ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸತ್ಯಲೋಕೇಶನೆ ಬಳಿತ್ಥಾದಿ ಶ್ರುತಿವಿನುತ ಸುರಪೂಜ್ಯ ಭಕುತರ ವಿ ಪತ್ತು ಪರಹರಿಸಿ ಸಲಹಯ್ಯ 1 270 ಸತ್ಯಲೋಕವೆ ಸದನ ತತ್ವಾಭಿಮಾನಿಗಳು ಭೃತ್ಯರೆನಿಸುವರು ಮಹಲಕ್ಷ್ಮಿ | ಮಹಲಕ್ಷ್ಮಿ ಜನನಿ ಪುರು ಷೋತ್ತಮನೆ ಜನಕನೆನಿಸುವ 2 271ಚತುರದಶ ಲೋಕಾಧಿಪತಿಯೆಂದೆನಿಪ ನಿನಗೆ ಸರ ಸ್ವತಿಯು ನಿಜರಾಣಿ ವಿಹಗೇಂದ್ರ | ವಿಹಗೇಂದ್ರ ಶೇಷ ಪಾ ರ್ವತಿಪರಾತ್ಮಜರು ಎನಿಸೋರು 3 272 ಋಜುಗಣಾಧೀಶ್ವರನೆ ಅಜಪದವಿಗೋಸುಗದಿ ಭಜಿಸಿದವನಲ್ಲ ಹರಿಪಾದ | ಹರಿಪಾದ ಸೇವೆಯು ಸ ಹಜವೇ ಸರಿ ನಿನಗೆಂದೆಂದು 4 273 ಚತುರಾಸ್ಯ ತತ್ವ ದೇವತೆಗಳಂತರ್ಯಾಮಿ ನತಿಸಿ ಬಿನ್ನೈಪೆ ನಿನ್ನಲ್ಲಿ | ನಿನ್ನಲ್ಲಿ ಭಕ್ತಿಶಾ ಶ್ವತವಾಗಿರಲೋ ಹರಿಯಲ್ಲಿ 5 274 ದ್ವಿಶತ ಕಲ್ಪದಲಿ ತಪವೆಸಗಿ ಅಸುದೇವ ಪೊಂ ಹರಿಯಿಂದ ಮಿಕ್ಕ ಸುಮ ನಸರಿಗುಂಟೇನೊ ಈ ಭಾಗ್ಯ 6 275 ಇನಿತಿದ್ದ ಬಳಿಕ ನೀ ಸಲಹದಿಪ್ಪುದು ನಮ್ಮ ಅನುಚಿತೋಚಿತವೊ ನೀ ಬಲ್ಲೇ | ನೀ ಬಲ್ಲೆ ಶಾರದಾ ವನಿತೆಯ ರಮಣ ದಯವಾಗೊ 7 276 ಸತ್ವಾತ್ಮಕ ಶರೀರ ಮಿಥ್ಯಾದಿ ಮತಗಳೊಳು ಉತ್ಪತ್ತಿ ಸಂಪತ್ತು ಕೊಡದಿರು | ಕೊಡದಿರೆನಗೆಂದು ಸಂ ಪ್ರಾರ್ಥಿಸುವೆ ನಿನಗೆ ನಮೋ ಎಂದು 8 277 ಅಜ್ಞಾನವೆಂಬ ಧಾನ್ಯವನು ಒರಳಿಗೆ ಹಾಕಿ ಸುಜ್ಞಾನವೆಂಬೊ ಒನಕೀಲಿ | ಒನಕೀಲಿ ಪಾಪಧಾನ್ಯಗಳ ನುಗ್ಗು ಮಾಡಿದೆಯೊ ಘಳಿಗ್ಯಾಗೆ 9 278 ಮಾತರಿಶ್ವನೆ ನಿನ್ನ ಪ್ರೀತಿಯೊಂದೇ ಜಗ ನ್ನಾಥವಿಠಲನ್ನ ಕರುಣಕ್ಕೆ | ಕರುಣಕ್ಕೆ ಕಾರಣವು ಯಮ ಯಾತನವು ಬರಲು ನಾನಂಜೆ 10
