ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇನ್ನೇನು ಭಯವಿಲ್ಲನಿನಗೆ ಪಾದ ಭಜಿಸೊ ಮನದೊಳಗೆ ಪ ಬನ್ನಗೊಳಿಸುವಾ ವ್ಯಾಧಿ ಮುನ್ನೆ ಬಾರದೋ ಮಗುವೇ ಅ.ಪ ಕರ್ಮ ಶೇಷದಲಿಂದ ಈ ವಿಧದ ವ್ಯಾಧಿ ಸಂಭವಿಸಿತಲ್ಲಾ ಪಾದ ಸೇವೆ ಸತ್ಕಾರದಿಂದಲೇ ತಾವಕÀನು ನೀನೆಂದು ಗುರುರಾಯ ಪೊರೆವಾ 1 ಏನು ಕರುಣವೊ ಗುರುವರಗೆ ನಿನ್ನಲಿ ನೀನೇನು ಧನ್ಯನೋ ಈ ಲೋಕದಲ್ಲೀ ದೀನಭಾವವನೋಡಿ ದೀನವತ್ಸಲಬಂದು ತಾನೆ ಕರುಣದಿ ಪೊರೆದಮೇಲೇ2 ಅರಿಯದಿಹ ನರರಿಗಾಶ್ಚರ್ಯ ತೋರಲೋಸುಗದಿ ಮರೆಯದಂತೆ ಮನಕೆ ಕುರುಹು ಮಾಡಿ ಧರೆಯೊಳಗೀ ಗುರುವರಗೆ ಸರಿಯಿಲ್ಲ ಗುರುಜಗನ್ನಾಥ ವಿಠಲ ತಾನೇ ಬಲ್ಲಾ 3
--------------
ಗುರುಜಗನ್ನಾಥದಾಸರು
ಮಾಧವ ಪ ಕುಣಿಯುವೆ ಮುರಳಿ ಬಾರಿಸೊ ಮಾಧವಅ.ಪ ಭವದ ಸಂತಾಪವು ಕೊನೆಗಾಣಲಿ ಭುವಿಯೊಳು ಜೀವನ ಸವಿಯಾಗಲಿ ನವವಿಧ ಭಕುತಿಯು ಹರಿದಾಡಲಿ ಕಿವಿ ತುಂಬ ಕೇಳಿ ನಾ ನಲಿಯುವೆ ಶ್ರೀಕರ 1 ಅರಿಷಡ್ವರ್ಗಗಳೆಲ್ಲ ಮರೆಯಾಗಲಿ ಹರುಷ ಮಾನಸದಲಿ ಸೆರೆಯಾಗಲಿ ಮುರಳಿಯ ಧ್ವನಿಯು ತಾ ದೊರೆಯಾಗಲಿ ಪರಮ ವೈರಾಗ್ಯವೆ ಸಿರಿಯಾಗಲಿ ದೇವ 2 ಸಾಲೋಕ್ಯ ಸಾರೂಪ್ಯ ಸಾಯುಜ್ಯವು ಈ ಲೋಕದಲ್ಲೀಗ ಈ ಲಾಭವು ಶ್ರೀಲೋಲ ಗೋಪಾಲ ಬಾಲ ಪ್ರಸನ್ನನೆ ಮೇಲಾಯ್ತು ನರಜನ್ಮವಿರಲಿ ಎಂದೆಂದಿಗೂ 3
--------------
ವಿದ್ಯಾಪ್ರಸನ್ನತೀರ್ಥರು