ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಾಮನೆಯಖಿಲ ಜಗತ್ಸ್ವಾಮಿ [ಯೌ] ದಾರ್ಯ ಜಯತು ಪ ಸಾಮಗಾನಪ್ರಿಯ ಕೋಮಲಶರೀರ ಜಯ ತಾಮರಸನಯನ ಲಕ್ಷ್ಮೀ ಮನೋಹರನೆ ಜಯ ಮಾಧವ ಮೂರ್ತಿ ಕೀರ್ತಿ ಜಯ ನೇಮಿ ಜಗದಂತರ್ಯಾಮಿ ಚಾತುರ್ಯ ಜಯತು 1 ರಾಮಕೃಷ್ಣ ಮುರಾರಿ ಜಯತು ಮೇಘ ಶ್ಯಾಮ ಅಚ್ಯುತಾನಂತ ಜಯತು ನಿ- ಸ್ಸೀಮ ಲೋಕಶರಣ್ಯ ಜಯತು ಸಾರ್ವ- ಭೌಮ ವಿರಾಡ್ರೂಪ ಜಯ ಜಯತು 2 ಶ್ರುತಿ ಸ್ತೋಮ ಸಂಸ್ತುತ ಜಯ ಜಯತು ವೈಕುಂ- ಠೇತಿ ಸುಕ್ಷೇಮ ಲೋಕಾರಾಧ್ಯ ಜಯತು ಸುತ್ರಾಮಾರ್ಚಿತಾಂಘ್ರಿಯುಗಳ ಜಯತು ಜ್ಯೋತಿ ಪರಂಜ್ಯೋತಿ ನಿರಾಮಯ ವೇಲಾಪುರೀಶನೆ ಜಯತು3
--------------
ಬೇಲೂರು ವೈಕುಂಠದಾಸರು
ಏಕೆ ಮೈ ಮರೆದೆ ನೀನು - ಜೀವನವೇ - |ಏಕೆ ಮೈಮರೆದೆ ನೀನು ಪಏಕೆ ಮೈಮರೆದೆ ನೀ - ಲೋಕಾರಾಧ್ಯನ ಪಾದ|ಬೇಕೆಂದು ಭಜಿಸು ಕಾಣೋ - ಜೀವನವೇ ಅ.ಪ.ಮದ್ದಾನೆಗಳೆಂಟು ಸೊಕ್ಕಿನಿಂ ಬರುವಾಗ |ಎದ್ದು ಕುಳ್ಳಿರಬಾರದೆ - ಜೀವನವೇ ||ಅಧ್ಯಾತ್ಮಕಾ ಹರಿನಾಮವ ಶ್ರುತಿಮಾಡಿ |ಒದ್ದು ಬಿಸಾಡು ಕಣೊ - ಜೀವನವೇ 1ಕಂದರ್ಪನೆಂಬವ ಕಾದುತ ಬರುವಾಗ |ನಿಂದಿಸುತಿರಬಾರದೆ - ಜೀವನವೇ ||ಒಂದೇ ಮನಸು ಎಂಬ ವಜ್ರಾಯುಧವ ಪಿಡಿದು |ಕೊಂದು ಬೀಸಾಡು ಕಾಣೊ - ಜೀವನವೇ 2ವಿಷಯದಿ ಸುಖಕಾಣೆ ಪಶುಜನರೊಳು ದೇಹ |ಹಸನುಗಳೆಯಲು ಬೇಡವೋ - ಜೀವನವೇ||ಬಿಸಜಾಕ್ಷ ಪುರಂದರವಿಠಲನೊಲಿಯೆ ಸುಖ -|ರಸದಿ ಲೋಲಾಡು ಕಾಣೋ - ಜೀವನವೇ 3
--------------
ಪುರಂದರದಾಸರು