಶಂಬರ ದೈತ್ಯಜನ ವರದಿಂದ ಅನಿಮಿಷ-ಕ ದಂಬವನು ಸೋಲಿಸಿ ಮೆರೆವುತಿರಲು ಅಂಬುತನಯುದರದಲ್ಲಿ ಹೊಕ್ಕು ಬೆಳೆದದು ಬಂಡು ಅಂಬರರು ನಲಿಯೆ ವನಶಿರವ ಚಂಡಾಡಿದಾ 2 ಮನಮುಟ್ಟಿ ನಿನ್ನನು ವಂದನೆಮಾಡಿ ನರಗೆ ಮನದ ತಾಪವ ಬಿಡಿಸಿ ಮುಕ್ತಿ ಕೊಡುವಾ ಸಿರಿ ವಿಜಯವಿಠ್ಠಲರೇಯನ ಅನುಸರಿಸಿ ಬಾಳುವಂತೆ ಏಕಚಿತ್ತವನೀವಾ 3
--------------
ವಿಜಯದಾಸ
ಭೂಷಣ ಮಾಡಲು ಹಿಗ್ಗೇನೋ ಜನ ದೂಷಣಮಾಡಲು ದು:ಖೇನೋ ಪ ದೋಷನಾಶ ಜಗದೀಶ ಕೇಶ ತನ್ನ ದಾಸರಭಿಮಾನ್ಯೆಂದು ಶಾಶ್ವತರಿತವರಿಗೆ ಅ.ಪ ವಂದನೆಮಾಡಿ ಕೊಡುತಿಹ್ಯರೇನೋ ಮತ್ತು ನಿಂದೆಯನಾಡಿ ಕಸುಕೊಳ್ಳುವರೇನೋ ನಿಂದೆವಂದನಗಳೊಂದೇಯೆಂದು ಆ ನಂದನಕಂದನ್ನಾನಂದದಿ ಭಜಿಪರ್ಗೆ 1 ಸತಿಸುತರೊಲಿದರೆ ಬಂತೇನೋ ಮತ್ತು ಹಿತದಪ್ಪಿ ನಡೆದರೆ ಹೋಯ್ತೇನೋ ಗತಿಪ ಕ್ಷತಿಯ ಹಿತಾಹಿತಸ್ಥಿತಿ ಸಮವೆಂದು ಪತಿತಪಾವನ ಸತತದಿ ನುತಿಪರ್ಗೆ 2 ನೀತಿವಂತನೆನೆ ಬಂದ ಭಾಗ್ಯೇನೋ ಜಗ ಪಾತಕನೆನೆ ಬಂದ ಕುಂದೇನೋ ಪಾತಕಹರ ಭವಭೀತಿವಿನಾಶ ಜಗ ನ್ನಾಥ ಶ್ರೀರಾಮನ ಪ್ರೀತಿ ಪಡೆದವರಿಗೆ 3
--------------
ರಾಮದಾಸರು