ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪ್ರಾಣ ನಿನ್ನಂಘ್ರಿ ಸಿರಿರೇಣು ಕಾಣು ಯೋನಿಯಲಿ ಬಂದೆ ನೊಂದೆ ಗುರುವೆ ನೀನೆ ಗತಿಯೊ ಪ ಭರತ ಭಾರತಿರಮಣ ಭಾರತ ಪ್ರತಿಪಾದ್ಯ ಭರದಿಂದಲಿ ಎನ್ನಭಾರ ವಹಿಸುವ ಭರಣ ಭಾರದ್ವಾಜಾತ್ಮಜ ಭಾರಭಂಗಾ 1 ಗತಿ ಅಗತಿ ಗಮನಗರ್ಭ ಸ್ವರ್ಗ ನರಕ ಈ ಕ್ಷಿತಿ ಲೋಕಾಂತದಲ್ಲಿ ಬಳಲಿ ಮತಿಯ ಕಾಣದೇ ಮಂತ್ರಿ ರಾಜ ಮಹಾತತುವೇಶ ಬಲವತ್ವ್ಸರೂಪ2 ಪಂಚಾಹುತಿಯಲಿ ಹಾಕದಿರೋ ಜೀವೇಶ ಸಂಚಿತಾವಳಿ ಸರ್ವನಾಶಾ ಪಂಚದ್ವಾರದಲಿ ಶ್ರೀ ಹರಿಯ ಪೂಜಿಪ ಪುಣ್ಯ ಸಂಚಕನೆ ಪುರುಷಾಕಾರನೀಯೋ 3 ಅಪೂಪ ಬಹುರೂಪ ಹರಿಚಾಪ ಪ್ರತಾಪ ಕಪಿಕುಲಾಂಬುಜ ದಿನಪ ಸುರಪ ರಿಪು ವಿಪಿನಕಾಲ ಮಹಾ ಗುಪುತ ವ್ಯಾಪ್ತ ಸುಪ್ತಿ ಸ್ವಪನ ಜಾಗೃತಕಾರ್ಯಫಲದಾ4 ರಾಜಿಸುವ ರಾಗವಿದೂರಾ ವಾಜಿರೂಪ ವಾಶಿಷ್ಟ ವಂದ್ಯಾ ವರದಾ ಮಜ್ಜಗದ್ಗುರು ಮುಖ್ಯ ಪ್ರಾಣಾ 5 ಪೂರ್ವೋತ್ತರಂಗ ಸಂಧಿ ಸಂಧಾನ ವಿಶಿಷ್ಟಾ ಈರ್ವ ಸ್ಥಾನದಲಿ ನೀನೇ ಸರ್ವದಲಿ ಧ್ಯಾನವನು ಇತ್ತು ಪಾಲಿಸು ನಿತ್ಯ ಮೂರ್ತಿ 6 ಮಾನವ ರೂಪಾ ಮಾನಾಭಿಮಾನಿಗಳೊಡಿಯಾ ಆನಂದತೀರ್ಥಪದ ಭಕ್ತ ಅನಾಥಬಂಧು ವೈರಾಗ್ಯ 7 ಸಮಸ್ತ ಪರಮಾಣು ತಿಳಿಸೋ ಸಾಮ ಸೂರ್ಯಸ್ಥಿತನೆ ಸೂತ್ರಾ8 ಇಪ್ಪತ್ತೆರಡು ಸ್ಥಾನದಲಿ ಪ್ರಭುವೆ ಜಗ ದಪ್ಪ ಚತುರದ್ವಾರವಾಸ ಅಪ್ರತಿಮಲ್ಲ ಶ್ರೀ ವಿಜಯವಿಠ್ಠಲನ್ನ ಅಪ್ಪಿಕೊಂಡು ಮೆರೆದ ಧೀರಾ 9
--------------
ವಿಜಯದಾಸ
ರಾಘವೇಂದ್ರ ಗುರುರಾಯ ರಮಣೀಯ ಕಾಯ ಭೃಂಗ ಭವ ಭಂಗ ಪ ನೋಡಿದೆ ನಿಮ್ಮ ಮಹಿಮೆಯ ಹಾಡಿ ಪಾಡುವೆನೊ ನಿತ್ಯ ಆಡಿ ಕೊಂಡಾಡಲು ಬಲು ಗೂಢವಾಗಿದೆ ನಾಡಿನೊಳಗೆ ವೊಮ್ಮೆ ಸ್ಮರಣೆ ಮಾಡಿದವ ಧನ್ಯ ಎನ್ನು ಮೂಢ ಬುದ್ಧಿಯನು ಬಿಡಿಸು ಕೂಡಿಸು ಸಜ್ಜನರೊಳಗೆ 1 ನಾಮಾಭಿವಿಡಿದು ಉಮಾಪತಿ ಪರಿಯಂತ ಈ ಮನ ಎರಗಲಿ ಯಾಮ ಯಾಮಕೆ ಕಾಮಿಪೆ ಇದನೆ ಗುರುವೆ ವಾಮದಕ್ಷಣ ಮಾರ್ಗ ನೇಮ ತಪ್ಪುದಂತೆ ತಿಳಿಸಿ ಭ್ರಾಮ ಬುದ್ಧಿಯ ಓಡಿಸುವುದು 2 ಚಿಂತಾಮಣಿ ಕಂಡ ಮೇಲೆ ಭ್ರಾಂತಿಗೊಳಿಪÀ ವಿಷಯ ಚಿಂತಿಸಿ ಬೇಡುವುದು ಲೋಕಾಂತದ ಸುಖವು ಇಂತು ಬಾಗಿ ನಿಂತು ಕೇಳುವಂತೆ ಮಾಡದಿರು ಕರುಣಿ ಸಂತತ ನಿನ್ನ ಪಾದಕ್ರಾಂತನಾಗಿ ತುತಿಸುವೆ 3 ಸಾರಿಸಾರಿಗೆ ಈ ಚಿತ್ರ ತಾರತಮ್ಯವ ವಿಚಾರಗೈದು ನಲಿದಾಡಿ ಮೇರೆ ಇಲ್ಲದೆ ಕೋಶ ಇಂದಿರೇಶನ್ನ ಹೃ ದ್ವಾರಿಜದೊಳು ನಿಲಿಸಿ ಆರಾಧನೆ ಮಾಡುವ ವೈಕಾರಿಕ ಭಾಗ್ಯವೆ ಬರಲಿ 4 ನಮೋ ನಮೋ ಯತಿರಾಜ ಮಮತೆ ರಹಿತ ಅನುಪಮ ಚರಿತಾ ಪರಬೊಮ್ಮ ವಿಜಯವಿಠಲ ನಾ ತುಮ್ಮದೊಳಚಿನಪ ಜ್ಞಾನೋತ್ತುಮ ತುಂಗಭದ್ರವಾಸ 5
--------------
ವಿಜಯದಾಸ