--------------
ಜಗನ್ನಾಥದಾಸರು
ಕೃಷ್ಣ ಮುರಾರಿ ಕೇಶವ ಮುರಾರಿಅಚ್ಚುತಾನಂತ ಗೋವಿಂದ ಮುರಾರಿಪ. ವೇಷಧಾರಿಯಾಗಿ ಬಂದು ಅಸುರರ ಸಂಹರಿಸಿಭೂಸುರರಿಗ್ವೊರವನಿತ್ತ್ಯೋ ಕೇಶವ ಮುರಾರಿ 1 ನಾ ತಾಳಲಾರೆನೊ ಲೋಕಾಧಿಪತಿಯೆ ಕಾಯೊಅನಾಥರಕ್ಷಕ ನಾರಾಯಣನೆ ಮುರಾರಿ 2 ಮಾಧವ ಮುರಾರಿ3 ಅನೇಕ ಗೋವ್ಗಳ ಕಾಯ್ದ ಗೋಪಾಲಮೂರುತಿಗೋಪಿಯರರಸ ಗೋವಿಂದ ಮುರಾರಿ 4 ಕಟ್ಟಿದ ಕಾಮನೆಯ ಬಿಟ್ಟು ಕಳಚಿ ಮನ-ದಿಷ್ಟಾರ್ಥವನೀವ ವಿಷ್ಣು ಮುರಾರಿ 5 ಮಧುರವಾಕ್ಯಗಳಿಂದ ಮಂದಿರಕಾಗಿ ಬಾರೊಮನಸಿಜನಯ್ಯ ಮಧುಸೂದನ ಮುರಾರಿ 6 ತಿದ್ದಿದ ಕಸ್ತುರಿತಿಲಕ ತಿಗುರಿದ ಪರಿಮಳಗಂಧಮುದ್ದು ನಸುನಗೆಯ ತ್ರಿವಿಕ್ರಮ ಮುರಾರಿ7 ಕಾಮಿನಿ ಅಗಲಿಬಂದು ಸೀಮೆನಾಳುವೆÀನೆಂದುನೇಮವಾಕ್ಯದಿ ನಿಂದ ವಾಮನ ಮುರಾರಿ 8 ಶ್ರೀಯರಸ ಮೇಳದಿ ರಮಿಸಿ ಬಹುಕಾಲದಿಸಿಂಧುಶಯನ ಶ್ರೀಧರನೆ ಮುರಾರಿ 9 ಋಷಿಗಳಿಗ್ವರವಿತ್ತು ಬೃಂದಾವನದಲ್ಲಿ ನಿಂದುಹರುಷವಾರಿಧಿ ಹೃಷಿಕೇಶ ಮುರಾರಿ 10 ಪಾವನ್ನ ಮೂರುತಿ ಪರಮದಯಾಳು ನೀನೆಪಾಲಿಸೊ ಶ್ರೀಪದ್ಮನಾಭ ಮುರಾರಿ11 ದಾನವರ ಮರ್ದಿಸಿ ಸುಮನಸರಿಗೊಲಿದದಾನದತ್ತನೆ ದಾಮೋದರನೆ ಮುರಾರಿ 12 ಶಂಕೆಯಿಲ್ಲದೆ ಗೆಲಿಸು ಶಂಖಚಕ್ರವ ಧÀರಿಸಿ ಅ-ಲಂಕಾರವಾದ ಸಂಕರ್ಷಣನೆ ಮುರಾರಿ 13 ವಾಸುದೇವ ಮುರಾರಿ 14 ಇದ್ದ ಗೋಪೇರಮನೆಯ ಕದ್ದು ಬೆಣ್ಣೆಯ ಮೆದ್ದಪದ್ಮದಳಾಕ್ಷ ಪ್ರದ್ಯುಮ್ನ ಮುರಾರಿ 15 ಅನಿರುದ್ಧ ಮುರಾರಿ16 ಪುನಗು ಕಸ್ತೂರಿಗಂಧ ಪರಿಮಳಪುಷ್ಪದಿಂದ ಪುಣ್ಯಮೂರುತಿ ಪುರುಷೋತ್ತಮನೆ ಮುರಾರಿ 17 ಅವನಿ ಅಧೋಕ್ಷಜ ಮುರಾರಿ 18 ನಾನೇನ ಪೇಳಲಿ ನಗೆನಗೆಯಲ್ಲಿ ಅಕ್ಷಿಕ್ರೂರವಾಯಿತು ನಾರಸಿಂಹ ಮುರಾರಿ 19 ಮೆಚ್ಚಿದೆ ನಾ ನಿನ್ನ ಪಕ್ಷಿವಾಹನ ಸ್ವಾಮಿಮುಚ್ಚುಮರೆಗಳ್ಯಾಕೊ ಅಚ್ಚುತ ಮುರಾರಿ 20 ಜಾಣತನದಿ ಪೋಗಿ ಜಾರಸ್ತ್ರೀಯರನ್ನುಒಡಗೂಡಿ ಆಡಿದ ಜನಾರ್ದನ ಮುರಾರಿ21 ಉಗುರಲ್ಲಿ ಹಿರಣ್ಯಕನ ಸೀಳಿ ಉರದಲ್ಲಿ ಮಾಲೆಯ ಧರಿಸಿಉಬ್ಬಲ್ಲಿ ಮೆರೆದ ಉಪೇಂದ್ರ ಮುರಾರಿ 22 ಹಿರಣ್ಯಾಕ್ಷತನಯನಂದು ಕರೆಯೆ ಕಂಬದಿ ಬಂದಗರುವದಿಂದಲೆ ನರಹರಿಯೆ ಮುರಾರಿ 23 ಅಟ್ಟಡವಿಯ ತಪಸು ಎಷ್ಟುದಿನವೊ ಸ್ವಾಮಿಪಟ್ಟಣಕಾಗಿ ಬಾರೊ ಕೃಷ್ಣಮುರಾರಿ 24 ಎಲ್ಲರ ಸಲಹಿದ ಫುಲ್ಲಲೋಚನ ಸ್ವಾಮಿಪಾಲಿಸೊ ಶ್ರೀಹಯವದನ ಮುರಾರಿ 25
--------------
ವಾದಿರಾಜ
ಸಜ್ಜನರ ಸಂಗ ನೀಡೊ ಸರ್ವಪಾಲಕನೆ ಮುದ್ದು ಗೋಪಿಯ ಕಂದ ಮೂರ್ಜಗದೊಳ್ವಂದ್ಯ ಪ ಸಾಧುಜನಪ್ರಿಯನೆ ಯಾದವರಿಗೊಡೆಯನೆ ಶ್ರೀದೇವಿ ಅರಸು ಶಿವ ಬ್ರಹ್ಮರಿಗುತ್ತಮನೆ ಶ್ರೀಧರ ಲೋಕಾಧಿಪತಿ ಸದಾನಂದಭರಿತ ನಿನ ಪಾದಪಂಕಜದಿ ನಿಜವಾದ ಭಕುತಿಯ ಕೊಡುವೊ 1 ದುಷ್ಟಜನ ಶಿಕ್ಷಕನೆ ಶಿಷ್ಟರ ಸಂರಕ್ಷಕನೆ ಕಷ್ಟದಾರಿದ್ರ್ಯ ಸಂಹಾರ ಭಯ ಛÉೀದಕÀನೆ ಸೃಷ್ಟಿ ಸ್ಥಿತಿಲಯ ಕರ್ತೃ ಯುಧಿಷ್ಠಿರ(ನ)ನುಜನಸಖನೆ 2 ವಸುದೇವನ ಸುತನೆ ಶೇಷನ್ಹಾಸಿಕÉಯಲ್ಲಿ ಶ್ರೀಸಹಿತ ಶಯನ ಕಂಸಾಸುರಾರಿ ವಾಸವಿಯ ರಥ ನಡೆಸಿದ್ವರಲಕ್ಷ್ಮಿ ವಲ್ಲಭನೆ ಕ್ಲೇಶ ಪರಿಹರಿಸೊ ಭೀಮೇಶಕೃಷ್ಣ ಎನಗೆ 3
--------------
ಹರಪನಹಳ್ಳಿಭೀಮವ್ವ