ಮಾಧವ ಪ
ಕುಣಿಯುವೆ ಮುರಳಿ ಬಾರಿಸೊ ಮಾಧವಅ.ಪ
ಭವದ ಸಂತಾಪವು ಕೊನೆಗಾಣಲಿ
ಭುವಿಯೊಳು ಜೀವನ ಸವಿಯಾಗಲಿ
ನವವಿಧ ಭಕುತಿಯು ಹರಿದಾಡಲಿ
ಕಿವಿ ತುಂಬ ಕೇಳಿ ನಾ ನಲಿಯುವೆ ಶ್ರೀಕರ 1
ಅರಿಷಡ್ವರ್ಗಗಳೆಲ್ಲ ಮರೆಯಾಗಲಿ
ಹರುಷ ಮಾನಸದಲಿ ಸೆರೆಯಾಗಲಿ
ಮುರಳಿಯ ಧ್ವನಿಯು ತಾ ದೊರೆಯಾಗಲಿ
ಪರಮ ವೈರಾಗ್ಯವೆ ಸಿರಿಯಾಗಲಿ ದೇವ 2
ಸಾಲೋಕ್ಯ ಸಾರೂಪ್ಯ ಸಾಯುಜ್ಯವು
ಈ ಲೋಕದಲ್ಲೀಗ ಈ ಲಾಭವು
ಶ್ರೀಲೋಲ ಗೋಪಾಲ ಬಾಲ ಪ್ರಸನ್ನನೆ
ಮೇಲಾಯ್ತು ನರಜನ್ಮವಿರಲಿ ಎಂದೆಂದಿಗೂ 3