ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆತ್ಮನಿವೇದನೆ ಕರುಣದಿಂದಲಿ ಪೊರೆಯೊ ನೀ ಎನ್ನ| ನರಹರಿಯೆ ಮುನ್ನ | ಚರಣಕಮಲವ ಸ್ಮರಿಸುವೆನು ನಿನ್ನ ಪ ಪೊರೆಯಬಾರದೆ ಶರಣು ಶ್ರೀಹರಿಅ.ಪ ಗೋಪಾಲಕೃಷ್ಣ| ಗೋಪಸ್ತ್ರೀಯರ ಹರುಷಗೊಳಿಸಿದೆ|| ವೃಂದದಿ ನಲಿದು ಮೆರೆದೆ| ದ್ರುಪದ ಸುತೆಯಳಿಗಿತ್ತ ಶ್ರೀಹರಿ 1 ಗೋವೃಂದ ಸಲಹಿ| ಗೋವಿಂದಾಭಿಧಾನವನು ಪಡೆದೆ|| ರವನು ಹೀರಿದ ಕರುಣಿ ಶ್ರೀಹರಿ 2 ಇಂದೀವರಾಭನೆ| ಬಂಧುಬಾಂಧವರಾರು ಹಿತರಲ್ಲ|| ಇಂದಿರೇಶನೆ ನಿನ್ನ ಚರಣ| ದ್ವಂದ್ವದೊಳು ಮನವಿತ್ತೆನಾಪ | ದ್ಬಂಧುವಾದರೆ ಪ್ರೇಮವಿರಿಸುತ || ಬಂಧಗಳ ಪರಿಹರಿಸುತೆನ್ನನು 3 ಪತಿತಪಾವನ ಈಶ ಸರ್ವೇಶ| ಮಹಶೇಷಶಯನ | ಹಿತವಿಧಾಯಕ ಸರ್ವಭೂತೇಶ|| ದೊರಕುವ ತೆರದೊಳನುದಿನ 4 ಶ್ರೀಕಾಂತ ಸಲಹೈ| ಲೋಕಭರಿತನೆ ಸುಖವಿಧಾಯಕನೆ|| ಲೋಕವಂದಿತ ಲೋಕನಾಥಾ | ನಾಕಿವಂದಿತ ಭಕ್ತವತ್ಸಲ 5 ನಿನ್ನ ಪಾದವ ನಂಬಿ ನಾನಿಹೆನು| ದೇವಾದಿದೇವಾ| ನಿನ್ನ ನಾಮಾವಲಿಯ ಸ್ಮರಿಸುವೆನು|| ಮುನ್ನ ಮಾಡಿದ ಪಾಪವೆಲ್ಲವ| ನಿನ್ನ ನಾಮ ಸ್ಮರಣದಲಿ ಸಂ| ಪೂರ್ಣ ಪರಿಹರಗೊಳಿಸಿ ನಿನ್ನಯ| ಸನ್ನುತಾಂಘ್ರಿಯ ಸೇವೆಗಿರಿಸುತ 6
--------------
ವೆಂಕಟ್‍ರಾವ್
ರಾಘವೇಂದ್ರ ಗುರು ನಮೋ ನಮೋ ಯೋಗಿಜನೇಡಿತ ನಮೋ ನಮೋ ಪ ವಾದಿಜಯಪ್ರದ ನಮೋ ಸಾಧುಜವಾವ ನಮೋ ನಮೋಶ್ರೀಧರ ಬೋಧಕ ನಮೋ ಅಗಾಧತವ ಮಹಿಮ ನಮೋ 1 ಎಷ್ಟು ದಿನವಾಯಿತು ನಮೋ ಶ್ರೀ ಕೃಷ್ಣನ ಕಾಣದೆ ನಮೋಭೆಟ್ಟಿಯ ಮಾಡಿಸು ನಮೋ ವಿಷ್ಣು ದಾಸರೇಣ್ಯನೆ ನಮೋ 2 ತುಷ್ಟ ಮುಖಾಯ ನಮೋ ಶಿಷ್ಯರು ಸೇವಿಸೆ ನಮೋದೃಷ್ಟಿಲಿ ಕಳೆಯುವಿ ನಮೋ ಸರ್ವೇಷ್ಯವರಪ್ರದ ನಮೋ 3 ಚೂತರಸದಿ ಹರಿ ನಮೋ ಪೋತನು ಬೀಳಲು ನಮೋಆ ತನು ತ್ಯಜಿಸಿದ ನಮೋ ಜೀವಾತು ನೀನಾದೆ ನಮೋ 4 ವರಜಯತೀರ್ಥರ ನಮೋ ಸುರಸ ಸುಗ್ರಂಥಕೆ ನಮೋಪರಿಮಳ ಟೀಕೆಯ ನಮೋ ವಿರಚಿಸಿ ರಾಜಿಪೆ ನಮೋ 5 ರತುನಮಾಲಿಯ ನಮೋ ಹುತವಹಗಿತ್ತೆಯೋ ನಮೋಅತಿಶಯ ಪ್ರಾರ್ಥಿಸೆ ನಮೋ ಪ್ರಥಮ ತೆಗೆದುಕೊಟ್ಟೆ ನಮೋ 6 ನಾರದ ಶಿಷ್ಯನೆ ನಮೋ ನಾರಸಿಂಹಾರ್ಚಕ ನಮೋಸೇರಿ ಭಜಿಸಿ ನಿಮ್ಮ ನಮೋ ಎನ್ನ ಚಾರುದೃಷ್ಟಿಲಿನೋಡು ನಮೋ 7 ನಾಕವತಾರನೆ ನಮೋ ಲೋಕನಾಥಾಶ್ರಯ ನಮೋಕಾಕು ದರ್ಮತ ಹರ ನಮೋ ಶ್ರೀಕರ ಸೇವಕ ನಮೋ 8 ವೃಂದಾವನದಲಿ ನಮೋ ನಮೋ ಭಕ್ತ ವೃಂದರಲಿಂದು ನೀ ನಮೋಬಂದು ಮಾತಾಡುವಿ ನಮೋ ಇಂದಿರೇಶನ ಪ್ರಿಯನಮೋ ನಮೋ 9
--------------
ಇಂದಿರೇಶರು