ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಾಕೆನಗೆ ವೈರಾಗ್ಯ ಪುಟ್ಟಲಿಲ್ಲವೊ ದೇವ ಏನು ಪಾಪಿಯೊ ಜಗದಲಿ ಪ. ಸಾಕು ಸಾಕೀ ವಿಷಯ ಚಿಂತನೆಯ ಬಿಡಿಸಿನ್ನು ಲೋಕನಾಯಕನೆ ಸ್ವಾಮಿ ಅ.ಪ. ಅಸನವಸನಗಳಿಗೆ ಆಲ್ಪರಿದು ಅನ್ಯರಿಗೆ ಬಿಸಜನಯನನೆ ಕಾಲಹರಣೆಯನೆಗೈದೆ ವಸುದೇವಸುತ ನಿನ್ನ ಅರಘಳಿಗೆ ನೆನೆಯದಲೆ ಹಸಿವು ತೃಷೆಯಿಂ ಬಳಲಿ ಬೆಂಡಾದೆನಯ್ಯಾ 1 ಇಂದ್ರಿಯಗಳೆಲ್ಲವನು ಬಂಧನದೊಳಗೆ ಇರಿಸಿ ಇಂದಿರೇಶನೆ ನಿನ್ನ ಧ್ಯಾನಿಸದಲೆ ಮಂದಮತಿಯಿಂದ ನಾ ಮಮಕಾರದಲಿ ಬಿದ್ದು ಮಂದ ಜನರೊಡನಾಡಿ ಮಾಯಕೊಳಗಾದೆ 2 ಭಕ್ತಿಮಾರ್ಗವ ಕಾಣೆ ಜ್ಞಾನ ಮೊದಲೆ ಅರಿಯೆ ಮುಕ್ತಿಗೊಡೆಯನೆ ಎನ್ನ ಮುದದಿಂದ ಸಲಹೊ ಯುಕ್ತಯುಕ್ತಿಗಳರಿಯೆ ಸುತ್ತುತಿಪ್ಪೆನೊ ಭವದಿ ಶಕ್ತ ನೀ ಒಳಗಿದ್ದು ಎನ್ನ ಕಾಡುವರೆ 3 ಕರ್ಮಮಾರ್ಗವ ತೊರೆದು ನಿರ್ಮಲದಲಿ ನಿನ್ನ ಒಮ್ಮೆಗಾದರೂ ಮನದಿ ನೆನೆಯಲಿಲ್ಲ ರಮೆಯರಸನೆ ಶ್ರೀ ಗುರುಗಳಂತರ್ಯಾಮಿ ಕರ್ಮತ್ರಯಗಳ ಕಡಿದು ಕರುಣದಲಿ ಕಾಯೊ4 ಪಾಪರಹಿತನೆ ಎನ್ನ ಪಾಪ ಕರ್ಮಗಳೆಲ್ಲ ಪರಿ ನುಡಿದೆ ನೀ ಪರಿಹರಿಸಿ ಕಾಯೋ ಗೋಪಾಲಕೃಷ್ಣವಿಠ್ಠಲನೆ ನೀನಲ್ಲದಲೆ ಈ ಪಾಪಿಯನು ಕಾಯ್ವರಾರೊ ಶ್ರೀ ಹರಿಯೆ5
--------------
ಅಂಬಾಬಾಯಿ
ಸಾಕು ನೀನೋಬ್ಬನೆ ಲೋಕನಾಯಕನೆ ಯಾಕನ್ಯ ದೈವವ ಭಜಿಸುವ ಸುಮ್ಮನೆ ಪ. ಸೂನು ಪರಮಾದರದಿಂದ ನೀಕರಿಸುತ ಯದು ಬಲಿ ಸಹಾಯವನು ಶ್ರೀಕರ ನೀನೊಬ್ಬನೆ ಸಾರಥಿಯಾಗೆ ಸಾಕೆಂದವರ ಬೊಮ್ಮನೆ ವೈರಿಗಳನ್ನು ವ್ಯಾಕುಲಗೊಳಿಸಿ ಭೂಮಿಪನಾದ ಸುಮ್ಮನೆ 1 ನಿಖಿಳ ದೈವಗಳೆಲ್ಲ ತಾನಾಗಿ ಪರಮಾನುಕೂಲರಾಗುವರು ಏನೆಂದು ಪೇಳ್ವದಿನ್ನು ಸಕಲ ಸುರ ಪಾದ ಪದ್ಮ ಧ್ಯಾನ ಮಾನವನಿತ್ತು ಪಾಲಿಸೆನ್ನನು 2 ಅಖಿಳಾಂಡಕೋಟಿ ಬ್ರಹ್ಮಾಂಡ ನಾಯಕನೆಂದು ನಿಖಿಳ ದೈವಗಳು ನಿನ್ನನೆ ಪೊಗಳುವವು ಸಕಲಾರ್ಥದಾಯಿ ನೀನು ನಾಮ ಸ್ಮøತಿ ಸುಖವನ್ನೆ ಪಾಲಿಸಿನ್ನು ಉದಯಗಿರಿ ಶಿಖಿರ ಸಂವಾಸನುಮಾನವ್ಯಾಕಿನ್ನು 3
