ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಾರತೀರಮಣ ಸದ್ಭಕ್ತ ಬಂಧೋ ಭವ ಭಯ ಪರಾಭವಗೈಸು ಬೇಗ ಪ ಲೋಕಾಂತರಾತ್ಮಕನೆ ಈ ಕಮಲಜಾಂಡದೊಳು ನೀಕೈಯ ಪಿಡಿದು ಕೃಪಾವಲೋಕನದಿಂದ ಜೋಕೆ ಮಾಡುವುದೆನ್ನ ಮೈನಾಕಿವರಜನಕ 1 ಅನಿಲ ಎನ್ನವಗುಣಗಳೆಣಿಸಲು ಕಡೆಯುಂಟೆ ಕೊನೆಗೆ ನೀನೆ ಗತಿಯೋ ಅನಿಮಿಷೇಶಾ ಜನನಿ ಜನಕ ಭ್ರಾತ ಜನಪ ಗುರುವರ ಮಿತ್ರ ಎನಗೆ ನೀ ಸಕಲ ಸೌಖ್ಯದನೆಂದು ಪ್ರಾರ್ಥಿಸಿದೆ 2 ಹನುಮ ಭೀಮಾನಂದ ಮುನಿರಾಯ ನಿನ್ನ ಪ್ರಾ ರ್ಥನೆ ಗೈಯುವರು ವಾಣಿ ಫಣಿಪ ಮೃಡರು ಅನಿಮಿತ್ತ ಬಾಂಧವ ಶ್ರೀ ಜಗನ್ನಾಥ ವಿಠ್ಠಲನ ತನಯ ತಾವಕರ ಬಂಧನವ ಮೋಚನ ಮಾಡೋ 3
--------------
ಜಗನ್ನಾಥದಾಸರು