ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಛಂದದಿಂದ ಬಂದು ಸಲಹೊ ಫಂಡರೀಶ ನಿನ್ನ ನಂಬಿದೆ ಪ ತಂದೆ ನೀನೆ ಸರ್ವರಿಗೆ ಅನಿಮಿತ್ತ ಬಂಧುವಲ್ಲವೆ ಅ.ಪ ದೋಷಿನಾನು ಮೂಢನಾನು ವಲಿಯೆನೆಂದು ಏಕೆ ಹೇಳು ದೋಷದೂರ ಜ್ಞಾನರೂಪ ಬಿಂಬ ನಿನ್ನ ದಾಸನಲ್ಲವೆ 1 ಎಲ್ಲಾ ಸತ್ತಾದಾತ ನೀನು ಇಲ್ಲ ನಿನಗೆ ಭೇದವೇನು ನಲ್ಲ ಶರಣು ಎಂದಮೇಲೆ ವಲ್ಲೆ ಎನ್ನೆ ಬಿರುದು ಪೋಗದೆ 2 ಕಾಕುಮಾಡಿ ಎನ್ನ ಜಗದಿ ನೂಕಿ ಬಿಟ್ಟು ಭಂಟರಲ್ಲಿ ಸಾಕದೇನೆ ಬಿಟ್ಟರೀಗ ಲೋಕನಗದೆ ಭಕ್ತರಾಣೆ 3 ಮುಂದುಮಾಡಿ ಹಿಂದೆ ಎನ್ನ ಹಿಂದು ಮಾಡಿ ಈಗ ನಗುವೆ ಇಂದಿರೇಶ ನಿನ್ನ ನ್ಯಾಯ ಮಂದನಾನು ಅರಿಯೆ ಶರಣು 4 ಲಕುಮಿ ಮೊದಲು ಎಲ್ಲಾ ಜಗಕೆ ಶಕುತ ನೀನೆ ಒಬ್ಬ ಆಶ್ರಯ ನೀಡಿಕಾಯೋ ಬೇಗನೆ 5
--------------
ಕೃಷ್ಣವಿಠಲದಾಸರು