--------------
ತುಪಾಕಿ ವೆಂಕಟರಮಣಾಚಾರ್ಯ
ಪಾಲಿಸು ಲೋಕನಾಯಕನೆಗುಣಶೀಲ ಶಂಕರ ಗಂಗಾಧರನೆಫಾಲಲೋಚನಘೋರಕಾಲಭಯ ವಿದೂರನೀಲಕಂಠೇಶ್ವರನೇ ಭಕ್ತರಕಾವಬಾಲ ಚಂದಿರಧರನೇ ಪನಂಬಿದ ಮುನಿಬಾಲನ ಪೊರೆಯುವನೆ ನರರರುಂಡಮಾಲೆಯ ಧರಿಸಿದ ಶೂಲಪಾಣಿಯೆನಿನ್ನ ಮಹಿಮೆಯ ಪೇಳುವರೆ ಪಾತಾಳಲೋಕದಸೀಳು ನಾಲಗೆಯುಳ್ಳ ಸಹಸ್ರಕಪಾಲಶೇಷಗೆಗಿಂತು ಸಾಧ್ಯವೇ 1ಉರಗಕುಂಡಲಧರ ರಜತಾದ್ರಿ ಗಿರಿವರಕರಿಚರ್ಮಾಂಬರಧರನೇ ಮುಕ್ತಿಯನೀವಪರಮೇಶ ಗುಣಕರನೇ ರಾಮನ ರಾಣಿ-ಗಿರವ ತೋರಿಸಿದವನೇಕಾಮನ ಕಣ್ಣ ಉರಿಯೊಳು ದಹಿಸಿದಕರುಣನಿಧಿ ಕೈಲಾಸದಲೀ ಸ್ಥಿರದಿ ನೆಲಸಿದನಿನ್ನ ಚರಣವಸುರರುನರದಾನವರು ಭಜಿಸಲುವರವನಿತಾ ತೆರದೊಳೆನ್ನನು 2ಒಂದಿನ ಸುಖವಿಲ್ಲ ಬಂಧು ಬಾಂಧವರಿಲ್ಲನಂದಿವಾಹನ ದೇವನೆನಿನ್ನಯ ಪಾದಕೊಂದಿಸುವೆನು ಶಿವನೆಎನ್ನೊಳು ಬಂದು ಪಾಲಿಸು ಪರಮೇಶನೆಭೀಮನಿಗಂದು ವರವಿತ್ತು ಮೆರೆಸಿದೆಇಂದ್ರಸುತನಿಗೆ ವನದಿ ನೀನತಿಚಂದದಲಿ ಶರ ಒಂದ ಪಾಲಿಸಿದಂದು ಕುರುಕುಲ ವೃಂದವನು ಗೋವಿಂದಸಾರಥಿಯಾಗಿ ಕೊಂದನು ಚಂದ್ರಧರನೇ 3
--------------
ಗೋವಿಂದದಾಸ
ರಕ್ಷಿಸೋ ಲೋಕನಾಯಕನೆ-ನೀ ಎನ್ನ-ರಕ್ಷಿಸೋ ಲೋಕನಾಯಕನೇ ಪಎಷ್ಟೆಷ್ಟು ಜನ್ಮ ಕಳೆದೆನೋ ಇನ್ನೆಷ್ಟೆಷ್ಟು ಜನ್ಮ ಪಡೆವೆನೋ ||ಕಷ್ಟವ ಪಡಲಾರೆ ಕೃಷ್ಣ ಕೃಪೆಯನಿಟ್ಟುಇಷ್ಟವ ಪಾಲಿಸು ಇಭರಾಜವರದನೆ 1ಬಾಲತನದಿ ಬಹು ಬೆಂದೆನೋ ನಾನಾಲೀಲೆಯಿಂದಲಿಕಾಲಕಳೆದೆನೋ ||ಲೋಲಲೋಚನ ಎನ್ನ ಮೊರೆಯ ಕೇಳುತ ಬೇಗಜಾಲವ ಮಾಡದೆ ಪಾಲಿಸೈ ನರಹರಿ 2ಮುದುಕನಾಗಿ ಚಿಂತೆಪಡುವೆನೋ ನಾಕದಡು ದುಃಖವ ಪಡಲಾರೆನೋ ||ಸದರವಲ್ಲವು ಶ್ರೀಪುರಂದರವಿಠಲಮುದದಿಂದ ರಕ್ಷಿಸೊ ಖಗರಾಜಗಮನ 3
--------------
ಪುರಂದರದಾಸರು